ಫ್ಯಾಷನ್‌ ಲೋಕದಲ್ಲೀಗ ಜೀನ್ಸ್‌  ಡಂಗ್ರೀಸ್‌ ಕಮಾಲ್‌


Team Udayavani, Oct 5, 2018, 1:17 PM IST

5-october-12.gif

ಹೊಸ ಟ್ರೆಂಡ್‌ ಬಂದಾಗ ಅದರತ್ತ ಯುವಜನರು ವಾಲುವುದು ಸಹಜ. ಅದಕ್ಕೆ ತಕ್ಕಂತೆ ಫ್ಯಾಷನ್‌ ಲೋಕದಲ್ಲಿ ಟ್ರೆಂಡಿ ಬದಲಾವಣೆಗಳು ಆಗುತ್ತಿರುತ್ತವೆ. ಬದಲಾಗುವ ಫ್ಯಾಷನ್‌ಗೆ ತಕ್ಕಂತೆ ತಾವು ಕೂಡ ಬದಲಾಗುವುದು ಯುವಜನರ ಕ್ರೇಜ್‌.ಫ್ಯಾಷನ್‌ ಜಗತ್ತಿನ ಹೊಸ ಪ್ರಯೋಗಗಳಿಗೆ ಸದಾ ತೆರೆದುಕೊಳ್ಳುವ ಮಾಡೆಲ್‌ಗ‌ಳು, ನಟಿಯರು ಆ ಮೂಲಕವೇ ಎಲ್ಲರನ್ನು ಸೆಳೆಯುತ್ತಾರೆ.

ಮಾಡೆಲ್‌, ನಟ, ನಟಿಯರು ಹಾಗೂ ಯುವಜನರಿಗೆ ಬಟ್ಟೆಗಳ ಮೇಲಿನ ಮೋಹ ಎಂದಿಗೂ ಕಡಿಮೆಯಾಗುವುದಿಲ್ಲ. ಅದು ಯಾವುದೇ ರೀತಿಯಲ್ಲಿದ್ದರೂ ಫ್ಯಾಷನ್‌ ಎಂಬ ನೆಪ ಹೇಳಿ ಆ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಈ ಕಾರಣಕ್ಕಾಗಿಯೇ ದಶಕಗಳ ಹಿಂದೆ ಹಲವು ಧಿರಿಸುಗಳು ಮತ್ತೆ ಸದ್ದು ಮಾಡಲಾರಂಭಿಸುತ್ತಿವೆ.

ಡಂಗ್ರೀಸ್‌ ಹವಾ
ಹೊಸ ಫ್ಯಾಷನ್‌ಗಳ ಮುಖೇನ ಎಲ್ಲರ ಗಮನ ಸೆಳೆಯುವ ಸಿನೆಮಾ ನಟಿಯರೀಗ ಡಂಗ್ರೀಸ್‌ ಪ್ರೇಮಕ್ಕೆ ಸಿಲುಕಿದ್ದಾರೆ. ಎಲ್ಲ ನಟಿಯರು ವಿವಿಧ ವಿನ್ಯಾಸದ ಡಂಗ್ರೀಸ್‌ ಧರಿಸಿ ಮಿಂಚುತ್ತಿದ್ದಾರೆ.ಈ ನಡುವೆ ಡಂಗ್ರೀಸ್‌ನಲ್ಲೇ ನಾನಾ ಬಗೆಯ ಡ್ರೆಸ್‌ ಕೋಡ್‌ ಧರಿಸುವುದು ಕಾಮನ್‌ ಆಗಿದೆ. ಸ್ಕರ್ಟ್‌ ಶೈಲಿ, ಶಾರ್ಟ್ಸ್, ಡಿವೈಡರ್‌, ಪ್ಯಾಂಟ್‌ ಶೈಲಿಯ ಜತೆ ಟ್ರೆಂಡಿಯಾಗಿವೆ. ಡಂಗ್ರೀಸ್‌ ಡ್ರೆಸ್‌ಕೋಡ್‌ ಈಗ ಟಿನೇಜರ್ಸ್‌ ಅನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಜೀನ್ಸ್‌, ಕಾಟನ್‌ ಹಾಗೂ ವಿವಿಧ ಮೆಟೀರಿಯಲ್‌ಗ‌ಳಲ್ಲಿ ದೊರೆಯುವ ಡಂಗ್ರೀಸ್‌ ಧರಿಸಿದರೆ ಮಾಡರ್ನ್ ಲುಕ್‌ ಬರುವುದರಲ್ಲಿ ಸಂಶಯವಿಲ್ಲ.

ಡಂಗ್ರೀಸ್‌ ಫ್ಯಾಷನ್‌ ಬಂದಾಗ ಸಿನೆಮಾಗಳಲ್ಲಿ ನಟ- ನಟಿಯರು, ಮಾಡೆಲ್‌ಗ‌ಳು ಹೆಚ್ಚಾಗಿ ಧರಿಸುತ್ತಿದ್ದರು. ಮೊದಲು ಪ್ಯಾಂಟ್‌ ಡಂಗ್ರೀಸ್‌ ಇತ್ತು. ಬಳಿಕ ಮುಕ್ಕಾಲು ಪ್ಯಾಂಟ್‌, ಬರ್ಮುಡಾದಲ್ಲೂ ಈ ಸ್ಟೈಲ್‌ ಬಂತು.

ಸಾಮಾನ್ಯವಾಗಿ ಡಂಗ್ರೀಸ್‌ ಅನ್ನು ಜೀನ್ಸ್‌ ಬಟ್ಟೆಯಲ್ಲೇ ತಯಾರು ಮಾಡಲಾಗುತ್ತದೆ. ಅದು ಬ್ಲೂ ಬಣ್ಣದ ಜೀನ್ಸ್ ಬಟ್ಟೆಯಾಗಿದ್ದು, ಅದಕ್ಕೆ ಒಪ್ಪುವಂಥ ಬಿಳಿ ಬಣ್ಣದ ಪೋಲ್ಕಾ ಶರ್ಟ್‌ ಅನ್ನು ಹಾಕಿದರೆ ಗುಡ್‌ ಲುಕ್‌ ನೀಡುತ್ತದೆ. ಬ್ಲ್ಯಾಕ್‌ ವೆಲ್ವೆಟ್‌ ಡಂಗ್ರೀಸ್‌ಗೆ ಪ್ರಿಂಟೆಡ್‌ ಶರ್ಟ್‌ ಕೂಡ ಬಳಸಬಹುದು. ನಿಮಗೆ ಇಷ್ಟವಾದ ಬಣ್ಣದ ಟಾಪ್‌ ಬಳಸಬಹುದು. ಡಂಗ್ರೀಸ್‌ಗೆ ಪ್ರಿಂಟೆಡ್‌ ಶರ್ಟ್‌ ಬಳಸಬಹುದು. ಬಣ್ಣದ ಬಣ್ಣದ ಟಾಪ್‌ ಕೂಡ ಮ್ಯಾಚ್‌ ಮಾಡಬಹುದು.

ಯಾರಿಗೆ ಸೂಟ್‌ ಆಗುತ್ತೆ?
ಪ್ರಸ್ತುತ ಡಂಗ್ರೀಸ್‌ ಟ್ರೆಂಡ್‌ ಫ್ಯಾಷನ್‌ ಲೋಕದಲ್ಲಿ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಅದನ್ನೇ ಧರಿಸಬೇಕು ಎಂದು ಬಯಸುವುದರಲ್ಲಿ ತಪ್ಪಿಲ್ಲ. ಆದರೆ ಎಲ್ಲರೂ ಧರಿಸಿದರೆ ಅದು ಅಷ್ಟು ಸುಂದರವಾಗಿ ಕಾಣಿಸುವುದಿಲ್ಲ. ಪ್ಲಂಪಿಯಾಗಿರುವವರಿಗೆ ಡಂಗ್ರೀಸ್‌ ಚೆನ್ನಾಗಿ ಕಾಣಿಸುವುದಿಲ್ಲ. ಉದ್ದಗಿರುವವರು ಆ ಸ್ಟೈಲ್‌ ಮೊರೆ ಹೋದರೆ ಸಖತ್‌ ಲುಕ್‌ ಕೊಡು ತ್ತದೆ. ವಿವಿಧ ವಿನ್ಯಾಸ, ಮೆಟೀರಿಯಲ್‌ಗ‌ಳಲ್ಲಿ ಲಭ್ಯವಾಗುವ ಡಂಗ್ರೀಸ್‌ನಲ್ಲಿ ಜೀನ್ಸ್‌ ಮೆಟೀರಿಯಲ್‌ ಡಂಗ್ರೀಸ್‌ ಸುಂದರವಾಗಿ ಕಾಣುತ್ತದೆ. ಇದನ್ನು ಧರಿಸಿದರೆ ಕ್ಯಾಶುವಲ್‌ ಲುಕ್‌ ದೊರೆಯುತ್ತದೆ. ಈ ಬಟ್ಟೆ ಧರಿಸಿದಾಗ ಅದಕ್ಕೆ ತಕ್ಕಂತೆ ಹೇರ್‌ಸ್ಟೈಲ್‌ ಮಾಡಿ, ಆಕ್ಸಸರೀಸ್‌ ಧರಿಸಿದರೆ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು.

ಆಯ್ಕೆಯಲ್ಲಿ ಇರಲಿ ಎಚ್ಚರ
ಡಂಗ್ರೀಸ್‌ ಖರೀದಿಸಬೇಕು ಎಂದು ಹೋದಾಗ ಡಂಗ್ರೀಸ್‌ನ ಮೆಟೀರಿಯಲ್‌ ಪರಿಶೀಲಿಸಿಕೊಳ್ಳುವುದನ್ನು ಮರೆಯಬೇಡಿ. ಯಾಕೆಂದರೆ ದುಬಾರಿ ಬೆಲೆ ತೆತ್ತು ಕಳಪೆ ಗುಣಮಟ್ಟದ ಬಟ್ಟೆ ಖರೀದಿಸಿದರೆ ಸ್ಟೈಲೀಶ್‌ ಆಗಿ ಕಾಣಬೇಕು ಎಂದು ಬಯಸುವವರಿಗೆ ನಿರಾಸೆಯಾದೀತು. ಸಾಮಾನ್ಯವಾಗಿ ಡಂಗ್ರೀಸ್‌ ಬೆಲೆ 700 ರೂ. ನಿಂದ ಆರಂಭವಾಗಿ 3,000 ರೂ. ವರೆಗೆ ಇರುತ್ತದೆ.

 ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

2shootout

ಕುಂದಾಪುರದ ಉದ್ಯಮಿ ಕಟ್ಟೆ ಭೋಜಣ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

1exam

ಸಾಮೂಹಿಕ ನಕಲು; ಬೀದರ್‌ ಪರೀಕ್ಷಾ ಕೇಂದ್ರ ರದ್ದು

ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿ ಲಷ್ಕರ್ ಉಗ್ರರು; ನಟಿ ಸಾವು!

ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿದ ಲಷ್ಕರ್ ಉಗ್ರರು; ನಟಿ ಸಾವು!

another student seen with rifle outside Texas school

ಟೆಕ್ಸಾಸ್ ಶೂಟೌಟ್ ಮರುದಿನವೇ ರೈಫಲ್ ಹಿಡಿದು ಶಾಲೆಗೆ ಬಂದ ಮತ್ತೋರ್ವ ವಿದ್ಯಾರ್ಥಿ

thumb 2

ವಿಜಯೇಂದ್ರ ಮುಂದೇನು? ಶುರುವಾಗಿದೆ ಲೆಕ್ಕಾಚಾರ ,ಸಿಗಲಿದೆಯೇ ಪ್ರ.ಕಾರ್ಯದರ್ಶಿ ಹುದ್ದೆ ?

ಬೋಟ್‌ ಆ್ಯಂಬುಲೆನ್ಸ್‌ ಪ್ರಸ್ತಾವನೆಯಲ್ಲೇ ಬಾಕಿ

ಬೋಟ್‌ ಆ್ಯಂಬುಲೆನ್ಸ್‌ ಪ್ರಸ್ತಾವನೆಯಲ್ಲೇ ಬಾಕಿ

thumb 3

ತೆರೆದ ಪುಸ್ತಕ ಪರೀಕ್ಷೆಗೆ ಮರುಜೀವ; ಈ ಶೈಕ್ಷಣಿಕ ವರ್ಷದಲ್ಲಿ ಪ್ರಾಯೋಗಿಕವಾಗಿ ಜಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

2shootout

ಕುಂದಾಪುರದ ಉದ್ಯಮಿ ಕಟ್ಟೆ ಭೋಜಣ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

librery

ಪೆರ್ಮುದೆಯಲ್ಲಿ ಜಿಲ್ಲೆಯ ಪ್ರಥಮ ಬೀಕನ್‌ ಲೈಬ್ರೆರಿ

1

ಪಶ್ಚಿಮ ಶಿಕ್ಷಕರ ಕ್ಷೇತ್ರ ಪ್ರಭುತ್ವಕ್ಕೆ ಅಖಾಡ ಸಜ್ಜು

1exam

ಸಾಮೂಹಿಕ ನಕಲು; ಬೀದರ್‌ ಪರೀಕ್ಷಾ ಕೇಂದ್ರ ರದ್ದು

barricade

ಟ್ರಾಫಿಕ್‌ ಜಾಮ್‌ ಆಗದಂತೆ ಕ್ರಾಸಿಂಗ್‌ಗೆ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.