Udayavni Special

ಕೈಗೆಟಕುವ ಬೆಲೆಯಲ್ಲಿ ಮೊಬೈಲ್‌ ಸಬ್‌ ಬ್ರಾಂಡ್‌ಗಳು!


Team Udayavani, Sep 28, 2018, 2:59 PM IST

28-sepctember-12.gif

ಬ್ರ್ಯಾಂಡೆಡ್‌ ಮೊಬೈಲ್‌ ಫೋನ್‌ಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಈಗ ಆ ಕಾಲ ಹೋಯ್ತು. ದುಬಾರಿ ಮೊಬೈಲ್‌ ಕೊಂಡುಕೊಳ್ಳುವುದರ ಬದಲು ಮಿತದರದ ಮೊಬೈಲ್‌ ಫೋನ್‌ಗಳನ್ನೇ ಜನರು ಇಷ್ಟಪಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಮೊಬೈಲ್‌ ಫೋನ್‌ ಗಳು ಇಂದು ಅನಿವಾರ್ಯ ಆಗಿಬಿಟ್ಟಿದೆ. ಈಗ ಮೊಬೈಲ್‌ ಕಂಪೆನಿಗಳು ಸಬ್‌ಬ್ರ್ಯಾಂಡ್‌ ಫೋನ್‌ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದ್ದು ಜನರು ಕೊಂಡುಕೊಳ್ಳಲು ಕಾತರರಾಗಿದ್ದಾರೆ.

ಈಗೇನಿದ್ದರೂ ಮೊಬೈಲ್‌ ಜಮಾನ. ಎಲ್ಲರ ಕೈಗೆ ಮೊಬೈಲ್‌ ಫೋನ್‌ ಬಂದಿದೆ. ಅದರಲ್ಲಿಯೂ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಯುವಜನತೆ ಇತ್ತ ಆಕರ್ಷಿಸುತ್ತಿದ್ದಾರೆ. ಇದೀಗ ಮಾರುಕಟ್ಟೆಯಲ್ಲಂತೂ ಸಾವಿರಾರು ರೂಪಾಯಿಯ ಸ್ಮಾರ್ಟ್‌ಫೋನ್‌ಗಳು ಇವೆ. ಹೊಸ ವಿನ್ಯಾಸಗಳ ಮೊಬೈಲ್‌ಗ‌ಳು ಇತ್ತೀಚೆಗೆ ಹೆಚ್ಚಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಕಂಪೆನಿಗಳಿಂದ ಸಬ್‌ ಬ್ರಾಂಡ್‌ ಟ್ರೆಂಡ್‌ ಪ್ರಾರಂಭವಾಗಿದ್ದು, ಕಡಿಮೆ ಬೆಲೆಗೆ ಅತ್ಯುತ್ತಮ ಮೊಬೈಲ್‌ಗ‌ಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ.

ಮಾರುಕಟ್ಟೆಯಲ್ಲಿ ಹೆಚ್ಚು ಟ್ರೆಂಡೀ ಮೊಬೈಲ್‌ ಆಗಿರುವ ಪೋಕೊ, ರಿಯಲ್‌ಮಿ, ಇನ್ನೆಲೊ ಹೊಸ ಮೊಬೈಲ್‌ ಸಬ್‌ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ. ಶಿಯೋಮಿ, ಒಪ್ಪೊ, ಹಾನರ್‌ ಸೇರಿದಂತೆ ಮತ್ತಿತರ ಕಂಪೆನಿಗಳ ಸಬ್‌ ಬ್ರಾಂಡ್‌ ಮೊಬೈಲ್‌ಗ‌ಳು ಮಾರುಕಟ್ಟೆಗೆ ಬಂದಿವೆ.

ಕೆಲವು ವರ್ಷಗಳ ಹಿಂದೆ ಕೂಡ ಅನೇಕ ಮೊಬೈಲ್‌ ಕಂಪೆನಿಗಳು ಸಬ್‌ಬ್ರಾಂಡ್‌ ಮೊಬೈಲ್‌ಗ‌ಳನ್ನು ಮಾರುಕಟ್ಟೆಗೆ ಪರಿಚಯ ಮಾಡಿಕೊಟ್ಟಿದ್ದವು. ಆದರೆ, ಆ ಸಮಯದಲ್ಲಿ ದೊಡ್ಡ ಮಟ್ಟಿನ ಯಶಸ್ವಿಯಾಗಲಿಲ್ಲ. ಇತ್ತೀಚೆಗೆ ಹುವಾಯಿ ಮತ್ತು ಒಪ್ಪೋ ಕಂಪೆನಿಯು ಸಬ್‌ ಬ್ರಾಂಡ್‌ಗಳಾದ ಹಾನರ್‌ ಮತ್ತು ರಿಯಲ್‌ ಮಿ ಮೊಬೈಲ್‌ಗ‌ಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ವಿವೋ ಮೊಬೈಲ್‌ ತನ್ನ ಸಬ್‌ಬ್ರಾಂಡ್‌ ಮೊಬೈಲ್‌ನ್ನು ಸದ್ಯದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಚೀನಾ ಸಂಸ್ಥೆಯ ಕೆಲವು ಮೊಬೈಲ್‌ಗ‌ಳ ಸಬ್‌ ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಪಾರುಪತ್ಯ ಹೊಂದಿದೆ. ಇದೇ ಕಾರಣದಿಂದಾಗಿ ದೇಶದ ಬಹುಪಾಲು ಮೊಬೈಲ್‌ ಮಾರುಕಟ್ಟೆಯನ್ನು ಚೀನಾ ಹೊಂದಿದೆ.

ಕಡಿಮೆ ಬೆಲೆಗೆ ಮೊಬೈಲ್‌ ಫೋನ್‌
ಭಾರತದಲ್ಲಿ ಲಭ್ಯವಿರುವ ಐವೋಮಿ ಸಬ್‌ಬ್ರಾಂಡ್‌ ಇನೆಲೋ ಎಂಬ ಸ್ಮಾರ್ಟ್‌ ಫೋನ್‌ ತಯಾರು ಮಾಡಿದ್ದು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಅಂದರೆ, 7,499 ರೂ. ಗೆ ಸಿಗುತ್ತಿದೆ. ಇದರಲ್ಲಿ 2.5 ಗಾಜಿನ ಪ್ರೊಟೆಕ್ಷನ್‌ ಇದ್ದು, ಪ್ಲಾಸ್ಟಿಕ್‌ ಹೊದಿಕೆಯಿಂದ ವಿನ್ಯಾಸ ಮಾಡಲಾಗಿದೆ. ಆ್ಯಂಡ್ರಾಯ್ಡ 8.1 ಓರಿಯೋ ಮತ್ತು 3000 ಎಂಎಎಚ್‌ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದೆ. ಇದರ ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ವೈಶಿಷ್ಟ್ಯವನ್ನು ಹೊಂದಿದ್ದು, 2 ಜಿಬಿ ರ್ಯಾಮ್‌ ಮತ್ತು 16 ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. 13 ಮೆಗಾಪಿಕ್ಸೆಲ್‌ ಮುಂಬದಿ ಕೆಮರಾ, 5ಮೆಗಾಪಿಕ್ಸೆಲ್‌ ಹಿಂದಿನ ಕೆಮರಾ ಹೊಂದಿದೆ. ಒಟ್ಟಿನಲ್ಲಿ ಐವೋಮಿ ಮೊಬೈಲ್‌ ಗ್ರಾಹಕರ ಕೈಗೆಟಕುವ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಶಿಯೋಮಿ ಕಂಪೆನಿಯು ಇತ್ತೀಚೆಗೆ ತನ್ನ ಸಬ್‌ ಬ್ರಾಂಡ್‌ ಆಗಿರುವಂತಹ ಪೋಕೊ ಫೋನ್‌ ಇದೇ ವರ್ಷ ಪೋಕೊ ಎಫ್‌ 1 ಮೊಬೈಲ್‌ನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಬಿಟ್ಟಿತ್ತು. ಮೊದಲ 5 ನಿಮಿಷಗಳಲ್ಲಿ 200 ಕೋಟಿ ರೂ. ಮೌಲ್ಯದ ಪೋಕೊ ಎಫ್‌ 1 ಫೋನ್‌ಗಳು ಮಾರಾಟವಾದದ್ದು ವಿಶೇಷ. ಒಪ್ಪೋ ಕಂಪೆನಿಯ ಸಬ್‌ಬ್ರಾಂಡ್‌ ರಿಯಲ್‌ ಮಿ 1 ಸ್ಮಾರ್ಟ್‌ಫೋನ್‌ ಮತ್ತೂಂದು ಸ್ಮಾರ್ಟ್‌ ಫೋನ್‌ ಮಾರುಕಟ್ಟೆಗೆ ಈಗಾಗಲೇ ಲಗ್ಗೆ ಇಟ್ಟಿದೆ. ನೋಚ್‌ ಡಿಸ್ಪ್ಲೇ ಸೇರಿದಂತೆ ವಿಶೇಷ ವಿನ್ಯಾಸ ಹೊಂದಿರುವ ಈ ಫೋನ್‌ 10,990 ರೂ.ಗೆ ಮಾರುಕಟ್ಟೆಯಲ್ಲಿ ಇದೆ. 

ಅಧಿಕ ಬೇಡಿಕೆ
ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡ್‌ ಆಗಿರುವ ಸಬ್‌ ಬ್ರಾಂಡ್‌ ಮೊಬೈಲ್‌ಗ‌ಳು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗುತ್ತಿದೆ. ಅದರಲ್ಲಿಯೂ, 10,000 ರೂ. ಗಳಿಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಆ ಮೊಬೈಲ್‌ ಬ್ರಾಂಡ್‌ಗಳು ಕೂಡ ಗುಣಮಟ್ಟ ಕಾಯ್ದುಕೊಳ್ಳಲು ಯಶಸ್ವಿಯಾಗಿವೆ.

ಉತ್ತಮ ದರ್ಜೆಯ ಫೋನ್‌
ಕೆಲವು ಮೊಬೈಲ್‌ ಕಂಪೆನಿಗಳ ಸಬ್‌ ಬ್ರಾಂಡ್‌ ಮೊಬೈಲ್‌ಗ‌ಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ದರ್ಜೆಯ ಈ ಮೊಬೈಲ್‌ ಗಳನ್ನು ಖರೀದಿ ಮಾಡುವಲ್ಲಿ ಸಾರ್ವಜನಿಕರು ಆಸಕ್ತರಾಗಿದ್ದಾರೆ.
– ಶೇಖರ್‌
ಮೊಬೈಲ್‌ ಸಂಸ್ಥೆ ಮಾಲಕ

 ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

vinesh

ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್

ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

ಬ್ರಾಹ್ಮಣರಿಂದ ಅರ್ಚಕ ವೃತ್ತಿ ಕಿತ್ತುಕೊಳ್ಳುವ ಪ್ರಯತ್ನ ಸರ್ಕಾರ ಮಾಡುತ್ತಿದೆ :ಪೇಜಾವರ ಶ್ರೀ

ಬ್ರಾಹ್ಮಣರಿಂದ ಅರ್ಚಕ ವೃತ್ತಿ ಕಿತ್ತುಕೊಳ್ಳುವ ಪ್ರಯತ್ನ ಸರ್ಕಾರ ಮಾಡುತ್ತಿದೆ :ಪೇಜಾವರ ಶ್ರೀ

Shubha Punja

ಬಿಗ್ ಬಾಸ್ ಮನೆಗೆ ನಟಿ ಶುಭಾ ಪೂಂಜಾ ಜತೆ ಎಂಟ್ರಿ ಕೊಟ್ರು ಕನ್ನಡದ ನಟ…ಯಾರವರು ?

Bajarangi 2 features song on Dhanvantari gods, says Dr V Nagendra Prasad

ಧನ್ವಂತರಿ ದೇವರ ಹಾಡು ‘ಭಜರಂಗಿ 2’ ಸಿನಿಮಾದಲ್ಲಿ ವಿಶೇಷ : ನಾಗೇಂದ್ರ ಪ್ರಸಾದ್

hhhds

100 ರೂ.ಗೆ ಲೀಟರ್ ಹಾಲು ಮಾರಲು ನಿರ್ಧಾರ…ಕೃಷಿ ಕಾಯ್ದೆ ವಿರುದ್ಧ ಸಮರ ಸಾರಿದ ರೈತರು







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

Alemari Jananga 06

ಅಲೆಮಾರಿ ಜನಾಂಗದ ಬದುಕಿನ ಯಾತನೆ

vinesh

ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್

Manasi Joshi

ಮಹಾ ಸಾಧಕಿ ಮಾನಸಿ ಜೋಶಿ; ಕಾಲು ಕಳೆದುಕೊಂಡರೂ ಆತ್ಮವಿಶ್ವಾಸ ಅಡ್ಡಿಯಾಗಲಿಲ್ಲ

ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.