ನೋವು ನಲಿವುಗಳ ಸಮ್ಮಿಲನವೇ ಬದುಕು

Team Udayavani, Sep 9, 2019, 5:10 AM IST

ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಬುದ್ಧಿವಂತಿಕೆ, ಪರಿಶ್ರಮ, ಕ್ರಿಯಾಶೀಲ ಗುಣದಿಂದ ಜೀವನದ ಪ್ರತಿಯೊಂದು ಸಮಸ್ಯೆಗಳನ್ನೂ ಪರಿಹರಿಸಿ ಕೊಳ್ಳಬಹುದು. ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳಬೇಕು ಎನ್ನುವ ಹಂಬಲ ಇರುವವರು ಛಲ, ಧೈರ್ಯ, ಸತತ ಪರಿಶ್ರಮ, ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು.

ಎಲ್ಲಿ ಬದ್ಧತೆ ಇದೆಯೋ ಅಲ್ಲಿ ಉನ್ನತಿ ಸುಲಭ ಸಾಧ್ಯ ಎಂಬ ಮಾತಿದೆ. ಬದ್ಧತೆ ಎಂದರೆ ಒಬ್ಬ ವ್ಯಕ್ತಿ ತಾನು ನಿರ್ವಹಿಸಲು ಇಚ್ಛಿಸಿದ ಕೆಲಸವನ್ನು ಶ್ರದ್ಧೆ,ನಿಷ್ಠೆ ,ಪ್ರಾಮಾಣಿಕವಾಗಿ ಪೂರ್ಣ ಗೊಳಿಸಲು ಪ್ರಯತ್ನಿಸುವ ಮನೋಭಾವ.

ಹಲವರು ದೊಡ್ಡ ಕನಸು ಕಾಣುತ್ತಾರೆ. ಆದರೆ ಬದ್ಧತೆ ಇರದಿದ್ದರೆ ಅವರು ಗುರಿಸಾಧನೆಯ ಕಡೆಗೆ ಪಯಣಿಸುವುದು ಕಷ್ಟ. ಬದ್ಧತೆಯು ವ್ಯಕ್ತಿಯನ್ನು ಗುರಿಯ ಜತೆಗೆ ಬಂಧಿಸುವ ಅಂಟು ಇದ್ದಂತೆ. ಇದು ಗಂಟೆಗಟ್ಟಲೆ ಕೆಲಸದಲ್ಲಿ ಮಗ್ನನಾಗುವಂತೆ ಮಾಡುತ್ತದೆ ಮತ್ತು ಬದುಕಿನಲ್ಲಿ ಯಶಸ್ಸಿಗೆ ಬೇಕಾದ ಕೌಶಲಗಳನ್ನು ಪರಿಪೂರ್ಣಗೊಳಿಸುತ್ತಾ ಸಾಗುತ್ತದೆ.

ಋಣಾತ್ಮಕ ಚಿಂತನೆ ಬಿಟ್ಟು ಕಲ್ಪನಾಶಕ್ತಿಯನ್ನು ಬಳಸಿಕೊಂಡು ಗುರಿಯನ್ನು ತಲುಪುತ್ತೇನೆ ಎಂದು ಪಣತೊಡಿ. ಸಾಧನೆ ಸುಲಭವಾಗುತ್ತದೆ. ಕಂಡ ಕನಸು ನನಸಾಗುವವರೆಗೂ ನಿರಂತರ ಪ್ರಯತ್ನ ಜಾರಿಯಲ್ಲಿದ್ದರೆ, ಯಾವುದೇ ಸನ್ನಿವೇಶವು ನಿಮ್ಮನ್ನು ಗುರಿಯಿಂದ ವಿಮುಖರಾಗಿಸಲು ಸಾಧ್ಯವಿಲ್ಲ. ದಿನವೂ ನಿಮ್ಮಷ್ಟಕ್ಕೆ ನೀವೇ ಇದು ನನ್ನಿಂದ ಸಾಧ್ಯ ಎಂದು ಹೇಳಿಕೊಳ್ಳಿ. ಇದು ನಿಮ್ಮನ್ನು ಹೆಚ್ಚು ಶಕ್ತಿವಂತರನ್ನಾಗಿಸುತ್ತದೆ.

ಸಾಧನೆಗೆ ಪ್ರಯತ್ನಿಸಲು ಒಳ್ಳೆಯ ಸಮಯ ಬರಲಿ ಎಂದು ಕಾಯಬೇಡಿ. ಅಂಥ ಸಮಯ ಎಂದೂ ಬಾರದು. ಸಮಸ್ಯೆಗಳಿಗೆ ಹೆದರದೇ ಅವುಗಳನ್ನು ಸವಾಲಾಗಿ ಸ್ವೀಕರಿಸಿ ಪರಿಹಾರ ಹುಡುಕಿಕೊಳ್ಳುವುದು ಜಾಣತನ.

ನಿರಂತರ ವಾಗಿರಲಿ
ಗೊತ್ತುಗುರಿಗಳಿಲ್ಲದ ಬದುಕು ಹರಿಗೋಲಿಲ್ಲದ ದೋಣಿಯಂತೆ. ಗುರಿ ಇಲ್ಲದೆ ಸಾಗುವ ಬದುಕಿಗೆ ಅರ್ಥವಿಲ್ಲ. ನಮ್ಮ ಸಾಮರ್ಥ್ಯ ಅರಿತು ನಾವೇ ಗುರಿ ನಿಗದಿಪಡಿಸಬೇಕು. ಗುರಿಯನ್ನು ಇದ್ದಕ್ಕಿದ್ದಂತೆ ಸಾಧಿಸಲು ಸಾಧ್ಯವಿಲ್ಲ. ನಿರಂತರ ಪರಿಶ್ರಮ ಅಗತ್ಯ. ಧನಾತ್ಮಕ ಚಿಂತನೆಯುಳ್ಳವರು ಸದಾ ಗುರಿಯತ್ತ ಪ್ರಯತ್ನ ಶೀಲರಾಗಿ ರುತ್ತಾರೆ.

ಸೋಲಿನ ಬಗ್ಗೆ ಯೋಚಿಸದೆ ನಾವಿಡುವ ಹೆಜ್ಜೆಯ ಕಡೆಗೆ ಗಮನ ಹರಿಸಬೇಕು. ಸಾಧನೆಯ ಹಾದಿಯಲ್ಲಿ ಎತ್ತರದ ಬೆಟ್ಟಗಳನ್ನು ಏರಿದಂತೆ ಎದುರಿನ ಇನ್ನೊಂದು ಬೆಟ್ಟ ಗೋಚರಿಸುತ್ತದೆ. ಸೃಜನಶೀಲ ಗುಣ, ಸಾಮರ್ಥ್ಯ ಬಳಸಿಕೊಂಡು ಗುರಿ ತಲುಪಲು ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ. ಅಲ್ಲದೆ ದಿನ ನಿತ್ಯ ಸ್ವಲ್ಪ ಸ್ವಲ್ಪವೇ ಪೂರ್ತಿಗೊಳಿಸಲು ಪ್ರಯತ್ನಿಸುವುದು ಉತ್ತಮ.

-  ಗಣೇಶ ಕುಳಮರ್ವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೆಲವೊಂದು ಸಲ ಸೋಲು ಅನ್ನೋದು ನಮ್ಮನ್ನು ಕುಗ್ಗಿಸಿಬಿಡುತ್ತದೆ. ಇನ್ನೂ ಕೆಲವೊಮ್ಮೆ ಸೋಲು ಪಾಠ ಕಲಿಸುತ್ತದೆ. ಕೆಲವರು ಗೆದ್ದು ಸೋಲುತ್ತಾರೆ. ಹಲವರು ಸೋತು ಗೆಲ್ಲುತ್ತಾರೆ....

  • ಯಾವುದೇ ಚಿಂತೆಯಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿರುವಾಗ ಬೇಲಿಯಿಂದ ತೂರಿ ಬಂದ ಸುಮದ ಘಮಕ್ಕೆ ನಮ್ಮ ಮನ ಅರಳುತ್ತದೆ. ತುಂಬಿದ ರಸ್ತೆಗಳಲ್ಲಿ ಆಟವಾಡುವ ಪುಟ್ಟ...

  • ಅದೊಂದು ದಿನ ತರಗತಿಯಲ್ಲಿ ಶಿಕ್ಷಕಿ, "ಉತ್ತಮ ಬದುಕಿಗೆ ಅತ್ಯಗತ್ಯವಾಗಿ ಬೇಕಾದ ಅಂಶ ಯಾವುದು? ಒಂದು ಪದದಲ್ಲಿ ಉತ್ತರಿಸಿ' ಎಂದು ಹೇಳಿದರು. ಹಣ, ಆಸ್ತಿ, ಸಂಪತ್ತು,...

  • "ಖುಷಿಯಾಗಿದ್ದಾಗ ನಾವು ಸಂಗೀತವನ್ನು ಆಸ್ವಾದಿಸುತ್ತೇವೆ. ಆದರೆ, ದುಃಖದಲ್ಲಿದ್ದಾಗ ಅದರಲ್ಲಿನ ಸಾಹಿತ್ಯ ನಮಗೆ ಅರ್ಥವಾಗುತ್ತದೆ' ಎಂಬ ಮಾತಿದೆ. ಸಂತೋಷದ ಹಾಡುಗಳೂ...

  • ಹೌದು ಎಲ್ಲರೂ ಆಧುನಿಕತೆಯೆಂದು ತಮ್ಮ ಜೀವನವನ್ನು ಬರಿದಾಗಿಸುವಂತಹ ಕ್ಲಿಷ್ಟಕರ ಪರಿಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸವೇ ಸರಿ. ಸಾಧನೆಯ ಮಾತು ಮರೀಚಿಕೆಯಾಗಿ...

ಹೊಸ ಸೇರ್ಪಡೆ

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಭಾರೀ ದಂಡ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರಕಾರ ಮುಂದಾಗಿದ್ದರೂ ಕಾಯ್ದೆಯಲ್ಲಿ ನಾಲ್ಕೆ „ದು ಪ್ರಕರಣಗಳನ್ನು...

  • ಹೊಸದಿಲ್ಲಿ: ಕರ್ನಾಟಕದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿದ್ದ, ಕರ್ನಾಟಕ ಮೂಲದ ನ್ಯಾ| ಮೋಹನ ಎಂ....

  • ಚಾಂಗ್‌ಝು (ಚೀನ): ಭಾರತದ ಮಿಕ್ಸೆಡ್‌ ಡಬಲ್ಸ್‌ ತಾರೆಯರಾದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಅಶ್ವಿ‌ನಿ ಪೊನ್ನಪ್ಪ ಅವರು ಚೀನ ಓಪನ್‌ ಬ್ಯಾಡ್ಮಿಂಟನ್‌...

  • ನವದೆಹಲಿ: ಏರ್‌ಸೆಲ್‌- ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಹಾಗೂ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನೂ ನ್ಯಾಯಾಧೀಶ...