ನವರಾತ್ರಿ ಹಬ್ಬಕ್ಕೆ ಶಾಪಿಂಗ್‌ ರಂಗು


Team Udayavani, Oct 5, 2018, 1:00 PM IST

5-october-11.gif

ಶಾಪಿಂಗ್‌ ಕ್ರೇಜ್‌ಗೆ ಹಬ್ಬವೊಂದು ನೆಪ ಮಾತ್ರ. ಎಂದಿನಂತೆ ನವರಾತ್ರಿ ಹಬ್ಬಕ್ಕೆ ಇನ್ನು ಕೆಲವು ದಿನವಷ್ಟೇ ಬಾಕಿ ಇದೆ. ಇದಕ್ಕೆ ಪೂರಕವಾಗಿ ಮಾಲ್‌, ಕೆಲವು ಮಳಿಗೆಗಳಲ್ಲಿ ಬೃಹತ್‌ ಆಫ‌ರ್‌ ಗಳನ್ನೂ ನೀಡಿರುವುದರಿಂದ ಮಾರುಕಟ್ಟೆ, ಮಾಲ್‌ ಗಳತ್ತ ಎಂದಿಗಿಂತ ತುಸು ಹೆಚ್ಚಾಗಿಯೇ ಜನರು ಆಗಮಿಸುತ್ತಿದ್ದಾರೆ. ಹಬ್ಬದ ನೆಪದಲ್ಲಿ ಬಟ್ಟೆ, ಜುವೆಲ್ಲರಿಗಳಿಗೆ ಕೊಂಚ ಬೇಡಿಕೆ ಹೆಚ್ಚಾಗಿದೆ.

ಹಬ್ಬವೆಂದರೆ ಎಲ್ಲರಿಗೂ ಸಂಭ್ರಮ. ನಾವು ಆಚರಿಸುವ ಪ್ರತಿ ಹಬ್ಬಕ್ಕೂ ಸಾಂಪ್ರದಾಯಿಕ ಟಚ್‌ ಇದ್ದೇ ಇರುತ್ತದೆ. ಹೀಗಾಗಿಯೇ ನಮ್ಮ ಸಂಸ್ಕೃತಿಗೆ ಒಪ್ಪುವಂತಹ ದಿರಿಸು ತೊಟ್ಟು ಹಬ್ಬ ಆಚರಿಸುವುದು ತಲೆ ತಲಾಂತರದಿಂದ ನಡೆದುಕೊಂಡು ಬಂದಿದೆ. ಇನ್ನೈದು ದಿನಗಳಲ್ಲಿ ನವರಾತ್ರಿ ಹಬ್ಬದ ಸಡಗರ. ಈ ಹೊತ್ತಿನಲ್ಲಿ ಬಟ್ಟೆ ಬರೆ, ಜುವೆಲರಿ ಸಹಿತ ಹಬ್ಬಕ್ಕೆಂದೇ ಇತರ ವಸ್ತುಗಳ ಶಾಪಿಂಗ್‌ ಬಹಳ ಜೋರಾಗಿಯೇ ಇದೆ.

ಚೌತಿ, ವರಮಹಾಲಕ್ಷ್ಮೀ ಹಬ್ಬ ಕಳೆದು ನವರಾತ್ರಿ ಆಗಮಿಸಿದೆ. ನವರಾತ್ರಿಗೆ ಒಂಬತ್ತು ಬಣ್ಣದ ಸಾಂಪ್ರದಾಯಿಕ ದಿರಿಸು ತೊಟ್ಟು ಶೋಭಿಸುವುದು ಭಾರತೀಯ ಹೆಂಗಳೆಯರು, ಪುರುಷರು, ಮಕ್ಕಳು, ವೃದ್ಧರು ಸಹಿತ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಬಟ್ಟೆ ಮಳಿಗೆಗಳತ್ತ ಹೆಚ್ಚಿನ ಮಹಿಳೆಯರೊಂದಿಗೆ ಕುಟುಂಬ ಸದಸ್ಯರೂ ಆಗಮಿಸುತ್ತಿದ್ದಾರೆ. 

ಸೀರೆಯಲ್ಲಿನ ಸೊಬಗು 
ಅದೆಷ್ಟೋ ಹೊಸ ರೀತಿಯ ಫ್ಯಾಶನೆಬಲ್‌ ದಿರಿಸುಗಳು ಮಾರುಕಟ್ಟೆ ಪ್ರವೇಶಿಸಿದರೂ, ಸೀರೆಯ ಮೇಲಿರುವ ಮೋಹ ಹೆಣ್ಣು ಮಕ್ಕಳಿಗಿನ್ನೂ ಕಡಿಮೆಯಾಗಿಲ್ಲ. ಯಾವುದೇ ಶುಭ ಸಮಾರಂಭಗಳಿಗೆ ಹೊಸ ಹೊಸ ಮಾದರಿಯ ಬಟ್ಟೆ ತೊಟ್ಟು ಮಿಂಚಿದರೂ, ಹಬ್ಬ ಎಂದಾಕ್ಷಣ ಹೆಂಗಳೆಯರಿಗೆ ನೆನಪಾಗುವುದೇ ಸೀರೆ. ಹಬ್ಬಕ್ಕೆಂದೇ ಹೊಸ ಸೀರೆ ಉಟ್ಟು ಕಂಗೊಳಿಸಬೇಕೆಂಬುದು ಪ್ರತಿ ಹೆಣ್ಣು ಮಕ್ಕಳ ಮನದಾಸೆ. ನವರಾತ್ರಿ ಹಬ್ಬಕ್ಕೂ ರಂಗು ರಂಗಿನ ಸೀರೆ ಹೆಣ್ಣು ಮಕ್ಕಳ ಚಿತ್ತಾಕರ್ಷಿಸುತ್ತಿದೆ.

ವಿಶೇಷವಾಗಿ ರೇಷ್ಮೆ ಸೀರೆ, ಕಾಂಚೀಪುರಂ ಸೀರೆಯಂತಹ ಬಹು ಬೇಡಿಕೆಯ ಸೀರೆಗಳೊಂದಿಗೆ ಸಾಮಾನ್ಯ ಕಾಟನ್‌ ಸೀರೆಗಳಿಗೂ ನವರಾತ್ರಿ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಪ್ರತಿ ಹಬ್ಬಗಳಂತೆ ನವರಾತ್ರಿಗೂ ಸೀರೆ ಮಾರಾಟಗಾರರು ವಿಶೇಷ ರಿಯಾಯಿತಿಗಳನ್ನು ನೀಡಿ ಹೆಣ್ಣು ಮಕ್ಕಳ ಪಾಲಿಗೆ ನವರಾತ್ರಿಯನ್ನು ಸಡಗರವಾಗಿಸುತ್ತಿದ್ದಾರೆ. ಸೀರೆಯೊಂದಿಗೆ ಚೂಡಿದಾರ್‌, ಗಾಗ್ರಾ ಚೋಲಿಯಂತಹ ದಿರಿಸುಗಳನ್ನೂ ತೊಟ್ಟು ನವರಾತ್ರಿಗೆ ದೇವಸ್ಥಾನಗಳಿಗೆ ತೆರಳುವುದು ಅಥವಾ ಆಚರಣೆಗಳಿಗೆ ತೆರಳುವುದು ಸಾಮಾನ್ಯ. ನವರಾತ್ರಿ ಹಬ್ಬಕ್ಕೆ ಇನ್ನೈದು ದಿನಗಳು ಉಳಿದಿದ್ದು, ಖರೀದಿ ಪ್ರಕ್ರಿಯೆಗಳೂ ಬಿರುಸಾಗಿವೆ.

ಪಂಚೆಯಲ್ಲಿ ಸಾಂಪ್ರದಾಯಿಕ ಲುಕ್‌
ಹೆಣ್ಣು ಮಕ್ಕಳಿಗೆ ಸೀರೆಯ ಖರೀದಿಯ ಸಡಗರವಾದರೆ, ಪುರುಷರು ಪಂಚೆ, ಶರ್ಟ್‌ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಬ್ಬಕ್ಕೂ ಜೀನ್ಸ್‌ ತೊಡುವ ಕಾಲವಾದರೂ, ಪಂಚೆ ಉಡುವ ಪದ್ಧತಿ ಇನ್ನೂ ಮರೆಯಾಗಿಲ್ಲ. ಮನೆಯಲ್ಲಿ ನವರಾತ್ರಿ ಹಬ್ಬವನ್ನು ಆಚರಿಸುವವರಿಗೆ ಪಂಚೆಯೇ ಭೂಷಣ. ಹಬ್ಬದ ಪ್ರಮುಖ ದಿನದಂದು ಪಂಚೆ ಮತ್ತು ಬಿಳಿ ಶರ್ಟ್‌ ತೊಟ್ಟು ಪೂಜೆಯಲ್ಲಿ ಪಾಲ್ಗೊಳ್ಳುವುದು ಹಿಂದಿನಿಂದಲೇ ಬಂದ ಪದ್ಧತಿಯೂ ಆಗಿದೆ. ವಿಶೇಷವಾಗಿ ಆಯುಧ ಪೂಜೆಯಂದು ಪಂಚೆ ತೊಟ್ಟು ದೇವಸ್ಥಾನಕ್ಕೆ ತೆರಳಿ ತಮ್ಮ ವಾಹನಾದಿಗಳಿಗೆ ಪೂಜೆ ಮಾಡಿಸಿಕೊಂಡು ಬರುವುದು ಈಗಲೂ ನಡೆದಿದೆ. ಪಂಚೆ ಉಡುವುದು ಸದ್ಯಕ್ಕೆ ಟ್ರೆಂಡ್‌ ಆಗಿಯೂ ಪ್ರಸಿದ್ಧಿಗೊಳ್ಳುತ್ತಿದೆ. ಕುಟುಂಬದ ಸರ್ವರೂ ಒಂದೆಡೆ ಸೇರಿ ಹಬ್ಬ ಆಚರಿಸುವಾಗ ಪಂಚೆ ಉಟ್ಟು ಎಲ್ಲರೂ ಫೋಟೋ ಹೊಡೆಸಿಕೊಳ್ಳುವುದು ಈಗೀಗ ಟ್ರೆಂಡ್‌ ಎನ್ನಬಹುದು.

ಜುವೆಲರಿಗೂ ಬೇಡಿಕೆ
ಹಬ್ಬದ ಸಂದರ್ಭದಲ್ಲಿ ಜುವೆಲರಿ ಕೊಳ್ಳುವುದು ಶುಭ ಸೂಚಕವೆಂದೋ, ರಿಯಾಯಿತಿ ಇರುತ್ತವೆಂದೋ ಚಿನ್ನ ಖರೀದಿಸುವುದು ಸಾಮಾನ್ಯ. ಹಾಗಾಗಿ ಈ ನವರಾತ್ರಿಗೂ ಚಿನ್ನ ಖರೀದಿ ಭರಾಟೆ ಜೋರಾಗಿದೆ. ಚಿನ್ನ, ಬೆಳ್ಳಿಯ ಆಭರಣಕ್ಕೆ ಜುವೆಲರಿ ಶಾಪ್‌ ಗಳು  ವಿವಿಧ ಆಫರ್‌, ಕೊಡುಗೆಗಳನ್ನೂ ಪ್ರಕಟಿಸುತ್ತಿರುವುದರಿಂದ ಚಿನ್ನ ಖರೀದಿಗೂ ಹಬ್ಬದ ರಂಗು ಬಂದಿದೆ. ಕೇವಲ ಚಿನ್ನ, ಬೆಳ್ಳಿಯ ಆಭರಣಗಳಲ್ಲದೆ, ಫ್ಯಾನ್ಸಿ ಜುವೆಲರಿಗಳ ಖರೀದಿಯೂ ಬಿರುಸಾಗಿದೆ. ಇನ್ನು ಹೆಂಗಳೆಯರು ಸೀರೆಗೆ ಮ್ಯಾಚಿಂಗ್‌ ಇರಲೆಂದು ಕಿವಿಯೋಲೆ, ಕೈಬಳೆ, ನೆಕ್ಲೆಸ್‌ಗಳನ್ನು ತೊಡುವುದಕ್ಕೆಂದೇ ವೀಕೆಂಡ್‌ ಶಾಪಿಂಗ್‌ ನಡೆಸುತ್ತಿದ್ದಾರೆ. ಇವುಗಳೊಂದಿಗೆ ಮನೆಗೆ ಬೇಕಾದ ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆಯೂ ಡಿಸ್ಕೌಂಟ್‌, ಎಕ್ಸ್‌ ಚೇಂಜ್‌ ಸಹಿತ ಇತರ ವಿಶೇಷ ಆಫ‌ರ್‌ ಗಳಿರುವುದರಿಂದ ಇವುಗಳಿಗೂ ಬೇಡಿಕೆ ಹೆಚ್ಚಾಗಿವೆ. ಒಟ್ಟಿನಲ್ಲಿ ನಗರಾದಾದ್ಯಂತ ಈಗಲೇ ಹಬ್ಬದ ಸಂಭ್ರಮ ನೆಲೆಯಾಗಿದೆ.

ಮಕ್ಕಳಿಗೂ ಪಂಚೆ
ಮಕ್ಕಳ ಪ್ರಪಂಚಕ್ಕೂ ಸೀರೆ, ಪಂಚೆ ಲಗ್ಗೆ ಇಟ್ಟಿರುವುದರಿಂದ ಹಬ್ಬದ ಈ ಸಂದರ್ಭದಲ್ಲಿ
ಬೇಡಿಕೆಯೂ ಹೆಚ್ಚಾಗಿದೆ. ಬಿಳಿ ಬಣ್ಣದ ಶರ್ಟ್‌ ಮತ್ತು ಶಾಲ್‌ ಜತೆಗೆ ಈ ಪಂಚೆ ಮಾದರಿಯ ಕಚ್ಚೆ ಹಾಕುವುದು ಮಕ್ಕಳಲ್ಲಿ ಫ್ಯಾಶನ್‌ ಆಗಿದೆ. ಈ ನವರಾತ್ರಿಗೂ ಮಕ್ಕಳ ಪಂಚೆ ಮಾರುಕಟ್ಟೆಯಲ್ಲಿದ್ದು, ಹೆತ್ತವರು ಹಬ್ಬಕ್ಕೆಂದೇ ಹೆಚ್ಚಾಗಿ ಇದನ್ನು ಖರೀದಿಸುತ್ತಿದ್ದಾರೆ.

ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

aravind

ಗೋವಾ ಚುನಾವಣೆಗೂ ಸಿಎಂ ಅಭ್ಯರ್ಥಿ ಆಯ್ಕೆ ಮಾಡಿದ ಆಪ್

1-aseqwe

ಲಾಕ್ ಡೌನ್, ಕರ್ಫ್ಯೂ ತೆಗೆಯಿರಿ: ಸರಕಾರದ ವಿರುದ್ಧವೇ ಸಿಂಹ ಘರ್ಜನೆ !

pratap

ಗುಣಮಟ್ಟದ ಆಧಾರದಲ್ಲಿ ಸ್ತಬ್ಧ ಚಿತ್ರ ಆಯ್ಕೆ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು

1-sasa

ತಮಿಳುನಾಡಿನ ಎಲ್ಲ ಜಿಲ್ಲೆಗಳಲ್ಲಿ ಕೇಂದ್ರ ತಿರಸ್ಕೃತ ಟ್ಯಾಬ್ಲೋ ಪ್ರದರ್ಶನ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

cm-bomm

ಹನ್ನೊಂದು ದಿನಗಳ ಕಾಲ ಮನೆಯಲ್ಲಿ ಕುಳಿತ ಉದಾಹರಣೆಯೇ ಇರಲಿಲ್ಲ: ಸಿಎಂ ಬೊಮ್ಮಾಯಿ

ಬೆಳಗಾವಿ ಜಿಲ್ಲೆಯ 57 ಪೊಲೀಸ್ ಪೇದೆಗಳಿಗೆ ಪಾಸಿಟಿವ್

ಬೆಳಗಾವಿ ಜಿಲ್ಲೆಯ 57 ಪೊಲೀಸ್ ಪೇದೆಗಳಿಗೆ ಪಾಸಿಟಿವ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

aravind

ಗೋವಾ ಚುನಾವಣೆಗೂ ಸಿಎಂ ಅಭ್ಯರ್ಥಿ ಆಯ್ಕೆ ಮಾಡಿದ ಆಪ್

ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹೆಚ್ಚಳ

ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹೆಚ್ಚಳ

ಹಗಲು ವೇಳೆ ಸಮರ್ಪಕ ತ್ರಿಫೇಸ್‌ ವಿದ್ಯುತ್‌ ನೀಡಿ

ಹಗಲು ವೇಳೆ ಸಮರ್ಪಕ ತ್ರಿಫೇಸ್‌ ವಿದ್ಯುತ್‌ ನೀಡಿ

ರೇಷ್ಮೆನಗರಿಯಲ್ಲಿ ಕೊರೊನಾ ನರ್ತನ

ರೇಷ್ಮೆನಗರಿಯಲ್ಲಿ ಕೊರೊನಾ ನರ್ತನ

1-aseqwe

ಲಾಕ್ ಡೌನ್, ಕರ್ಫ್ಯೂ ತೆಗೆಯಿರಿ: ಸರಕಾರದ ವಿರುದ್ಧವೇ ಸಿಂಹ ಘರ್ಜನೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.