ಚಾರಣಿಗರ ಮನಸೂರೆ ಗೊಳಿಸುವ ಸ್ಕಂದಗಿರಿ

Team Udayavani, Jan 16, 2020, 5:13 AM IST

ಚಾರಣಿಗರ ಮನಸೂರೆಗೊಳಿಸುವ ಸ್ಕಂದಗಿರಿ ಬೆಟ್ಟಕೈ ಚಾಚಿದಷ್ಟು ಸಮೀಪದಿ ಸಿಗುವ ಬೆಳ್ಳಿ ಮೋಡ. ಅದರ ಮೇಲೆ ನಾಜೂ ಕಾಗಿ ಹೆಜ್ಜೆಯಿಟ್ಟು ಮುಂದೆ ಸಾಗುವ ಹಂಬಲ. ಮನದುಂಬುವಷ್ಟು ಮಂಜು ಹಿಡಿದು ಮನೆಗೆ ಕದ್ದು ಮುಚ್ಚಿ ಒಯ್ಯುವ ಹುಚ್ಚು, ಅಲ್ಲಿನ ಸೌಂದರ್ಯ ರಾಶಿಯಲ್ಲಿ ಕಿಂಚಿತ್ತಾ ದರೂ ನನ್ನದಾಗ ಬಾರದೇ ಎಂಬ ಆಸೆ. ಒಟ್ಟಾರೆ ಸ್ಕಂದಗಿರಿ ಬೆಟ್ಟ ಬದುಕಿನಲ್ಲಿ ಹೊಸ ಉತ್ಸಾಹ ತುಂಬುವ ಚಾರಣ ತಾಣ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರ ಗ್ರಾಮದ ಸಮೀಪವಿರುವ ಈ ಬೆಟ್ಟ ಮಂಜಿನ ಹೊದಿಕೆ ಹೊದ್ದು ಚಾರಣಿಗರ ಮನಸೂರೆಗೊಳಿಸುತ್ತದೆ. ವರ್ಷ ವಿಡೀ ಹೋಗಬಹುದಾಗಿದ್ದರೂ, ಚಳಿಗಾಲದಲ್ಲೇ ಬರುವವರ ಸಂಖ್ಯೆ ಹೆಚ್ಚು.ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 1530 ಮೀಟರ್‌ ಎತ್ತರದಲ್ಲಿರುವ ಸ್ಕಂದಗಿರಿ ಬೆಟ್ಟವನ್ನು ತಲುಪಲು ಕನಿಷ್ಠ 2 ಗಂಟೆ ಬೇಕು.
ಕಾಲುದಾರಿಯುದ್ದಕ್ಕೂ ಎರಡು ಬದಿಗಳಲ್ಲೂ ಗಿಡಗಂಟಿಗಳಿದ್ದು, ಅಲ್ಲಲ್ಲಿ ಸಿಗುವ ಬೃಹತ್‌ ಬಂಡೆಗಲ್ಲುಗಳ ಮೇಲೆ ಆಯಾಸವೆನ್ನಿಸಿದಾಗ ವಿರಮಿಸಬಹುದು.

ಚಾರಣಿಗರಿಗೆ ದಾರಿಯುದ್ದಕ್ಕೂ ಕಂಡು ಬರುವ ಐತಿಹಾಸಿಕ ಸ್ಥಳ, ದೇವಾಲ ಯಗಳು, ಸೂರ್ಯೋ ದಯ, ಸೂರ್ಯಾ ಸ್ತಮಾನ, , ಪಕ್ಷಿ ವೈವಿಧ್ಯ ಕುರಿತು ಮಾರ್ಗ ದರ್ಶಕರು ಮಾಹಿತಿ ನೀಡುತ್ತಾರೆ. ಚಾರಣಕ್ಕೆ ಬೆಳಗ್ಗೆ 5 ರಿಂದ ಸಂಜೆ 5ರ ವರೆಗೆ ಅವಕಾಶವಿದ್ದು, ಚಾರಣಿಗರನ್ನು 10 ಜನರಂತೆ ತಂಡಗಳನ್ನಾಗಿ ವಿಂಗಡಿಸ ಲಾಗುತ್ತದೆ. ಪ್ರತಿ ತಂಡಕ್ಕೆ ಒಬ್ಬ ಅನುಭವಿ ಮಾರ್ಗದರ್ಶಕನನ್ನು ನಿಯೋಜಿಸಲಾಗುತ್ತದೆ. ಇನ್ನೂ ಚೆಂದ ನೆಯ ಸೂಯೋ ìದಯ ನೋಡಲೆಂದು ಬಹ ಳಷ್ಟು ಮಂದಿ ಬೆಳಗ್ಗಿನ ಜಾವ 3ಕ್ಕೆ ಈ ಬೆಟ್ಟವನ್ನೇರಲು ತೊಡಗುತ್ತಾರೆ.

ಹೋಗುವುದು ಹೇಗೆ?
ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಈ ತಾಣ ಒಂದು ದಿನದ ಚಾರಣಕ್ಕೆ ಸೂಕ್ತ. ಚಿಕ್ಕಬಳ್ಳಾಪುರದಿಂದ 3ಕಿ.ಮೀ ದೂರದಲ್ಲಿರುವ ಕಳವಾರ ಗ್ರಾಮದ ಮೂಲಕ ಪಾಪಾಗ್ನಿ ಮಠದಿಂದ -ಸ್ಕಂದಗಿರಿ ಬೆಟ್ಟ ತಲುಪಬಹುದು.

ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆ
ಸ್ಕಂದಗಿರಿಗೆ ಬರುವ ಚಾರಣಿಗರಿಗೆ ಮುಂಗಡವಾಗಿ ಟಿಕೆಟ್‌ ಬುಕ್‌ ಮಾಡುವ ವ್ಯವಸ್ಥೆ ಇದ್ದು, ಪ್ರವಾಸೋದ್ಯಮ ಇಲಾಖೆಯ ಜಾಲತಾಣದ ಮೂಲಕ ಆನ್‌ಲೈನ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಈ ಮೊದಲು ಪ್ರತಿ ಒಬ್ಬ ರಿಗೆ 450 ರೂ. ಶುಲ್ಕ ನಿಗದಿಪಡಿಸಲಾಗಿತ್ತು, ಸದ್ಯ 250 ರೂಪಾಯಿಗೆ ಇಳಿಸಲಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಇತ್ತೀಚಿನ ಹವಮಾನ ತೀರಾ ವಿಚಿತ್ರವೆನ್ನಬಹುದು. ಚಳಿಗಾಲವಾಗಿದ್ದರೂ ಸುಡುಬಿಸಿಲು ನೆತ್ತಿಯ ಮೇಲೆ ಮಂಜು ಹನಿಯುವ ಬದಲು ಬೆವರಲ್ಲಿಯೇ ಸ್ನಾನ ಮಾಡಿಸುವಂತಿರುತ್ತದೆ....

  • ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೈಯಲ್ಲೊಂದು ಸ್ಮಾರ್ಟ್‌ಫೋನ್‌, ಮಡಿಲಲ್ಲೊಂದು ಲ್ಯಾಪ್‌ಟಾಪ್‌ ಇರಲೇಬೇಕು. ಈಗಿನ ಕೆಲಸ ಕಾರ್ಯಗಳೆಲ್ಲವೂ ಈ ಎರಡರಲ್ಲೇ ನಿಭಾಯಿಸಲ್ಪಡುವುದರಿಂದ...

  • ಕಾರು ನಿಲ್ಲಿಸಿ ಕೆಲವು ದಿನ ಆಯ್ತು. ಆದ್ರೆ ಈಗ ಸ್ಟಾರ್ಟ್‌ ಮಾಡಲು ನೋಡ್ತಿದ್ರೆ ಜಪ್ಪಯ್ಯ ಅಂದ್ರೂ ಸ್ಟಾರ್ಟ್‌ ಆಗ್ತಿಲ್ಲ ಎನ್ನುವ ಸಮಸ್ಯೆಯನ್ನು ನೀವು ಎದುರಿಸಿರಬಹುದು....

  • ನಂಬಿಗಸ್ತ ಆಟಗಾರ ಎಂದು ಕಣ್ಮುಚ್ಚಿಕೊಂಡು ಹೇಳಬಹುದಾಗಿದ್ದ ಕ್ರಿಕೆಟಿಗರ ಪೈಕಿ ಹರ್ಭಜನ್‌ ಸಿಂಗ್‌ ಕೂಡ ಒಬ್ಬರು. ಅಪಾರ ಪ್ರತಿಭಾವಂತರು ಎಂಬುದು ಪ್ಲಸ್‌ ಪಾಯಿಂಟ್‌....

  • ನವದಂಪತಿ ಪರಸ್ಪರ ಅರಿಯಲು, ರೊಮ್ಯಾಂಟಿಕ್‌ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲು ಹನಿಮೂನ್‌ ಗೆ ತೆರಳುತ್ತಾರೆ. ಏಕಾಂತದಿಂದ ಜೋಡಿ ಹಕ್ಕಿಗಳಾಗಿ ವಿಹರಿಸುವ...

ಹೊಸ ಸೇರ್ಪಡೆ