ಅನುದಾನವಿದ್ದರೂ ಆಗುತ್ತಿಲ್ಲ ಗ್ರಂಥಾಲಯ

Team Udayavani, Jan 22, 2019, 9:51 AM IST

ಅರಂತೋಡು ಜ. 21: ಅರಂತೋಡು ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಒಂದು ವರ್ಷ ಕಳೆದಿದೆ. ಕಾಮಗಾರಿಗೆ ಅನುದಾನ ಕೊರತೆ ಇಲ್ಲ.

ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನ ದಲ್ಲಿರುವ ಅರಂತೋಡು ಸಾರ್ವಜನಿಕ ಗ್ರಂಥಾಲಯ ಈಗ ಗ್ರಾ.ಪಂ. ಸಮೀಪದ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎರಡು ವರ್ಷಗಳ ಹಿಂದೆ ಇಲಾಖೆಯಿಂದ ಮಂಜೂರುಗೊಂಡ 10 ಲಕ್ಷ ರೂ. ಅನುದಾನಕ್ಕೆ ತಕ್ಕಂತೆ ನೀಲ ನಕಾಶೆ ತಯಾರಿಸಿ, ಅರಂತೋಡು ಸ.ಹಿ.ಪ್ರಾ. ಶಾಲೆ ಸಮೀಪ ಇಲಾಖೆಯ ಗ್ರಂಥಾಲಯ ಕಟ್ಟಡ ಕಾಮಗಾರಿ ಆರಂಭಿಸಲಾಗಿತ್ತು.

ಕಾಮಗಾರಿಯಲ್ಲಿ ನಿರ್ಲಕ್ಷ್ಯ
ಮಂಜೂರುಗೊಂಡ 10 ಲಕ್ಷ ರೂ. ಅನುದಾನದಲ್ಲಿ 5 ಲಕ್ಷ ರೂ. ಮಾತ್ರ ಬಿಡುಗಡೆಗೊಂಡಿದ್ದು, ಇನ್ನೈದು ಲಕ್ಷ ರೂ. ಬಿಡುಗಡೆಗೊಳ್ಳಲು ಬಾಕಿ ಇತ್ತು. ವಾರದೊಳಗೆ ಪ್ರಾರಂಭ? ಗ್ರಂಥಾಲಯ ಕಟ್ಟಡ ಪೂರ್ಣಗೊಳಿಸಲು ಮತ್ತೆ 5 ಲಕ್ಷ ರೂ. ಬಿಡುಡಗಡೆಯಾಗಿದ್ದರೂ ನಿರ್ಮಿತಿ ಕೇಂದ್ರದವರು ಕಾಮಗಾರಿ ಪ್ರಾರಂಭಿಸಿಲ್ಲ. ನಿರ್ಮಿತಿ ಕೇಂದ್ರದ ಎಂಜಿನಿಯರ್‌ ಹರೀಶ್‌ ಅವರನ್ನು ಸಂಪರ್ಕಿಸಿದಾಗ ಒಂದು ವಾರದಲ್ಲಿ ಗ್ರಂಥಾಲಯದ ಉಳಿದ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
-ಶಿವಾನಂದ ಕುಕ್ಕುಂಬಳ, ಉಪಾಧ್ಯಕ್ಷರು, ಅರಂತೋಡು ಗ್ರಾ.ಪಂ.

ತೇಜೇಶ್ವರ್‌ ಕುಂದಲ್ಪಾಡಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಾವ ಮನುಷ್ಯನಿಗೆ ಕನಸು ಬೀಳುವುದಿಲ್ಲ ಹೇಳಿ. ಕೆಲವರಿಗೆ ಒಂದೊಂದು ರೀತಿಯ ಕನಸುಗಳು ಅವರನ್ನು ಎಚ್ಚರಿಸುತ್ತಿರುತ್ತವೆ. ಭವಿಷ್ಯ, ಪ್ರೀತಿ, ಜೀವನ ಮೊದಲಾದ ಸಂಗತಿಗಳ...

  • ವಿದೇಶಕ್ಕೆ ಹೋಗುವ ಮುನ್ನ ಬ್ಯಾಂಕ್‌ ಕಾರ್ಡ್‌ ಪರೀಕ್ಷಿಸಿಕೊಳ್ಳಿವಿದೇಶಕ್ಕೆ ಉದ್ಯೋಗ, ಶಿಕ್ಷಣ, ಪ್ರವಾಸಕ್ಕಾಗಿ ಹೊರಡುವ ಯೋಜನೆಯಿದೆಯೇ? ಪಾಸ್‌ಪೋರ್ಟ್‌,...

  • ಮಧ್ಯಮ ವರ್ಗದ ಜನರಿಗೆ/ಉದ್ಯೋಗಿಗಳ ಕುಟುಂಬದಲ್ಲಿ ಏನಾದರೂ ಶುಭಕಾರ್ಯ ಸಮಾರಂಭಗಳು ನಡೆಯುವುದಿದ್ದರೆ ಅದರ ಖರ್ಚುವೆಚ್ಚಗಳನ್ನು ಭರಿಸಲು ಮಧ್ಯಮ ವರ್ಗದವರು ಮೊರೆ...

  • ಯಾವುದೇ ಸಾಧಕರನ್ನು ಯಶಸ್ಸನ್ನು ಗಮನಿಸಿ ನೋಡಿ. ಪರಿಶ್ರಮ, ಏಕಾಗ್ರತೆ ಜತೆಗೆ ಅವರು ಸಮಯವನ್ನು ಸದುಪಯೋಗಿಸಿಕೊಂಡಿರುವುದು ಸಾಧನೆಗೆ ಮುಖ್ಯ ಕಾರಣವಾಗಿರುತ್ತದೆ....

  • ದಾರಿಯಲ್ಲಿ ಹೋಗುವಾಗ ಒಂದು ಮಗು ಅಮ್ಮ ಕೊಟ್ಟಿದ್ದ ಒಂದು ರೂಪಾಯಿಯನ್ನು ಎಲ್ಲೋ ಕಳೆದುಕೊಂಡುಬಿಡುತ್ತದೆ. ಅಮ್ಮನ ಭಯಕ್ಕೋ, ಅಮ್ಮ ಕೊಟ್ಟಿದ್ದು ಎಂಬ ಪ್ರೀತಿಗೋ...

ಹೊಸ ಸೇರ್ಪಡೆ