ಅಡಿಕೆ ಕೃಷಿ ಗೊಬ್ಬರ ನಿರ್ವಹಣೆಗೂ ಇರಲಿ ಆದ್ಯತೆ

Team Udayavani, Nov 17, 2019, 4:28 AM IST

ಅಧಿಕ ಮಳೆಯಾಗುವ ಕರಾವಳಿ ಭಾಗಗಳಲ್ಲಿ ಬೆಳೆಗಳಿಗೆ ಗೊಬ್ಬರಗಳನ್ನು ವಿಭಜಿತ ಕಂತುಗಳಲ್ಲಿ ಕೊಡುವುದು ಸೂಕ್ತ. ಮಳೆಗಾಲ ಪೂರ್ವದಲ್ಲಿ ಸಾರಜನಕ ಕಡಿಮೆ ಇರುವ ಗೊಬ್ಬರ ಹಾಗೂ ಮಳೆಗಾಲ ಮುಗಿಯುವಾಗ ರಂಜಕ, ಸಾರಜನಕ, ಪೊಟ್ಯಾಶ್‌ ಸಮ ಪ್ರಮಾಣದಲ್ಲಿ ನೀಡಬೇಕು. ಜನವರಿ, ಫೆಬ್ರವರಿ ತಿಂಗಳಲ್ಲಿ ಮತ್ತೂಮ್ಮೆ ಗೊಬ್ಬರ ಹಾಕಬೇಕು. ಇದರಿಂದ ಉತ್ತಮವಾಗಿ ಬೆಳೆಯನ್ನು ಪಡೆಯಲು ಸಾಧ್ಯ.

ಅಕಾಲಿಕ ಮಳೆ, ನೀರಿನ ಕೊರತೆಯ ಜತೆಗೆ ಕಾಡುವ ರೋಗಗಳ ಮಧ್ಯೆ ಅಡಿಕೆ ಬೆಳೆಯನ್ನು ಉಳಿಸಿಕೊಳ್ಳುವುದು ಹಾಗೂ ನಿರೀಕ್ಷಿತ ಫಲ ಪಡೆಯುವುದು ತ್ರಾಸದಾಯಕ. ಆದರೆ ನಿರ್ವಹಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಅಡಿಕೆ ಮರಕ್ಕೆ ಮಣ್ಣಿನ ಪೋಷಕಾಂಶದ ಜತೆಗೆ ಸಾಂಪ್ರದಾಯಿಕ ಗೊಬ್ಬರ, ವರ್ಷಕ್ಕೆ ಇಂತಿಷ್ಟು ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂ ಕೂಡ ಆವಶ್ಯಕ ಎನ್ನುವುದನ್ನು ಸಂಶೋಧನೆಗಳು ಹೇಳುತ್ತವೆ. ಇದರ ಆಧಾರದಲ್ಲಿ ಈಗ ಕಾಲಮಾನಕ್ಕನುಗುಣವಾಗಿ ರೈತರು ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಾ ಬಂದಿದ್ದಾರೆ.

ಗೊಬ್ಬರ ಬಳಕೆ
ಕಚ್ಚಾ ರೂಪದಲ್ಲಿ ಕೊಡುವ ಯೂರಿಯಾವನ್ನು 250 ಗ್ರಾಂ. ಸೂಪರ್‌ ಪಾಸ್ಪೇಟ್‌ 300 ಗ್ರಾಂ. ಮತ್ತು ಪೊಟ್ಯಾಶ್‌ 225 ಗ್ರಾಂ. ಅನ್ನು ವರ್ಷಕ್ಕೆ ಮೂರು ಬಾರಿ ವಿಭಜಿಸಿ ಕೊಡಬೇಕು. ಅಧಿಕ ಮಳೆಯಾಗುವ ಕರಾವಳಿ ಭಾಗಗಳಲ್ಲಿ ಗೊಬ್ಬರಗಳನ್ನು ವಿಭಜಿತ ಕಂತುಗಳಲ್ಲಿ ಕೊಡುವುದು ಸೂಕ್ತ. ಮಳೆಗಾಲ ಪೂರ್ವದಲ್ಲಿ ಸಾರಜನಕ ಕಡಿಮೆ ಇರುವ ಗೊಬ್ಬರ ಹಾಗೂ ಮಳೆಗಾಲ ಮುಗಿಯುವಾಗ ರಂಜಕ, ಸಾರಜನಕ, ಪೊಟ್ಯಾಶ್‌ ಸಮ ಪ್ರಮಾಣದಲ್ಲಿ ನೀಡಬೇಕು. ಜನವರಿ, ಫೆಬ್ರವರಿ ತಿಂಗಳಲ್ಲಿ ಮತ್ತೂಮ್ಮೆ ಗೊಬ್ಬರ ಹಾಕಬೇಕು.

ಬುಡವನ್ನು ಬಿಡಿಸಬೇಕು
ಸಾಂಪ್ರದಾಯಿಕ ಕ್ರಮದಂತೆ ಬುಡ ಬಿಡಿಸಿ ಕೊಡುವುದು ಈಗ ಸಾಧ್ಯವಾಗದು. ಅದಕ್ಕೆ ಮೂರೂ ಗೊಬ್ಬರ ಹಾಗೂ ಲಘು ಪೊಷಕಾಂಶಗಳಾದ ಸತು, ಬೋರಾನ್‌, ಮ್ಯಾಂಗನೀಸ್‌ ಉಳ್ಳ ಮಿಶ್ರಣವನ್ನು ಪ್ರಮಾಣ ಹಾಗೂ ಗಿಡದ ಲೆಕ್ಕಾಚಾರದ ಮೇಲೆ ಬ್ಯಾರಲ್‌ಗೆ ಹಾಕಿ ಕರಗಿಸಿ ಕೊಡುವುದು ಉತ್ತಮ.

ಬೇಸಗೆ ಸಮಯ ಉತ್ತಮ
ಒಮ್ಮೆಲೇ ಗೊಬ್ಬರ ಹಾಕಿಸಲು ಖರ್ಚು ಅಧಿಕ. ಇದನ್ನು ವಿಭಜಿಸಲು ಸಾಧ್ಯ. ಬೇಸಗೆಯ ಸಮಯದಲ್ಲಿ ಗೊಬ್ಬರ ಕೊಡುವುದರಿಂದ ಫಲಿತಾಂಶ ದುಪ್ಪಟ್ಟು ಲಭಿಸುತ್ತದೆ ಎನ್ನುತ್ತಾರೆ ಅನುಭವಿಗಳು.

ಲಘು ಪೋಷಕಾಂಶ ನೀಡಿ
ಕಚ್ಚಾ ಗೊಬ್ಬರಗಳನ್ನು ಕೊಡುವ ಜತೆಗೆ ಸಂಯುಕ್ತ ಗೊಬ್ಬರಗಳನ್ನು ಕೊಡುವುದೂ ಅಗತ್ಯ. ಕೊಟ್ಟಿಗೆ ಗೊಬ್ಬರ, ಹಸುರೆಲೆ ಗೊಬ್ಬರವನ್ನು ನೀಡಲು ಸಾಧ್ಯವಾಗದವರು ಕಡಿಮೆ ಫಲವತ್ತತೆಯ ಭೂಮಿಯಲ್ಲೂ ಕೃಷಿ ಮಾಡಿದ್ದರೆ ಲಘು ಪೋಷಕಾಂಶಗಳನ್ನು ಕೊಡುವ ಅಗತ್ಯ ಇದೆ. ಸಾವಯವ ಗೊಬ್ಬರದ ಮೂಲವಾಗಿ ಕೊಟ್ಟಿಗೆ ಗೊಬ್ಬರ, ಅಡಿಕೆ ಹಾಳೆ, ಗರಿ, ಬಾಳೆ, ತ್ಯಾಜ್ಯಗಳನ್ನು ಕೊಡಬೇಕು. ಇದು ಮಣ್ಣಿನಲ್ಲಿ ನೈಸರ್ಗಿಕ ಕ್ರಿಯೆಯನ್ನು ಉಂಟು ಮಾಡುತ್ತದೆ. ಪೊಟ್ಯಾಶಿಯಂ ಸತ್ವಕ್ಕಾಗಿ ಸುಟ್ಟ ಬೂದಿಯನ್ನು ಬಳಕೆ ಮಾಡಬೇಕು.

- ರಾಜೇಶ್‌ ಪಟ್ಟೆ, ಪುತ್ತೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಎಪ್ರಿಲ್‌ 1ರಿಂದ ಭಾರತ್‌ ಸ್ಟೇಜ್‌-6 (ಬಿಎಸ್‌-6) ಜಾರಿಯಾಗಲಿದೆ. ಬಿಎಸ್‌-6 ಎಂಬುದು ಭಾರತ್‌ ಸ್ಟೇಜ್‌ 6 ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕ ಮಟ್ಟದಲ್ಲಿ ಇದನ್ನು ಯೂರೋ...

  • ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಅತೀ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಇದು ಶೇ. 51ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರುತಿ ಸುಜುಕಿಯಲ್ಲಿ...

  • ಇ ತ್ತೀಚೆಗೆ ನವನವೀನ ಮಾದರಿಯ ಸ್ಮಾರ್ಟ್‌ ಫಿಟೆ°ಸ್‌ ಬ್ಯಾಂಡ್‌ ಹಾಗೂ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುತ್ತಿವೆ. ಇವುಗಳು ಇಂದು ನಮ್ಮ ಕೆಲಸವನ್ನು ಸುಲಭ ಮಾಡುತ್ತಿವೆ....

  • ಇಂದು ಆಕರ್ಷಕ ಬೈಕ್‌ಗಳು ಹೆಚ್ಚು ಜನ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಇಲ್ಲಿ ರಸ್ತೆಗಿಳಿಯಲು ಸಿದ್ಧವಾಗಿರುವ ಬೈಕ್‌ ಒಂದನ್ನು ಪರಿಚಯಿಸಲಾಗಿದೆ. ಬಜಾಜ್‌...

  • ಮಾರುಕಟ್ಟೆಗೆ ದಿನಕ್ಕೊಂದು ಹೊಸ ಉತ್ಪನ್ನ ಆಗಮನವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಕಾರು ಉದ್ಯಮದಲ್ಲಿ ಸರಕಾರದ ನಿರ್ದೇಶನದ ಮೇರೆಗೆ ಬಿಎಸ್‌6 ಎಂಜಿನ್‌ ಇರುವ...

ಹೊಸ ಸೇರ್ಪಡೆ