ವಿಭಿನ್ನ ರೀತಿಯಲ್ಲಿ ಸೀರೆ ಉಟ್ಟು ಮಿಂಚಿ..

Team Udayavani, Oct 25, 2019, 5:04 AM IST

ಹಬ್ಬಗಳು, ಮದುವೆ, ಯಾವುದೇ ಶುಭ ಸಮಾರಂಭ ಇರಲಿ ನಾರಿಯರಲ್ಲಿ ಒಂದೇ ಯೋಚನೆ, ಯಾವ ಸೀರೆ ಉಡಲಿ, ಯಾವ ರೀತಿ ಉಟ್ಟುಕೊಂಡರೆ ಚೆಂದವಾಗಿ ಕಾಣಬಹುದೆಂದು. ಹೌದು ಹೆಣ್ಣಿನ ಅಂದವನ್ನು ಹೆಚ್ಚಿಸುವುದು ಕೇವಲ ಸೀರೆ ಮಾತ್ರ. ತಮ್ಮ ಮೈಗೆ ಒಪ್ಪುವಂತ ಸೀರೆ ಉಡುವುದೂ ಒಂದು ಕಲೆ. ಸ್ವಲ್ಪ ಮಂದಿಗೆ ಗೊತ್ತಿದ್ದರೂ ಇನ್ನೂ ಸ್ವಲ್ಪ ಮಂದಿ ಇನ್ನೊಬ್ಬರ ಸಹಾಯದಿಂದ ಸೀರೆ ಉಟ್ಟು ಸಂತಸ ಪಡುವುದೂ ಉಂಟು. ಏನೇ ಹೇಳಿ ಯಾವುದೇ ಫ್ಯಾಶನ್‌ ಉಡುಪು ಧರಿಸಿದರೂ ಸೀರೆಗೆ ಸರಿಸಾಟಿಯಾದದ್ದು ಯಾವುದೂ ಇಲ್ಲ .ಯಾವ ರೀತಿ ವಿಭಿನ್ನವಾಗಿ ಸೀರೆ ಉಡಬಹುದೆಂದು ಇಲ್ಲಿ ತಿಳಿಯಬಹುದು.

ದಕ್ಷಿಣ ಭಾರತದ ಶೈಲಿ
ಇಲ್ಲಿ ಕಾಂಜಿವರಂ ಮತ್ತು ಜರಿ ಸೀರೆಗಳು ಹೆಚ್ಚು ಸೂಕ್ತ. ಸೀರೆಯ ಅಂಚು ಇರುವಷ್ಟೇ ನೆರಿಗೆ ಹಿಡಿದು ಸೆರಗು ಹಾಕಿ ಸೊಂಟಕ್ಕೊಂದು ಡಾಬು ಹಾಕಿದರೆ ಹೆಣ್ಣಿನ ಸೌಂದರ್ಯವನ್ನು ವರ್ಣಿಸಲು ಪದಗಳು ಸಿಗದು. ಅವರವರಿಗೆ ಒಪ್ಪುವಂತಹ ಬಣ್ಣಗಳ ಸೀರೆ ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಸಾಮಾನ್ಯ ನೆರಿಗೆ
ಸಾಮಾನ್ಯ ನೆರಿಗೆಯಲ್ಲೂ ಸುಂದರವಾಗಿ ಕಾಣುವಂತೆ ಸೀರೆ ಉಡಬಹುದು. ಪಲ್ಲು ಭಾಗವನ್ನು ಒಂದು ಅಂದಾಜಿನಲ್ಲಿ ತೆಗೆದುಕೊಂಡು ಬಣ್ಣದ ಸೀರೆ ಪಿನ್‌ ಹಾಕಿಕೊಂಡರೆ ಸಾಕು. ಇದಕ್ಕೆ ಡಾಬಿನ ಆವಶ್ಯಕತೆ ಇರುವುದಿಲ್ಲ . ಹಾಗೆಯೇ ಹೆಚ್ಚಿನ ಆಭರಣಗಳು ಬೇಕಿಲ್ಲ. ಫ್ಯಾನ್ಸಿ ಸೀರೆಗಳಿಗೆ ಈ ವಿನ್ಯಾಸ ಒಪ್ಪುವಂತದ್ದು ಮತ್ತು ಕ್ಯಾಶುವಲ್‌ ಸಮಾರಂಭಗಳಿಗೆ ಇಂತಹ ಶೈಲಿ ತುಂಬಾ ಸೂಕ್ತವಾಗಿದೆ.

ದೂರ ದೂರ ನೆರಿಗೆ ವಿನ್ಯಾಸ
ಸೀರೆಯ ಪಲ್ಲುವನ್ನು ದೊಡ್ಡದಾಗಿ ನೆರಿಗೆ ಹಿಡಿದು ಪಿನ್‌ ಹಾಕಿಕೊಂಡು ಸಿಂಪಲ್‌ ಆಭರಣ ತೊಟ್ಟರೆ ತುಂಬಾ ಚೆನ್ನಾಗಿ ಕಾಣಬಹುದು. ಈ ಶೈಲಿಯನ್ನು ಹೆಚ್ಚಾಗಿ ಸಾಮಾನ್ಯ ಸಮಾರಂಭಗಳಲ್ಲಿ ಕಾಲೇಜಿನ ವಿಶೇಷ ಸಮಾರಂಭಕ್ಕೆ ಹೆಚ್ಚು ಸೂಕ್ತವಾಗಿದೆ ಮತ್ತು ಮಧ್ಯಮ ಇದು ಎಲ್ಲರಿಗೂ ಒಪ್ಪುವಂತಹದ್ದು.

ಲೆಹೆಂಗಾ ವಿನ್ಯಾಸ
ನಿಮ್ಮ ಬಳಿ ಲೆಹೆಂಗಾ, ಗಾಗ್ರ ಚೋಲಿ ಇಲ್ಲವೆಂದು ಕೊರಗಬೇಡಿ. ಉತ್ತಮ ಬಣ್ಣದ ಕಾಂಜೀವರಂ ಸೀರೆಯನ್ನು ಗುಜರಾತಿ ಶೈಲಿಯಲ್ಲಿ ಉಟ್ಟುಕೊಂಡು, ಸೀರೆಯ ಅಂಚು ಸೊಂಟದ ಸುತ್ತ ಮತ್ತು ಹೆಗಲ ಮೇಲೆ ಬರುವಂತೆ ಮಾಡಿದರೆ ಲೆಹೆಂಗಾ ಮಾದರಿಯಂತೆ ಸೀರೆಯನ್ನುಡಬಹುದು. ಈ ಶೈಲಿಯ ಸೀರೆಗೆ ಬೋಟ್‌ನೆಕ್‌ ರವಿಕೆ ಧರಿಸಿದರೆ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಸಿಂಗಲ್‌ ಪಿನ್‌, ಫ್ರೀ ಸ್ಟೈಲ್‌ ಶೈಲಿ
ಎಲ್ಲರೂ ಈ ಶೈಲಿಯನ್ನು ಇಷ್ಟಪಡುವುದು ಸಹಜ. ಹಾಗೆಯೇ ಇದು ಶೀಘ್ರದಲ್ಲಿ ಉಡಬಹುದಾದ ಶೈಲಿ ಇದಾಗಿದೆ. ಈ ಶೈಲಿಗೆ ಕಾಟನ್‌ ಸಿಲ್ಕ್, ಫ್ಯಾನ್ಸಿ ಸೀರೆಗಳು ಈ ವಿನ್ಯಾಸಕ್ಕೆ ಹೆಚ್ಚು ಒಪ್ಪುತ್ತದೆ.

- ವಿಜಿತಾ ಬಂಟ್ವಾಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ