- Saturday 14 Dec 2019
ಏರ್ ಪ್ಯೂರಿಫೈಯರ್ ಮೊರೆ ಹೊಕ್ಕ ಜನ
Team Udayavani, Nov 22, 2019, 5:20 AM IST
ಹೆಚ್ಚುತ್ತಿರುವ ವಾಯುಮಾಲಿನ್ಯದ ಭೀಕರತೆ ಮನುಷ್ಯನ ಅಸ್ತಿತ್ವಕ್ಕೆ ಸವಾಲೊಡ್ಡುತ್ತಿದೆ. ಗಾಳಿಯ ಗುಣಮಟ್ಟ ಕಾಪಾಡುವುದೂ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಪರಿಸರ ಮಾಲಿನ್ಯದಿಂದಾಗಿ ವಾಯುಮಾಲಿನ್ಯ ಅತಿಯಾಗುತ್ತಿದ್ದರೆ, ಇನ್ನೊಂದೆಡೆ ವಾಹನಗಳು ಉಗುಳುವ ಹೊಗೆಯೂ ಮನುಷ್ಯ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ. ಎಷ್ಟೆಂದರೆ, ಈ ವಾಯುಕಾರಕ ಅಂಶಗಳು ನಮ್ಮ ಮಲಗುವ ಕೋಣೆಗಳನ್ನೂ ಬಿಟ್ಟಿಲ್ಲ ಎಂಬುದನ್ನು ನಂಬಲೇಬೇಕು.
ಶುದ್ಧ ಗಾಳಿಗಾಗಿ..
ಹೊರಗಿನ ಕಲುಷಿತ ಗಾಳಿ ಮನೆಯೊಳಗೂ ಬಂದು ನೆಮ್ಮದಿಯ ಬದುಕನ್ನು ನಮಗೆ ಗೊತ್ತಿಲ್ಲದಂತೆಯೇ ಕಸಿದುಕೊಳ್ಳುತ್ತಿದೆ. ಶುದ್ಧ ಗಾಳಿಯ ಉಸಿರಾಟ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಇದು ವ್ಯಾಪಿಸಿದೆ. ಹೊಸದಿಲ್ಲಿಯ ವಾಯು ಮಾಲಿನ್ಯದ ಭೀಕರತೆ ಆಮ್ಲಜನಕವನ್ನು ಹಣಕೊಟ್ಟು ಕೊಂಡುಕೊಳ್ಳಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿದೆ. ಮಂಗಳೂರಿನಲ್ಲಿಯೂ ಆಗುತ್ತಿರುವ ವಾಯು ಮಾಲಿನ್ಯದ ಪರಿಣಾಮ ಹೊಸದಿಲ್ಲಿಯ ವಾಸ್ತವತೆ ನಮಗೂ ಹತ್ತಿರದಲ್ಲೇ ಇದೆ ಎಂಬ ಎಚ್ಚರಿಕೆಯನ್ನು ತೆರೆದಿಟ್ಟಿದೆ. ಮನೆಯೊಳಗಾದರೂ ಶುದ್ಧ ಗಾಳಿ ಉಸಿರಾಡಬೇಕಾದರೆ ಏರ್ ಪ್ಯೂರಿಫೈಯರ್‌ಗಳ ಮೊರೆ ಹೊಕ್ಕಿದ್ದಾರೆ ಜನ.
ಹೌದು, ಶುದ್ಧ ಗಾಳಿಯ ಉಸಿರಾಟಕ್ಕಾಗಿ ಏರ್ ಪ್ಯೂರಿಫೈಯರ್ ಸಾಧನ ಸಹಾಯವಾಗುತ್ತಿದೆ. ಅದಕ್ಕಾಗಿಯೇ ಹಾಳಾಗಿರುವ ಶುದ್ಧಗಾಳಿಯನ್ನು ಮರಳಿ ಪಡೆಯಲು ಏರ್ ಪ್ಯೂರಿಫೈಯರ್ ಖರೀದಿ ದೊಡ್ಡ ದೊಡ್ಡ ಸಿಟಿಗಳಲ್ಲಿ ಟ್ರೆಂಡ್ ಆಗುತ್ತಿದೆ. ನಿಧಾನಕ್ಕೆ ಈ ಸಾಧನ ಪರಿಚಯವಾಗುತ್ತಿದೆ. ಮಂಗಳೂರಿನಂಥ ನಗರಕ್ಕೆ ಇದಿನ್ನೂ ಅಷ್ಟೊಂದು ಪರಿಚಯವಾಗದಿದ್ದರೂ, ಭವಿಷ್ಯದಲ್ಲಿ ಅಗತ್ಯದ ಸಾಧನವಾಗಿ ಬೇಕಾಗಲಿದೆ ಎಂಬುದು ಅಷ್ಟೇ ಸತ್ಯ.
ಫಿಲ್ಟರ್ ಮಾಡುತ್ತದೆ
ಹೆಚ್ಚಿದ ಹೊರಾಂಗಣ ಮಾಲಿನ್ಯವನ್ನು ತಡೆದು ಮನೆಯ ಕೋಣೆಯೊಳಗೆ ಶುದ್ಧ ಗಾಳಿ ನೀಡಲು ಏರ್ ಪ್ಯೂರಿಫೈಯರ್ ಸಹಾಯ ಮಾಡುತ್ತದೆ. ಪ್ಯೂರಿಫೈಯರ್‌ನ ಪರಿಣಾಮಕಾರಿ ಬಳಕೆಗೆ ಮನೆಯೊಳಗಿನ ಕಿಟಕಿ, ಬಾಗಿಲುಗಳನ್ನು ಮುಚ್ಚಿಡಬೇಕು. ಆದರೆ, ಅಡುಗೆ ಮಾಡುವಾಗ, ಮನೆಯೊಳಗಡೆ ಧೂಳಿದ್ದರೆ ಕಿಟಕಿ, ಬಾಗಿಲು ತೆರೆದಿಡಬೇಕು. ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡಿ ಶುದ್ಧಗಾಳಿ ಒದಗಿಸುತ್ತದೆ.
ಹೊರಾಂಗಣ ಕಾರಕಗಳನ್ನು ಫಿಲ್ಟರ್ ಮಾಡಿ ಶುದ್ಧಗಾಳಿಯನ್ನು ಉಸಿರಾಡುವಂತೆ ಮಾಡುವ ಸಾಧನ ಏರ್ ಪ್ಯೂರಿಫೈಯರ್. ವಿದ್ಯುತ್ ಚಾಲಿತವಾಗಿರುವ ಈ ಸಾಧನವನ್ನು ಮನೆಯೊಳಗಿದ್ದಾಗ ಬಳಕೆ ಮಾಡಬಹುದು. ಹೊಸದಿಲ್ಲಿ, ಬೆಂಗಳೂರಿನಂತಹ ದೊಡ್ಡ ದೊಡ್ಡ ಸಿಟಿಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮನೆಯೊಳಗೆ ಏರ್ ಪ್ಯೂರಿಫೈಯರ್ ಅವಶ್ಯವಾಗಿದೆ. ಮನೆಯ ಯಾವುದೇ ಭಾಗದಲ್ಲಿ ಇದನ್ನು ಇರಿಸಿದರೂ ತಕ್ಕ ಮಟ್ಟಿಗೆ ಶುದ್ಧಗಾಳಿಯನ್ನು ಪಡೆಯಬಹುದು ಎಂಬ ಕಾರಣದಿಂದಾಗಿ ಸಿಟಿ ಜನ ಇದರ ಮೊರೆ ಹೋಗುತ್ತಿದ್ದಾರೆ.
ಮಂಗಳೂರಿನಲ್ಲಿಲ್ಲ ಬಳಕೆ
ಮಂಗಳೂರಿಗೆ ಸದ್ಯಕ್ಕೆ ಏರ್ ಪ್ಯೂರಿಫೈಯರ್ ಅವಶ್ಯವಿಲ್ಲವಾದರೂ, ಮುಂದಿನ ದಿನಗಳಲ್ಲಿ ಅಗತ್ಯ ಬೀಳಬಹುದು ಎಂಬುದು ವಿವಿಧ ಮಳಿಗೆಗಳ ಸಿಬಂದಿಯ ಅಭಿಪ್ರಾಯ. ಏರ್ ಪ್ಯೂರಿಫೈಯರ್ ಮಂಗಳೂರಿನಲ್ಲಿ ಬಳಕೆಯಲ್ಲಿಲ್ಲದ ಕಾರಣ ಮಂಗಳೂರಿನ ಮಾರುಕಟ್ಟೆಗೆ ಇನ್ನೂ ಕಾಲಿಟ್ಟಿಲ್ಲ. ಆದರೆ, ಹೊಸದಿಲ್ಲಿ, ಬೆಂಗಳೂರಿನಂತಹ ನಗರಗಳಲ್ಲಿ ಇದು ನಿಧಾನಕ್ಕೆ ಪರಿಚಯವಾಗುತ್ತಿದೆ. ಆನ್‌ಲೈನ್‌ನಲ್ಲಿ 2500 ರೂ. ಗಳಿಂದ ಹಿಡಿದು 25 ಸಾವಿರ ರೂ.ಗಳ ತನಕ ಬೆಲೆ ಬಾಳುವ ಏರ್ ಪ್ಯೂರಿಫೈಯರ್‌ಗಳಿವೆ. ಮಾರುಕಟ್ಟೆ ದರ ಸುಮಾರು 30 ಸಾವಿರ ರೂ. ಗಳಿಷ್ಟಿರಬಹುದು.
ಸೂಕ್ತ ಆಫರ್
ಮಂಗಳೂರಿನಲ್ಲಿ ಏರ್ ಪ್ಯೂರಿಫೈಯರ್ ಬಳಕೆ ಇಲ್ಲ. ಬಳಕೆ ಇಲ್ಲ ಎನ್ನುವುದಕ್ಕಿಂತ ಅದರ ಆವಶ್ಯಕತೆ ಸದ್ಯದ ಮಟ್ಟಿಗೆ ಕಂಡು ಬಂದಿಲ್ಲ. ಹಾಗಾಗಿ ನಗರದಲ್ಲಿ ಏರ್ ಪ್ಯೂರಿಫೈಯರ್ ಖರೀದಿ-ಮಾರಾಟಕ್ಕೆ ಬೇಡಿಕೆ ಬಂದಿಲ್ಲ.
– ಅನಂತ, ಉದ್ಯಮಿ
- ಧನ್ಯಾ ಬಾಳೆಕಜೆ
ಈ ವಿಭಾಗದಿಂದ ಇನ್ನಷ್ಟು
-
ಕ್ರಿಸ್ಮಸ್ ಬಂತೆಂದರೆ ಅದೇನೋ ಖುಷಿ. ಡಿಸೆಂಬರ್ ಆರಂಭದಿಂದಲೇ ಮನೆಯಲ್ಲಿ ಹಬ್ಬಕ್ಕೆ ಅಲಂಕಾರ ಪ್ರಾರಂಭವಾಗುತ್ತದೆ. ಕ್ರಿಸ್ಮಸ್ ಟ್ರೀಗಳಂತೂ ಒಂದಕ್ಕಿಂದ...
-
ಮನೆ ಎಲ್ಲರ ಕನಸಿನ ಕೂಸು. ಮನೆಯನ್ನು ಬೇರೆಬೇರೆ ವಸ್ತುಗಳಿಂದ ಅಲಂಕಾರ ಮಾಡುವುದು ಇತ್ತೀಚೆಗಿನ ಟ್ರೆಂಡ್ಗಳಲ್ಲಿ ಒಂದಾಗಿದೆ. ಪೇಪರ್ ಕ್ರಾಫ್ಟ್ಗಳ ಮೂಲಕವೂ ಮನೆಯನ್ನು...
-
ಮನೆಯ ಅಂದ ಹೆಚ್ಚಿಸುವುದಕ್ಕಾಗಿ ಅತ್ಯಂತ ಸರಳ ಮತ್ತು ಸುಂದರವಾದ ಮಾರ್ಗವೊಂದಿದೆ. ಅದೇನೆಂದರೆ ಪ್ರಾಣಿ, ಪಕ್ಷಿಗಳ ಪ್ರತಿಕೃತಿಗಳನ್ನು ಮನೆಯ ವಿವಿಧ ಸ್ಥಳಗಳಲ್ಲಿ...
-
ಮನೆ, ಮನೆಯೊಳಗಿರುವ ವಸ್ತುಗಳು ಮನೆಯವರ ಅಭಿರುಚಿಯನ್ನು ತಿಳಿಸುತ್ತದೆ. ಆದ್ದರಿಂದ ಮನೆಯಲ್ಲಿ ಯಾವ ವಸ್ತು ಇರಬೇಕು ಮತ್ತು ಅದು ಹೇಗಿರಬೇಕು ಎನ್ನುವುದರ ಕುರಿತು...
-
2019ಕ್ಕೆ ವಿದಾಯ ಹೇಳುವ ಸಮಯ ಹತ್ತಿರವಾಗುತ್ತಿದ್ದಂತೆ ಹೊಸ ವರ್ಷದ ನಿರೀಕ್ಷೆ ಗರಿ ಗೆದರಿದೆ. ಸಹಜವಾಗಿ ವಾಹನ ತಯಾರಿಕಾ ಕ್ಷೇತ್ರದತ್ತಲೂ ಅನೇಕ ನಿರೀಕ್ಷೆಗಳಿರುತ್ತವೆ....
ಹೊಸ ಸೇರ್ಪಡೆ
-
ವಾಷಿಂಗ್ಟನ್: ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಐತಿಹಾಸಿಕ ಹಾಗೂ ಸರಣಿ ಸುಧಾರಣಾ ಕ್ರಮಗಳು...
-
ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಜಯಶ್ರೀ ಕೂಡಾ ಒಬ್ಬರು. ರೂಪದರ್ಶಿಯಾಗಿ, ನಟಿಯಾಗಿ ಜನಪ್ರಿಯತೆ ಕಂಡಿದ್ದ ಈ ನಟಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ...
-
ಬೆಳ್ತಂಗಡಿ: ಕುವೆಟ್ಟು ಗ್ರಾಮದ ವರಕಬೆಯಲ್ಲಿ ಡಿ.14ರಂದು ರಿಕ್ಷಾ ಮಗುಚಿ, ಪ್ರಯಾಣಿಕ ಸೋನಂದೂರಿನ ಕೃಷ್ಣನಗರ ನಿವಾಸಿ ಹರೀಶ್ ಶೆಟ್ಟಿ (45) ಮೃತಪಟ್ಟಿದ್ದಾರೆ. ರಿಕ್ಷಾ...
-
ಜೀವವಿಮೆ ಪಾಲಿಸಿಗಳಲ್ಲಿ ಪ್ರಮುಖ ಬದಲಾವಣೆಗೆ ಅಖೀಲ ಭಾರತ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಉದ್ದೇಶಿದ್ದು 2020 ಫೆ.1ರಿಂದ ಜಾರಿಗೆ...
-
ಬೆಂಗಳೂರು: ನಗರದ 85 ಪ್ರದೇಶಗಳಲ್ಲಿ ಪಾರ್ಕಿಂಗ್ಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಬಿಬಿಎಂಪಿ ಪ್ರಾರಂಭಿಸಿರುವ "ಸ್ಮಾರ್ಟ್ ಪಾರ್ಕಿಂಗ್'ಯೋಜನೆಯ ಪ್ರಾಯೋಗಿಕ...