ಕೀಬೋರ್ಡ್‌ ಮಾಂತ್ರಿಕ: ಕೋಟೇಶ್ವರ ವೇಣುಗೋಪಾಲ ಭಟ್‌

Team Udayavani, Jan 23, 2020, 5:45 AM IST

ಶಾಸ್ತ್ರೀಯ ಸಂಗೀತದಲ್ಲಿ ವಾದ್ಯಗಳಿಗೂ ಬಹಳ ಮಹತ್ವವಿದೆ. ಗಾಯನ ಮತ್ತು ವಾದ್ಯ ಇದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದರಲ್ಲೂ ಹಾರ್ಮೋನಿಯಂಗೆ ವಿಶಿಷ್ಟವಾದ ಸ್ಥಾನವಿದೆ. ಹಾರ್ಮೋನಿಯಂ ಸಹವಾದ್ಯ ಎಂದು ಪರಿಗಣಿಸಲ್ಪಟ್ಟರೂ ಶ್ರುತಿ, ಲಯಬದ್ಧ ಗಾಯನಕ್ಕೆ ಅದು ಸಹಕಾರಿ.

ಹಾರ್ಮೋನಿಯಂನ್ನು ಶಾಸ್ತ್ರೀಯ ಸಂಗೀತ ದಲ್ಲಿ ಬಳಸಿದರೆ, ಆರ್ಕೆಸ್ಟ್ರಾ, ಕೀಬೋರ್ಡ್‌ನ್ನು ಸುಗಮ ಸಂಗೀತದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಹಾರ್ಮೋನಿಯಂನ ಯಾಂತ್ರೀಕೃತ ಅವತರಣಿಕೆಯೇ ಕೀ ಬೋರ್ಡ್‌. ಸಂಗೀತದ ಸಾಮ್ರಾಜ್ಯದಲ್ಲಿ ತನ್ನದೇಇತಿಹಾಸ ಹೊಂದಿರುವ ಕೀಬೋರ್ಡ್‌ ಅನ್ನು ಬಳಸಿಯೇ ಮಾಧುರ್ಯವನ್ನು ಹೊಮ್ಮಿಸುತ್ತಿರುವ ಪ್ರತಿಭೆ ಕೋಟೇಶ್ವರ ಕೆ. ವೇಣುಗೋಪಾಲ ಭಟ್‌.

ಕೋಟೇಶ್ವರ ಅವರ ಹುಟ್ಟೂರು. ತಂದೆ ಕೊಗ್ಗ ಭಟ್ಟರು ಹೆಸರಾಂತ ಉದ್ಯಮಿ. ತಾಯಿ ರಾಧಾ .ಕೆ ಭಟ್‌ ಸಂಗೀತ ಆರಾಧಕರು. ಮನೆಯಲ್ಲಿ ನಡೆವ ಭಜನ ಕಾರ್ಯಕ್ರಮಗಳಿಂದ ಪ್ರೇರಿತರಾದ ವೇಣುಗೋಪಾಲ್‌ ಭಟ್ಟರು ತನಗರಿವಿಲ್ಲದೆ ಸಂಗೀತ ಕ್ಷೇತ್ರದತ್ತ ವಾಲಿದರು. ಬೆಂಗಳೂರಿನಲ್ಲಿ ಬಿಕಾಂ ಪದವಿ ಪಡೆದು, ವೃತ್ತಿಯಲ್ಲಿ ತೊಡಗಿದರು. ಬಳಿಕ ಊರಿಗೆ ವಾಪಸು ಬಂದು ಸಂಗೀತ ಕೃಷಿಯಲ್ಲಿ ತೊಡಗಿಕೊಂಡರು. ಜತೆಗೆ ಆಯಿಲ್‌ ಮಿಲ್‌ ಮತ್ತು ಹಿಟ್ಟಿನ ಗಿರಣಿಯ ಉದ್ಯಮ. ತಾನೂ ಸಂಗೀತಗಾರನಾಗಬೇಕೆಂಬ ತುಡಿತ ಉಳಿದ ದಾರಿಯನ್ನು ತೋರಿಸಿತು. ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಿತ್ಯವೂ ರಾತ್ರಿ ಭಜನೆಯಲ್ಲಿ ಭಾಗಿಯಾಗತೊಡಗಿದರು. ಅಲ್ಲಿಂದಲೇ ಸಂಗೀತ ಕಲಿಕೆ ಆರಂಭವಾಯಿತು. ಬೇಗನೆ ಹಾಡು ಕಲಿತು ಭಜನ ಮಂಡಳಿಯ ಪ್ರಮುಖ ಭಜಕರಾದರು. ಮನೆಯಲ್ಲೇ ಇದ್ದ ಹಾರೊ¾àನಿಯಂ ಪೆಟ್ಟಿಗೆಯ ಬಿಳಿ-ಕಪ್ಪು ಪಟ್ಟಿಗಳ ಮೇಲೆ ಕೈಯಾಡಿಸತೊಡಗಿದರು. ಇದು ಇವರಿಗೆ ಹೊಸ ಅನುಭವ ನೀಡಿತು. ಸತತ ವೀಕ್ಷಣೆ, ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿದರು. ಇದಕ್ಕೆ ಮನೆಯವರ ಸಹಕಾರವಿತ್ತು. ಕ್ರಮೇಣ ಹಾರೊ¾àನಿಯಂ ವಾದಕರಾದರು. ಅನಂತರ ಪ್ರಖ್ಯಾತ ಗಾಯಕರ ಸಂಗೀತ ಕಛೇರಿಗಳಲ್ಲೂ ಸಾಥ್‌ ನೀಡಲಾರಂಭಿಸಿದರು.

ಬಳಿಕ ಕೀಬೋರ್ಡ್‌ ಕಲಿಯಲು ತೊಡಗಿದರು. ಶಾಸ್ತ್ರೋಕ್ತವಾಗಿ ಗುರುಗಳಾದ ಮಹಾಬಲೇಶ್ವರ ಭಾಗವತರಲ್ಲಿ ಶಿಷ್ಯರಾಗಿ ಹಿಂದೂಸ್ತಾನಿ ಸಂಗೀತ ಅಭ್ಯಸಿಸತೊಡಗಿದರು. ಹರಿಕಥೆ, ಭರತನಾಟ್ಯ, ಭಜನೆ, ನಾಟಕ, ಆರ್ಕೆಸ್ಟ್ರಾದಲ್ಲೂ ಸಂಗೀತ ಸೇವೆ ಆರಂಭಿಸಿದರು. ಸುಗಮ ಸಂಗೀತದ ತಂಡವನ್ನು ರಚಿಸಿಕೊಂಡು ಹಲವಾರು ಕಾರ್ಯಕ್ರಮ ನೀಡತೊಡಗಿದರು. ನಾಟಕದ ಪಾತ್ರಧಾರಿಯಾಗಿಯೂ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು. ನಟ ಸಾರ್ವಭೌಮ ಕುಳ್ಳಪ್ಪುರವರ ಮೂರು ಮುತ್ತು ನಾಟಕದ ಪ್ರಪ್ರಥಮ ಪ್ರಯೋಗ ದಲ್ಲೂ ಹಿನ್ನೆಲೆ ಸಂಗೀತಗಾರರಾದರು.

ವೇಣುಗೋಪಾಲ ಭಟ್ಟರು ಶ್ರೀಪಟ್ಟಾಭಿ ರಾಮಚಂದ್ರ ದೇವಸ್ಥಾನದ ಶ್ರೀ ರಾಮ ಭಜನ ಮಂಡಳಿಯ ಸಕ್ರಿಯ ಭಜಕರಾಗಿದ್ದು, ಶ್ರೀ ರಾಮ ಭಜನ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ನಾನು ಕಲಾವಿದನಾಗಲು ಶ್ರೀ ಪಟ್ಟಾಭಿರಾಮ ಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಶ್ರೀಧರ ಕಾಮತ್‌ ಹಾಗೂ ದಿನೇಶ್‌ ಕಾಮತ್‌ರ ಪೂರ್ಣ ಮಾರ್ಗದರ್ಶನ, ಶ್ರೀರಾಮ ಸೇವಾ ಸಂಘದ ಸರ್ವರ ಹಾಗೂ ಊರಿನವರ ಸಹಕಾರವೇ ಕಾರಣ ಎನ್ನುವವರು ಭಟ್ಟರು. ಇವರಿಗೆ ಹಲ ವಾರು ಪ್ರಶಸ್ತಿಗಳು ಸಂದಿವೆ. ಶ್ರೀರಾಮ ಸೇವಾ ಸಂಘದವರ ಸುವರ್ಣ ಸಂಭ್ರಮದ ಸಂದರ್ಭ ದಲ್ಲಿ ಗೌರವಿಸಲಾಗಿದೆ. ಗೋಪಾಡಿ ಯುವಕ ಮಂಡಲದ ಬೆಳ್ಳಿ ಹಬ್ಬದ ಸಂದರ್ಭ, ಕನ್ನಡ ಸಾಹಿತ್ಯ ಪರಿಷತ್‌ ಕುಂದಾಪುರ ತಾಲೂಕು ವತಿಯಿಂದಲೂ ಸಮ್ಮಾನಿಸಲಾಗಿದೆ.

ಸಾಧನೆಗೆ ಪತ್ನಿ ರಾಧಿಕಾ ಭಟ್‌ ರ ಸಹಕಾರವೂ ಅನನ್ಯ. ಪುತ್ರಿ ಅರ್ಚನಾ ಸಂಗೀತಾಭ್ಯಾಸ ಮಾಡುತ್ತಿ ದ್ದಾಳೆ. ಪುತ್ರ ಶ್ರೀಧರ್‌ ಸಹ ಹಾರ್ಮೋ ನಿಯಂ ಕಲಿಯುತ್ತಿದ್ದಾನೆ. ಮುಂಬಯಿಯ ಸುಧೀರ್‌ ನಾಯಕ್‌ ಇವರಲ್ಲಿ ಹಾರ್ಮೋನಿಯಂನ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇಡೀ ಕುಟುಂಬವೇ ಸಂಗೀತ ಕುಟುಂಬ ವನ್ನಾಗಿಸಿದ್ದಾರೆ ಅಪರೂಪದ ಕಲಾರಾಧಕರಾದ ವೇಣುಗೋಪಾಲ ಭಟ್ಟರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ