ಅಡಿಕೆ, ಕಾಳು ಮೆಣಸು ದರ ಕೊಂಚ ಏರಿಕೆ

Team Udayavani, Apr 21, 2019, 6:00 AM IST

ಅಡಿಕೆ ಕಳೆದ ವಾರಕ್ಕಿಂತ ಮತ್ತೆ 3 ರೂ. ಹೆಚ್ಚಳವಾಗಿದೆ. ಕಳೆದ ವಾರವೂ 3 ರೂ. ಏರಿಕೆಯಾಗಿತ್ತು.
ಹಿಂದಿನ ವಾರ 275 ರೂ. ನಲ್ಲಿದ್ದ ಅಡಿಕೆ ಧಾರಣೆ ಈ ವಾರ 278 ರೂ. ಗೆ ಏರಿಕೆಯಾಗಿದೆ. ಉಳಿದಂತೆ ಹೊಸ ಅಡಿಕೆ 228 ರೂ. ನಿಂದ 230 ರೂ., ಡಬಲ್‌ ಚೋಲು 300 ರೂ. ನಿಂದ 310 ರೂ. ಗೆ ಖರೀದಿ ನಡೆಸಿದ್ದು, ಹಿಂದಿನ ವಾರದ ಧಾರಣೆಯನ್ನೇ ಕಾಪಾಡಿಕೊಂಡಿದೆ. ಪಠೊರಾ ಹೊಸ 150 ರೂ. ನಿಂದ 190 ರೂ. ವರೆಗೆ ಹಾಗೂ ಹಳೆಯದು 210 ರೂ. ಗೆ ಖರೀದಿ ನಡೆಸುತ್ತಿದೆ.ಉಳ್ಳಿಗಡ್ಡೆ 130 ರೂ., ಹಳೆಯದು 150 ರೂ., ಕರಿಗೋಟು 100 ರೂ.ನಿಂದ 140 ರೂ. ಧಾರಣೆ ಪಡೆದಿವೆ.

ರಬ್ಬರ್‌ ಕುಸಿತ
ಹಿಂದಿನ ವಾರ ಧಾರಣೆ ಏರಿಸಿಕೊಂಡು ಅಚ್ಚರಿ ಮೂಡಿಸಿದ್ದ ರಬ್ಬರ್‌ ಈ ವಾರ 1 ರೂ. ಇಳಿಕೆ ಮಾಡಿದೆ. ಆರ್‌ಎಸ್‌ಎಸ್‌4 ದರ್ಜೆ 1.5 ರೂ. ಕುಸಿತ ಕಂಡು 124 ರೂ., ಆರ್‌ಎಸ್‌ಎಸ್‌5 ದರ್ಜೆ 1 ರೂ. ಕುಸಿತ ಕಂಡು 118 ರೂ., 50 ಪೈಸೆ ಕುಸಿದಿರುವ ಲಾಟ್‌ 113 ರೂ. ನಲ್ಲಿ ಖರೀದಿ ನಡೆಸಿದೆ. ತಲಾ 1 ರೂ. ಏರಿಸಿಕೊಂಡಿರುವ ಸಾðಪ್‌ 1 ದರ್ಜೆ 88 ರೂ. ಹಾಗೂ ಸ್ಕ್ರಪ್‌ 2 ದರ್ಜೆ 80 ರೂ. ನಲ್ಲಿ ಖರೀದಿ ನಡೆಸಿವೆ.

ತೆಂಗು ಧಾರಣೆ ಸ್ಥಿರ
ಕಳೆದ ವಾರ ದಂತೆ ಈ ವಾರವೂ ತೆಂಗಿನ ಧಾರಣೆ ಸ್ಥಿರವಾಗಿದ್ದು, ಕೆ.ಜಿ. ಗೆ 32 ರೂ. ನಿಂದ 34 ರೂ. ವರೆಗೆ ವಹಿವಾಟು ನಡೆಸಿದೆ.

ಕೊಕ್ಕೋ ಸ್ಥಿರ
ಕಳೆದ ವಾರ ಹಸಿ ಕೊಕ್ಕೋ ಕೆ.ಜಿ.ಗೆ 65 ರೂ., ಒಣ ಕೊಕ್ಕೋ ಕೆ.ಜಿ.ಗೆ 195 ರೂ. ನಲ್ಲಿ ಖರೀದಿ ನಡೆಸಿದ್ದು, ಈ ವಾರ ಹಸಿ ಕೊಕ್ಕೋ ಧಾರಣೆ ಮಾತ್ರ 60 ರೂ.ಗೆ ಇಳಿಕೆ ಕಂಡಿದೆ.

ಕಾಳುಮೆಣಸು ಏರಿಕೆ
ಕಾಳುಮೆಣಸು ಧಾರಣೆಯಲ್ಲಿ ಒಂದಷ್ಟು ಚೇತರಿಕೆ ಕಂಡುಬಂದಿ ದೆ. ಈ ವಾರಾಂತ್ಯಕ್ಕೆ ಕಾಳುಮೆಣಸು ಧಾರ ಣೆ ಕೆ.ಜಿ. ಗೆ 310 ರೂ. ಆಗಿತ್ತು. ಹಿಂದಿನ ವಾರ ಕೆ.ಜಿ. ಗೆ 305 ರೂ. ಆಗಿತ್ತು. ಎರಡು ವಾರಗಳ ಹಿಂದೆ 310 ರೂ.ನಲ್ಲಿದ್ದ ಧಾರಣೆ ಈಗ ಮತ್ತೆ ಇದೇ ಸ್ಥಿತಿಗೆ ಬಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪ್ರಿಯ ವಿದ್ಯಾರ್ಥಿಗಳೇ, ಎಸೆಸೆಲ್ಸಿ ಪರೀಕ್ಷೆಗಳು ಸಮೀಪಿಸುತ್ತಿವೆ. ಈಗಾಗಲೇ ಶಾಲಾ ಹಂತದಲ್ಲಿ ಮತ್ತು ಜಿಲ್ಲಾ ಹಂತದಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು ಮುಗಿದಿವೆ....

  • ಎಲ್ಇಡಿ ದೀಪಗಳು ಕೇವಲ ಕಾರುಗಳಲ್ಲಿ ಹೆಚ್ಚಿನ ಬಳಕೆಯಲ್ಲಿರುತ್ತವೆ. ಆದರೆ ವಾಸ್ತವದಲ್ಲಿ ಈ ಬಲುºಗಳು ವರ್ಣರಂಜಿತ ಮನೆಗೆ ಹೆಚ್ಚಿನ ಅಂದವನ್ನು ನೀಡುವುದರಲ್ಲಿ...

  • ಮನೆ ಸುಂದರವಾಗಿರಬೇಕು ಎನ್ನುವವರು ಮನೆಯ ಪ್ರತಿ ಅಂಶಗಳ ಮೇಲೂ ಗಮನ ಹರಿಸುತ್ತಾರೆ. ಪ್ರತಿಯೊಂದು ವಸ್ತು ವ್ಯವಸ್ಥಿವಾಗಿರಬೇಕು, ಆಕರ್ಷಕವಾಗಿರಬೇಕು ಎಂದು ಬಯಸುತ್ತಾರೆ....

  • ಮನೆಯ ಹೃದಯಭಾಗವಾದ ಲಿವಿಂಗ್‌ ರೂಮ್‌ನಲ್ಲಿ ಬಹುತೇಕ ಸಮಯವನ್ನು ಕಳೆಯಲಾಗುತ್ತದೆ. ಊಟ, ಹರಟೆ, ಮಾತುಕತೆ ಸಹಿತ ಮತ್ತಿತರ ಸಂಗತಿಗಳು ಜರಗುವುದು ಲಿವಿಂಗ್‌ ರೂಮ್‌ನಲ್ಲಿ....

  • ಅಮೇರಿಕದ ಮೆಕಿನ್ಯಾಕ್‌ ದ್ವೀಪ ಒಂದು ಪ್ರವಾಸಿ ತಾಣ. ಅಲ್ಲಿ ಪ್ರಾಚೀನ ಕಾಲದ ಕೋಟೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಗರ ಗಮನ ಸೆಳೆಯುವುದು...

ಹೊಸ ಸೇರ್ಪಡೆ