ಬದುಕು ಒಂದು ಪಾಠಶಾಲೆ


Team Udayavani, Apr 22, 2019, 6:00 AM IST

PTI6_12_2018_000051B

ಹನಿ ಮಳೆಯ ತುಂತುರಿನಲ್ಲಿ ಮೈಮರೆವ ಮಕ್ಕಳ ಮುಗ್ಧ ಹೃದಯವಿದ್ದಲ್ಲಿ ಬದುಕಿನ ಪ್ರತಿ ಕ್ಷಣದ ಆನಂದವೂ ಅವರ್ಣನೀಯ.

ಬದುಕಿನ ನಿರಂತರ ಪಥದಲ್ಲಿ ನಾವೆ ಲ್ಲರೂ ಬೊಂಬೆಗಳು. ಬೊಂಬೆಗಳಿಗೆ ಜೀವ ತುಂಬಿದರೆ ಹೇಗಾಗುತ್ತದೆ ಎಂಬುದಕ್ಕೆ ಶ್ರೀಮಂತ ಉದಾಹರಣೆ ಮಾನವ ಜನ್ಮ. ಮನುಷ್ಯನಲ್ಲಿ ಅಷ್ಟೆ„ಶ್ವರ್ಯ, ಆಸ್ತಿಪಾಸ್ತಿ, ಘನತೆ, ಗೌರವ ಎಲ್ಲವಿದ್ದರೂ ಕೊನೆಗೊಂದು ದಿನ ಯಾವುದೋ ಒಂದು ರೀತಿಯಲ್ಲಿ ಅವನಿಗೆ ನಿರಾಸೆ ಮೂಡುವುದೂ ಇದೆ.

ಅತಿರೇಕಕ್ಕೆ ಹೋಗದಿರಲಿ
“ಜೀವನ’ ಎಂಬುದು ಮೂರಕ್ಷರದ ಪದವಾದರೂ ಅದುವೇ ನಮ್ಮನ್ನು ಪುಳಕಗೊಳ್ಳುವಂತೆ ಮಾಡುತ್ತದೆ. ನಮ್ಮ ಬದುಕಿನುದ್ದಕ್ಕೂ ಅಸಾಧ್ಯ ವಾದುದನ್ನು ತಲುಪಬೇಕು ಎಂಬ ಹಂಬಲವಿರಬೇಕು ನಿಜ, ಆದರೆ ಅದು ಅತಿರೇಕಕ್ಕೆ ಹೋಗಿ ಜೀವನ ಹಾಳು ಮಾಡಿಕೊಂಡಿರುವಂತಾಗಬಾರದು.

ಒಳಿತು ಕೆಡುಕಿನ ಬಗ್ಗೆ ತಿಳಿಯಿರಿ
ಬದುಕು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು, ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಹೋರಾಟ ಪ್ರಕ್ರಿಯೆ ಸಾಗುತ್ತದೆ. ಕೆಲವೊಂದು ಬಾರಿ ತೀರಾ ಕಲ್ಪನೆಗೆ ಒಳಪಟ್ಟು ಪ್ರಪಂಚ ಸುಂದರವಾಗಿ ಕಾಣುವುದು ಸಹಜ. ಆದರೆ ಅದೇ ಪ್ರಪಂಚ ಜೀವನದುದ್ದಕ್ಕೂ ನಾವು ಯಾವ ರೀತಿ ಸಮಾಜದಲ್ಲಿ ಬದುಕು ಸಾಗಿಸಬೇಕು ಎಂಬು ದನ್ನೂ ತಿಳಿಸುತ್ತದೆ. ಇವೆಲ್ಲ ನಮಗೆ ಗೋಚರವಾ ಗುವುದು ಪ್ರಪಂಚದ ಒಳಿತು, ಕೆಡುಕುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ.

ಸಾಧನೆಗೆ ಪ್ರತಿಫ‌ಲದ ಸಮ್ಮಾನ
ಜನನ‌- ಮರಣಗಳ ನಡುವಿನ ಜೀವನದಲ್ಲಿ ನೋವು, ನಲಿವೆಂಬ ಮುಳ್ಳುಗಳ ದಾರಿಯಿದೆ. ಅದರಿಂದ ಸಾಗಲು ಸಾಧ್ಯವಿಲ್ಲ ಎಂದು ನಾವು ಕೈಕಟ್ಟಿ ಕುಳಿತರೆ ನಮ್ಮಿಂದ ಯಾವ ಕೆಲಸವೂ ನಡೆಯಲು ಸಾಧ್ಯವಿಲ್ಲ. ಹೂವಿನ ಹಾಸಿಗೆ ನಮ್ಮದಾಗುವ ತನಕ ಪ್ರಯತ್ನಪಟ್ಟು, ಶ್ರಮ ವಹಿಸಿ, ಅದೇ ದಾರಿಯಲ್ಲಿ ನಡೆದರೆ ಅದರಿಂದಾಗುವ ಖುಷಿ ಲೆಕ್ಕಾಚಾರಕ್ಕೆ ಸಿಗದು, ಜತೆಗೆ ಈ ಸಾಧನೆಗೆ ಪ್ರತಿಫ‌ಲದ ಸಮ್ಮಾನವೂ ಸಿಗುತ್ತದೆ.

ಕಷ್ಟ, ಸುಖಗಳಿಂದ ಬದುಕು ಹಸನು
ಕತ್ತಲು- ಬೆಳಕು ಎಂಬ ಜೋಡೆತ್ತುಗಳು ಜಗತ್ತಿನ ಬಂಡಿಯನ್ನು ಜೀಕಿದಂತೆ ಕಷ್ಟ ಮತ್ತು ಸುಖ ನಮ್ಮ ಬದುಕನ್ನು ಹಸನುಗೊಳಿಸುತ್ತದೆ. ಬಡವರಿರಲಿ, ಶ್ರೀಮಂತರಿರಲಿ ಸುಖ, ದುಃಖ ಎರಡನ್ನೂ ಅನುಭವಿಸಲೇಬೇಕು. ಕೆಲವು ಬಾರಿ ಶ್ರೀಮಂತರು ದುಃಖೀಗಳಾಗಬಹುದು, ಬಡವರು ಸುಖೀಗಳಾಗಬಹುದು. ಒಟ್ಟಿನಲ್ಲಿ ಸುಖ, ದುಃಖಗಳ ಅನುಭವ ಬಂಧ ಯಾರನ್ನೂ ಬಿಟ್ಟಿಲ್ಲ. ಇಲ್ಲಿ ನಾವು ಮಾಡಬೇಕಾದುದೇನೆಂದರೆ ದುಃಖದ ಅಂಶವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಸುಖದ ಅಂಶವನ್ನು ಹೆಚ್ಚಿಸಬೇಕು.

ಬದುಕೆಂಬುದು ಉದ್ಯಾನವನ
ಬದುಕು ಸುಂದರ ಉದ್ಯಾನವನದ ಹಾಗೆ. ಇಲ್ಲಿ ವಾತ್ಸಲ್ಯ, ಕರುಣೆ, ಪ್ರೀತಿ, ದಯೆ, ಸಮಾಧಾನ, ಶಾಂತಿ ಮುಂತಾದ ಗಿಡಗಳಿವೆ. ಅದನ್ನು ನಾವು ನೀರು, ಗೊಬ್ಬರ ಹಾಕಿ ಪೋಷಿಸಬೇಕು. ಮನೆ ಸುಂದರವಾಗಿದ್ದರೆ ಸಾಲದು, ಕಾಣದ ಮನಸ್ಸು, ಮಾಡುವ ಯೋಚನೆಗಳು ವಿಶಾಲವಾಗಿರಬೇಕು. ಹಣವಿದ್ದರೆ ಫ‌ಲವಿಲ್ಲ, ಗುಣವಿದ್ದರೆ ಮಾತ್ರ ಪಡೆದ ಜನ್ಮ ಸಾರ್ಥಕ. ಒಪ್ಪೊತ್ತಿಗೆ ಕಷ್ಟ ಪಡುವ ಕೂಲಿಯವನು ಪ್ರೀತಿ ಎಂಬ ಪ್ರಕಾಶದಿಂದ ಬೆಳಗುವ ಜ್ಞಾನ ಹೊಂದಿದ್ದರೆ ಸಾಕು. ಹಣದೊಂದಿಗೆ ಅಂಟಿಕೊಂಡಿರುವ ದುರಂಹಕಾರ ನಮ್ಮನ್ನು ತಾಕದಂತೆ ಓಡಿಸಬೇಕು.

ಪ್ರಯೋಗ ನಿರಂತರವಾಗಿರಲಿ
ನಮ್ಮಲ್ಲಿ ಆರಂಭವಾಗುವ ಭ್ರಮೆಗಳು ಅನುಭವ ಆದಂತೆಲ್ಲ ಕಡಿಮೆ ಆಗುತ್ತವೆ. ಬದುಕಿಗೆ ಪ್ರೇರಣೆ ಬಹಳ ಮುಖ್ಯ. ಪರಿವರ್ತನೆಯ ಪರ ಧ್ವನಿ ಎತ್ತಿದವರಿಗೆ ನಿಂದನೆ ಸಾಮಾನ್ಯ.
ಆದರೆ ಪ್ರಯೋಗಗಳು ಮಾತ್ರ ನಿರಂತರವಾಗಿರಬೇಕು.

ಮಾನವ ಏಕಾಂಗಿಯಲ್ಲ
ಅರಿಸ್ಟಾಟಲ್‌ ಹೇಳಿದಂತೆ ಮಾನವ ಸಂಘಜೀವಿ. ಅವನು ಏಕಾಂಗಿಯಾಗಿ ಸಮಾಜದಲ್ಲಿ ಬದುಕಲಾರ. ಇತರರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರೆ ಮಾತ್ರ ಅವನ ಜೀವನ ಸಾಗುತ್ತದೆ. “ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ’ ಎಂಬಂತೆ ಜೀವನ ನಮ್ಮನ್ನು ರೂಪಿಸಬಾರದು, ನಾವು ಜೀವನವನ್ನು ರೂಪಿಸಬೇಕು. ಇದನ್ನು ತಿಳಿದುಕೊಂಡಾಗ ಮಾತ್ರ ನಮ್ಮ ಅಭಿವೃದ್ಧಿ ಸಾಧ್ಯ.

ಪ್ರಯತ್ನದ ಫ‌ಲ
ಮನುಷ್ಯ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡಿರಬೇಕು. ಅಂದರೆ ಮುಂದೆ ನಾನು ಹೀಗಾಗಬೇಕು ಅನ್ನುವ ಗಟ್ಟಿ ನಿಶ್ಚಯ ಮನಸ್ಸಿನಲ್ಲಿ ಇದ್ದರೆ ಏನನ್ನಾದರೂ ಸಾಧಿಸಬಹುದು. ಗುರಿ ಇಟ್ಟುಕೊಳ್ಳುವುದರ ಜತೆಗೆ ಪ್ರಯತ್ನವೂ ಇರಬೇಕು. ಪ್ರಯತ್ನವಿದ್ದರೆ ಫ‌ಲ ದೊರಕುತ್ತದೆ. ಹೀಗೆ ಪ್ರಯತ್ನಪಟ್ಟು ಸಾಧಿಸಿದವರಲ್ಲಿ ಕುರುಡ ಡೇವಿಡ್‌ಮನ್‌ನೂ ಒಬ್ಬ.

– ಜಯಾನಂದ ಅಮೀನ್‌

ಟಾಪ್ ನ್ಯೂಸ್

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.