ಪ್ರೀತಿ ಎಂಬುದೇ ಶಾಶ್ವತ…

Team Udayavani, Nov 11, 2019, 5:19 AM IST

ದಿನವೂ ಸಂತೋಷವಾಗಿರಬೇಕು ಎಂದು ಬಯಸುತ್ತೇವೆ ಆದರೆ ಹಾಗೆ ಇರಲು ಏನು ಮಾಡಿದರೆ ಸೂಕ್ತ ಎಂಬುದನ್ನು ಎಂದಿಗೂ ಯೋಚನೆ ಮಾಡಿರುವುದಿಲ್ಲ. ತುಂಬಾ ಇಷ್ಟಪಡುತ್ತಿದ್ದ ವ್ಯಕ್ತಿಗಳು ದಿನೇ ದಿನೇ ಹಳಬರಾಗುತ್ತಾರೆ ಅವರ ಮಾತುಗಳು ಕೋಪ ತರಿಸಲು ಅಣಿಯಾಗುತ್ತವೆ ಹೀಗೆ ಸಂತೋಷ ಎನ್ನುವುದು ನಾವೇ ಹಾಳು ಮಾಡಿಕೊಳ್ಳುತ್ತೇವೆ.

ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡು ನಮ್ಮನ್ನು ನಾವೇ ದೂಷಿಸಿಕೊಳ್ಳುತ್ತೇವೆ. ಅದರ ಬದಲು ಎಲ್ಲರನ್ನು ಪ್ರೀತಿಸುವುದನ್ನು ಕಲಿಯಿರಿ. ನಿಮ್ಮನ್ನು ಇಷ್ಟ ಪಡುವ ವ್ಯಕ್ತಿಗಳು ಹೇಳುವ ಮಾತುಗಳನ್ನು ಪಾಲಿಸಲು ಪ್ರಯತ್ನಿಸಿ. ಆಗ ಇನ್ನೊಬ್ಬರಿಗೆ ನೀವೇ ಸಂತೋಷ ನೀಡಿದಂತಾಗುತ್ತದೆ. ಅದಲ್ಲದೆ ನಿಮ್ಮನ್ನು ಪ್ರೀತಿಸುವವರು ಇದ್ದಾರೆ ಎಂದು ನಿಮ್ಮ ಮನಸ್ಸು ನಿರಾಳಗೊಳ್ಳುತ್ತದೆ.

ಪ್ರಯತ್ನಿಸಿ ನೋಡಿ.
ನಿಮ್ಮ ಹತ್ತಿರ ಇರುವವರನ್ನು ಪ್ರೀತಿಸಲು ಕಲಿಯಿರಿ, ಆಗ ನಿಮ್ಮನ್ನು ಇನ್ನೊಬ್ಬರೂ ಪ್ರೀತಿಸುತ್ತಾರೆ. ದ್ವೇಷ, ಮತ್ಸರ ಹಂಚುವ ಬದಲು ಆದಷ್ಟು ಮಮತೆ, ಪ್ರೀತಿ ನೀಡಲು ಪ್ರಯತ್ನಿಸಿ ಆಗ ನಿಮಗೆ ನಿಮ್ಮಲ್ಲೇ ಬದಲಾವಣೆ ತೋರಿ ಬರುತ್ತದೆ. ಮನಸ್ಸಿನಲ್ಲಿ ಅದೇನೊ ಒಂದು ನಿರಾಳತೆಯ ಭಾವ ಮೂಡುತ್ತದೆ. ಅಷ್ಟು ಸಾಕಲ್ಲವೇ ಸಂತೋಷ ಪಡಲು.

ಪ್ರೀತಿ ಎನ್ನುವುದು ಎಲ್ಲರಲ್ಲೂ ಇರುತ್ತವೆ ಆದರೆ ಅದನ್ನು ವ್ಯಕ್ತಪಡಿಸುವ ರೀತಿ ಬೇರೆ ಬೇರೆಯಾಗಿರುತ್ತವೆ ಅಷ್ಟೇ. ಯಾರು ಕಲ್ಲು ಬಂಡೆಯಲ್ಲ. ಎಲ್ಲರಿಗೂ ಮನಸ್ಸಿನಲ್ಲಿ ಒಂದು ಪ್ರೀತಿ, ವಿಶ್ವಾಸವಿರುತ್ತದೆ. ಆದರೆ ನಾವು ನೋಡುವ ರೀತಿ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ವ್ಯತ್ಯಾಸ ಕಂಡು ಬರಬಹುದಷ್ಟೇ. ಆದಷ್ಟು ಒರಟು ಸ್ವಭಾವ ಇರುವ ವರನ್ನು ದೂರುವುದನ್ನು ಬಿಟ್ಟು ಅವರ ಜತೆಯಲ್ಲಿ ಸ್ನೇಹ ಮಾಡಿ. ಬದುಕಿನಲ್ಲಿ ಸಾವಿರ ಸಂದರ್ಭಗಳು ಎದುರಾದಾಗ ನೀವು ಒಬ್ಬರೆ ಎದುರಿಸಲಾ ಗುವುದಿಲ್ಲ ಎಂದು ತೋರಿದಾಗ ನಿಮ್ಮ ನೆರವಿಗೆ ಬರುವುದು ನಿಮ್ಮ ಸಂಬಂಧಿಕರಲ್ಲ ಬದಲಾಗಿ ಪ್ರೀತಿ ತೋರಿ ಕರೆದುಕೊಂಡು ಬಂದ ಪಯ ಣಿಗರು ಹಾಗಾಗಿ ಆದಷ್ಟು ಎಲ್ಲರನ್ನೂ ಪ್ರೀತಿಯಿಂದ ಕಾಣಲು ಪ್ರಯತ್ನಿಸಿ. ಅದು ನಿಮ್ಮನ್ನು ಎಂದಿಗೂ ಅರ್ಧ ಹಾದಿಯಲ್ಲಿ ಬಿಟ್ಟು ಬರುವುದಿಲ್ಲ.

-  ಪ್ರೀತಿ ಭಟ್‌ ಗುಣವಂತೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ