ಜೀವ ವಿಮೆ ಮತ್ತು ಇತರ ವಿಚಾರಗಳು


Team Udayavani, Feb 3, 2020, 5:14 AM IST

kirulekhana-2

ಜೀವ ವಿಮೆ, ಇಂದು ಎಲ್ಲ ವರ್ಗದ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಭಾರತ, 130 ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ಬಹುದೊಡ್ಡ ದೇಶ. ಶೇ. 78ರಷ್ಟು ಜನರು ವಿಮಾ ವ್ಯಾಪ್ತಿಗೆ ಬಂದಿಲ್ಲ. ಇಂದಿನ ಆದಾಯ ತೆರಿಗೆ ಕಾನೂನು ಸೆಕ್ಷನ್‌ 80ಸಿ ಪ್ರಕಾರ, ಅಸೆಸೆ¾ಂಟ್‌ ವರ್ಷದಲ್ಲಿ (ಎಪ್ರಿಲ್‌ 1ರಿಂದ ಮಾರ್ಚ್‌ 31ರ ತನಕ) 1.50 ಲಕ್ಷ ರೂ.ಗಳ ತನಕ ಕಟ್ಟಿರುವ ಜೀವವಿಮಾ ಪ್ರೀಮಿಯಂಅನ್ನು ವ್ಯಕ್ತಿಯ ಸಂಪೂರ್ಣ ಆದಾಯದಿಂದ ಕಡಿತ ಮಾಡಿ, ಉಳಿದ ಆದಾಯಕ್ಕೆ ಮಾತ್ರ ಆದಾಯ ತೆರಿಗೆ ಸಲ್ಲಿಸಬಹುದು. ಹೀಗೆ ಆದಾಯ ತೆರಿಗೆ ಉಳಿಸಿ, ಉಳಿದ ಹಣದಿಂದಲೇ ಬಹುಪಾಲು ಪ್ರೀಮಿಯಂ ಹಣವನ್ನು ಭರಿಸಬಹುದಾಗಿದೆ. ವಿಮಾ ಕಂತುಗಳನ್ನು ಮಾಸಿಕ, ತ್ತೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕ ಹೀಗೆ ಬೇರೆ ಬೇರೆ ಅವಧಿಗಳಲ್ಲಿ ತುಂಬಬಹುದು.

ನೌಕರಿಯಲ್ಲಿ ಇರುವವರಿಗೆ, ಉದ್ಯೋಗದಾತರು ಒಪ್ಪುವ ಮೇರೆಗೆ ಸಂಬಳದಿಂದ ಪ್ರತೀ ತಿಂಗಳೂ ಮುರಿದು (ಸ್ಯಾಲರಿ ಸೇವಿಂಗ್ಸ್‌ ಸ್ಕೀಮ…) ವಿಮಾ ಕಂತುಗಳನ್ನು ಸಲ್ಲಿಸಬಹುದು. ಪ್ರತೀ ತಿಂಗಳೂ ತುಂಬುವುದರಿಂದ, ಇಲ್ಲಿ ಸ್ವಲ್ಪ ಕಡಿಮೆ ಪ್ರೀಮಿಯಂ ಇರುತ್ತದೆ. ವಿಮಾ ಕಂತುಗಳನ್ನು ಮನಿ ಆರ್ಡರ್‌ (ಎಂ.ಒ.), ಡಿಮ್ಯಾಂಡ್‌ ಡ್ರಾಫ್ಟ್ (ಡಿ.ಡಿ) ಅಥವಾ ಚೆಕ್ಕುಗಳ ಮೂಲಕ (ಪರ ಊರಿನ ಚೆಕ್ಕುಗಳಾದಲ್ಲಿ ಕಲೆಕ್ಷನ್‌ ಚಾರ್ಜನ್ನು ಪ್ರೀಮಿಯಂ ಹಣಕ್ಕೆ ಸೇರಿಸಿ ಚೆಕ್ಕನ್ನು ಬರೆಯಬೇಕು) ತುಂಬಬಹುದು. ವಿಮಾ ಕಂಪೆನಿಗಳ ಶಾಖೆಗಳಲ್ಲಿ ಹಾಗೂ ನಿಗದಿಪಡಿಸಿದ ಬ್ಯಾಂಕ್‌ಗಳ ಶಾಖೆಗಳಲ್ಲೂ ವಿಮಾ ಕಂತುಗಳನ್ನು ತುಂಬಬಹುದು. ಇ.ಸಿ.ಎಸ್‌. ಮುಖಾಂತರವೂ ಆನ್‌ಲೈನ್‌ನಲ್ಲಿಯೂ ವಿಮಾ ಕಂತುಗಳನ್ನು ಪಾವತಿ ಮಾಡ ಬಹುದು. ಪಾಲಿಸಿದಾರರ ಹಿತಾ ಸಕ್ತಿ ಹಾಗೂ ಪಾಲಿಸಿದಾರರಿಗೆ ಯಾವುದೇ ತೊಂದರೆ ಗಳಾಗದಂತೆ ಹಲವು ನಗರ ಗಳಲ್ಲಿ ಓಂಬುಡ್ಸ್‌ಮನ್‌ ಕಚೇರಿಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ದಕ್ಷಿಣ ಭಾರತದ ನಗರಗಳಾದ ಹೈದರಾಬಾದ್‌, ಚೆನ್ನೆ   ಕೂಡಾ ಸೇರಿವೆ.

ಎಲ…ಐಸಿ ಅಥವಾ ಇನ್ನಿತರ ಕಂಪೆನಿಗಳಿಗೆ ಸಲ್ಲಿಸಿದ ದೂರುಗಳಿಗೆ ಸಮರ್ಪಕವಾದ ಉತ್ತರ ಬಾರದಿದ್ದಲ್ಲಿ ಸಂಬಂಧಪಟ್ಟ ಓಂಬುಡ್ಸ್‌ಮನ್‌ ಕಚೇರಿಗೆ ದೂರಿನೊಂದಿಗೆ ಮೊರೆ ಹೋಗಬಹುದು. ಭದ್ರತೆ, ದ್ರವ್ಯತೆ ಹಾಗೂ ಹೆಚ್ಚಿನ ವರಮಾನ ಇವೆಲ್ಲ ದೃಷ್ಟಿಗಳಲ್ಲಿ ಜೀವವಿಮೆ ಎಂದಿಗೂ ಕಡಿಮೆ ಅಲ್ಲ. ಜೊತೆಗೆ ಲೈಫ್ ರಿಸ್ಕ್ನಿಂದ ಎದುರಾಗುವ ತೊಂದರೆ ನೀಗಿಸುತ್ತದೆ. ವರಮಾನ ತೆರಿಗೆಯಲ್ಲೂ ಸಾಕಷ್ಟು ಉಳಿತಾಯ ಮಾಡಬಹುದು. ದೀರ್ಘಾವಧಿ ಹಣ ಹೂಡಿಕೆಯಲ್ಲಿ ಜೀವವಿಮೆ ಒಂದು ಉತ್ತಮ ಮಾರ್ಗ. “ಸಂಕಟ ಬಂದಾಗ ವೆಂಕಟರಮಣ’ ಎನ್ನುವ ಗಾದೆ ಮಾತು ಜೀವವಿಮೆಗೆ ಸಂಪೂರ್ಣ ಪೂರಕವಾಗಿದೆ. ಗಂಡಾಂತರ ಹಾಗೂ ಆರ್ಥಿಕ ಸಂಕಷ್ಟಗಳನ್ನು ಎದುರಿಸುವ ಸಮಯದಲ್ಲಿ ಜೀವವಿಮೆಗಿಂತ ಮಿಗಿಲಾದ ಯೋಜನೆ ಬೇರೊಂದಿಲ್ಲ.

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.