ಬೆಳೆಗಳಿಗೆ ಪೋಷಕಾಂಶ ಪೂರೈಕೆ ನಿಗಾ ಇರಲಿ

Team Udayavani, Jun 2, 2019, 6:00 AM IST

ಪೋಷಕಾಂಶಗಳು ವಿವಿಧ ಬೆಳೆಗಳ ಮೂಲಕ ಭೂಮಿಯನ್ನು ಸೇರುತ್ತವೆ. ನಿಸರ್ಗ ಈ ಕೆಲಸವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತದೆ. ಯಾವ ಬೆಳೆಗಳಲ್ಲಿ ಯಾವ ಸೂಕ್ಷ್ಮ ಜೀವಿಗಳಿವೆ, ಗಿಡಗಳಿಗೆ ಯಾವ ರೀತಿ ಅದನ್ನು ಒದಗಿಸಬೇಕು ಎಂಬುದನ್ನು ನಾವು ತಿಳಿದುಕೊಳ್ಳುವುದು ಅತ್ಯಗತ್ಯ.

ನಮ್ಮ ಆರೋಗ್ಯ ಹಾಗೂ ಬೆಳವಣಿಗೆಗೆ ಪೋಷಕಾಂಶಗಳು ಹೇಗೆ ಮುಖ್ಯವೋ ಅಂತೆಯೇ ನಮ್ಮ ಕೃಷಿ ಬೆಳೆಗಳಿಗೂ ಕೂಡ ಇದು ಅಗತ್ಯ. ಮಾನವನ ಬೆಳವಣಿಗೆಗೆ ಸುಮಾರು 40 ವಿಧದ ಪೋಷಕಾಂಶಗಳು ಬೇಕಾಗಿವೆ. ಆದರೆ ಸಸ್ಯಗಳ ಬೆಳವಣಿಗೆಗೆ 16 ವಿಧದ ಪೋಷಕಾಂಶ ಸಾಕು.

ಮುಂಗಾರಿನ ಸಂದರ್ಭದಲ್ಲಿ ರಾಸಾಯನಿಕ ಗೊಬ್ಬರಗಳಿಗೆ ಅತೀವ ಬೇಡಿಕೆ ಇರುತ್ತದೆ. ಇದು ಕೃಷಿ ಬೆಳೆಗಳಿಗೆ ಪೋಷಕಾಂಶ ಸಂಗ್ರಹಿಸುವ ಒಂದು ವಿಧಾನ. ಆದರೆ ಈ ಸಂದರ್ಭದಲ್ಲಿ ಬೇಡಿಕೆ ಉಂಟಾಗುವುದು ಕೆಲವು ಪೋಷಕಾಂಶಗಳಿಗೆ ಮಾತ್ರ. ಇದು ಕೃಷಿ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಪೋಷಕಾಂಶಗಳ ನಿರ್ವಹಣೆ, ಪೂರೈಕೆಯನ್ನಷ್ಟೇ ನಿರ್ಧರಿಸುವುದಿಲ್ಲ. ಅದು ನಮ್ಮ ಆರೋಗ್ಯ ಹಾಗೂ ಮಣ್ಣಿನ ಆರೋಗ್ಯವನ್ನೂ ನಿರ್ಧರಿಸುವುದು. ಇದರ ಬಗ್ಗೆ ತಿಳಿವಳಿಕೆ ಅಗತ್ಯ.

ಪ್ರಧಾನ ಪೋಷಕಾಂಶಗಳಲ್ಲೊಂದಾದ ಸಾರಜನಕ ಸಸ್ಯಗಳ ಕಾಂಡ ಮತ್ತು ಎಲೆಗಳ ಬೆಳವಣಿಗೆಗೆ, ಎಲೆಗೆ ಹಸಿರು ಬಣ್ಣವನ್ನು ನೀಡಲು ಸಹಕಾರಿ. ರಂಜಕ ಸಹ ಪ್ರಧಾನ ಪೋಷಕಾಂಶವಾಗಿದ್ದು ಸಸ್ಯ, ಬೇರಿನ ಬೆಳವಣಿಗೆ ನಿರ್ಧರಿಸಲು ಅಗತ್ಯ. ಸಸ್ಯಗಳಿಗೆ ಅಗತ್ಯವಿರುವ ವಿವಿಧ ಪೋಷಕಾಂಶಗಳು ಹಾಗೂ ನೀರನ್ನು ಒದಗಿಸಲು ಬೇರು ಆಧಾರವಾಗಿದ್ದು ಬೇರುಗಳ ದೃಢ ಬೆಳವಣಿಗೆ ಹಾಗೂ ಕಾರ್ಯನಿರ್ವಹಣೆಗೆ ರಂಜಕ ಸಹಕರಿಸುತ್ತದೆ. ಪೊಟ್ಯಾಶ್‌ ಸಸ್ಯಗಳಿಗೆ ಅಗತ್ಯವಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾತಾವರಣದ ಬದಲಾವಣೆಯಲ್ಲಿ ಸಹ ಸಸ್ಯದ ಸಮತೋಲನವಾಗಿ ಬೆಳವಣಿಗೆ ಹೊಂದಲು ಪೊಟ್ಯಾಶ್‌ ಅನುಕೂಲ.

ಗಂಧಕ ಲಘು ಪೋಷಕಾಂಶವಾಗಿದ್ದು ಎಣ್ಣೆ ಕಾಳಿನ ಬೆಳೆಗೆ, ಸಸ್ಯಗಳಲ್ಲಿನ ಕೊಬ್ಬಿನ ಅಂಶಗಳ ಬೆಳವಣಿಗೆಗೆ ಸಹಕಾರಿ. ಪ್ರಮುಖ ಎಣ್ಣೆಕಾಳಿನ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಹತ್ತಿಯಂತಹ ಬೆಳೆಗಳಲ್ಲಿ ಎಣ್ಣೆಯ ಅಂಶದ ಹೆಚ್ಚಳಕ್ಕೆ ಅತಿ ಮುಖ್ಯ ಪೋಷಕಾಂಶಗಳಾಗಿವೆ.

ಸೂಕ್ಷ್ಮ ಪೋಷಕಾಂಶಗಳಲ್ಲಿ ಏಳು ವಿಧಗಳಿದ್ದು ಅವುಗಳಲ್ಲಿ ಕಬ್ಬಿಣ, ಸತು, ಮ್ಯಾಂಗನೀಸ್‌, ಬೋರಾನ್‌, ತಾಮ್ರ, ಮ್ಯಾಲಿಬಿxನಂ ಮತ್ತು ಕ್ಲೋರಿನ್‌ ಮುಖ್ಯವಾದವುಗಳು. ಇವು ಪ್ರತಿ ಹೆಕ್ಟೇರ್‌ಗೆ 2ರಿಂದ 3 ಕೆ.ಜಿ.ಯಷ್ಟೇ ಸಾಕಾಗುತ್ತದೆ.

ಕಬ್ಬಿಣ ಸಸ್ಯದಲ್ಲಿರುವ ಪತ್ರ ಹರಿತ್ರಿನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಸ್ಯಗಳಲ್ಲಿ ಕಬ್ಬಿಣದ ಅಂಶದ ಕೊರತೆ ಎಲೆಗಳ ಹಸಿರು ಬಣ್ಣದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಸತು ಸಸ್ಯಗಳ ವಂಶಾಭಿವೃದ್ಧಿಗೆ ಗಿಡದ ಹಣ್ಣು ಮತ್ತು ಬೀಜದ ಸದೃಢ ಬೆಳವಣಿಗೆಗೆ ಸಹಕಾರಿ. ಮ್ಯಾಂಗನೀಸ್‌ ಸಸ್ಯದ ಕಿಣ್ವಗಳ ರಚನೆಯ ಕಾರ್ಯವೈಖರಿಗೆ ಸಹಕಾರಿ.

ಬೋರಾನ್‌ ಸಸ್ಯಗಳ ವಂಶಾಭಿವೃದ್ಧಿ ಅಂಗಗಳ ರಚನೆಯಲ್ಲಿ ಪರಿಣಾಮಕಾರಿ. ಅಡಿಕೆಯಲ್ಲಿ ಹೂವು, ಹರಳು ಉದುರುವುದು ಬೋರಾನ್‌ನ ಕೊರತೆಯಿಂದ. ಮಾಲಿಬಿxನಿಂ ದ್ವಿದಳ ಧಾನ್ಯಗಳ ಬೇರುಗಳಲ್ಲಿ ಗಂಟು ಮೂಡಿ ಸಾರಜನಕ ಸ್ಥಿರೀಕರಣಕ್ಕೆ ಅನುಕೂಲ. ಕ್ಲೋರಿನ್‌ ಸಸ್ಯದಲ್ಲಿರುವ ಉಪ್ಪಿನ ಪ್ರಮಾಣವನ್ನು ಸಮತೋಲನ ಮಾಡಲು ಅನುಕೂಲ. ಲಘು ಪೋಷಕಾಂಶ, ಸೂಕ್ಷ್ಮ ಪೋಷಕಾಂಶಗಳ ಕೊರತೆ ಸಸ್ಯದ ಎಲೆಗಳ ಬೆಳವಣಿಗೆಗೆ ಪರಿಣಾಮಕಾರಿ. ಎಲೆಗಳ ವಿಕೃತ ಬೆಳವಣಿಗೆಗೆ, ಹಸಿರು ಬಣ್ಣದಲ್ಲಿನ ವ್ಯತ್ಯಾಸ, ಹೂವು ಹಣ್ಣುಗಳ ವಕ್ರತೆಗೆ ಈ ಪೋಷಕಾಂಶಗಳ ಕೊರತೆಯೇ ಕಾರಣವಾಗಿದೆ. ಇಂಗಾಲ, ಜಲಜನಕ, ಆಮ್ಲಜನಕ ನೈಸರ್ಗಿಕವಾಗಿ ದೊರೆಯುವ ಪೋಷಕಾಂಶಗಳಾವೆ ನೀರು, ಗಾಳಿಯ ಮುಖಾಂತರ ಇವು ಸಸ್ಯಗಳಿಗೆ ದೊರೆಯುತ್ತದೆ. ಸಸ್ಯಗಳ ಪೋಷಕಾಂಶಗಳ ಪೂರೈಕೆಗೆ ಸಂಬಂಧಿಸಿದಂತೆ ಕೆಲವೇ ಅಂಶಗಳ ಮೇಲೆ ಗಮನಹರಿಸುವುದಕ್ಕಿಂತ ಸಮಗ್ರ ಪೋಷಕಾಂಶ ಪೂರೈಸುವ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಕಾಂಪೋಸ್ಟ್‌, ಎರೆಹುಳುವಿನ ಗೊಬ್ಬರದತ್ತ ರೈತರು ಗಮನ ಹರಿಸುವುದು ಒಳಿತು .

ಬೆಳವಣಿಗೆಗೆ ಸಹಕಾರಿ
ಸುಣ್ಣ, ಮೆಗ್ನಿàಶಿಯಂ, ಗಂಧಕವನ್ನು ಲಘು ಪೋಷಕಾಂಶಗಳೆಂದು ಗುರುತಿಸಲಾಗಿದ್ದು ಇವುಗಳ ಪೂರೈಕೆಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದೇ ಹೇಳಬಹುದು. ಯಾಕೆಂದರೆ ಇದರ ಬೇಡಿಕೆಯೂ ಅತ್ಯಲ್ಪ. ಪ್ರತಿ ಹೆಕ್ಟೇರ್‌ಗೆ ಇದು 30ರಿಂದ 50 ಕೆ.ಜಿ.ಯಷ್ಟು ಸಾಕಾಗುತ್ತದೆ. ಪ್ರಮುಖ ಲಘು ಪೋಷಕಾಂಶಗಳಾದ ಸುಣ್ಣ ಮಾನವನ ಬೆಳವಣಿಗೆಗೆ ಹೇಗೆ ಸಹಕಾರಿಯೋ ಅಂತೆಯೇ ಸಸ್ಯದ ಜೀವಕೋಶಗಳ ಗೋಡೆಯನ್ನು ಗಟ್ಟಿಗೊಳಿಸುವಲ್ಲಿ , ಗಿಡದ ತೊಗಟೆ, ಎಲೆ, ಪೊರೆ, ಹೂವು, ಹಣ್ಣು, ಕಾಯಿಗಳ ಹೊರ ಪದರವನ್ನು ಗಟ್ಟಿಗೊಳಿಸಲು ಸುಣ್ಣ ಅತ್ಯವಶ್ಯಕ.

ಪೋಷಕಾಂಶ ಕೊರತೆಯಿಂದ ಇಳುವರಿ ಕುಂಠಿತ
ಬೆಳೆ ಉತ್ಪಾದನೆಯ ಉದ್ದೇಶದಿಂದ ಮಣ್ಣಿ ನಲ್ಲಿಯ ಸಸ್ಯ ಪೋಷಕಾಂಶಗಳನ್ನು ನೈಸರ್ಗಿಕವಾಗಿ ಪೂರೈಕೆ ಮಾಡುವುದರಿಂದ ಮಣ್ಣಿನ ಫ‌ಲವತ್ತತೆ ಸುಧಾರಿಸುತ್ತದೆ. ಪೋಷಕಾಂಶಗಳ ಕೊರತೆಯಿಂದ ಬೆಳೆಯಲ್ಲಿ ಅಪೇಕ್ಷಿತ ಇಳುವರಿ ಪಡೆಯಲು ಸಾಧ್ಯವಿಲ್ಲ. ಗೊಬ್ಬರಗಳ ಬಳಕೆ ಆಧುನಿಕ ಕೃಷಿಯಲ್ಲಿ ಬಹಳ ಪ್ರಮುಖ ಪರಿಕರ. ಇದನ್ನು ಬಳಸಿದಾಗ ಸಾಕಷ್ಟು ಆಹಾರ ಧಾನ್ಯ, ತರಕಾರಿ ಉತ್ಪಾದನೆಯಾಗಿ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ಪೂರೈಕೆ ಸಾಧ್ಯವಾಗುತ್ತದೆ.

-   ಜಯಾನಂದ ಅಮೀನ್‌, ಬನ್ನಂಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ದಿನೇ ದಿನ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆಯಾಗುತ್ತಿರುವುದು ವಾಹನ ಚಾಲಕರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಹೀಗಾಗಿ ಪೆಟ್ರೋಲ್‌, ಡಿಸೇಲ್‌ ವಾಹನಗಳಿಗೆ...

  • ಬೈಕ್‌ ನಿರೀಕ್ಷಿಸಿದಷ್ಟು ಮೈಲೇಜ್‌ ಕೊಡುತ್ತಿಲ್ಲ ಎನ್ನುವ ಆರೋಪ ನಿಮ್ಮದಾಗಿರಬಹುದು. ಅದಕ್ಕೆ ಕೆಲವೊಂದು ಕಾರಣಗಳಿದ್ದು ಅದರಿಂದಾಗಿಯೂ ಸಮಸ್ಯೆ ಉಂಟಾಗಿರಬಹುದು....

  • ಫ್ಯಾಷನ್‌ ಜಗತ್ತಿನಲ್ಲಿ ಪ್ರತಿದಿನ ಹೊಸತನದ ಗಾಳಿ ಬೀಸುತ್ತದೆ. ಈ ಗಾಳಿ ಸಾಂಪ್ರದಾಯಿಕ ಧಿರಿಸು ಸೀರೆಗೂ ಸೋಕಿ ವಿಭಿನ್ನ ರೀತಿಯ ಸೀರೆಗಳು ಮಾರುಕಟ್ಟೆಗೆ ಬರಲಾರಂಭಿಸಿವೆ....

  • ತಂದೆಯ ಚಿನ್ನದ ಅಂಗಡಿಯಲ್ಲಿದ್ದ ಕೆಲಸಗಾರ ಒಂದು ರಾತ್ರಿ ಅಂಗಡಿಯಲ್ಲಿದ್ದ ಚಿನ್ನವನ್ನೆ ಕಳ್ಳತನ ಮಾಡಿ ಓಡಿಹೋಗಿದ್ದ ಘಟನೆ, ಮಾನಸಿಕ ಆಕೆಗೆ ಆಘಾತ ಉಂಟು ಮಾಡಿತ್ತು....

  • "ನಿಮ್ಮ ಹೆಸರು...' ಅಂದೆ, ಆಕೆಯ ವಿವರ ಬರೆದುಕೊಳ್ಳುತ್ತ. 2 ನಿಮಿಷವಾದರೂ ಉತ್ತರವಿಲ್ಲ! "ಅಯ್ಯ..ಹೆಸರು ಹೇಳಲೂ ಇಷ್ಟು ಯೋಚಿಸಬೇಕೆ..?' ಆಕೆ ನನ್ನ ಕ್ಲೈಂಟ್‌. ವಿಮಾ ಸಂಸ್ಥೆಯ...

ಹೊಸ ಸೇರ್ಪಡೆ