ಮಕ್ಕಳಿಗಾಗಿ ಉಳಿತಾಯ ಮಾಡಿ


Team Udayavani, Jul 16, 2018, 4:11 PM IST

16-july-21.jpg

ಉಳಿತಾಯ ಅಂದರೆ ಸಾಕು ಅದು ನಮಗಲ್ಲ, ಮಕ್ಕಳಿಗೆ ಅನ್ನೋ ನಂಬಿಕೆ ಚಾಲ್ತಿಯಲ್ಲಿದೆ. ಮಕ್ಕಳ ವಿದ್ಯಾಭ್ಯಾಸ ಹೇಗೆ? ಮಗುವಿನ ಬೆಳವಣಿಗೆಗೆ ಎಷ್ಟು ವ್ಯಯವಾಗಬಹುದು ಎಂದು ಮೊದಲೇ ಚಿಂತಿಸಿದರೆ ಭವಿಷ್ಯದಲ್ಲಿ ಕಿರಿಕಿರಿ ಇರುವುದಿಲ್ಲ. ಮದುವೆಯಾದ ತಿಂಗಳಿಂದಲೇ ಮೂರು ಸಾವಿರದಂತೆ ಆರ್‌ಡಿಯಲ್ಲಿ ಉಳಿಸುತ್ತಾ ಬನ್ನಿ. ಮೂರು ವರ್ಷಗಳ ಅನಂತರ ಮಕ್ಕಳಾಗಿ, ಅದು ಶಾಲೆಗೆ ಸೇರುವ ಹೊತ್ತಿಗೆ ಹೆಚ್ಚು ಕಡಿಮೆ ಬಡ್ಡಿ ಸೇರಿಸಿ ಎರಡು ಲಕ್ಷ ಕೈಗೆ ಬರುತ್ತದೆ.

ನೀವು ಉಳಿತಾಯ ಮಾಡಲೇಬೇಕು
ಇಷ್ಟೊಂದು ಖಚಿತವಾಗಿ ಹೇಳ್ಳೋಕೆ ಕಾರಣ ಏನೆಂದರೆ ಈ ಉಳಿತಾಯ ನಿಮಗಲ್ಲದೇ ಇದ್ದರೂ ಮಕ್ಕಳಿಗಾದರೂ ಮಾಡಲೇಬೇಕು. ಯಾಕೆಂದರೆ, ಪ್ರತಿ ವರ್ಷ ವಿದ್ಯಾಭ್ಯಾಸ ಖರ್ಚು ಶೇ. 5 ರಿಂದ 10ರಷ್ಟು ಏರುತ್ತಿದೆ. ಮನೆಯಲ್ಲಿ ಎರಡು ಮಕ್ಕಳಿದ್ದರೆ ( ನಾಲ್ಕು ವರ್ಷದ ಮಕ್ಕಳು) ವರ್ಷಕ್ಕೆ ಒಂದು ಲಕ್ಷ ಎತ್ತಿಡುವ ಅನಿವಾರ್ಯವಿರುವುದರಿಂದ ಉಳಿತಾಯದ ಹಾದಿ ತುಳಿಯಲೇ ಬೇಕು. 

ಲೆಕ್ಕ ಮಾಡಿ
ಮಕ್ಕಳ ವಿದ್ಯಾಭ್ಯಾಸ ಹೇಗೆ? ಮಗುವಿನ ಬೆಳವಣಿಗೆಗೆ ಎಷ್ಟು ವ್ಯಯವಾಗಬಹುದು ಎಂದು ಮೊದಲೇ ಚಿಂತಿಸಿ ಅಗತ್ಯಕ್ಕೆ ತಕ್ಕಂತೆ ಉಳಿತಾಯ ಮಾಡಲೇಬೇಕು. ಮಕ್ಕಳ ಭವಿಷ್ಯದ ವಿದ್ಯಾಭ್ಯಾಸದ ನೆರವಿಗೆಂದು ನಾನಾ ಬಗೆಯ ಸ್ಕೀಮ್‌ಗಳಿವೆ. ಮಗುವಿನ ಪ್ರಾಥಮಿಕ ಶಿಕ್ಷಣಕ್ಕೆ ಯಾವುದೇ ಅಡ್ಡಿ ಇಲ್ಲ. ಇಂತ ಸಣ್ಣ, ಸಣ್ಣ ಉಳಿತಾಯ ದೊಡ್ಡ ಕಷ್ಟದಲ್ಲಿ ಕೈ ಹಿಡಿಯುತ್ತದೆ. 

ಇವುಗಳಿಂದ ಟ್ಯಾಕ್ಸ್  ಕನ್ಸೆಶನ್‌ ಸಿಗುವ ಜತೆಗೆ ಸೇವಿಂಗ್‌ ಸಹ ಆಗುತ್ತದೆ. ಕೆಲವು ಸ್ಕೀಮ್‌ ಗಳಲ್ಲಿ ಮಗುವಿಗೆ ಎರಡು ವರ್ಷ ಇರುವಾಗ ಕಂತಿನ ಹಣ ನಿಗದಿತವಾಗಿ ಕಟ್ಟಲು ಆರಂಭಿಸಿ 18 ವರ್ಷ ಆಗುವವರೆಗೆ ಪಾವತಿಸುತ್ತ ಬಂದರೆ, ಅದಕ್ಕೆ ಬಡ್ಡಿ, ಬೋನಸ್‌ ಎಲ್ಲ ಸೇರಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಒಳ್ಳೆಯ ಆದಾಯವಾಗುತ್ತದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಹೊರೆಯಾಗುವುದಿಲ್ಲ. ಮದುವೆಯ ಅನಂತರದ ದೊಡ್ಡ ಖರ್ಚು ಮಕ್ಕಳದ್ದು. ಹುಟ್ಟಿದಾಗಿನಿಂದ ಬೆಳೆದು ದೊಡ್ಡವರಾಗುವ ತನಕ ಆದಾಯದ ಶೇ. 20ರಷ್ಟು ಇದಕ್ಕೆ ಮೀಸಲಾಗಿಡಬೇಕು. 

ನೂರು ದಾರಿ
ಉಳಿತಾಯಕ್ಕೆ ನೂರಾರು ದಾರಿಗಳಿವೆ. ಆದರೆ ಉಳಿತಾಯ ಮಾಡಬೇಕು ಎನ್ನುವ ಯೋಚನೆ ಮನಸ್ಸಿಗೆ ಬರಬೇಕು ಅಷ್ಟೇ. ಇವತ್ತು ಉಳಿತಾಯ ಮಾಡಿದರೆ ಇವತ್ತೇ ಬದಲಾವಣೆ ಅಸಾಧ್ಯ. ನಮ್ಮ ಆವಶ್ಯಕತೆಗೆ ಅನುಗುಣವಾಗಿಯೇ ಉಳಿತಾಯದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಮುಂದಿನ ವರ್ಷ ಮಗಳ ಮದುವೆಯೋ, ಫೀಸ್‌ ಕಟ್ಟಬೇಕು ಅಂತಿಟ್ಟಿಕೊಳ್ಳಿ. ಇದು ತತ್‌ಕ್ಷಣಕ್ಕೆ ಆಗದ ಕಾರ್ಯ. ಹಾಗಾಗಿ, ವರ್ಷಗಳ ಮೊದಲೇ ಪೂರ್ವ ಸಿದ್ಧತೆ ಮಾಡಿಕೊಂಡರೆ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವೇನಲ್ಲ.

ಹಾಗಾಗಿ, ಮೊದಲು ನಿಮ್ಮ ಎಲ್ಲ ಆದಾಯಗಳ ಮೂಲವನ್ನು ಗುಡ್ಡೆ ಹಾಕಿ. ತಿಂಗಳಿಗೆ ಎಷ್ಟು ಕೈಗೆ ಬರುತ್ತಿದೆ. ಎಷ್ಟು ಖರ್ಚಾಗುತ್ತಿದೆ ಎನ್ನುವುದನ್ನು ಪಟ್ಟಿ ಮಾಡಿ. ನೀವು ಮದುವೆ ಆಗದೇ ಇದ್ದರೆ ಹೆಚ್ಚು ಉಳಿತಾಯ ಮಾಡಬಹುದು. ಶೇ. 80ರಷ್ಟು ಉಳಿತಾಯ ಮಾಡಿ, ಶೇ. 20ರಷ್ಟು ಖರ್ಚು ಮಾಡಬಹುದಾದ ಕಾಲ ಇದು. ಮದುವೆ ಆಗುವ ತನಕ ನೀವು ಎಷ್ಟು ಹಣ ಉಳಿಸಿದ್ದೀರಿ ಎನ್ನುವುದರ ಮೇಲೆ ನಿಮ್ಮ ಮದುವೆ ಅನಂತರ ಬದುಕು ಆರ್ಥಿಕವಾಗಿ ನೆಮ್ಮದಿಯಾಗಿರುತ್ತದೆ. ಈ ಕಾರಣಕ್ಕೆ ಕೆಲಸಕ್ಕೆ ಸೇರಿ 30ನೇ ವಯಸ್ಸಿಗೆ ಮದುವೆಯಾಗುವುದಾದರೆ 5- 6 ವರ್ಷದ ತನಕ ನೀವು ಹಣ ಉಳಿಸಬಹುದು. ನಿಮ್ಮ ಸಂಬಳ 10 ಸಾವಿರದಿಂದ ಆರಂಭವಾಗಿ 25 ಸಾವಿರಕ್ಕೆ ನಿಂತಿದೆ ಎಂದಿಟ್ಟುಕೊಳ್ಳಿ. ಸರಾಸರಿ 6 ರಿಂದ 15 ಸಾವಿರದ ತನಕ ಉಳಿತಾಯ ಮಾಡಿದ್ದೇ ಆದರೆ ಹೆಚ್ಚು ಕಡಿಮೆ ಮದುವೆ ಹೊತ್ತಿಗೆ ನಿಮ್ಮ ಕೈಯಲ್ಲಿ ಮೂರು, ನಾಲ್ಕು ಲಕ್ಷ ಇರುತ್ತದೆ.

ಯಾವುದು ಸೇಫ್?
ಬ್ಯಾಂಕಿನ ಆರ್‌ಡಿ ಖಾತೆ ಬಹಳ ಸೇಫ್. ಇದು 10 ವರ್ಷಕ್ಕೆ ಮಾತ್ರ. ಪ್ರತಿ ತಿಂಗಳು ನೀವು 3 ಸಾವಿರ ಹಾಕಿದರೆ 10 ವರ್ಷಕ್ಕೆ ಶೇ. 9.5ರ ಬಡ್ಡಿ ದರದಲ್ಲಿ 6 ಲಕ್ಷ ರೂ. ಸಿಗುತ್ತದೆ. ಇದನ್ನು ಉಳಿದ ಐದು ವರ್ಷಕ್ಕೆ ಕ್ಯಾಶ್‌ ಸರ್ಟಿμಕೆಟ್‌ ಕೊಂಡರೆ 15 ವರ್ಷದ ಹೊತ್ತಿಗೆ ಬಡ್ಡಿ ಎಲ್ಲ ಸೇರಿ ಸುಮಾರು 9 ಲಕ್ಷದ 60 ಸಾವಿರ ರೂ. ಹಣ ಸಿಗುತ್ತದೆ. ಇದರಿಂದ ಮದುವೆಯ ಆರಂಭದ ದಿನಗಳಲ್ಲಿ ಇಂಥ ಪ್ಲಾನ್‌ಗಳನ್ನು ಮಾಡಿದರೆ ನಾಲ್ಕು, ಐದು ವರ್ಷದೊಳಗೆ ನೀವು ಆರ್ಥಿಕವಾಗಿ ಸಬಲರಾಗಬಹುದು. ಇದರ ಜತೆಗೆ ಚಿನ್ನದ ಮೇಲಿನ ಹೂಡಿಕೆಯೂ ಒಳ್ಳೆಯದೆ.ಆದರೆ ಇದು ದೀರ್ಘ‌ವಧಿಯ ಹೂಡಿಕೆಯಾಗಿರಲಿ. ಇತ್ತೀಚಿಗೆ ಅಲ್ಪಾವಧಿಯ ಹೂಡಿಕೆಯಾಗಿ ಚಿನ್ನ ಅಷ್ಟೊಂದು ಯಶಸ್ವಿಯಾಗಿಲ್ಲ. ತತ್‌ ಕ್ಷಣದ ಲಾಭ ನಿರೀಕ್ಷೆ ಇದರಿಂದ ಅಸಾಧ್ಯ. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.