ಬದುಕು ಬದಲಿಸುವ ಪಥ…


Team Udayavani, Sep 17, 2018, 2:55 PM IST

17-sepctember-12.jpg

ಬದುಕು ನಾವಂದುಕೊಂಡತೆ ಇರುವುದಿಲ್ಲ ಎಂದು ಹಲವು ಬಾರಿ ಪರಿತಪಿಸುತ್ತೇವೆ. ಆದರೆ, ಎಷ್ಟೋ ಬಾರಿ ನಮಗೆ ಸಿಕ್ಕಿದ ಅವಕಾಶವನ್ನು ಕೈಚೆಲ್ಲಿ ಹಣೆ ಬರಹ ಎಂದುಕೊಳ್ಳುತ್ತೇವೆ. ಇಲ್ಲಿ ಮೂರು ಘಟನೆಗಳಿವೆ. ಇದರಲ್ಲಿ ಒಂದು ನಮ್ಮದೂ ಆಗಿರಬಹುದು. ಹಾಗಿದ್ದರೆ ನಮ್ಮ ಭವಿಷ್ಯ ಏನು ಎಂದು ಈಗಲೇ ನಿರ್ಧರಿಸಿ, ನಾವು ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ಯೋಚಿಸಬೇಕಾಗುತ್ತದೆ.

ಘಟನೆ - 1
ಜೀವನ ಸರಾಗವಾಗಿ ಸಾಗಬೇಕೆಂದಿದ್ದರೆ ಒಂದು ಉದ್ಯೋಗ, ಮೂರು ಹೊತ್ತಿನ ಊಟ ಇವಿಷ್ಟು ಸಾಕು. ಬದುಕಿನ ಆರಂಭದಿಂದ ಅಂತ್ಯದವರೆಗೆ ಯಾವುದೇ ಜಂಜಾಟವಿಲ್ಲದೆ ಸಾಗುತ್ತದೆ ಒಂದು ದೋಣಿಯಂತೆ. ಹೆಚ್ಚಿನ ಹೆತ್ತವರಿಗೆ ಇದುವೇ ಹೆಮ್ಮೆಯ ವಿಚಾರ ನಮ್ಮವ/ಳು ಯಾರ ತಂಟೆಗೂ ಹೋಗುವುದಿಲ್ಲ ಎಂಬ ಹಿರಿಮೆ. ಇಂಥವರ ಜೀವನ ಸಾಗುತ್ತಿರುತ್ತದೆ. ಒಂದು ದಿನ ಜೀವನ ಮುಗಿಯುತ್ತದೆ. ಮಾರನೇ ದಿನ ಮನೆಯವರು ನೆನಪಿನಲ್ಲೇ ಕೊರಗುತ್ತಾರೆ. ಆ ನೆನಪಿಷ್ಟೇ ನಮ್ಮವ/ ಳು ಒಳ್ಳೆಯವ/ಳು ಈ ಸ್ಥಿತಿ ಬರಬಾರದಿತ್ತು ಅನ್ನುವುದು.

ಘಟನೆ - 2
ಉದ್ಯೋಗ ಇಲ್ಲ. ಹೇಗೋ ಹೊಟ್ಟೆ ತುಂಬುತ್ತದೆ. ಅಡ್ಡದಾರಿಯತ್ತ ಸಾಗುವುದೇ ಹೆಚ್ಚು. ಮಾತಿಗೆ ಬಗ್ಗದವರು. ಮನೆಯವರಿಗೆ ಮಕ್ಕಳದ್ದೇ ಚಿಂತೆ. ಸರಿದಾರಿಗೆ ಬರುತ್ತಾರೆ ಎನ್ನುವ ಅಚಲ ನಂಬಿಕೆ. ಇಂಥವರಿಗೆ ಮನೋರಂಜನೆ ಮುಖ್ಯ ಜೀವನವಲ್ಲ. ಇಲ್ಲಿ ಏನಿದ್ದರೂ ಆ ಕ್ಷಣದ ಸುಖ ಮಾತ್ರ. ಜೀವನವನ್ನು ಅಪಾಯದಲ್ಲಿ ತಂದಿಡುವವರು. ಆದರೆ ಅದೃಷ್ಟದಾಟದಲ್ಲಿ ಗೆಲುವು ಸಿಗಲೂಬಹುದು ಸೋಲು ದಕ್ಕಲೂ ಬಹುದು. ಇದು ಜೀವನ ಪರ್ಯಾಂತ ಪರಿತಪಿಸುವ ಯಾತನೆಯೂ ಆಗಿರಬಹುದು.

ಘಟನೆ - 3
ಸಾಧನೆಗೆ ಪಣ ತೊಡುವವರು. ಯಶಸ್ಸು ಗಳಿಸುವುದೇ ಇವರ ಜಾಯಾಮಾನ. ಸದಾ ಆಲೋಚನೆ, ಕಾರ್ಯಗತಮಾಡುವುದನ್ನೇ ಇವರು ಕರಗತ ಮಾಡಿಕೊಳ್ಳುತ್ತಾರೆ. ಊರು ತುಂಬ ಗೆಳೆತನ, ಕಷ್ಟ ಕಾಲಕ್ಕೆ ಗೆಳೆಯರಿಗೆ ಆಸರೆಯಾಗುವವರು. ಜೀವನದಲ್ಲಿ ಹೊಸತನ ಹುಡುಕುವ ಹಂಬಲವಿರುವವರು. ಇವರು ಸ್ಪೀಡ್‌ ಬೋಟ್‌ ಇದ್ದಂತೆ ಕಡಿಮೆ ಅವಧಿಯಲ್ಲಿ ಯಶಸ್ಸು ಸಾಧಿಸುವವರು. ಅಪಾಯವನ್ನು ಜಾಣ್ಮೆಯಿಂದ ಎದುರಿಸುವರು.

ಜೀವನದಲ್ಲಿ ಪಥ ಎಂಬುವುದು ಮರದ ಗೆಲ್ಲುಗಳಂತೆ. ಜಾಣ್ಮೆ, ಏಕಾಗ್ರತೆ, ನಿಖರತೆ, ಗುರಿ, ಉದ್ದೇಶ ಹೀಗೆ ಹತ್ತು ಹಲವು ಸಂಗತಿಗಳೂ ಇಲ್ಲಿ ಮುಖ್ಯ. ಬದುಕಿನಲ್ಲಿ ಬಿರುಗಾಳಿ ಎದ್ದರೂ ದೃಢವಾಗಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಅನಿರೀಕ್ಷಿತ ಘಟನೆಗಳಿಂದ ಕುಗ್ಗದೆ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುವುದನ್ನು ಕರಗತ ಮಾಡಿಕೊಂಡರಷ್ಟೇ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಆ ಮೂಲಕ ಜೀವನ ಮುಗಿದ ಅನಂತರದ ಬದುಕು ಕೂಡ ಶಾಶ್ವತವಾಗಿ ಉಳಿಯುತ್ತದೆ. ಮರ ನಶಿಸಿ ಹೋದರೂ ಅದರ ಕುರುಹು ಆ ಮರವನ್ನು ನೆನಪಿಸುವಂತಿರುತ್ತದೆ. ಅಂತೆಯೇ ನಮ್ಮ ಜೀವನವೂ ಇರಬೇಕು.

 ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.