ಹೊಸ ತನಕ್ಕೆ ಇರಲಿ ಆದ್ಯತೆ

Team Udayavani, Apr 20, 2019, 6:05 AM IST

ಮನೆಯೊಳಗೆ ಹೊಸ ಕಳೆ ಸದಾ ಇರಬೇಕು ಜತೆಗೆ ಆಧುನಿಕತೆಯ ಟಚ್ ಹೊಂದಿರಬೇಕು ಎಂದು ಎಲ್ಲರೂ ಬಯಸುತ್ತೇವೆ. ಆದರೆ ಹೇಗೆ, ಏನೂ ಎಂಬುದು ತಿಳಿದಿರುವುದಿಲ್ಲ. ಅದಕ್ಕಾಗಿ ಇಲ್ಲಿದೆ ಕೆಲವು ಸರಳ ಉಪಾಯಗಳು.

ಅತಿ ಕಡಿಮೆ ಅಲಂಕಾರ
ಮನೆಗೆ ಹೆಚ್ಚು ಅಲಂಕಾರ ಮಾಡುವುದು ವಿಶೇಷ ಸಂದರ್ಭದಲ್ಲಿ ಮಾತ್ರ. ಆದರೆ ನಿತ್ಯ ಹೆಚ್ಚು ಅಲಂಕಾರ ಮಾಡಿದರೆ ಅಭಾಸವಾಗುತ್ತದೆ. ಅದಕ್ಕಾಗಿ ಅತಿ ಕಡಿಮೆ ಅಲಂಕಾರಕ್ಕೆ ಆದ್ಯತೆ ಕೊಡಿ. ಸಣ್ಣ ಕೋಣೆಗಳಾದರೆ ಅತಿ ಕಡಿಮೆ ವಸ್ತುಗಳನ್ನು ಇಡಿ.

ಒಳಾಂಗಣ ವಿನ್ಯಾಸ
ಒಂದಕ್ಕೊಂದು ಪೂರಕವಾದ ಒಳಾಂಗಣ ವಿನ್ಯಾಸ ಇರುವಂತೆ ನೋಡಿಕೊಳ್ಳುವುದು ಬಹುಮುಖ್ಯ. ಅದರಲ್ಲೂ ಪೀಠೊಪಕರಣಗಳು, ಮನೆಯೊಳಗೆ ಮಾಡುವ ವಿನ್ಯಾಸಗಳು ಒಂದಕ್ಕೊಂದು ಪೂರಕವಾಗಿದ್ದರೆ ಹೆಚ್ಚು ಸ್ಥಳ ಉಳಿತಾಯ ಸಾಧ್ಯವಿದೆ. ಜತೆಗೆ ಮನೆ ಹೆಚ್ಚು ಆಕರ್ಷಕವಾಗುವುದು.

ಆಧುನಿಕ ತಂತ್ರಜ್ಞಾನಗಳು
ಮನೆಯೊಳಗೆ ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಆದ್ಯತೆ ನೀಡಿ. ಟಿವಿ, ವಿದ್ಯುತ್‌, ಎಸಿ ಮೊದಲಾದವುಗಳು ರಿಮೋಟ್, ವಾಯ್ಸ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸಲಿ. ಮನೆಯು ಆಧುನಿಕ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವಂತಿದ್ದರೆ ಮನೆ ಆಕರ್ಷಕವಾಗಿರುವುದರ ಜತೆಗೆ ಆಧುನಿಕವಾಗಿಯೂ ಇರುತ್ತದೆ.

ಚಿತ್ರಗಳು
ಗೋಡೆಗಳಲ್ಲಿ ತೂಗುಹಾಕುವ ಚಿತ್ರಗಳು ಮರು ಪ್ರಿಂಟ್ ಮಾಡುವ ಹಾಗೆ ಇರಬೇಕು. ಯುವ ಕಲಾವಿದರು ರಚಿಸಿದ ಚಿತ್ರಗಳು, ಡಿಜಿಟಲ್ ಆರ್ಟ್‌ ಫೋಟೋಗ್ರಫಿ, ಸಾಂಪ್ರದಾಯಿಕ, ಬುಡಕಟ್ಟು ಜನಾಂಗದ ಚಿತ್ರಗಳು ಹೆಚ್ಚು ಆಕರ್ಷಕವಾಗಿರುವುದರ ಜತೆಗೆ ಮನೆ ಗೊಂದು ಹೊಸ ಲುಕ್‌ ಕೊಡಬಲ್ಲದು.

ವಿದ್ಯುತ್‌ ದೀಪಗಳು
ಮನೆಯೊಳಗೆ ಹಾಗೂ ಹೊರಗಿನ ವಿದ್ಯುತ್‌ ಅಲಂಕಾರಗಳು ಮನೆಗೆ ವಿಶೇಷ ಲುಕ್‌ ಕೊಡುತ್ತದೆ. ನಮ್ಮ ಮನಸ್ಸಿನ ಭಾವನೆಗಳಿಗೆ ಅನುಗುಣವಾದ ವಿದ್ಯುತ್‌ ಮನೆಯೊಳಗಿದ್ದರೆ ಉತ್ತಮ. ಇದಕ್ಕಾಗಿ ಎರಡು ಅಥವಾ ಮೂರು ರೀತಿಯ ವಿದ್ಯುತ್‌ ಬಲ್ಬ್ಗಳನ್ನು ಬಳಸಬೇಕು. ಇದು ಮನೆಗೆ ಸ್ಟೈಲಿಶ್‌ ಲುಕ್‌ ಕೊಡುತ್ತದೆ. ವಿವಿಧ ಸಂದರ್ಭಗಳಲ್ಲಿ ಇದು ಹೆಚ್ಚು ಪ್ರಸ್ತುತ ಎಂದೆನಿಸುತ್ತದೆ.

– ವಿದ್ಯಾ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಸಂತೆಮರಹಳ್ಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿರುವ ಪಡಸಾಲೆಯಲ್ಲಿ ಆಧಾರ್‌ ನೋಂದಣಿಯನ್ನು ಪುನಾರಂಭ ಮಾಡಲಾಗಿದೆ. ಈ ಬಗ್ಗೆ ಉದಯವಾಣಿ ಮೇ. 15 ರಂದು ಆಧಾರ್‌...

  • ಚಾಮರಾಜನಗರ: ಬಸವಾದಿ ಶರಣರು ಸ್ಥಾಪನೆ ಮಾಡಿರುವ ವೀರಶೈವ ಲಿಂಗಾಯತ ಧರ್ಮ ಸಂವಿಧಾನ ಕಲಂನಲ್ಲಿ ಪ್ರತ್ಯೇಕ ಧರ್ಮವಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು...

  • ಹುಮನಾಬಾದ: ಕ್ಯಾಂಪಸ್‌ ಸಂದರ್ಶನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ತೆಲಂಗಾಣ ಜಹೀರಾಬಾದನ ಮಹೀಂದ್ರಾ ಆ್ಯಂಡ್‌ ಮಹಿಂದ್ರಾ ಆಟೋಮೊಬೈಲ್...

  • ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿನ ಹವಾನಿಯಂತ್ರಿತ (ಎಸಿ)ವ್ಯವಸ್ಥೆ ಎರಡು ದಿನಗಳಿಂದ ಕೈ ಕೊಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ...

  • ದೇವನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆ 29ರಂದು 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳಿಂದ 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ ಕಡೆ ದಿನವಾಗಿದ್ದರಿಂದ...

  • ನೆಲಮಂಗಲ: ಕಾರು ಶೋಕಿಗಾಗಿ ಚಾಲಕನ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಗಳ ಬಂಧನದ ವೇಳೆ ಪೊಲೀಸರ ಬಂದೂಕುಗಳು ಸದ್ದು ಮಾಡಿರುವ ಘಟನೆ ಮಂಗಳವಾರ ಬೆಳ್ಳಂಬೆಳ್ಳಗ್ಗೆ...