ಬೇಸಗೆಯಲ್ಲಿ ಜಾನುವಾರು ನಿರ್ವಹಣೆ ವಿಧಾನ


Team Udayavani, Feb 2, 2020, 5:58 AM IST

COW-AAA

ಬೇಸಗೆಯ ಸಂದರ್ಭ ಅಧಿಕ ತಾಪಮಾನದಿಂದ ಜಾನುವಾರುಗಳಲ್ಲಿ ಅದರಲ್ಲೂ ಮುಖ್ಯವಾಗಿ ಎಮ್ಮೆಗಳಲ್ಲಿ ಕುಂಠಿತ ಬೆಳವಣಿಗೆ, ಹಾಲಿನ ಉತ್ಪಾದನೆ, ಸಂತಾನೋತ್ಪತ್ತಿಯ ಕ್ಷೀಣತೆ ಕಾಣಬಹುದು. ರೈತರು ಈ ಸಂದರ್ಭದಲ್ಲಿ ಜಾನುವಾರುಗಳ ವಿಶೇಷ ಪಾಲನೆ ಮಾಡುವುದು ಅತ್ಯಗತ್ಯ.

ವಾತಾವರಣದಲ್ಲಿ ಉಷ್ಣತೆ ಹೆಚ್ಚಾದಂತೆ ಜಾನುವಾರುಗಳು ಮೇವು ತಿನ್ನುವ ಪ್ರಮಾಣ ಕಡಿಮೆ ಮಾಡುತ್ತವೆ. ಇದರಿಂದ ಹಾಲಿನ ಇಳುವರಿ ಕುಸಿತಗೊಂಡು ಅವುಗಳ ಆರೋಗ್ಯವೂ ಹದಗೆಡುತ್ತದೆ. ಆದ್ದರಿಂದ ಬೇಸಗೆಯಲ್ಲಿ ಇದರ ನಿರ್ವಹಣೆ ಮಾಡುವುದು ರೈತರಿಗೆ ಸವಾಲಿನ ಕೆಲಸ.

ಜಾನುವಾರುಗಳು ತೋರ್ಪಡಿಸುವ ಕೆಲವು ಲಕ್ಷಣಗಳು
-ಬೆವರಿನ ಮೂಲಕ ಹೆಚ್ಚಿನ ತಾಪಮಾನ ಹೊರಹಾಕುವುದು.
– ಹೆಚ್ಚು ನೀರು ಕುಡಿಯುವುದು.
– ಆಹಾರ ಸೇವನೆ ಕಡಿಮೆ ಮಾಡುವುದು.
– ನಾಲಿಗೆ ಹೊರಚಾಚಿ ಉಸಿರಾಡುವುದು, ತೇಕುವುದು.
– ನೆರಳಿನಲ್ಲಿ ಇರಲು ಇಷ್ಟಪಡುವುದು.
– ಕಡಿಮೆ ಹಾಲು ನೀಡುವುದು.
-ಜಾನುವಾರುಗಳ ಬೆದೆಯಲ್ಲಿ ಏರುಪೇರು ಉಂಟಾಗುವುದು.
-ಎಮ್ಮೆಗಳಲ್ಲಿ ಅವುಗಳ ಕಾಲು ಹಾಗೂ ಹೊಟ್ಟೆಯ ಕೆಳಭಾಗದ ಚರ್ಮ ಕೆಂಪಾಗುತ್ತದೆ.

ಆರೋಗ್ಯ ನಿರ್ವಹಣೆ
ಬೇಸಗೆಯಲ್ಲಿ ಜಾನುವಾರುಗಳ ಶಾರೀರಿಕ ಪ್ರಕ್ರಿಯೆಯಲ್ಲಿ ಏರುಪೇರು ಉಂಟಾಗಿ ಒತ್ತಡದಿಂದ ಅವುಗಳ ರೋಗ ನಿರೋಧಕ ಶಕ್ತಿ ಕುಗ್ಗುವ ಸಾಧ್ಯತೆಗಳಿರುತ್ತವೆ. ಅನಂತರ ರಸವಾಹಕ (ಹಾರ್ಮೋನ್‌) ಗಳಲ್ಲಿ ವ್ಯತ್ಯಾಸಗೊಂಡು ಸಂತಾನೋತ್ಪತ್ತಿಯಲ್ಲಿ ಏರುಪೇರು ಉಂಟಾಗಿ ಜಾನುವಾರುಗಳು ಬೆದೆಗೆ ಬರುವುದು ಕಡಿಮೆಯಾಗುತ್ತದೆ. ಎಮ್ಮೆಗಳಲ್ಲಿ “ಮೂಕಬೆದೆ’ಯ ಲಕ್ಷಣಗಳು ಕಂಡುಬರಬಹುದು. ಬೇಸಗೆಯಲ್ಲಿ ಗರ್ಭ ಧರಿಸಿದ ಜಾನುವಾರುಗಳು ಮತ್ತು ಕರುಗಳ ಪಾಲನೆಗೆ ತುಂಬಾ ಗಮನಹರಿಸುವುದು ಅಗತ್ಯ.

ವೈಜ್ಞಾನಿಕ ಕ್ರಮ
1.ಎತ್ತರವಾದ ಛಾವಣಿ ಇರುವ ಒಳ್ಳೆಯ
ಕೊಟ್ಟಿಗೆ ಇರಬೇಕು. ಗಾಳಿಯಾಡುವಂತಹ ವ್ಯವಸ್ಥೆ ಇರಬೇಕು. ಕೊಟ್ಟಿಗೆಯ ಸೂರಿಗೆ ಹಸಿ ತೆಂಗಿನಗರಿ ಅಥವಾ ಹುಲ್ಲು ಹೊದೆಸಬೇಕು. ಛಾವಣಿ ಸಿಮೆಂಟ್‌ ಆಗಿದ್ದರೆ ಅದಕ್ಕೆ ಬಿಳಿಯ ಬಣ್ಣ, ಅಥವಾ ಸುಣ್ಣ ಹೊಡೆಯಬಹುದು.
2.ಸೂರ್ಯನ ಕಿರಣಗಳು ನೇರವಾಗಿ ದನಗಳ ಕೊಟ್ಟಿಗೆಯಲ್ಲಿ ಬೀಳುವುದನ್ನು ತಪ್ಪಿಸಲು ದನಗಳ ಕೊಟ್ಟಿಗೆ ಪೂರ್ವ-ಪಶ್ಚಿಮ ದಿಕ್ಕಿಗೆ ಇರಬೇಕು.
3.ಕೊಟ್ಟಿಗೆಯಲ್ಲಿ ಫ್ಯಾನ್‌ಗಳನ್ನು ಅಳವಡಿಸಿದರೆ ಉತ್ತಮ. ಇಲ್ಲದಿದ್ದರೆ ಕಿಟಕಿಗಳಿಗೆ ಗೋಣಿಚೀಲ ಕಟ್ಟಿ ತಂಪಾದ ನೀರನ್ನು ಸಿಂಪಡಿಸುತ್ತಿರಬೇಕು.
4.ಮುಖ್ಯವಾಗಿ ಎಮ್ಮೆಗಳ ಮೇಲೆ ಸದಾ ನೀರನ್ನು ಸಿಂಪಡಿಸುತ್ತಾ ಇರಬೇಕು. ಕೊಟ್ಟಿಗೆ ಹತ್ತಿರ ನೀರಿನ ಹೊಂಡವಿದ್ದರೆ ಉತ್ತಮ.

ಆಹಾರ ನಿರ್ವಹಣೆ ವಿಧಾನ
-ಸಾಕಷ್ಟು ತಂಪಾದ, ಶುದ್ಧವಾದ ನೀರನ್ನು ಒದಗಿಸಬೇಕು. 10 ಡಿಗ್ರಿ ಸೆಂಟಿಗ್ರೇಡ್‌ನಿಂದ 15 ಡಿಗ್ರಿ ಸೆಂಟಿಗ್ರೇಡ್‌ವರೆಗೆ ನೀರಿನ ತಾಪಮಾನ ಕಡಿಮೆಗೊಳಿಸಿ ಅದನ್ನು ಪೂರೈಸಬಹುದು

-ಸಾಧ್ಯವಾದಷ್ಟು ಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಮೇಯಲು ಬಿಡಬೇಕು.

-ತಂಪಾದ ಸಮಯದಲ್ಲಿ ಮೇವು, ಹಿಂಡಿ, ನೀಡಬೇಕು.

-ದನಗಳಿಗೆ ಹೆಚ್ಚಾಗಿ ಹಸುರು ಮೇವನ್ನು ನೀಡಬೇಕು

-ಹೆಚ್ಚು ಹಾಲು ನೀಡುವ ದನ, ಎಮ್ಮೆಗಳಿಗೆ ಹೆಚ್ಚು ಸಸಾರಜನಕ ಇರುವ ಆಹಾರವನ್ನು ನೀಡಬೇಕು. ಇಂತಹ ಆಹಾರಗಳೆಂದರೆ ದ್ವಿದಳ ಧಾನ್ಯಗಳ ಹೊಟ್ಟು (ಶೇಂಗಾ ಹೊಟ್ಟು, ಉದ್ದಿನ ಹೊಟ್ಟು, ಅಲಸಂಡೆ ಮೇವು), ಎಣ್ಣೆಕಾಳುಗಳ ಹಿಂಡಿ, ಬೇಳೆಕಾಳುಗಳು. ಸಿದ್ಧ ಆಹಾರವನ್ನು ಆಕಳುಗಳ ದೇಹ ತೂಕಕ್ಕೆ ತಕ್ಕಂತೆ ದಿನಕ್ಕೆ ಎರಡು ಕೆ.ಜಿ.ಯಷ್ಟು ನೀಡಬೇಕು. ಹಾಲು ಕರೆಯುವ ಹಸುವಿಗೆ ಅದು ನೀಡುವ ಹಾಲಿನ ಇಳುವರಿಯ ಪ್ರಮಾಣಕ್ಕೆ ಅನುಗುಣವಾಗಿ ಅಂದರೆ ಪ್ರತಿ ಮೂರು ಲೀಟರ್‌ಗೆ 1 ಕೆ.ಜಿ.ಯಂತೆ ಪಶು ಆಹಾರ ನೀಡಬೇಕು. ಹಾಲು ಉತ್ಪಾದನೆ ಹೆಚ್ಚಿದಂತೆ ಪೂರೈಸುವ ಆಹಾರವನ್ನೂ ಹೆಚ್ಚಿಸಬೇಕು.

– ಜೀವಸತ್ವಗಳನ್ನು (ವಿಟಮಿನ್‌ ಸಿ ಮತ್ತು ಬಿ ಕಾಂಪ್ಲೆಕ್ಸ್‌) ದನಗಳಿಗೆ ತಿನ್ನಿಸುವುದರಿಂದ ಹಾಲಿನ ಇಳುವರಿಯಲ್ಲಿ ಹೆಚ್ಚಳವಾಗುತ್ತದೆ.
– ಒಣ ಮೇವನ್ನು ಸುಮಾರು ಒಂದು ಇಂಚು ಉದ್ದಕ್ಕೆ ತುಂಡರಿಸಿ ಪ್ರತಿ ಜಾನುವಾರುಗಳಿಗೆ ನಿತ್ಯ 7ರಿಂದ 8 ಕೆ.ಜಿ.ಯಷ್ಟು ನೀಡಬೇಕು. ಅದಕ್ಕೂ ಮುನ್ನ ಮೇವಿಗೆ ಉಪ್ಪು ಅಥವಾ ಬೆಲ್ಲದ ದ್ರಾವಣ ಸಿಂಪಡಿಸಬೇಕು. ದಿನಕ್ಕೆ 100 ಗ್ರಾಂ ಲವಣಾಂಶ ಮಿಶ್ರಣ ಬಳಸಬಹುದು.

– ಈ ರೀತಿ ಬೇಸಗೆಯಲ್ಲಿ ಜಾಗರೂಕತೆಯಿಂದ ಜಾನುವಾರುಗಳ ನಿರ್ವಹಣೆ ಮಾಡಿದರೆ ಹಾಲಿನ ಇಳುವರಿ, ಪಶುಗಳ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

-  ಜಯಾನಂದ ಅಮೀನ್‌ ಬನ್ನಂಜೆ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.