ಹೊಸ ಅಡಿಕೆ ಬೆಲೆ ಏರಿಕೆ
Team Udayavani, Sep 1, 2019, 5:46 AM IST
ಈ ವಾರ ಹೊಸ ಅಡಿಕೆ ಬೆಲೆಯಲ್ಲಿ ಏರಿಕೆಯ ಬೆಳವಣಿಗೆಯಾಗಿದೆ. ಹಳೆಯ ಅಡಿಕೆ 290-300 ರೂ. ತನಕ ಖರೀದಿಯಾದರೆ, ಹೊಸ ಅಡಿಕೆಗೆ ಮತ್ತೆ 3 ರೂ. ಏರಿಕೆಯಾಗಿ 250 -263 ರೂ. ತನಕ ಮಾರುಕಟ್ಟೆ ಬೆಲೆಯಲ್ಲಿ ಖರೀದಿಯಾಗಿದೆ.
ಚೌತಿಯ ಸಂದರ್ಭದಲ್ಲಿ 3 ರೂ. ಏರಿಕೆ ಕಂಡಿರುವುದು ಬೆಳೆಗಾರರು ಖುಷಿಪಡುವಂತೆ ಮಾಡಿದೆ.
ಡಬಲ್ ಚೋಲು 310 ರೂ.ವರೆಗೆ ಖರೀದಿ ನಡೆಸಿದ್ದು, ಹಿಂದಿನ ವಾರದ ಧಾರಣೆಯನ್ನೇ ಕಾಪಾಡಿಕೊಂಡಿದೆ. ಪಠೊರಾ ಹೊಸ 150 ರೂ.ನಿಂದ 190 ರೂ.ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಕೋಟು 100 ರೂ.ನಿಂದ 140 ರೂ.ಗಳಿದೆ.
ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸು ಧಾರಣೆಯಲ್ಲಿ ಈ ವಾರವೂ ಅದೇ 320 ರೂ. ದರ ಮುಂದುವರಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ.
ರಬ್ಬರ್ ಬೆಲೆ ಸ್ಥಿರ
ರಬ್ಬರ್ ಬೆಲೆಯಲ್ಲಿ ಕೆಲವು ವಾರಗಳಿಂದ 137 ರೂ.ಗೆ ಇಳಿಕೆ ಕಂಡಿತ್ತು. ಈ ವಾರವೂ ಅದೇ ಧಾರಣೆ ಮುಂದುವರೆದಿದೆ.
ಆರ್ಎಸ್ಎಸ್4 ದರ್ಜೆ 137.5 ರೂ., ಆರ್ಎಸ್ಎಸ್5 ದರ್ಜೆ 133 ರೂ., ಲಾಟ್ 122.5 ರೂ.ನಲ್ಲಿ ಖರೀದಿ ನಡೆಸಿದೆ. ಸಾðಪ್ 1 ದರ್ಜೆ 84 ರೂ. ಹಾಗೂ ಸಾðಪ್ 2 ದರ್ಜೆ 76 ರೂ.ನಲ್ಲಿ ಖರೀದಿ ನಡೆಸಿವೆ.
ಕೊಕ್ಕೋ ಯಥಾಸ್ಥಿತಿ
ಕೆಲ ಸಮಯಗಳಿಂದ ಸ್ಥಿರವಾಗಿ ಸಾಗುತ್ತಿದ್ದ ಕೊಕ್ಕೋ ಧಾರಣೆಯಲ್ಲಿ ಕಳೆದ ವಾರ ಇಳಿಕೆ ಕಂಡಿತ್ತು. ಈ ವಾರ 45-48 ರೂ. ಗೆ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.
– ರಾಜೇಶ್ ಪಟ್ಟೆ