ಕಂಡದ್ದನ್ನು ಪರಾಂಬರಿಸಿ ನೋಡು

Team Udayavani, Nov 18, 2019, 5:00 AM IST

ವ್ಯಕ್ತಿಗಳ ಮಧ್ಯೆ ಇರುವಂತ ಸ್ನೇಹ- ಸಂಬಂಧಗಳಿಗೆ ನಂಬಿಕೆ ಎನ್ನುವುದು ಸೇತುವೆ ಇದ್ದಂತೆ. ಅದನ್ನು ಬಿರುಕು ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಸ್ನೇಹದಲ್ಲಿ ಯಾರೋ ಬಂದು ಹೇಳುವ ಚಾಡಿ ಮಾತಿಗೆ ಬೆಲೆ ಕೊಟ್ಟು ದೂರವಾದರೆ ಅವರ ಮಧ್ಯೆ ಗಟ್ಟಿಯಾದ ನಂಬಿಕೆ, ಪ್ರಾಮಾಣಿಕತೆ ಇಲ್ಲವೆಂದೇ ಅರ್ಥ. ಈ ಕಥೆಯಲ್ಲಿ ನಡೆಯುವಂತ ಸನ್ನಿವೇಶವು ಆದೆ ಆಗಿದೆ.

ಒಂದೇ ಕಾಲೇಜಿನಲ್ಲಿ ಎರಡು ವರ್ಷಗಳಲ್ಲಿ ಪರಸ್ಪರ ಹತ್ತಿರವಾದ ಮೂವರು ಸ್ನೇಹಿತರಲ್ಲಿ ಅನ್ಯೋನ್ಯತೆ ಬೆಳೆದು ಸ್ನೇಹ ಗಟ್ಟಿಯಾಗುತ್ತದೆ. ಎರಡು ವರ್ಷಗಳ‌ಲ್ಲಿ ಅವರು ಕಾಲೇಜು ಜೀವನ ಮುಗಿದ ಬಳಿಕ ಅವರು ಜೀವನಕ್ಕಾಗಿ ಕಂಪೆನಿಯೊಂದಕ್ಕೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಅದರಲ್ಲಿ ಆ ಓರ್ವಹುಡುಗಿ, ಹುಡಗನಿಗೆ ಮಾತ್ರ ಕಂಪೆನಿಯಲ್ಲಿ ಕೆಲಸ ಸಿಗುತ್ತದೆ. ಒಂದೇ ಕಂಪೆನಿಯಲ್ಲಿ ಇಬ್ಬರಿಗೂ ಕೆಲಸ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಾರೆ. ಅಂತೆಯೇ ತಮ್ಮ ಉದ್ಯೋಗದ ದಿನಗಳನ್ನು ಕೂಡ ಆರಂಭಿಸುತ್ತಾರೆ.

ಹೀಗೇ ದಿನಾನು ಕಚೇರಿಗೆ ಬರುವುದು ನಡೆದೇ ಇತ್ತು. ಪರಸ್ಪರ ಇಬ್ಬರ ಬಗ್ಗೆ ಬೇರೆ ವ್ಯಕ್ತಿಗಳು ಏನೇ ಹೇಳಿದರು ಅದನ್ನು ಅಷ್ಟು ಸುಲಭಕ್ಕೆ ನಂಬುತ್ತಿರಲಿಲ್ಲ. ಆದರೆ ಅದೊಂದು ದಿನ ಅವರಿಬ್ಬರ ಮಧ್ಯ ಬೇರೊಬ್ಬ ವ್ಯಕ್ತಿಯ ಪ್ರವೇಶವಾಗುತ್ತದೆ.
ಯವುದೋ ಸಂದರ್ಭದಲ್ಲಿ ಹಾಡಿಕೊಂಡ ಮಾತನ್ನು ಹೋಗಿ ಬೇರೊಬ್ಬ ಮನುಷ್ಯನ ಅವಳಿಗೆ ತಿಳಿಸುತ್ತಾನೆ. ಆದರೆ ಯಾವುದೇ ಪೂರ್ವಗ್ರಹ ಪೀಡತನಾಗಿ ಈ ಮಾತನ್ನು ಅವನು ಹಾಡಿರುವುದಿಲ್ಲ. ಆದರೆ ಇದರಿಂದ ಬೇಸರಗೊಂಡು ಗೆಳೆಯನೊಂದಿಗೆ ಮಾತು ನಿಲ್ಲಿಸಿ ಬಿಡುತ್ತಾಳೆ. ದಿನ ಕಳೆದಂತೆ ಇಬ್ಬರ ಮಧ್ಯೆಯೂ ಅಂತರ ಹೆಚ್ಚಾಗುತ್ತದೆ.
ಇಬ್ಬರಿಗೂ ಮಾತನಾಡದೆ ಇರಲು ಸಾಧ್ಯವಾಗುತ್ತಿಲ್ಲ .

ಆದರೆ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ನನ್ನ ಬಗ್ಗೆ ಮಾತನಾಡಿದನಲ್ಲ ಎಂದು ಅವಳು, ಅವಳು ತನ್ನೊಂದಿಗೆ ಉದ್ದೇಶ ಪೂರ್ವಕವಾಗಿ ಮಾತನಾಡದೇ ಇರುವುದನ್ನು ಕಂಡು ಅವನಿಗೆ ಹುಸಿ ಮುನಿಸು. ಈ ಸಮಸ್ಯೆ ಅತಿರೇಕಕ್ಕೆ ಹೊಗುವುದನ್ನು ಅರಿತ ಅವನು ತನ್ನ ಗೆಳತಿಯನ್ನು ಮಾತನಾಡದಿರುವುದಕ್ಕೆ ಕೇಳುತ್ತಾನೆ. ಆಗಲೇ ಗೊತ್ತಾ ಗುವುದು ಬೇರೆಯವರ ಮಾತು ಕೇಳಿ ನಾವು ನಮ್ಮ ಸ್ನೇಹವನ್ನು ಅನುಮಾನಿಸಿದ್ದು. ಇಲ್ಲಿ ಆದ ಪ್ರಮಾದ ಏನೆಂದರೆ ತನ್ನಲ್ಲಿ ಬಂದು ಹೇಳಿದ ಮಾತನ್ನು ಆಕೆ ತನ್ನ ಮಿತ್ರನ ಹತ್ತಿರ ಹೋಗಿ ಕೇಳದೆ ಸುಮ್ಮೆನೇ ನಂಬಿ ಮೋಸ ಹೋಗಿದ್ದು. ಈ ರೀತಿ ಪ್ರತೀ ದಿನ ಪ್ರತಿಯೊಂದು ಕುಟುಂಬ, ಗೆಳೆಯರ ಗುಂಪು, ದಂಪತಿಗಳ ಮಧ್ಯ ನಡೆಯತ್ತಿರುತ್ತವೇ. ಯಾರೋ ಬಂದು ನಮ್ಮ ಹತ್ತಿರವಾದ ವ್ಯಕ್ತಿಗಳ ಬಗ್ಗೆ ಹೇಳುವ ಇಲ್ಲ ಸಲ್ಲದ ಮಾತುಗಳನ್ನು ಸುಮ್ಮನೆ ಕಣ್ಣು ಮುಚ್ಚಿಕೊಂಡು ನಂಬುವ ಮೊದಲು ಪರಸ್ಪರ ಚರ್ಚಿಸಿದಾಗ ಕ್ಷುಲ್ಲಕ ಕಾರಣಗಳಿಗೆ ಸ್ನೇಹ, ಸಂಬಂಧಗಳು ಮುರಿದು ಬೀಳುವದನ್ನು ತಡೆಯಬಹುದು. ಪ್ರತ್ಯಕ್ಷ ಕಂಡರು ಪರಾಂಭಸಿಸಿ ನೋಡು ಎಂದು ದೊಡ್ಡವರು ಇದಕ್ಕೆ ಹೇಳಿರುವುದನ್ನು ಎಂಬುದು ನಾವು ಅರಿಯಬೇಕು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ