ಕಾಲಿನ ಅಂದ ಹೆಚ್ಚಿಸುವ ಸಿಂಪಲ್‌ ಆ್ಯಂಕ್ಲೆಟ್‌

Team Udayavani, Nov 1, 2019, 5:05 AM IST

ಶುಭ ಸಮಾರಂಭಗಳಲ್ಲಿ, ಮದುವೆ, ವಿಶೇಷ ಕಾರ್ಯಕ್ರಮಗಳಲ್ಲಿ ಹೆಂಗಸರು ತಾವು ಅಂದ- ಚೆಂದವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಬಯಸುತ್ತಾರೆ. ಅದಕ್ಕಾಗಿ ಪ್ರಸ್ತುತವಾಗಿ ವಿಶೇಷತೆಯಿರುವ ಕಡೆ ಹೆಚ್ಚು ಗಮನಹರಿಸುತ್ತಾರೆ. ಹೀಗಾಗಿ ಇಂದು ಮಾರುಕಟ್ಟೆಯಲ್ಲಿ ಕೂಡ ಹಲವಾರು ವೈವಿಧ್ಯಮಯವಾದ ಸೌಂದರ್ಯ ಹೆಚ್ಚಿಸುವ ಆಭರಣಗಳು, ಒಡವೆಗಳು, ಸೀರೆ, ಡ್ರೆಸ್‌ಗಳನ್ನು ನೋಡಬಹುದು. ಏತನ್ಮಧ್ಯೆ ಆ್ಯಂಕ್ಲೆಟ್‌(ಕಾಲ್ಗೆಜ್ಜೆ) ಕೂಡ ಹೆಂಗಸರಿಗೆ ಹೆಚ್ಚು ಇಷ್ಟವಾಗುವ ಆಭರಣವಾಗಿದೆ.

ಆ್ಯಂಕ್ಲೆಟ್‌ ಅಥವಾ ಕಾಲ್ಗೆಜ್ಜೆ ಇದು ಅಪ್ಪಟ ದೇಶಿರೂಪದ ಆಭರಣವಾಗಿದೆ. ಆ್ಯಂಕ್ಲೆಟ್‌ ತಯಾರಿಕೆಯಲ್ಲಿ ಕಲಾವಿದನ ಕೈಚಳಕವೇ ಮುಖ್ಯವಾಗುತ್ತದೆ. ಸದ್ಯದಲ್ಲಿ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿ ಈ ಕಾಲ್ಗೆಜ್ಜೆ ಬಹುಬೇಡಿಕೆಯಿದೆ. ಹಾಗಾಗಿ ಈ ಕಾಲ್ಗೆಜ್ಜೆಯ ವೈಶಿಷ್ಟ್ಯದ ಬಗ್ಗೆ ತಿಳಿಯುವುದು ಕೂಡ ಅಷ್ಟೇ ಮುಖ್ಯ.

ಈ ಸಿಂಗಲ್‌ ಆ್ಯಂಕ್ಲೆಟ್‌ ಹೆಸರೇ ಸೂಚಿಸುವಂತೆ ಒಂದೇ ಕಾಲಿಗೆ ಧರಿಸಬಹುದಾದ ಸಿಂಪಲ್‌ ಮತ್ತು ಸ್ಟೈಲಿಶ್‌ ಗೆಜ್ಜೆಯಾಗಿದೆ. ಸೂರ್ಯ, ಚಂದ್ರ, ಹೂ, ಎಲೆ, ಚಿಟ್ಟೆ, ಡಾಲ್ಫಿನ್‌ ಹೀಗೆ ನಾನಾಕೃತಿಯಲ್ಲಿ ಈ ಗೆಜ್ಜೆ ರೂಪ ಪಡೆಯುತ್ತದೆ. ಚಿನ್ನ, ಬೆಳ್ಳಿ, ತಾಮ್ರ, ನಿಕ್ಕೆಲ್‌, ಹಿತ್ತಾಳೆ ಅಷ್ಟೇ ಯಾಕೆ ಬರೀ ದಾರದಲ್ಲೂ ಈ ಕಾಲ್ಗೆಜ್ಜೆ ಲಭ್ಯವಾಗುತ್ತದೆ. ಇದನ್ನು ಯಾವುದೇ ವಯಸ್ಸಿನ ಮಿತಿಯಿಲ್ಲದೇ ಧರಿಸುತ್ತಾರೆ.

ವೈವಿಧ್ಯಮಯವಾದ ಆ್ಯಂಕ್ಲೆಟ್‌
ಯುವತಿಯರು ಸಿಂಗಲ್‌ ಆ್ಯಂಕ್ಲೆಟ್‌ನ್ನು ಜೀನ್ಸ್‌ ಪ್ಯಾಂಟ್‌, ಲೆಹಂಗಾ, ಸಿಂಪಲ್‌ ಕುರ್ತಿ, ಶಾರ್ಟ್‌ ಪ್ಯಾಂಟ್‌ನ ಜತೆ ಇದನ್ನು ಧರಿಸುತ್ತಾರೆ. ಸಿಂಗಲ್‌ ಆ್ಯಂಕ್ಲೆಟ್‌ನ ಇನ್ನೊಂದು ವೈಶಿಷ್ಟéಎಂದರೆ ಇದರಲ್ಲೂ ನಾನಾ ಪ್ರಕಾರಗಳನ್ನು ಕಾಣಬಹುದು. ನಮ್ಮ ಪ್ರೀತಿ ಪಾತ್ರರಾದವರ ಹೆಸರನ್ನು ಹೊಂದಿಕೊಂಡಂತೆ (ಲವ್‌, ಅಮ್ಮ) ಎಂಬ ಅಕ್ಷರಗಳ ಲೆಟರ್‌ ಆ್ಯಂಕ್ಲೆಟ್‌, ಹಗುರಭಾರದ ಸ್ಟೈಲಿಶ್‌ ಆ್ಯಂಡ್‌ ಸಿಂಪಲ್‌ ಲುಕ್‌ ನೀಡುವ ಚಾರ್ಮ್ ಆ್ಯಂಕ್ಲೆಟ್‌, ಕಲರ್‌ಫ‌ುಲ್‌ ಮಣಿಗಳನ್ನು ಮನೆಯಲ್ಲಿಯೇ ಪೋಣಿಸಲು ಸಾಧ್ಯವಿರುವ ಸ್ಟ್ರಿಂಗ್‌ ಆ್ಯಂಕ್ಲೆಟ್‌, ಹವಳ ಮಣಿಗಳಿಂದಲೇ ಕಾಲಿಗೆ ತಂಪಿನ ಅನುಭವ ನೀಡುವ ಕ್ರಿಸ್ಟೆಲ್‌ ಆ್ಯಂಕ್ಲೆಟ್‌ ಹೀಗೆ ನಾನಾ ಪ್ರಕಾರಗಳಲ್ಲಿ ಸಿಂಗಲ್‌ ಆ್ಯಂಕ್ಲೇಟ್‌ನ್ನು ಕಾಣಬಹುದು.

ಜೀನ್ಸ್‌ ಪ್ಯಾಂಟ್‌ ಜತೆ ಅಥವಾ ಸಿಂಪಲ್‌ ಕುರ್ತಿಯೊಂದಿಗೆ ಸಿಂಗಲ್‌ ಆ್ಯಂಕ್ಲೆಟ್‌ ಅನ್ನು ಧರಿಸಲಿಚ್ಛಿಸುವವರು ಕಾಲ ಬೆರಳಿಗೆ ವಾಟರ್‌ ಕಲರ್‌ ನೆಲ್‌ ಪಾಲಿಶ್‌(ನೆಲ್‌ಪಾಲಿಶ್‌ ಶೈನರ್‌) ಹಾಕಬೇಕು. ಇದರೊಂದಿಗೆ ಸಿಂಪಲ್‌ ಚಪ್ಪಲ್‌ನ್ನು ಧರಿಸಿದರೆ ಆ್ಯಂಕ್ಲೆಟ್‌ ಗ್ರ್ಯಾಂಡ್‌ ಲುಕ್‌ ನೀಡಲು ಉಪಯುಕ್ತವಾಗಿದೆ. ಸಾಮಾನ್ಯವಾಗಿ ಸಿಂಪಲ್‌ ಸೀರೆ ಉಡುವವರು ಸರಳವಾಗಿ ಕಾಣಲು ಇಚ್ಛಿಸುವವರು ಇಂತಹ ಕಾಲ್ಗೆಜ್ಜೆಯ ಮೊರೆ ಹೋಗುತ್ತಾರೆ. ಅದರಂತೆ ಸಾಂಪ್ರದಾಯಿಕ ಜರತಾರಿ ಸೀರೆ ಮತ್ತು ಲೆಹಂಗಾಗಳಿಗೆ ಸಿಂಗಲ್‌ ಕಾಲ್ಗೆಜ್ಜೆ ಅಷ್ಟಾಗಿ ಹೊಂದಾಣಿಕೆಯಾಗಲಾರದು.

ನಮ್ಮ ಸಂಪ್ರದಾಯದ ಪ್ರತೀಕದಂತಿರುವ ಕಾಲ್ಗೆಜ್ಜೆ ಆಧುನಿಕ ಕಾಲಘಟ್ಟದಲ್ಲಿ ಇನ್ನೆಲ್ಲೋ ಮರೆಯಾಯಿತು ಅಂದುಕೊಳ್ಳುವಾಗಲೇ ವಿನೂತನ ರೂಪದೊಂದಿಗೆ ಮತ್ತೆ ನಮ್ಮನ್ನು ಅದರತ್ತ ಆಕರ್ಷಿಸುವಲ್ಲಿ ಕ್ರಿಯಾಶೀಲತೆಯ ಅಂಶಗಳು ಅಡಗಿದೆ ಅಂದರೂ ತಪ್ಪಾಗಲಾರದು.

 ರಾಧಿಕಾ, ಕುಂದಾಪುರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು...

  • ಜೀವನ ಎನ್ನುವುದು ಅನಿಶ್ಚಿತತೆಗಳ ಆಗರ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದು ಖುಷಿ ಆಗಿರಲಿ, ದುಃಖ ಆಗಿರಲಿ ಮಡುಗಟ್ಟಿರುವುದಿಲ್ಲ. ದಿನ ಉರುಳಿದಂತೆ ಅದು ಬದಲಾಗುತ್ತದೆ....

  • ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ....

  • ಈ ಜಗತ್ತಿನಲ್ಲಿ ಹೊಸತು ಯಾವುದು? ಏನೂ ಇಲ್ಲ. ಹಾಗಾದರೆ ಹಳತು ಯಾವುದು? ಅದೂ ಇಲ್ಲ. ಎಲ್ಲವೂ ಯಾವಾಗಲೂ ಇದೆ, ಯಾವಾಗಲೂ ಇದ್ದೇ ಇರುತ್ತದೆ. ಶಿರಡಿ ಶ್ರೀ ಸಾಯಿಬಾಬಾ ಪವಾಡ...

  • ನನ್ನ ಒತ್ತಡ ಕಳೆದುಕೊಳ್ಳುವ ತಂತ್ರವೆಂದರೆ ಸಮುದ್ರದ ಎದುರು ಹೋಗಿ ಕುಳಿತುಕೊಳ್ಳುವುದು. ಸದಾ ಸಾಗರವನ್ನು ಕಂಡರೆ ನನ್ನೆಲ್ಲ ದುಃಖಗಳು, ಕಷ್ಟಗಳು ಕರಗಿ ಹೋಗುತ್ತವೆ....

ಹೊಸ ಸೇರ್ಪಡೆ