ಅಡಿಕೆ ಕೊಳೆರೋಗ ಮುನ್ನೆಚ್ಚರಿಕೆಯೇ ಪರಿಹಾರ

Team Udayavani, Oct 6, 2019, 6:12 AM IST

ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಬೆಳೆ ಅಡಿಕೆ. ಈ ಭಾಗದ ಕೃಷಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಮುಖ್ಯ ಪಾತ್ರ ಅಡಿಕೆಯದ್ದೇ. ಇಲ್ಲಿ ಸುಮಾರು 27,645 ಹೆಕ್ಟೇರ್‌ಗೂ ಹೆಚ್ಚಿನ ಭೂಮಿಯಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಆರ್ಥಿಕ ಸಬಲತೆಗೆ ಯೋಗ್ಯವಾದ ಬೆಳೆ ಎಂದು ಹೇಳಬಹುದಾದರೂ ಇದೇನು ಅಷ್ಟು ಸಲೀಸಾಗಿ ಬೆಳೆಯುವ ಹಾಗೂ ಫಸಲು ಉಳಿಸಿಕೊಳ್ಳುವ ಕೃಷಿ ಪ್ರಕಾರ ಅಲ್ಲ. ಇದಕ್ಕೆ ಪ್ರಮುಖ ಕಾರಣ ಕೊಳೆರೋಗಕ್ಕೆ ಶಾಶ್ವತ ಪರಿಹಾರ ಇಲ್ಲದಿರುವುದು.

ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ವರ್ಷದಿಂದ ವರ್ಷಕ್ಕೆ ಕೊಳೆರೋಗ ಬಾಧೆ ತೀವ್ರಗೊಳ್ಳುತ್ತಿದೆ. ಇದಕ್ಕೆ ಶಾಶ್ವತ ಪರಿಣಾಮಕಾರಿ ಔಷಧ ಮಾತ್ರ ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಮುನ್ನೆಚ್ಚರಿಕೆ ನಿರ್ವಹಣೆ ಮಾತ್ರ ಕೊಳೆರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.

ಕೊಳೆರೋಗ ಅಡಿಕೆಗೆ ಬಾಧಿಸಿದ ಅನಂತರ ಅದರ ಲಕ್ಷಣ ಕಾಣಿಸಿಕೊಳ್ಳುವುದು ನಾಶದ ಅಂಚಿನಲ್ಲಿ. ಆರಂಭಿಕ ರೋಗ ಲಕ್ಷಣ ಬಿಟ್ಟುಕೊಡದ ಕಾರಣ, ಇದಕ್ಕೆ ಪರಿಹಾರ ಏನು ಎನ್ನುವ ಬಗ್ಗೆ ಉತ್ತರ ಸಿಕ್ಕಿಲ್ಲ. ರೋಗ ಸಾಂಕ್ರಾಮಿಕವಾಗಿದ್ದು, ಒಂದು ಗಿಡಕ್ಕೆ ತಗಲಿತೆಂದರೆ ಉಳಿದೆಲ್ಲ ಗಿಡಗಳಿಗೂ ವ್ಯಾಪ್ತಿಸುತ್ತದೆ. ಹಲವು ಬಾರಿ ಸಿ.ಪಿ.ಸಿ.ಆರ್‌.ಐ. ಇತರ ತೋಟಗಾರಿಕೆ ವಿಜ್ಞಾನಿಗಳು ಈ ಕುರಿತು ಅಧ್ಯಾಯನ, ಪರಿಶೀಲನೆ ನಡೆಸಿದ್ದಾರೆ. ಅವರಿಗೂ ರೋಗ ಅಥವಾ ನಿಯಂತ್ರಣಕ್ಕೆ ಬೇಕಾದ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಬೆಳೆ ಅಡಿಕೆ. ಈ ಭಾಗದ ಕೃಷಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಮುಖ್ಯ ಪಾತ್ರ ಅಡಿಕೆಯದ್ದೇ. ಇಲ್ಲಿ ಸುಮಾರು 27,645 ಹೆಕ್ಟೇರ್‌ಗೂ ಹೆಚ್ಚಿನ ಭೂಮಿಯಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಆರ್ಥಿಕ ಸಬಲತೆಗೆ ಯೋಗ್ಯವಾದ ಬೆಳೆ ಎಂದು ಹೇಳಬಹುದಾದರೂ ಇದೇನು ಅಷ್ಟು ಸಲೀಸಾಗಿ ಬೆಳೆಯುವ ಹಾಗೂ ಫಸಲು ಉಳಿಸಿಕೊಳ್ಳುವ ಕೃಷಿ ಪ್ರಕಾರ ಅಲ್ಲ.

ಮಳೆಗಾಲ ಆರಂಭವಾದ ಕೂಡಲೇ ಎಲ್ಲೆಡೆ ಅಡಿಕೆಗೆ ಕೊಳೆರೋಗದ್ದೇ ಆತಂಕ. ಮಳೆ ನೀರಿಗೆ ಸಾಮಾನ್ಯವಾದ ಈ ರೋಗ ಅಡಿಕೆ ಇಳುವರಿ ಮೇಲೆ ಮಾತ್ರ ತೀವ್ರ ದುಷ್ಪರಿಣಾಮ ಬೀರುತ್ತದೆ. ಈ ರೋಗ ತೋಟವೊಂದಕ್ಕೆ ಲಗ್ಗೆ ಇಟ್ಟಿತೆಂದರೆ ಇಳುವರಿಯಲ್ಲಿ ಶೇ.50 ರಿಂದ 90 ರಷ್ಟು ನಷ್ಟ ಉಂಟಾಯಿತೆಂದೇ ಅರ್ಥ.

ಹರಡುವಿಕೆ
ಕೊಳೆರೋಗ ಫೈಟಾಪ್ರತ್‌ ಆರಕೆ ಎಂಬ ಶಿಲೀಂಧ್ರದಿಂದ ಹರಡುತ್ತದೆ. ಗಾಳಿ ಹಾಗೂ ಮಳೆ ಹನಿ ಮೂಲಕ ಆರೋಗ್ಯವಂತ ಕಾಯಿಗಳನ್ನು ಆವರಿಸಿಕೊಂಡು ನಾಲ್ಕೈದು ದಿನಗಳಲ್ಲಿ ಶಿಲೀಂದ್ರ ಹೆಚ್ಚಿ ರೋಗ ವ್ಯಾಪಿಸತೊಡಗುತ್ತದೆ. ಕಡಿಮೆ ಉಷ್ಣಾಂಶ, ಹೆಚ್ಚು ಮಳೆ ತೇವಾಂಶದಿಂದ ಕೂಡಿದ ವಾತಾವರಣ, ಒಟ್ಟಾಗಿ ಬರುವ ಮಳೆ ಬಿಸಿಲು ಈ ರೋಗ ಹರಡುವಿಕೆಗೆ ಅನುಕೂಲವಾಗಿರುತ್ತದೆ.

ಬೋಡೋì ದ್ರಾವಣ
ಬೋಡೋì ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ ನಾಶಕ. ಇದನ್ನು ವೈಜ್ಞಾನಿಕವಾಗಿ ತಯಾರಿಸಿದರೆ ಮಾತ್ರ ಸಸ್ಯ ರೋಗಗಳ ಸಮರ್ಪಕ ನಿರ್ವಹಣೆ ಸಾಧ್ಯ. ಬೋರ್ಡೊà ದ್ರಾವಣ ತಯಾರಿಕೆಗೆ ಬೇಕಾದ ವಸ್ತುಗಳು ಮೈಲು ತುತ್ತು 1 ಕೆ.ಜಿ, ಸುಣ್ಣ 1 ಕೆ.ಜಿ, ನೀರು 100 ಲೀಟರ್‌.

ಒಂದು ಕೆ.ಜಿ. ಮೈಲುತುತ್ತನ್ನು ಸಂಪೂರ್ಣ 10 ಲೀ. ನೀರಿನಲ್ಲಿ ಕರಗಿಸಬೇಕು. ಒಂದು ಕೆ.ಜಿ ಸುಣ್ಣವನ್ನು ಮತ್ತೂಂದು 10 ಲೀ. ನೀರಿನಲ್ಲಿ ಕರಗಿಸಬೇಕು. ಎರಡನ್ನು ಒಂದು ಪ್ಲಾಸ್ಟಿಕ್‌ ಡ್ರಮ್‌ ಗೆ ಸುರಿಯಬೇಕು. ಈಗ ಬೋಡೋì ದ್ರಾವಣ ಸಿದ್ಧ. ಇದು ಸರಿ ಇದೆಯೇ ಎಂದು ಪರೀಕ್ಷಿಸಲು ಶುದ್ಧವಾದ ಚಾಕು ಅಥವಾ ಬ್ಲೇಡ್‌ನ್ನು ದ್ರಾವಣದಲ್ಲಿ ಅದ್ದಿ ತೆಗೆದಲ್ಲಿ ಅದರ ಮೇಲೆ ಕಂದು ಅಥವ ಕೆಂಪು ಬಣ್ಣ ಕಂಡು ಬಂದಲ್ಲಿ ದ್ರಾವಣ ಆಮ್ಲಯುಕ್ತವಾಗಿದ್ದು, ಸಿಂಪಡಣೆಗೆ ಯೋಗ್ಯವಾಗಿಲ್ಲ ಎಂಬುದಾಗಿ ತಿಳಿಯಬೇಕು. ಇದನ್ನು ಸರಿಪಡಿಸಲು ಇನ್ನೂ ಸ್ವಲ್ಪ ಸುಣ್ಣ ತಿಳಿಯನ್ನು ದ್ರಾವಣಕ್ಕೆ ಸೇರಿಸಬೇಕು. ಅನಂತರ ಚಾಕೂ ಬ್ಲೇಡ್‌ನ್ನು ದ್ರಾವಣದಲ್ಲಿ ಅದ್ದಿದಾಗ ಅದು ಹೊಳಪಾಗಿದಲ್ಲಿ ದ್ರಾವಣ ಸಿಂಪಡಣೆಗೆ ಸೂಕ್ತ ಎಂದು ತಿಳಿಯುವುದು ಹಾಗೂ ಕೂಡಲೇ ದ್ರಾವಣವನ್ನು ಸಿಂಪಡಸಬೇಕು. ಅಡಿಕೆ ಕೊಳೆರೋಗ ನಿಯಂತ್ರಿಸಲು ರೈತರು ಮೈಲುತುತ್ತು ಬಳಸಿದ್ದಲ್ಲಿ ತೋಟಗಾರಿಕಾ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್‌, ಜಿಲ್ಲಾ ವಲಯ ಸಸ್ಯ ಸಂರಕ್ಷಣೆ ಯೋಜನೆ ಹಾಗೂ ರಾಜ್ಯ ವಲಯ ತೋಟಗಾರಿಕಾ ಬೆಳೆಗಳ ರೋಗ ಮತ್ತು ಕೀಟಗಳ ಸಮಗ್ರ ನಿಯಂತ್ರಣ ಯೋಜನೆಗಳಲ್ಲಿ ಶೇ.50 ರಷ್ಟು ಸಹಾಯಧನ ದೊರೆಯುತ್ತದೆ.

ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯೂ ಹೆಚ್ಚಾಗಿರುವುದರಿಂದ ಅಡಿಕೆ ಬೆಳೆಗೆ ಕೊಳೆ ರೋಗ ಭೀತಿಯೂ ಹೆಚ್ಚು. ಸೂಕ್ತ ಮುನ್ನೆಚ್ಚರಿಕೆ ವಹಿಸಕೊಂಡಲ್ಲಿ ರೋಗಗಳನ್ನು ತಡೆಗಟ್ಟಿ ಉತ್ತಮ ಗುಣಮಟ್ಟದ ಅತಿಹೆಚ್ಚು ಇಳುವರಿ ಪಡೆಯಲು ಸಾಧ್ಯವಿದೆ.

ರೋಗ ಲಕ್ಷಣ
ಮೊದಲಿಗೆ ಅಡಿಕೆ ಕಾಯಿಗಳ ಮೇಲೆ ಹಚ್ಚ ಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಅನಂತರ ಇದೇ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಭಾಗದಲ್ಲೂ ಆವರಿಸಿ ನಿಧಾನಕ್ಕೆ ಕೊಳೆಯುವಂತೆ ಮಾಡುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಅಡಿಕೆ ಕಾಯಿಗಳು ದಟ್ಟ ಹಸಿರು ಬಣ್ಣಕ್ಕೆ ತಿರುಗಿ ತೊಟ್ಟಿನಿಂದ ಕಳಚಿ ಉದುರಿಹೋಗುತ್ತವೆ.

ಹತೋಟಿ ಹೇಗೆ?
ಕೊಳೆ ರೋಗ ತಗುಲಿದ ಕಾಯಿಗಳು, ಒಣಗಿದ ಗೊಂಚಲುಗಳನ್ನು ಮೊದಲು ತೆಗೆದು ನಾಶಪಡಿಸಬೇಕು. ಅಡಿಕೆ ಗೊನೆಗೆ ಪಾಲಿಥೀನ್‌ ಹೊದಿಕೆ ಕಟ್ಟುವುದರಿಂದಲೂ ರೋಗದ ಹತೋಟಿ ಸಾಧ್ಯ. ಆದರೆ ಈ ಕೆಲಸ ಸುಲಭವಿಲ್ಲ. ಔಷಧಿ ರೂಪದಲ್ಲಾದರೆ ಮೂರು ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್‌ ಪ್ರತೀ ಲೀಟರ್‌ ನೀರಿನಲ್ಲಿ ಅಥವಾ ಶೇ. ಒಂದರ ಬೋರ್ಡೊ ದ್ರಾವಣವನ್ನು ಅಡಿಕೆ ಗೊನೆಗಳ ಮೇಲೆ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. ಬಳಿಕ 30 ರಿಂದ 45 ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ ಮಾಡಬೇಕು.

ಮಳೆಗಾಲ ಮುಂದುವರಿದಲ್ಲಿ ಮೂರನೇ ಬಾರಿಯೂ ಸಿಂಪಡಸಬೇಕಾಗುತ್ತದೆ. ರೋಗಾಣು ಮಣ್ಣಿನ ಪದರದಲ್ಲೂ ಬದುಕುವುದರಿಂದ ಮಣ್ಣು ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು. ಕೊಳೆರೋಗ ನಿವಾರಿಸಲು ಕೃಷಿಕರ ಸಹಾಯಕ್ಕೆ ತೋಟಗಾರಿಕಾ ಇಲಾಖೆ “ಹಾಟ್‌ ಕ್ಲಿನಿಕ್‌’ಗಳನ್ನೂ ಸ್ಥಾಪಿಸಿದೆ.

–  ರಾಜೇಶ್‌ ಪಟ್ಟೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಎಪ್ರಿಲ್‌ 1ರಿಂದ ಭಾರತ್‌ ಸ್ಟೇಜ್‌-6 (ಬಿಎಸ್‌-6) ಜಾರಿಯಾಗಲಿದೆ. ಬಿಎಸ್‌-6 ಎಂಬುದು ಭಾರತ್‌ ಸ್ಟೇಜ್‌ 6 ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕ ಮಟ್ಟದಲ್ಲಿ ಇದನ್ನು ಯೂರೋ...

  • ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಅತೀ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಇದು ಶೇ. 51ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರುತಿ ಸುಜುಕಿಯಲ್ಲಿ...

  • ಇ ತ್ತೀಚೆಗೆ ನವನವೀನ ಮಾದರಿಯ ಸ್ಮಾರ್ಟ್‌ ಫಿಟೆ°ಸ್‌ ಬ್ಯಾಂಡ್‌ ಹಾಗೂ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುತ್ತಿವೆ. ಇವುಗಳು ಇಂದು ನಮ್ಮ ಕೆಲಸವನ್ನು ಸುಲಭ ಮಾಡುತ್ತಿವೆ....

  • ಇಂದು ಆಕರ್ಷಕ ಬೈಕ್‌ಗಳು ಹೆಚ್ಚು ಜನ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಇಲ್ಲಿ ರಸ್ತೆಗಿಳಿಯಲು ಸಿದ್ಧವಾಗಿರುವ ಬೈಕ್‌ ಒಂದನ್ನು ಪರಿಚಯಿಸಲಾಗಿದೆ. ಬಜಾಜ್‌...

  • ಮಾರುಕಟ್ಟೆಗೆ ದಿನಕ್ಕೊಂದು ಹೊಸ ಉತ್ಪನ್ನ ಆಗಮನವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಕಾರು ಉದ್ಯಮದಲ್ಲಿ ಸರಕಾರದ ನಿರ್ದೇಶನದ ಮೇರೆಗೆ ಬಿಎಸ್‌6 ಎಂಜಿನ್‌ ಇರುವ...

ಹೊಸ ಸೇರ್ಪಡೆ