ತಿನ್ನುವವನ ಹೆಸರಿದೆ

Team Udayavani, Sep 9, 2019, 5:20 AM IST

“ನಮ್ಮ ಜೀವನದ ಪ್ರತಿ ದಿನವೂ ನಮಗೆ ಏನೋ ಹೊಸ ಅನುಭವವನ್ನು ಕೊಟ್ಟಿರುತ್ತದೆ. ಆದರೆ ಅದನ್ನು ಸೂಕ್ಷ್ಮವಾಗಿ ಗ್ರಹಿಸುವಲ್ಲಿ ನಾವು ಎಡವುತ್ತೇವೆ ಅಷ್ಟೇ’ ಈ ಬರಹವನ್ನು ಬರೆಯುವ ಮುನ್ನ ನನ್ನ ಜೀವನದಲ್ಲಿ ನಡೆದ ರಸವತ್ತಾದ ಕುತೂಹಲ ಮುಟ್ಟಿಸುವಂತಹ ಘಟನೆ ಇದೆಯಾ ಅಂತ ತುಂಬಾ ಯೋಚಿಸಿ ಬರೆಯಲು ಸಾಧ್ಯವಾಗಲೇ ಇಲ್ಲ ಸುಮ್ಮನೆ ಗೆಳೆಯನಲ್ಲಿ ಕೇಳಿದೆ ನಿನ್ನ ಜೀವನದಲ್ಲಿ ಏನಾದರೂ ಹೊಸ ಅನುಭವ ಇದೆಯಾ.. ಇದ್ರೆ ಹೇಳು ನಂಗೆ ಬರೆದು ಬಿಡಲು ತುಂಬಾ ಸಹಾಯವಾಗುತ್ತೆ .. ಅದಕ್ಕಾತ ಹೇಳಿದ್ದು ಮೇಲೆ ಹೇಳಿದ ವಾಕ್ಯವಾಗಿತ್ತು. ಆ ದಿನನೇ ನಂಗಾದ ಒಂದು ಚಿಕ್ಕ ಅನುಭವವನ್ನು ಇಲ್ಲಿ ಬರಹ ರೂಪ ಕೊಡುತ್ತಿದ್ದೇನೆ.

ಮೊನ್ನೆ ನಾನು ಶಾರ್ಟ್‌ ಫಿಲಮ್‌ ಶೂಟಿಂಗ್‌ ಮುಗಿಸಿ ಮನೆಗೆ ಹಿಂತಿರುಗುವಾಗ ನನ್ನ ಗಾಡಿ ಕೈ ಕೊಟ್ಟಿತು ಹೇಗೂ ಲೇಟಾಗಿದೆಯಲ್ಲಾ ಇಲ್ಲೇ ಇರುವ ಗೆಳೆಯನ ರೂಮ್‌ಗೆ ಹೋಗಿ ಮರುದಿನ ಮನೆಗೆ ಹೋದರಾಯೆಂದು ಅವನ ರೂಮಿಗೆ ಹೋದೆ ಆದರೆ ಆ ದಿನ ಅವರ ರೂಮ್‌ ಬೇರೊಂದು ರೂಮಿಗೆ ಶಿಫ್ಟ್ ಮಾಡುವ ಬ್ಯುಸಿಯಾಗಿದ್ದರು. ಆ ದಿನ ನನ್ನ ಗೆಳೆಯ ಇರಲಿಲ್ಲ . ಬದಲಾಗಿ ಆತನ ಗೆಳೆಯರಿದ್ದರು. ಅವರು ನನ್ನಲ್ಲಿ ನೀನು ಇಲ್ಲೇ ಇರು, ನಾವು ಹೋಗಿ ಬರುವಾಗ ಲೇಟ್‌ ಆಗುತ್ತೆ. ಇವತ್ತು ರಾತ್ರಿ ಈ ರೂಮ್‌ನಲ್ಲೇ ನಾವು ಉಳಿದುಕೊಳ್ಳುತ್ತೇವೆ ಅಂದರು. ನಿನ್ನ ಊಟ ಆಯ್ತಾ ನಾನು ಹೂ ಆಯ್ತು ಅಂದೇ. ಆದರೆ ನನಗ್ಯಾಕೋ ಆ ದಿನ ಅವರಿಂದ ಊಟ ತರಿಸಲು ಸರಿ ಎನಿಸಲಿಲ್ಲ. ಅವರು ಹೋದರು ಇಲ್ಲಿ ನಾನೊಬ್ಬನೆ. ಹೊಟ್ಟೆ ಬೇರೆ ಚುರುಕ್ಕೆನ್ನಲು ಶುರುವಿಟ್ಟಿದೆ. ಹಣ ತಡಕಾಡಿದೆ ಪರ್ಸ್‌ ಮೂಲೆಯಲ್ಲಿ ಮೂವತ್ತು ರೂಪಾಯಿ ಬಿಟ್ಟರೆ ಬೇರೆನೂ ಇರಲಿಲ್ಲ. ದಾರಿ ಬದಿಯ ಫ್ರೈಡ್‌ ರೈಸ್‌ ಗತಿಯೆಂದು ಹುಡುಕುತ್ತಾ ಹೊರಟೆ. ಆದರೆ ಆ ದಿನ ರವಿವಾರ ಗಂಟೆ ಬೇರೆ ಹತ್ತಾಗಿದೆ. ಎಷ್ಟು ನಡೆದರೂ ಯಾವೊಂದು ಅಂಗಡಿಯೂ ಸಿಗುತ್ತಿಲ್ಲ . ಬಂಟ್ಸ್‌ ಹಾಸ್ಟೆಲ್‌ನಿಂದ ಪಿ.ವಿ.ಎಸ್‌. ಬಳಿ ತಲುಪಿದಾಗ ಅಲ್ಲೊಂದು ಚಿಮಣಿ ದೀಪ ಉರಿಯುವುದು ಕಂಡು ಬಂತು. ಹೆಜ್ಜೆಗಳು ಬಿರುಸುಗೊಂಡು ತಲುಪಿ ಕೇಳಿದೆ. ತಿನ್ನಲು ಫ್ರೈಡ್‌ ರೈಸ್‌ ಇದೆಯಾ ..? ಅವನು ಇಲ್ಲಾ ಮೊಟ್ಟೆ ಮಾತ್ರ ಉಳಿದಿರುವುದು ಅಂದ. ನಾನು ಒಲ್ಲದ ಮನಸ್ಸಿನಲ್ಲಿ ಸರಿ ಎಂದು ಕೊಡಲು ಹೇಳಿದೆ. ಮನಸ್ಸು ಕೇಳಲಿಲ್ಲ . ರೈಸ್‌ ಇದ್ಯಾ, ಸ್ವಲ್ಪ ಆದರೂ ಸರಿ ಕೊಡಿ. ಅಂದೆ ಆತ ಓಕೆ ಸರಿ ನೋಡುತ್ತೇನೆ ಎಂದ. ಆದರೆ ಅಲ್ಲಿ ನೋಡಿದಾಗ ಸಾಮಾನ್ಯ ಕೊಡೋ ಫ್ರೈಡ್‌ ರೈಸ್‌ಗಿಂತ ಹೆಚ್ಚಾಗೇ ಇದ್ದಿತು. ಅಂಗಡಿಯಾತ ನಗುತ್ತಾ ಒಂದು ಮಾತು ಹೇಳಿದ. ಅದನ್ನು ಸಾಮಾನ್ಯವಾಗಿ ಕೇಳುವಾಗ ಅಷ್ಟೊಂದು ವಿಶೇಷವೆನಿಸದು.

ಅವನು ರೈಸ್‌ ಕೊಡುತ್ತಾ ಇಪ್ಪತ್ತು ಜನರಿಗೆ ಫ್ರೈಡ್‌ ರೈಸ್‌ ಇಲ್ಲಾ ಅಂತ ನಾನು ಹಿಂದೆ ಕಳುಹಿಸಿದೆ. ಆದರೂ ಇರುವುದಕ್ಕಿಂತಲೂ ಹೆಚ್ಚು ನಿಮಗೆ ಸಿಕ್ಕಿತು ಎಂದ.
ಅನ್ನದ ಮೇಲೆ ಯಾರ ಹೆಸರು ಬರೆದಿರುತ್ತೋ ಅವರಿಗೆನೇ ಸೇರುತ್ತೆ ಅಂದಾಗ ಅದ್ಯಾಕೋ ಆ ಮಾತು ಸತ್ಯ ಅನ್ನಿಸಿತು.ಬದುಕಿಗೆ ಹೊಸ ಅನುಭವವನ್ನು ಕೈಯಲ್ಲಿದ್ದ ಮೂವತ್ತು ರೂಪಾಯಿ, ಹಸಿವಿನ ಹೊಟ್ಟೆ ಕಲಿಸಿಕೊಟ್ಟಿತು.

-ವಿಶ್ವಾಸ್‌ ಅಡ್ಯಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ