ಸಫಾರಿ ಸವಾರಿ

Team Udayavani, Jun 7, 2019, 5:50 AM IST

ಯುವ ಮನಸ್ಸುಗಳು ಸದಾ ಕಾಲ ಎಲ್ಲ ವಿಷಯಗಳಲ್ಲಿಯೂ ಹೊಸತನವನ್ನು ಹುಡುಕುತ್ತಲೇ ಇರುತ್ತಾರೆ. ಉಡುಗೆ- ತೊಡುಗೆಯ ವಿಚಾರಕ್ಕೆ ಬಂದಾಗಲಂತೂ ಹೊಸ ಟ್ರೆಂಡ್‌ಗಳ ಮೊರೆ ಹೋಗುತ್ತಾರೆ. ಫ್ಯಾಶನ್‌ ವಿಷಯದಲ್ಲಿ ಯುವ ಕ-ಯುವತಿಯರು ಹೊಸ ಲುಕ್‌ಗಳ ಡ್ರೆಸ್‌ ಮೆಟೀರಿಯಲ್‌ಗ‌ಳು ಮಾರುಕಟ್ಟೆಗೆ ಲಗ್ಗೆ ಇಡುವುದನ್ನೇ ಕಾಯುತ್ತಿರುತ್ತಾರೆ, ಖರೀದಿಸಿ ತೊಟ್ಟುಕೊಂಡು ಅದಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತಾರೆ.

ಹೀಗೆ ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಿರುವುದು ಸಫಾರಿ ಸ್ಯೂಟ್‌ಗಳು. ಈ ಸ್ಯೂಟ್‌ಗಳು ಫ‌ಂಕ್ಷನಲ್‌ ಕೂಡ ಹೌದು ಜತೆಗೆ ಫ್ಯಾಶನೇಬಲ್‌ ಸಹ. ಔಟ್‌ಸ್ಟಾಂಡಿಂಗ್‌ ವೆಡ್ಡಿಂಗ್‌ ಕಲೆಕ್ಷನ್‌ಗಳ ಲಿಸ್ಟ್‌ನಲ್ಲಿಯೂ ಈ ಸಫಾರಿ ಸ್ಯೂಟ್‌ಗಳು ಉನ್ನತ ಸ್ಥರವನ್ನು ಅಲಂಕರಿಸಿವೆ ಎಂದರೂ ಅದನ್ನು ಅಲ್ಲಗಳೆಯುವಂತಿಲ್ಲ. ಮೈಗೆ ಒಪ್ಪುವ, ಹಾಗೆಯೇ ವ್ಯಕ್ತಿಯ ವ್ಯಕ್ತಿತ್ವದ ವರ್ಚಸ್ಸನ್ನು ಹೆಚ್ಚಿಸುವ ಕೆಲಸವನ್ನೂ ಈ ಸ್ಯೂಟ್‌ಗಳು ಮಾಡುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹತ್ತಿ, ಉಣ್ಣೆಯಿಂದಲೂ ಈ ಸ್ಯೂಟ್‌ಗಳನ್ನು ತಯಾರಿಸಲಾಗುತ್ತಿದ್ದು ಮಿಲಿಟರಿ, ಲೆಶ್ಶರ್‌ ಮಾದರಿಗಳಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಅಫೀಷಿಯಲ್‌, ಫ‌ಂಕ್ಷನ್‌ ವೇರ್‌, ಬೇಸಿಕ್‌ ಮೊದಲಾದ ವಿಧಗಳಲ್ಲಿ ಲಭ್ಯವಿದ್ದು, ಅವುಗಳ ಡಿಸೈನ್‌, ಬಟ್ಟೆಯ ಗುಣ ಮ ಟ್ಟ, ವರ್ಕ್‌ಗಳನ್ನು ಅವಲಂಭಿಸಿದಂತೆ ದರಗಳನ್ನು ನಿರ್ಧರಿಸಲಾಗಿದೆ. ಮಷಿನ್‌ ವರ್ಕ್‌ಗಳು ಮಾತ್ರವಲ್ಲದೆ ಹ್ಯಾಂಡ್‌ ಕ್ರ್ಯಾಫ್ಟ್ಗಳಲ್ಲಿಯೂ ಸಫಾರಿಗಳನ್ನು ಸಿದ್ಧಪಡಿಸಲಾಗಿದ್ದು ಈಗ ಮಾರುಕಟ್ಟೆಯಲ್ಲಿ ರಾಜನಂತೆ ಸವಾರಿ ಮಾಡುತ್ತಿವೆ ಎನ್ನಬಹುದೇನೋ.
ಸಫಾರಿ ಸ್ಯೂಟ್‌ ತಯಾರಿಕೆ ಕಂಪೆನಿಗಳು ಮಹಿಳೆಯರ ಸ್ಯೂಟ್‌ ಬಗ್ಗೆಯೂ ಕಾಳಜಿ ವಹಿಸಿವೆ. ಮಹಿಳೆಯರಿಗೆಂದೇ ಸ್ಕರ್ಟ್‌, ಸ್ಯೂಟ್‌ಗಳನ್ನು ತಯಾರಿಸುವಲ್ಲಿಯೂ ಆಸಕ್ತಿ ವಹಿಸಿವೆ. ಈ ಲೇಡೀಸ್‌ ಸ್ಯೂಟ್‌ಗಳನ್ನು ಹೆಚ್ಚಾಗಿ ಆಫೀಸ್‌, ಕಂಪೆನಿಗಳಲ್ಲಿ ಉದ್ಯೋಗ ಮಾಡುವವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಉದ್ಯೋಗಸ್ಥ ನಾರೀಮಣಿಯರ ವ್ಯಕ್ತಿತ್ವಕ್ಕೆ ಮತ್ತಷ್ಟು ಕಳೆ ತಂದುಕೊಡುವ, ಇತರರ ಮಧ್ಯೆ ಅವರನ್ನು ಇನ್ನಷ್ಟು ಎತ್ತರಕ್ಕೇರಿಸುವ ಕೆಲಸವನ್ನು ಇವುಗಳು ಮಾಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಟ್ರೆಂಡೀ ಲುಕ್‌
ಟ್ರೆಂಡೀ ಲುಕ್‌ ವಿಚಾರಕ್ಕೆ ಬಂದಾಗಲೂ ಈ ಸ್ಯೂಟ್‌ಗಳು ನೋಡುಗರ ಮನ ಗೆಲ್ಲುತ್ತವೆ. ಉಳಿದ ಡ್ರೆಸ್‌ ಮೆಟೀರಿಯಲ್‌ಗ‌ಳಿಗೆ ಹೋಲಿಸಿದಲ್ಲಿ ಇವುಗಳನ್ನು ಮೈಂಟೈನ್‌ ಮಾಡುವುದು ಸರಳ ಮತ್ತು ಸುಲಭ. ಮೊಣಕಾಲಿನ ವರೆಗಿನ ಕೋಟ್‌ಗಳು, ಶರ್ಟ್‌ ಗಳಷ್ಟೇ ಉದ್ದದ ಕೋಡ್‌ಗಳನ್ನು ಸಹ ನಾವು ಸಫಾರಿಯಲ್ಲಿ ಕಾಣಬಹುದಾಗಿದೆ. ನಿಮಗೆ ಬೇಕಾದ ಬಣ್ಣಗಳಲ್ಲಿ ಮನಕ್ಕೊಪ್ಪುವ ಮಾದರಿಗಳಲ್ಲಿ ಸಫಾರಿಗಳನ್ನು ಸಿದ್ಧ ಪಡಿಸುವಲ್ಲಿಯೂ ಸಹ ಕಂಪೆನಿಗಳು ಆಸಕ್ತಿ ವಹಿಸಿವೆ.

   ಭುವನ ಬಾಬು, ಪುತ್ತೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬದುಕು ನದಿ ಇದ್ದಂತೆ ಎನ್ನುವ ಮಾತಿದೆ. ಅದಕ್ಕೆ ಇರಬೇಕು, ಮಾನವನಿಗೂ ನದಿಗೂ ಬಿಡಿಸಲಾಗದ ನಂಟು. ಗಮನಿಸಿ ನೋಡಿ ನಾಗರಿಕತೆ ಆರಂಭವಾಗಿದ್ದೇ ನದಿ ದಂಡೆಯಲ್ಲಿ. ಮಾತ್ರವಲ್ಲ...

  • ಮನುಷ್ಯನಿಗೆ ತಾಳ್ಮೆಯೆಂಬುದು ಬಂಗಾರದ ಮೌಲ್ಯವಿದ್ದಂತೆ. ತಾಳ್ಮೆಯೆಂಬುದು ನಮ್ಮೊಂದಿಗೆ ಇದ್ದರೆ ನಾವು ಎಲ್ಲವನ್ನೂ ಗೆಲ್ಲಲು ಅರ್ಹರು ಎಂಬುದು ವಿಶೇಷ. ಬದುಕಿನಲ್ಲಿ...

  • ಮಾತಿಗೆ ಒಂದು ಅರ್ಥವಾದರೆ ಮೌನಕ್ಕೆ ಅನೇಕ ಅರ್ಥಗಳು. ಮೌನ ಧನಾತ್ಮಕತೆ ಮತ್ತು ಋಣಾತ್ಮಕತೆಗಳ ಎರಡು ಅಲಗಿನ ಕತ್ತಿಯಂತೆ. ಅದನ್ನು ಚಾಕಚಕ್ಯತೆಯಿಂದ ಬಳಸುವುದು ಅವರವರಿಗೆ...

  • ದಿನಗಳು ಉರುಳುತ್ತಿದಂತೆ ಕಾಲವೂ ಕೂಡ ಬದಲಾಗುತ್ತಿದೆ. ಅದರಲ್ಲಿ ಇದು ತಂತ್ರಜ್ಞಾನದ ಯುಗ. ದಿನಕ್ಕೊಂದು ಅನ್ವೇಷಣೆಗಳು ನಡೆಯತ್ತಲೇಯಿರುತ್ತದೆ. ಅಂತಹ ಕಾಲದಲ್ಲಿ...

  • ಜೀವನದಲ್ಲಿ ನಾವು ಒಂದಿಷ್ಟು ಪ್ರೇರಕ ಮಾತುಗಳನ್ನು, ಸಕಾರಾತ್ಮಕ ಯೋಚನೆಗಳನ್ನು ಇಟ್ಟುಕೊಳ್ಳುವುದು ಉತ್ತಮ. ಇದು ನಮ್ಮ ಯಶಸ್ಸಿನ ಹಾದಿಗೆ ಬಹಳ ಮುಖ್ಯವಾಗಿ ಬೇಕಾಗುತ್ತದೆ....

ಹೊಸ ಸೇರ್ಪಡೆ