ಅಡಿಕೆ ಬೆಲೆ ಮತ್ತೆ ಏರಿಕೆ, ರಬ್ಬರ್‌ ಇಳಿಕೆ

Team Udayavani, Oct 6, 2019, 5:55 AM IST

ಈ ವಾರ ಈ ಹಿಂದಿನ ಹೊಸ ಅಡಿಕೆ ಹಳೆಯ ಅಡಿಕೆಯಾಗಿ ಪರಿವರ್ತನೆಗೊಂಡಿದೆ. ಜತೆಗೆ ಬೆಲೆ ಏರಿಕೆಯೂ ಆಗಿದೆ. ಹೊಸ ಅಡಿಕೆ 205 ರೂ. ತನಕ ಖರೀದಿಯಾದರೆ ಹಳೆಯ ಅಡಿಕೆ 260 -280 ರೂ. ತನಕ ಏರಿಕೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಡಬಲ್‌ ಚೋಲು ಪಠೊರಾ ಹೊಸ 150 ರೂ.ನಿಂದ 190 ರೂ.ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಕೋಟು 100 ರೂ.ನಿಂದ 140 ರೂ.ವರೆಗೆ ಧಾರಣೆ ಪಡೆಯುತ್ತಿವೆ.

ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸು ಧಾರಣೆಯಲ್ಲಿ ಈ ವಾರವೂ ಅದೇ 320 ರೂ. ದರ ಮುಂದುವರಿದಿದೆ. ಸ್ಥಳೀಯ ಮಾರು ಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರಿದಿದೆ.

ರಬ್ಬರ್‌ ಮತ್ತೆ ಇಳಿಕೆ
ರಬ್ಬರ್‌ ಬೆಲೆಯಲ್ಲಿ ಈ ವಾರ ಮತ್ತೆ ಇಳಿಕೆ ಕಂಡು 122 ರೂ.ಗೆ ಖರೀದಿಯಾಗಿದೆ. ಕಳೆದ ವಾರ 126 ರೂ. ದರದಲ್ಲಿ ಮಾರುಕಟ್ಟೆಯಲ್ಲಿ ಖರೀದಿಯಾಗಿತ್ತು. ಕರಾವಳಿ ಭಾಗದ ಬೆಳೆಗಾರರ ಪ್ರಮುಖ ವಾಣಿಜ್ಯ ಬೆಳೆ ಎಣಿಸಿಕೊಂಡಿರುವ ರಬ್ಬರ್‌ನ ಬೆಲೆ ಚೇತೋಹಾರಿ ಏರಿಕೆಯನ್ನು ಕಂಡು ಬೆಳೆಗಾರರಲ್ಲಿ ಖುಷಿಯನ್ನು ತಂದಿತ್ತು. ರಬ್ಬರ್‌ ಬೆಲೆ ವರ್ಷಗಳ ಬಳಿಕ 150 ರೂ.ಗೆ ತಲುಪಿತ್ತು. ಆದರೆ ಕೆಲವು ವಾರಗಳಿಂದ ಇಳಿಕೆಯ ಹಾದಿಯಲ್ಲಿದೆ. ಈ ವಾರ ಮತ್ತಷ್ಟು ಧಾರಣೆ ಇಳಿಕೆಯಾಗಿದೆ.

ಆರ್‌ಎಸ್‌ಎಸ್‌4 ದರ್ಜೆ 122 ರೂ., ಆರ್‌ಎಸ್‌ಎಸ್‌5 ದರ್ಜೆ 118 ರೂ., ಲಾಟ್‌ -115, ಸ್ಕಾÅÂಪ್‌ 1 -71, ಸ್ಕಾÅÂಪ್‌ 2 -63 ಖರೀದಿ ನಡೆಸಿವೆ.

ತೆಂಗು ಧಾರಣೆ ಸ್ಥಿರ
ಕಳೆದ ವಾರ ಹೊಸ ತೆಂಗಿನ ಕಾಯಿ 31 ಮತ್ತು 32 ರೂ. ತನಕ ಖರೀದಿಯಾಗಿತ್ತು. ಈ ವಾರ ತೆಂಗಿನ ಕಾಯಿಗೆ ಅದೇ ಧಾರಣೆ ಮುಂದುವರೆದಿದೆ.

ಕೊಕ್ಕೋ ಯಥಾಸ್ಥಿತಿ
ಕಳೆದ ಕೆಲ ಸಮಯದಿಂದ ಸ್ಥಿರವಾಗಿ ಸಾಗುತ್ತಿದ್ದ ಕೊಕ್ಕೋ ಧಾರಣೆಯಲ್ಲಿ ಕಳೆದ ವಾರ ಇಳಿಕೆ ಕಂಡಿತ್ತು. ಈ ವಾರವೂ 45-48 ರೂ.ಗೆ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ. ಆದರೆ ಈಗ ಮಾತ್ರ ಬೆಲೆ ಇಳಿಕೆಯಲ್ಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಎಷ್ಟೋ ಬಾರಿ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಮಾತನಾಡಿ ಪ್ರಯೋಜನವಿರುವುದಿಲ್ಲ. ಅದು ಗೊತ್ತಿದ್ದರೂ ನಾವು ಸೋಲ ಬಾರದು ಎಂಬ ಕಾರಣಕ್ಕೆ ಮಾತನ್ನು ಮುಂದುವರಿಸುತ್ತಾ...

  • ಬದುಕಿನಲ್ಲಿ ಪ್ರತಿಯೊಂದು ಘಟ್ಟಕ್ಕೂ ಒಂದೊಂದು ವಯಸ್ಸಿದೆ. ಆಯಾ ವಯಸ್ಸಿನಲ್ಲಿ ಆಯಾ ಘಟ್ಟಗಳನ್ನು ಪೂರೈಸಿದರೆ ಬದುಕು ಸುಂದರ. ಬಾಲ್ಯ, ಕಲಿಕೆ, ವಿವಾಹ, ಮಕ್ಕಳು,...

  • ಮನಸ್ಸೊಂದು ಹುಚ್ಚು ಕುದುರೆಯಂತೆ. ಲಗಾಮು ಇಲ್ಲದಿದ್ದರೆ ಎತ್ತಲತ್ತ ಓಡುತ್ತದೆ. ಅದನ್ನು ಹತೋಟಿಯಲ್ಲಿಡುವುದು ಅಗತ್ಯ. ಇಲ್ಲವಾದಲ್ಲಿ ಪರಿಣಾಮ ಬರೀ ವ್ಯಕ್ತಿಯ...

  • ಜೀವನದಲ್ಲಿ ಎಲ್ಲವನ್ನೂ ಎಷ್ಟು ಬೇಕು ಅಷ್ಟನ್ನೇ ಅನುಭವಿಸಬೇಕು. ಅದು ಅತಿಯಾದ ಖುಷಿಯೇ ಇರಲಿ ಅಥವಾ ದುಃಖವೇ ಇರಲಿ. ಖುಷಿಯನ್ನು ಅನುಭವಿಸಿ ಥಟ್ಟನೆ ಮರೆತು ಬಿಡುವ...

  • ಸಾಧನೆ ಮಾಡಹೊರಟವರಿಗೆ ಗುರಿ ಮತ್ತು ಗುರು ಇವೆರಡೂ ಅತ್ಯವಶ್ಯ. ಆಯ್ದುಕೊಂಡ ಗುರಿ ಸ್ಪಷ್ಟವಾಗಿಲ್ಲದಿದ್ದರೂ ಮಾರ್ಗದರ್ಶನ ನೀಡುವ ಗುರು ಸರಿ ಇಲ್ಲದಿದ್ದರೂ ಸಾಧನೆ...

ಹೊಸ ಸೇರ್ಪಡೆ