ಹಳೆ ಅಡಿಕೆಗೆ ಅಲ್ಪ ಮುನ್ನಡೆ

ಕೃಷಿ ಮಾರುಕಟ್ಟೆ

Team Udayavani, Jul 21, 2019, 5:31 AM IST

ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿರುವ ಅಡಿಕೆ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದ್ದು, ಈ ವಾರ ಹಳೆ ಅಡಿಕೆ ಕೆಜಿಗೆ 295 ರೂ.ವರೆಗೂ ಮಾರಾಟವಾಗಿತ್ತು. ಹಿಂದಿನ ವಾರ ಅದರ ಬೆಲೆ ಗರಿಷ್ಠ 280-85 ರೂ.ಗಳ ಧಾರಣೆಯಲ್ಲಿತ್ತು. ಆದರೆ ಹೊಸ ಅಡಿಕೆ ಈ ವಾರ ಸ್ಥಿರತೆಯನ್ನು ಕಾಯ್ದುಕೊಂಡು 240 ರೂ.ಗಳಲ್ಲಿಯೇ ಮುಂದುವರಿದಿದೆ.

ಹಳೆ ಅಡಿಕೆಯ ಧಾರಣೆಯಲ್ಲಿ ಅಲ್ಪ ಮುನ್ನಡೆ ಸಾಧಿಸಿದರೂ, ಬೆಳೆಗಾರರು ಇನ್ನೂ ಹೆಚ್ಚಿನ ಬೆಲೆ ನಿರೀಕ್ಷೆಯಲ್ಲಿರುವ ಕಾರಣದಿಂದ ಹೆಚ್ಚಿನ ಅಡಿಕೆ ಮಾರುಕಟ್ಟೆ ಪ್ರವೇಶಿಸಿಲ್ಲ. ಡಬಲ್ ಚೋಲು 310 ರೂ.ವರೆಗೆ ಖರೀದಿ ನಡೆದಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿದೆ. ಉಳಿದಂತೆ ಪಠೊರಾ 100 ರೂ.ನಿಂದ 115, ಉಳ್ಳಿಗಡ್ಡೆ- 89 ರೂ.ನಿಂದ 90, ಕರಿಗೋಟು- 80 ರೂ.ನಿಂದ 81 ರೂ.ಗಳಿಗೆ ಖರೀದಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇವುಗಳ ಬೆಲೆಯಲ್ಲಿ ಕೊಂಚ ಕುಸಿತ ಕಂಡುಬಂದಿದೆ.

ಕಾಳುಮೆಣಸು ಸ್ಥಿರ

ಕಾಳು ಮೆಣಸು ಧಾರಣೆಯೂ ಕಳೆದ ಎರಡು ವಾರಗಳಿಂದ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಕೆಜಿಗೆ 320 ರೂ.ಗಳ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಹೀಗಾಗಿ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರರಿಗೆ ನಿರಾಸೆಯಾಗಿದೆ. ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೆ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರಿದಿದೆ.

ತೆಂಗು ಧಾರಣೆ ಸಾಧಾರಣ

ತೆಂಗಿನ ಕಾಯಿ ಧಾರಣೆ ಸ್ಥಿರತೆ ಕಾಯ್ದುಕೊಂಡಿದ್ದು, ಹೊಸ ತೆಂಗಿನಕಾಯಿ 24-25 ರೂ., ಹಳೆಯ ತೆಂಗಿನಕಾಯಿ 25-26 ರೂ.ತನಕ ಖರೀದಿಯಾಗಿದೆ. ಆದರೆ ದೊಡ್ಡ ಗಾತ್ರದ ತೆಂಗಿನಕಾಯಿ 30-31ರೂ.ಗಳಿಗೆ ಖರೀದಿಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಪ್ರಸ್ತುತ ದಿನಗಳಲ್ಲಿ ಬಹುತೇಕ ಎಲ್ಲಾ ಕೃಷಿ ಉತ್ಪನ್ನಗಳು ಕೂಡ ಮಾರುಕಟ್ಟೆ ಸ್ಥಿರತೆಯ ಮೂಲಕ ಸಾಗುತ್ತಿದ್ದು, ಒಂದೆರಡು ರೂ.ಗಳ ವ್ಯತ್ಯಾಸಗಳನ್ನು ಹೊರತು ಪಡಿಸಿದರೆ ಉಳಿದಂತೆ ಯಥಾಸ್ಥಿತಿಯಲ್ಲಿ ಸಾಗುತ್ತಿದೆ. ಗರಿಷ್ಠ ಧಾರಣೆ ತಲುಪಿದರೂ ಅದು ಎಲ್ಲಾ ಮಾರುಕಟ್ಟೆಗಳಲ್ಲಿ ಬೆಳೆಗಾರರಿಗೆ ಲಭ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

  • ಈ ವಾರವೂ ಹೊಸ ಅಡಿಕೆ 5 ರೂ. ಹೆಚ್ಚಳಗೊಂಡು 210-245 ರೂ. ತನಕ ಖರೀದಿಯಾಗಿದೆ. ಹಳೆಯ ಅಡಿಕೆ (ಸಿಂಗಲ್‌ ಚೋಲ್‌)260 -297 ರೂ. ತನಕ ಖರೀದಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ...

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಈಗಾಗಲೇ ಚಳಿಗಾಲ ಆರಂಭಗೊಂಡಿದ್ದು, ಅದಕ್ಕೆ ತಕ್ಕಂತೆಯೇ ಬಟ್ಟೆಗಳ ಪ್ಯಾಶನ್‌ ಕೂಡ ಬದಲಾಗುತ್ತಿದೆ. ಕೊರೆವ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಲು ಯಾವ ರೀತಿಯ ಬಟ್ಟೆ...

  • ವಾಹನಗಳ ವ್ಯಾಪಕ ಬಳಕೆ ಬಳಿಕ ಪಿಕಪ್‌ ಕಡಿಮೆಯಾಗಿದೆ, ಆಗಾಗ್ಗೆ ನಿಲ್ಲುತ್ತದೆ, ಮೈಲೇಜ್‌ ಕಡಿಮೆ, ಹೆಚ್ಚು ಹೊಗೆ ಕಾರುವ ಸಮಸ್ಯೆಗಳು ನಿಮ್ಮ ಅನುಭವಕ್ಕೆ ಬರಬಹುದು....

ಹೊಸ ಸೇರ್ಪಡೆ