ಮೌನದೊಳಗೊಂದು ಹೊಸ ಜೀವನ

Team Udayavani, Dec 9, 2019, 5:57 AM IST

ವಸಂತ ಬದುಕಿನ ಹಾದಿಯುದ್ದಕ್ಕೂ ವಿಧವಿಧದ ಬಣ್ಣಗಳ ಚಿತ್ತಾರ, ಭಾವ ಜಗತ್ತನ ನಂಬಿಕೆಯ ಹಾದಿಯಲ್ಲಿ ಮೌನದ ಆಗಮನ. ಹೊಸ ಪರ್ವದ ನವ ಭಾವನೆಗಳ ಜತೆಯಲ್ಲಿ ಒಂಟಿತನದಲ್ಲೂ ಜೀವ ಕಳೆ ತುಂಬುವ ಸಂಗಾತಿ. ನೂರು ನೋವುಗಳನ್ನು ಕಾಣದೂರಿನ ಬೆಟ್ಟದಲ್ಲಿ ಬಚ್ಚಿಟ್ಟರೂ ಮರುಕಳಿಸಿತು ಅದೇ ಹಳೆ ನೆನಪುಗಳ ಸಾಲು. ನೀ ಮರುಕ ಪಡಿದಿರು ಎನುತಾ ಬೆನ್ನು ತಟ್ಟಿ ಬಡಿದೆಬ್ಬಿಸಿ ಮುನ್ನಡೆ ಎಂದಿದೆ ಈ ಮೌನ.

ಕಳೆದು ಹೋದ ಏಳು ಬೀಳುಗಳ ಮರೆವಿನಂಚಿನಲ್ಲಿ,ಹೊಸ ರೂಪಿನಂತೆ ಕಾಡುತ್ತಿರುವ ಹೊಟ್ಟೆಕಿಚ್ಚಿನ ಮರಿಗಳು ಕವಲೊಡೆದು ದ್ವೇಷ ಸಾಧಿಸುವಲ್ಲಿಯೂ ಕಣಿವೆಯ ಹಾದಿಯಲ್ಲಿಯೂ ಸಾಧನೆ ಸಾಧ್ಯ ಎಂದಿದೆ ಮೌನ. ಸೇರು ನಿನ್ನಯ ನಾಳೆಗಳ ಅಣೆಕಟ್ಟು ನಾನಿರುವೆ ಎಂದಿಗೂ ಯಾರಿಲ್ಲದಿರಲು ನಿನ್ನ ಜತೆ ಇನ್ನಾರು ಬೇಕು. ಸಾಧಿಸಲು ನೀ ಅಂದುಕೊಂಡಿರುವುದನು. ಸಾಗುತಲಿರುವುದು ವಸಂತ ಬದುಕಿನ ಹಾದಿ ಮತ್ತೂಂದು ತಿರುವಿನಂಚು ತಲುಪುವವರೆಗೂ ಸಾಗುತಿರಲಿ ನಿನ್ನಯ ಹಾದಿ ಎನುವ ಒಂದೇ ಜೀವ ನಿನ್ನಯ ಮೌನ. ಜನರ ಜೀವನಕ್ಕೆ ಹತ್ತಿರದ ಸಂಗಾತಿ ನೀನಲ್ಲದೇ ಇರಲು ಬೇರಾರೂ ಇಲ್ಲ. ಹಾಗಾದರೆ ಕೆಲ ಸಂದರ್ಭದಲ್ಲಿ ನೀ ಮನವ ತಾಳಿ ಮೌನಕ್ಕು ಇನ್ನೊಂದು ಅರ್ಥ ಬೆಸೆಯುವಂತೆ ಮಾಡುವೆ. ಮನದ ಮೂಲೆಯಲಿ ಮಾಸದಂತೆ ಮರಗಟ್ಟಿ ನಿಂತ ನೋವು ಮರೆಸಿ ಹೊಸ ಚಿಗುರು ಮೂಡುವಂತೆ ಮಾಡುತಿದೆ ಮನಸೊಳಗಿನ ಮೌನ. ಒಂಟಿತನವೆಂದು ಎಂದಿಗೂ ಮರುಗದಿರಿ, ರಾತ್ರಿ ಬಾನಲಿ ಮೂಡು ಬೆಳಕು ಒಂದು ಹೊಸ ನಗುವ ಚೆಲ್ಲಿ ಮಂದಹಾಸವನ್ನು ಮೂಡಿಸೋ ಹಾಗೆ ಮೌನ ನಿಮ್ಮೊಳಗಿನ ಭಾವನೆಗಳನ್ನು ಓದಿ ಮಗದೊಂದು ಸಾರ್ಥಕತೆಯ ಜೀವನವನ್ನು ರೂಪಿಸಲು ಸಹಕರಿಸುತ್ತದೆ.

ಬಾಳಿನ ಪಯಣವೆಂದರೆ ಕೇವಲ ಖುಷಿಯೊಂದಲ್ಲ, ಇಲ್ಲಿ ಅನೇಕ ಅಡೆತಡೆಗಳು ಎದುರಾದಾಗ ಒಮ್ಮೆ ಯೋಚಿಸಿ. ಮನಸ್ಸನ್ನು ಪ್ರಶ್ನಿಸಿ ಉತ್ತರಗಳು ತನ್ನಿಂದ ತಾನಾಗಿಯೇ ಕಣ್ಣಮುಂದೆ ಮಿಂಚಿನಂತೆ ಬರುತಿರುತ್ತವೆ. ಆ ನೆನಪುಗಳ ಸಾಲು ಮಾಡಿರುವ ತಪ್ಪುಗಳ ಸಮರ್ಥನೆಯೊಂದಿಗೆ ಬಯಸದೇ, ಬಂದಿರುವ ಕಷ್ಟ -ನೋವು ನೋವಿನಂತೆ ಕಾಣದು. ಮುಂದಾಗುವ ಬದಲಾವಣೆಯನ್ನು ತೋರಿ ನವೀನ ಆಸೆಗಳ ಜತೆ ಹೊಸದೊಂದು ಬದುಕು ರೂಪುಗೊಳ್ಳುತ್ತದೆ. ಇಲ್ಲಿ ಮೌನದ ಪಾತ್ರ ಅತೀ ಮುಖ್ಯ. ಒಂದು ಹೆಜ್ಜೆ ಮುನ್ನಡೆಯಲು ಜೀವನದ ಆಗು ಹೋಗುಗಳ ಸಾಲಲ್ಲಿ ಆಪತಾºಂಧವನಂತೆ ಜತೆಗಿರುತ್ತದೆ. ಮೌನದೊಳಗೊಂದು ಹೊಸ ಜೀವನ, ಹೊಸ ಸಾಧನೆ ಪ್ರತಿಬಾರಿಯೂ ರೂಪುಗೊಳ್ಳುತ್ತದೆ.

-   ವಿಜಿತಾ, ಬಂಟ್ವಾಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ