ಸ್ಮಾರ್ಟ್ ನಗರಿಯ ಬಸ್‌ ಸಂಚಾರ ಜಾಲ ವಿಸ್ತರಣೆಯಾಗಲಿ


Team Udayavani, Aug 26, 2018, 2:07 PM IST

26-agust-13.jpg

ಸ್ಮಾರ್ಟ್‌ ನಗರಿಯಾಗಿ ಆಯ್ಕೆಗೊಂಡು ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಡುತ್ತಿರುವ ಮಂಗಳೂರಿನಲ್ಲಿ ಸಾರಿಗೆ ವ್ಯವಸ್ಥೆಯ ಅವ್ಯವಸ್ಥೆ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಲೇ ಇವೆ. ಇಲ್ಲಿರುವ ಮುಖ್ಯ ಸಮಸ್ಯೆಯೇ ಇದಾಗಿದ್ದು, ಬಸ್‌ ಸಂಚಾರ ಜಾಲ ವಿಸ್ತರಣೆ ಅಥವಾ  ಸ್ವಲ್ಪ ಬದಲಾಣೆಯಾದರೆ ಕೊಂಚ ಮಟ್ಟಿಗೆ ನಗರದೊಳಗೆ ಟ್ರಾಫಿಕ್‌ ಜಾಮ್‌, ಪಾರ್ಕಿಂಗ್‌ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆ. ಜತೆಗೆ ಪ್ರಯಾಣಿಕರ ಪರದಾಟಕ್ಕೊಂದು ಮುಕ್ತಿ ಸಿಗಲಿದೆ. ಜತೆಗೆ ಸಾರಿಗೆ ಇಲಾಖೆಯ ಆದಾಯ ವೃದ್ಧಿಗೊಂದು ದಾರಿ ಸಿಗಲಿದೆ. ಈ ನಿಟ್ಟಿನಲ್ಲಿ ಒಂದು ಚಿಂತನೆ ಇಲ್ಲಿದೆ.

ಮಂಗಳೂರು ನಗರದ ಸಾರ್ವಜನಿಕ ಸಂಚಾರ ವ್ಯವಸ್ಥೆ ಬಸ್‌ ಸಂಚಾರ ವ್ಯವಸ್ಥೆಯನ್ನು ಅವಲಂಬಿಸಿಕೊಂಡಿದೆ. ಬೆಂಗಳೂರು, ಮುಂಬಯಿ ನಗರದಂತೆ ಇಲ್ಲಿ ನಗರ, ಮೆಟ್ರೊ ರೈಲು ಸಂಚಾರ ವ್ಯವಸ್ಥೆಗಳಿಲ್ಲ. ಏನಿದ್ದರೂ ಖಾಸಗಿ ಸಿಟಿ ಬಸ್‌ ಹಾಗೂ ಸರ್ವಿಸ್‌ ಬಸ್‌ಗಳು ಸಾರ್ವಜನಿಕ ಸಂಪರ್ಕದ ಪ್ರಮುಖ ಸಾಧನಗಳು.

ಮಂಗಳೂರು ನಗರದೊಳಗೆ ಸರಕಾರಿ ಬಸ್‌ ಸಂಚಾರ ವ್ಯವಸ್ಥೆ ಇನ್ನೂ ಬಾಲ್ಯಾವಸ್ಥೆಯಲ್ಲಿದೆ. ಮಂಗಳೂರು ನಗರದಲ್ಲಿ ಬಸ್‌ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. ಆದರೆ ನಗರ ಬೆಳೆದಿದೆ. ಹೊರ ಪ್ರದೇಶಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

ಉಪನಗರಗಳು ರೂಪುಗೊಳ್ಳುತ್ತಿವೆ. ಇದಕ್ಕೆ ಪೂರಕವಾಗಿ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಯೋಜನಾಬದ್ಧವಾಗಿ ರೂಪುಗೊಳಿಸಿ ಬಸ್‌ ಜಾಲವನ್ನು ವಿಸ್ತರಿಸುವುದು ಅವಶ್ಯವಾಗಿದೆ. ಇದಕ್ಕೆ ಒಂದಷ್ಟು ಅವಕಾಶಗಳು ಕೂಡ ಇವೆ. ಈ ನಿಟ್ಟಿನಲ್ಲಿ ಚಿಂತನೆಗಳಾಗುವ ಅವಶ್ಯಕತೆ ಇದೆ.

ಪ್ರಸ್ತುತ ನಗರದ ಬಹುತೇಕ ಪ್ರಮುಖ ತಾಣಗಳಿಂದ ಸ್ಟೇಟ್‌ಬ್ಯಾಂಕ್‌ಗೆ ಖಾಸಗಿ ಸಿಟಿ ಬಸ್‌ಗಳಿವೆ. ಎರಡನೆಯ ಮುಖ್ಯ ಸಿಟಿಬಸ್‌ ತಾಣ ಮಂಗಳಾದೇವಿ. ಇಲ್ಲಿಂದ ಕೆಲವು ಸಿಟಿಬಸ್‌ ಗಳು ಸಂಚರಿಸುತ್ತವೆ. ಕಂಕನಾಡಿ ಮುಡಿಪು, ವಿಟ್ಲ ಸಹಿತ ಕೆಲವು ಪ್ರದೇಶಗಳಿಗೆ ತೆರಳುವ ಖಾಸಗಿ ಬಸ್‌ ಗಳಿಗೆ ಆರಂಭಿಕ ತಾಣವಾಗಿದೆ. ಇದೇ ಮಾದರಿಯಲ್ಲಿ ಬಸ್‌ ಸಂಚಾರ ಜಾಲ ವರ್ತುಲ ಮಾದರಿಯಲ್ಲಿ ವಿಸ್ತರಣೆಯಾದರೆ ಪ್ರಯಾಣಿಕ 2 ಅಥವಾ 3 ಬಸ್‌ಗಳನ್ನು ಹಿಡಿದು ಸಾಗುವ ಬದಲು ಒಂದು ತಾಣದಿಂದ ಇನ್ನೊಂದು ತಾಣಕ್ಕೆ ನೇರವಾಗಿ ಸಂಚರಿಸಲು ಅನುಕೂಲವಾಗಿದೆ.

ಸುರತ್ಕಲ್‌, ಕಾಟಿಪಳ್ಳ ಮಾರ್ಗದ ಮಾದರಿ
ಸುರತ್ಕಲ್‌ನ ಕಾಟಿಪಳ್ಳ, ಕೈಕಂಬದಿಂದ 15 ಹಾಗೂ 45 ನಂಬರ್‌ನ ಸಿಟಿ ಬಸ್‌ ಸಂಚಾರ ವ್ಯವಸ್ಥೆ ವಿಸ್ತೃತ ಜಾಲ ಸಂಪರ್ಕಕ್ಕೆ ಒಂದು ಮಾದರಿಯಾಗಿ ನಮ್ಮ ಮುಂದಿದೆ. ಸುರತ್ಕಲ್‌ನಿಂದ ಸ್ಟೇಟ್‌ಬ್ಯಾಂಕ್‌ಗೆ ಹೋಗುವವರು 45 ನೇ ನಂಬರ್‌ನ ಬಸ್‌ಗಳ ಮೂಲಕ ಸಾಗಬಹುದು. ಕೆಎಸ್‌ಆರ್‌ಟಿಸಿ, ಕೆಪಿಟಿ ಸರ್ಕಲ್‌, ನಂತೂರು, ಕದ್ರಿ, ಸೈಂಟ್‌ಆಗ್ನೇಸ್‌, ಫಾದರ್‌ ಮುಲ್ಲರ್‌ ಆಸ್ಪತ್ರೆ, ವೆಲೆನ್ಶಿಯಾ ಮಾರ್ನಮಿ ಕಟ್ಟೆ , ಮಂಗಳಾದೇವಿಗೆ ಹೋಗುವವರು 15 ನಂಬರ್‌ ಬಸ್‌ಗಳ ಮೂಲಕ ಪ್ರಯಾಣಿಸಬಹುದು. ಬೋಳಾರ, ಮಂಗಳಾದೇವಿ ಪ್ರದೇಶದಿಂದ 27 ನಂಬರ್‌ ಸಿಟಿಬಸ್‌ ಅತ್ತಾವರ ಮೂಲಕ ಮಂಗಳೂರಿಗೆ ಸಂಚರಿಸುತ್ತದೆ. 29 ನಂಬರ್‌ನ ಬಸ್‌ ಬೋಳಾರ, ಪಾಂಡೇಶ್ವರ ಮೂಲಕ ಸ್ಟೇಟ್‌ಬ್ಯಾಂಕ್‌ಗೆ ಬರುತ್ತದೆ. ಅತ್ತಾವರ , ಪಾಂಡೇಶ್ವರ, ಹೊಯಿಗೆಬಜಾರ್‌ ಪ್ರದೇಶ ಮೂಲಕ ಸ್ಟೇಟ್‌ಬ್ಯಾಂಕ್‌ಗೆ
ಹೋಗುವ ಪ್ರಯಾಣಿಕರು ತಾವು ಪ್ರಯಾಣಿಸಬೇಕಾದ ತಾಣಗಳಿಗೆ ಅನುಗುಣವಾಗಿ ಬಸ್‌ ಅನ್ನು ಆಯ್ಕೆ ಮಾಡಿಕೊಂಡು ಸಾಗಬಹುದಾಗಿದೆ.

ಪ್ರಯಾಣಿಕರಿಗೆ ಸಮಸ್ಯೆಗಳು
ಮೂಡುಶೆಡ್ಡೆ , ವಾಮಂಜೂರಿನಿಂದ ಕೆಎಸ್‌ಆರ್‌ಟಿಸಿ, ಲಾಲ್‌ಭಾಗ್‌, ಉರ್ವಸ್ಟೋರ್‌, ಕೊಟ್ಟಾರಚೌಕಿ, ಕುಳೂರು, ಪಣಂಬೂರು, ಸುರತ್ಕಲ್‌ಗೆ ಸಾಗಬೇಕಾದ ಪ್ರಯಾಣಿಕರು ನಂತೂರಿನಲ್ಲಿ ಇಳಿದು 15 ನಂಬರ್‌ ಅಥವಾ ಜ್ಯೋತಿ, ಸ್ಟೇಟ್‌ಬ್ಯಾಂಕಿಗೆ ಬಂದು ಸರ್ವಿಸ್‌ ಬಸ್‌,13, 45 ನಂಬರ್‌ ಬಸ್‌ ಹಿಡಿದು ಹೋಗಬೇಕಾಗುತ್ತದೆ. ಅದೇ ರೀತಿ ತಲಪಾಡಿ, ತೊಕ್ಕೊಟ್ಟು , ಕೊಣಾಜೆ, ಪಡೀಲ್‌ನಿಂದ ಬರುವ ಪ್ರಯಾಣಿಕರು ಕೂಡ ಬೆಂದೂರ್‌ವೆಲ್‌ ಅಥವಾ ಜ್ಯೋತಿಯಿಂದ ಇನ್ನೊಂದು ಬಸ್‌ನ್ನು ಆಶ್ರಯಿಸಬೇಕಾಗುತ್ತದೆ. ಈ ಮಾರ್ಗದಲ್ಲಿ ಬೆರೆಳೆಣಿಕೆಯ ಬಸ್‌ಗಳು ಜ್ಯೋತಿ ಅಥವಾ ನಂತೂರು ಮೂಲಕ ಕೊಟ್ಟಾರದವರೆಗೆ ಸಂಚಾರ ನಡೆಸುತ್ತವೆ. ಪಡೀಲ್‌ನಿಂದಲೂ ಇದೇ ರೀತಿಯ ಪರಿಸ್ಥಿತಿ ಇದೆ. ಇದು ಉದಾಹರಣೆ ಮಾತ್ರ. ಇಂತಹ ಹಲವು ಮಾರ್ಗಗಳಿವೆ. 

ಜಾರಿಗೊಳ್ಳದ ಪ್ರಸ್ತಾವ
ಮಂಗಳೂರು ನಗರದಲ್ಲಿ ನೂತನವಾಗಿ ಪರವಾನಿಗೆ ಮಂಜೂರ ಆಗಿರುವ ನರ್ಮ್ ಬಸ್‌ಗಳಲ್ಲಿ ಒಂದು ರೂಟ್‌ ನಗರದ ಪ್ರಮುಖ ದೇವಾಲಯಗಳಿಗೆ ಸಂಚಾರ ಸಂಪರ್ಕ ಕಲ್ಪಿಸಲಿದೆ. ಸ್ಟೇಟ್‌ ಬ್ಯಾಂಕ್‌ನಿಂದ ಹೊರಡುವ ಒಂದು ಬಸ್‌ ಲೇಡಿಗೋಶನ್‌, ರಥಬೀದಿ, ಕುದ್ರೋಳಿ, ಮಣ್ಣಗುಡ್ಡ, ಲೇಡಿಹಿಲ್‌, ಲಾಲ್‌ಭಾಗ್‌, ಕೆಎಸ್‌ಆರ್‌ಟಿಸಿ ಬಿಜೈ, ಮಾರ್ಕೆಟ್‌, ಕದ್ರಿ ಟೆಂಪಲ್‌, ಸೈಂಟ್‌ ಆಗ್ನೆಸ್‌, ಬೆಂದೂರ್‌ವೆಲ್‌, ಕಂಕನಾಡಿ, ನಂದಿಗುಡ್ಡೆ, ಮಾರ್ನಮಿಕಟ್ಟೆ, ಮೋರ್ಗನ್ಸ್‌ಗೇಟ್‌, ಮಂಗಳಾದೇವಿ, ಲೀವೆಲ್‌, ಮಾರಿಗುಡಿ, ಎಮ್ಮೆಕೆರೆ, ಪಾಂಡೇಶ್ವರ ಮಾರ್ಗದಲ್ಲಿ ಹಾಗೂ ಇನ್ನೊಂದು ಬಸ್‌ ಸ್ಟೇಟ್‌ ಬ್ಯಾಂಕಿನಿಂದ ವಯಾ ಲೇಡಿಗೋಶನ್‌, ಪಾಂಡೇಶ್ವರ, ಎಮ್ಮೆಕೆರೆ, ಮಾರಿಗುಡಿ, ಲೀವೆಲ್‌, ಮಂಗಳಾದೇವಿ, ಮೋರ್ಗನ್ಸ್‌ಗೇಟ್‌, ಮಾರ್ನಮಿಕಟ್ಟೆ, ನಂದಿಗುಡ್ಡೆ, ಕಂಕನಾಡಿ, ಬೆಂದೂರ್‌ವೆಲ್‌, ಕದ್ರಿ ಟೆಂಪಲ್‌, ಬಿಜೈ ಮಾರ್ಕೆಟ್‌, ಕೆಎಸ್‌ಆರ್‌ಟಿಸಿ, ಲಾಲ್‌ಬಾಗ್‌, ಲೇಡಿಹಿಲ್‌, ಮಣ್ಣಗುಡ್ಡೆ, ಕುದ್ರೋಳಿ, ರಥಬೀದಿ ಮಾರ್ಗದಲ್ಲಿ ಸಂಚರಿಸಲಿದೆ. ( ಎರಡೂ ಬಸ್‌ಗಳು ಪ್ರತಿದಿನ ತಲಾ 12 ಸಿಂಗಲ್‌ ಟ್ರಿಪ್‌ಗಳನ್ನು ಮಾಡಲಿದೆ. 

ಪರಿಶೀಲಿಸಬಹುದಾದ ಸಾಧ್ಯತೆಗಳು
ತಲಪಾಡಿಯಿಂದ ತೊಕ್ಕೊಟ್ಟು, ಪಂಪ್‌ವೆಲ್‌, ಸೈಂಟ್‌ ಆ್ಯಗ್ನೆಸ್‌, ನಂತೂರು, ಲಾಲ್‌ಭಾಗ್‌, ಉರ್ವಸ್ಟೋರ್‌, ಕೂಳೂರು ಆಗಿ  ಸುರತ್ಕಲ್‌ಗೆ.

. ಪಡೀಲ್‌ನಿಂದ ಪಂಪ್‌ವೆಲ್‌, ಬೆಂದೂರ್‌ವೆಲ್‌, ನಂತೂರು, ಕುಂಟಿಕಾನ, ಕೊಟ್ಟಾರಚೌಕಿ, ಕುಳೂರು, ಸುರತ್ಕಲ್‌ ಆಗಿ ಎನ್‌ಐಟಿಕೆಗೆ.

. ಮೂಡುಶೆಡ್ಡೆ, ವಾಮಂಜೂರಿನಿಂದ ಮಂಗಳಾಜ್ಯೋತಿ, ಕೂಳೂರು  ಮೂಲಕ ಸುರತ್ಕಲ್‌, ಕಾಟಿಪಳ್ಳಕ್ಕೆ (ಇಲ್ಲಿಂದ ಕಾವೂರು, ಕೂಳೂರು ಮೂಲಕ ಸುರತ್ಕಲ್‌ಗೆ ಒಂದೆರಡು ಬಸ್‌ಗಳಿವೆ .

. ಮೂಡುಶೆಡ್ಡೆ, ವಾಮಂಜೂರಿನಿಂದ ನಂತೂರು, ಲಾಲ್‌ಭಾಗ್‌, ಕುಳೂರು ಮೂಲಕ ಕಾಟಿಪಳ್ಳ.

. ಪಡೀಲ್‌ನಿಂದ ಬಿಕರ್ನಕಟ್ಟೆ ಕೈಕಂಬ, ನಂತೂರು, ಲಾಲ್‌ಭಾಗ್‌ , ಸುರತ್ಕಲ್‌.

. ಉಳ್ಳಾಲ, ತೊಕ್ಕೊಟ್ಟಿನಿಂದ ಮೋರ್ಗನ್‌ಗೇಟ್‌, ಮಂಗಳಾದೇವಿ ಮೂಲಕ ಸ್ಟೇಟ್‌ಬ್ಯಾಂಕ್‌ ( ಪ್ರಸ್ತುತ ಒಂದೆರಡು ಬಸ್‌ ಮಾತ್ರ ಇದೆ).

. ಸ್ಟೇಟ್‌ಬ್ಯಾಂಕ್‌ನಿಂದ ಬಲ್ಮಠ, ಬೆಂದೂರು, ಮಲ್ಲಿಕಟ್ಟೆ, ಕದ್ರಿ ದೇವಸ್ಥಾನ, ಸಕೀಟ್‌ ಹೌಸ್‌, ಕೆಪಿಟಿ, ಕುಂಟಿಕಾನ, ಲ್ಯಾಂಡ್‌ಲಿಂಕ್ಸ್‌ .

.ತೊಕ್ಕೊಟ್ಟು , ಪಂಪ್‌ವೆಲ್‌, ಕಂಕನಾಡಿ, ಜ್ಯೋತಿ, ಬಂಟ್ಸ್‌ಹಾಸ್ಟೆಲ್‌, ಪಿವಿಎಸ್‌ ವೃತ್ತ, ನವಭಾರತ ವೃತ್ತ, ಕಾರ್‌ಸ್ಟ್ರೀಟ್‌, ಅಳಕೆ, ಕುದ್ರೋಳಿ ದೇವಸ್ಥಾನ, ಲೇಡಿಹಿಲ್‌, ಉರ್ವಸ್ಟೋರ್‌, ಕುಳೂರು. ( 3 ದೇವಾಲಯಗಳು, 10 ಕ್ಕೂ ಅಧಿಕ ಶಾಲಾ ಕಾಲೇಜುಗಳಿಗೆ ನೇರ ಸಂಪರ್ಕ ಸಾಧ್ಯವಾಗುತ್ತದೆ).

. ವಾಮಂಜೂರಿನಿಂದ ಬಿಕರ್ನಕಟ್ಟೆ, ಬಂಟ್ಸ್‌ಹಾಸ್ಟೆಲ್‌, ಪಿವಿಎಸ್‌, ಡೊಂಗರಕೇರಿ, ಬಂದರು ಆಗಿ ಸ್ಟೇಟ್‌ಬ್ಯಾಂಕ್‌ಗೆ. 

ಕೇಶವ ಕುಂದರ್‌

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.