Udayavni Special

ಹೊಸ್ಮಾರಿನಲ್ಲೂ ಬೆಳೆದ ವಿದೇಶಿ ಹಣ್ಣು ಡ್ರ್ಯಾಗನ್‌ ಫ್ರುಟ್‌

ಉಡುಪಿ ಜಿಲ್ಲೆಗೆ ಬೆಳೆ ಪರಿಚಯಿಸಿದ ಸಾಧಕ

Team Udayavani, Feb 2, 2020, 5:46 AM IST

introduced-crop

ಭ ತ್ತ,ಅಡಿಕೆ,ಕಾಳುಮೆಣಸು ಇತ್ಯಾದಿ ಕೃಷಿಗಳು ಕರಾವಳಿಯಲ್ಲಿ ಸಾಮಾನ್ಯ. ಆದರೆ ಕಾರ್ಕಳದ ಈದುವಿನ ಹೊಸ್ಮಾರಿನಲ್ಲಿ ವಿಭಿನ್ನ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದ್ದು ಕೃಷಿಕರಿಗೆ ಮಾದರಿಯಾಗಿದೆ.

ಇತ್ತೀಚೆಗೆ ಮಳೆ ಕಡಿಮೆಯಾಗಿದ್ದು ಕರಾವಳಿಯಲ್ಲೂ ಅಂತರ್ಜಲದ ಕೊರತೆ ಕಾಡುತ್ತಿದೆ. ಈ ಸಂದರ್ಭದಲ್ಲಿ ಡ್ರ್ಯಾಗನ್‌ ಫ್ರುಟ್ಸ್‌ ಬೆಳೆ ಮೂಲಕ ಕೃಷಿಕರು ಅಧಿಕ ಇಳುವರಿ ಪಡೆಯಬಹುದಾಗಿದೆ. ಒಣ ಭೂಮಿಯಲ್ಲಿ ಈ ಬೆಳೆಯನ್ನು ಬೆಳೆಯಬಹುದಾಗಿದ್ದು ಉತ್ತಮ ಇಳುವರಿ ಪಡೆಯಬಹುದು. ಹೊಸ್ಮಾರ್‌ ನೂರಾಲ್‌ ಬೆಟ್ಟು ಪ್ರಗತಿಪರ ಕೃಷಿಕ ಶಿವಾನಂದ ಶೆಣೈ ಅವರು ವಿದೇಶಿ ತಳಿಯಾದ ಡ್ರಾÂಗನ್‌ ಫ್ರುಟ್‌ ಬೆಳೆ ಬೆಳೆದಿದ್ದು ಹೊಸ ಪ್ರಯೋಗ ಕೈಗೊಂಡಿದ್ದಾರೆ.

 1 ಎಕರೆಯಲ್ಲಿ ನಾಟಿ
ಸುಮಾರು 1 ಎಕರೆ ಪ್ರದೇಶದಲ್ಲಿ 2000 ಗಿಡಗಳ ನಾಟಿ ಮಾಡಿದ್ದು, 500 ಸಿಮೆಂಟ್‌ ಕಂಬಗಳನ್ನು ಸ್ಥಾಪಿಸಿ ಅದಕ್ಕೆ ಗಿಡವನ್ನು ಕಟ್ಟಲಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಸುಮಾರು 3.5 ಲಕ್ಷ ರೂ. ಖರ್ಚು ಮಾಡಿದಲ್ಲಿ ವಾರ್ಷಿಕ ಸುಮಾರು 4.5 ಲಕ್ಷ ರೂ. ಆದಾಯ ಪಡೆಯಬಹುದು ಎನ್ನುತ್ತಾರೆ. ಪ್ರಾರಂಭದಲ್ಲಿ ಸುಮಾರು 25 ಗಿಡಗಳ ಮೂಲಕ ಪ್ರಾಯೋಗಿಕವಾಗಿ ಬೆಳೆಯಲಾಗಿದ್ದು, 40 ರಿಂದ 50 ಕೆ.ಜಿ ಇಳುವರಿ ಪಡೆಯಲಾಗಿದೆ.

 15 ತಿಂಗಳ ಬಳಿಕ ಇಳುವರಿ
ನಾಟಿ ಮಾಡಿದ ಬಳಿಕ 15 ತಿಂಗಳಲ್ಲಿ ಇಳುವರಿ ಪಡೆಯಬಹುದು. 1 ಎಕರೆಗೆ ಪ್ರಥಮ ಹಂತದಲ್ಲಿ 1.5 ಟನ್‌ ಬೆಳೆ ತೆಗೆಯಲು ಸಾಧ್ಯವಿದೆ. ಮೂರನೇ ಹಂತದ ಇಳುವರಿ ಯಲ್ಲಿ 5ರಿಂದ 6 ಟನ್‌ ಇಳುವರಿಯನ್ನು ಪಡೆಯ ಬಹುದಾಗಿದೆ. ಹೂವಾದ 40ರಿಂದ 45 ದಿನಕ್ಕೆ ಹಣ್ಣು ಕಟಾವಿಗೆ ತಯಾರಾಗುತ್ತದೆ. ಹಸಿರು ವರ್ಣದ ಕಾಯಿ ಮಾಗುತ್ತಿದ್ದಂತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ನಂತರ 3ರಿಂದ 4 ದಿನಗಳಲ್ಲಿ ಕಟಾವು ಮಾಡಬಹುದಾಗಿದೆ.

ಪೌಷ್ಟಿಕ ಹಣ್ಣು
ಡ್ರ್ಯಾಗನ್‌ ಫ್ರುಟ್‌ ಬೆಳೆ ಕಡಿಮೆ ಸಕ್ಕರೆ ಅಂಶವನ್ನು ಹೊಂದಿದ್ದು ಕ್ಯಾಲ್ಸಿಯಂ, ಕಬ್ಬಿನಾಂಶ ಹಾಗೂ ವಿಟಮಿನ್‌ ಅಂಶಗಳನ್ನು ಹೊಂದಿರುವ ಹಣ್ಣು ಹೆಚ್ಚಾಗಿ ಜ್ಯೂಸ್‌ಗಳಿಗೆ ಉಪಯುಕ್ತವಾದ ಹಣ್ಣು, ಹಾಗೂ ಇನ್ನಿತರ ಫ್ರುಟ್‌ ಜಾಮ್‌, ವಿವಿಧ ಉತ್ಪನ್ನಗಳಿಗೆ ಬಳಸುತ್ತಾರೆ. ಡ್ರ್ಯಾಗನ್‌ ಫ್ರುಟ್‌ ಅಂದರೆ ಪಾಪಸ್‌ ಕಳ್ಳಿ ಜಾತಿಗೆ ಸೇರಿದ ಹಣ್ಣು ಅಥವಾ ರಟಗೊಳ ಹಣ್ಣು ಎಂದು ಕರೆಯುತ್ತಾರೆ. ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದಾಗಿದೆ. ಈ ಬೆಳೆಯು ವಿಯೆಟ್ನಾಂ, ಥಾಯ್ಲೆಂಡ್‌, ಶ್ರೀಲಂಕಾದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ.

ಬೆಳೆಯುವುದು ಹೇಗೆ?
ಅರ್ಧ ಅಡಿ ಸುತ್ತಳತೆಯ ಗುಂಡಿ ನಿರ್ಮಿಸಬೇಕು, ಗಿಡದಿಂದ ಗಿಡಕ್ಕೆ 10 ಅಡಿ ಅಂತರವಿರ‌ಬೇಕು. ಗಿಡದ ಆಧಾರಕ್ಕೆ ಸಿಮೆಂಟ್‌ ಕಂಬ ನಿರ್ಮಿಸಿ 2 ಕವಲುಗಳಲ್ಲಿ ಗಿಡಗಳನ್ನು ಬಿಡಬೇಕು. ಈ ಬೆಳೆ ಹೆಚ್ಚಿನ ಕೆಲಸವನ್ನು ಬೇಡುವುದಿಲ್ಲ. ನಿರ್ವಹಣೆಯೂ ಕಡಿಮೆ ಇದೆ.

ಮಾರುಕಟ್ಟೆ
ಡ್ರಾÂಗನ್‌ ಫ್ರುಟ್‌ಗೆ ರಾಜ್ಯದಲ್ಲಿ ವ್ಯವಸ್ಥಿತ ಮಾರು ಕಟ್ಟೆಗಾಗಿ ಬಿಜಾಪುರ ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಕೊಲ್ಲಾಪುರ ಮತ್ತಿತರೆಡೆ ಮಾರುಕಟ್ಟೆ ಸೌಲಭ್ಯವಿದೆ. ಉತ್ತಮ ಬೇಡಿಕೆಯೂ ಇದೆ. ಒಂದು ಕೆಜಿ ಹಣ್ಣಿನ ಬೆಲೆ 120 ರೂ.ಯಿಂದ 150 ರೂ. ವರೆಗೆ ಇದೆ.

ಸಹಾಯಧನ
ಡ್ರ್ಯಾಗನ್‌ ಫ್ರುಟ್‌ ಬೆಳೆ ಬೆಳೆಯುವ ರೈತರಿಗೂ ಇತರ ತೋಟಗಾರಿಕಾ ಬೆಳೆಗಳಿಗೆ ನೀಡಿದಂತೆ ಸರಕಾರದಿಂದ ಸಹಾಯಧನ ದೊರೆಯುತ್ತದೆ. ಶ್ರೀನಿವಾಸ್‌, ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಕಾರ್ಕಳ

ಪ್ರಯೋಗ
ಪ್ರಾಥಮಿಕ ಹಂತದಲ್ಲಿ 25 ಸಸಿಗಳನ್ನು ನೆಟ್ಟು ಉತ್ತಮ ಫ‌ಸಲು ಬಂದ ನಿಟ್ಟಿನಲ್ಲಿ 1 ಎಕರೆ ಪ್ರದೇಶದಲ್ಲಿ 2000 ಗಿಡ ಬೆಳೆಸಲಾಗಿದೆ.
– ಶಿವಾನಂದ ಶೆಣೈ,
ಪ್ರಗತಿಪರ ಕೃಷಿಕ, ನೂರಾಳ್‌ ಬೆಟ್ಟು

- ಸಂದೇಶ್‌ ಕುಮಾರ್‌ ನಿಟ್ಟೆ

ಟಾಪ್ ನ್ಯೂಸ್

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

ಶತಕೋಟಿ  ಡೋಸ್‌ ದಾಖಲೆ

ಶತಕೋಟಿ ಡೋಸ್‌ ದಾಖಲೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.