Udayavni Special

ಮನಸೆಳೆಯುತ್ತಿರುವ ಜಂಪ್‌ ಸೂಟ್‌


Team Udayavani, Feb 15, 2019, 7:57 AM IST

15-february-9.jpg

ಫ್ಯಾಶನ್‌ ಲೋಕದಲ್ಲಿ ವಸ್ತ್ರ ವಿನ್ಯಾಸದಲ್ಲಿ ದಿನೇ ದಿನೇ ಹೊಸ ಹೊಸ ಟ್ರೆಂಡ್‌ಗಳು ಲಗ್ಗೆ ಇಡುತ್ತಲೇ ಇರುತ್ತವೆ. ಆದರೆ ಹಳೆ ಕಾಲದವರು ಧರಿಸುತ್ತಿದ್ದ ಧಿರಿಸು ಈಗ ಬದಲಾಗಿ ಹೊಸ ಫ್ಯಾಶನ್‌ ಆಗಿದೆ. ಇದೀಗ ಹುಡುಗಿಯರ ಮನಸೆಳೆದಿರುವ ಜಂಪ್‌ ಸೂಟ್‌ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯಲ್ಲಿ ಲಭ್ಯವಾಗುತ್ತಿದೆ. 

ಇತಿಹಾಸ  
ಎರಡನೇ ಮಹಾಯುದ್ಧದ ಸಮಯದಲ್ಲಿ ಮಹಿಳೆಯರು ಈ ಬಗೆಯ ಡ್ರೆಸ್‌ ಗಳನ್ನು ತೊಡುತ್ತಿದ್ದರು. ಮೊದಲ ಬಾರಿಗೆ ಇದನ್ನು ರೊಸಿ ಎನ್ನುವವರು ಬಳಕೆಗೆ ತಂದಿದ್ದು ಇದನ್ನು ನೋಡಿದ ಬೇರೆ ದೇಶದ ಮಹಿಳೆಯರು ತಲೆಗೊಂದು ಸ್ಕಾರ್ಫ್
ತೊಡಲು ಪ್ರಾರಂಭಿಸಿದರು. ಅನಂತರ 20ನೇ ಶತಮಾನದಲ್ಲಿ ಕೂಡ ಇದರ ಬಳಕೆ ಹೆಚ್ಚಿದ್ದು ಸ್ಕೈಡೈವರ್‌ ಗಳು ಮತ್ತು ಪ್ಯಾರಾ ಶೂಟರ್‌ಗಳಿಗಾಗಿ ಈ ಒನ್‌ಪಿಸ್‌ ಜಂಪ್‌ ಸೂಟ್‌ ಉಡುಗೆಗಳನ್ನು ತಯಾರಿಸಲಾಗುತ್ತಿತ್ತು. ಮುಂದೇ ಅತಿ ಹೆಚ್ಚು ಬಾಳಿಕೆ ಬರುವುದರಿಂದ ಇದೇ ದಿರಿಸು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸ್ತ್ರೀಯರ ಉಡುಪಾಯಿತು.

ಮಕ್ಕಳ ಇಷ್ಟದ ಬಟ್ಟೆ
ಚಿಕ್ಕ ಮಕ್ಕಳಿಗೂ ಬಲು ಇಷ್ಟದ ಉಡುಗೆ. ಚಿಕ್ಕ ಜಂಪ್‌ಸೂಟ್‌ ಹಾಗೂ ಉದ್ದನೆಯ ಸೂಟ್‌ ಗಳು ಲಭ್ಯವಿದ್ದು ಜೀನ್ಸ್‌ ಗಳಲ್ಲಿ, ಹಾಗೂ ತೆಳು ನೈಲಾನ್‌ ಬಟ್ಟೆಗಳಲ್ಲಿ ಬಗೆ ಬಗೆಯ ಡಿಸೈನ್‌ ಗಳಲ್ಲೂ ಸಿಗುತ್ತಿವೆ. ಮಕ್ಕಳಿಗೆ ಬೆಲ್ಟ್
ಬೇಕಾದಲ್ಲಿ ಕಾಟನ್‌, ಪ್ಲಾಸ್ಟಿಕ್‌ ಬೆಲ್ಟ್ ಲಭ್ಯ ವಿದ್ದು ಇಷ್ಟವಾಗುವ ಹಾಗೆ ಮ್ಯಾಚ್‌ ಮಾಡಬಹುದಾಗಿದೆ.

ಸೆಲೆಬ್ರೆಟಿಗಳ ಫೆವರೆಟ್‌
ಸೆಲೆಬ್ರೆಟಿಗಳು ಕೂಡ ಇದನ್ನು ತೊಟ್ಟು ಸಂಭ್ರಮಿಸುತ್ತಿದ್ದಾರೆ. ಶಾಪಿಂಗ್‌, ಶೂಟಿಂಗ್‌ ಹೀಗೆ ವಿವಿಧೆಡೆ ಧರಿಸುತ್ತಿದ್ದಾರೆ. ಅದಲ್ಲದೆ ತುಂಬಾ ಕಂಫ‌ರ್ಟ್‌ ಫೀಲ್‌ ನೀಡುವುದರಿಂದ ಮಾರಾಟದಲ್ಲಿ ಮೂಂಚೂಣಿಯಲ್ಲಿದೆ.

ಹುಡುಗರು ಇಷ್ಟ ಪಡುವ ಸೂಟ್‌
ಹುಡುಗಿಯರು ವಿವಿಧ ಬಗೆಯ ಜಂಪ್‌ ಸೂಟ್‌ ಹಾಕುವಾಗ ಹುಡುಗರಲ್ಲಿಯೂ ಕೂಡ ಟ್ರೆಂಡ್‌ ಶುರುವಾಗಿದ್ದು ಪಾರ್ಟಿ, ಫ‌ಂಕ್ಷನ್‌ ಗಳಿಗೆ ಒಂದೇ ಬಗೆಯಲ್ಲಿ ಬಟ್ಟೆ ತೊಟ್ಟು ಮ್ಯಾಚಿಂಗ್‌ ಮಾಡಿ ಸಂಭ್ರಮಿಸುತ್ತಿದ್ದಾರೆ. ಹುಡುಗರ ಸೂಟ್‌ ನಲ್ಲಿ ಅಷ್ಟು ವೈವಿಧ್ಯತೆ ಕಂಡು ಬರುವುದಿಲ್ಲವಾದರೂ ವೈಟ್‌ ಟೀ ಶರ್ಟ್‌ ಗೆ ಅಥವಾ ಇನ್ನಿತರ ಲೈಟ್‌ ಬಣ್ಣದ ಶರ್ಟ್‌ ಹುಡುಗರಿಗೆ ಚಂದವಾಗಿ ಕಾಣುತ್ತವೆ.

ನಿಮಗಿಷ್ಟವಾಗು ವಂತಹ ಸೂಟ್‌
ಜಂಪ್‌ ಸೂಟ್‌ ಗಳು ಅನೇಕ ಮಾದರಿಯಲ್ಲಿದ್ದು ನಿಮಗಿಷ್ಟವಾಗುವಂತೆ ತೊಡಬಹುದಾಗಿದೆ. ಅರ್ಧ ತೋಳು ಉದ್ದ ತೋಳು, ವಿತೌಟ್‌ ನೆಕ್‌, ವಿತ್‌ ನೆಕ್‌, ಪ್ಲೈನ್  ಜೀನ್ಸ್‌, ಕಲರ್‌ ಜೀನ್ಸ್‌ , ಬಿಗಿ ಯಾದ ಹಾಗೂ ಸಡಿಲವಾದ ಜಂಪ್‌ ಸೂಟ್‌, ನಿಮಗೆ ಬೇಕಾದಲ್ಲಿ ಡಿಸೈನ್‌ಗಳನ್ನು ನೀವು ಹೇಳಿ ಮಾಡಿಸಿಕೊಳ್ಳಬಹುದಾಗಿದೆ. ಜೀನ್ಸ್‌ ಗಳು ಮತ್ತು ಪ್ಲೈನ್  ಟೀ ಶರ್ಟ್‌ ಅಥವಾ ಫ‌ುಲ್‌ ಜೀನ್ಸ್‌ ಗಳು ಕೂಡ ಇದ್ದು ಫ‌ುಲ್‌ ಜೀನ್ಸ್‌ ಗಳಲ್ಲಿ ವಿವಿಧ ಮಾದರಿಯ ಬೆಲ್ಟ್ ಗಳು ಲಭ್ಯ ವಿದ್ದು ನಿಮ್ಮ ದಿರಿಸಿಗೆ ತಕ್ಕಂತೆ ಅದನ್ನು ಧರಿಸಬಹುದಾಗಿದೆ.

ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

bommai and siddaramaiah

ಒಂದೇ ಹೋಟೆಲ್ ನಲ್ಲಿದ್ದರೂ ಪರಸ್ಪರ ಭೇಟಿಯಾಗದ ಸಿಎಂ-ಮಾಜಿ ಸಿಎಂ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

12

ಕ್ಷಯ ಮುಕ್ತ ದೇಶಕ್ಕೆ ಸಹಕಾರ ಅಗತ್ಯ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.