ಸ್ಮಾರ್ಟ್ ಯುಗದ ಸ್ಮಾರ್ಟ್‌ ಫ್ಯಾನ್‌

Team Udayavani, Nov 15, 2019, 4:57 AM IST

ಮಾರುಕಟ್ಟೆಯಲ್ಲಿ ಎಲ್ಲವೂ ಸ್ಮಾರ್ಟ್‌ಗಳಾಗಿರುವ ಕಾಲದಲ್ಲಿ ಈಗ ಬೀಸುವ ಫ್ಯಾನ್‌ಗಳು ಕೂಡ ಸ್ಮಾರ್ಟ್‌ ಆಗುತ್ತಿವೆ. ಬೇಸಗೆ ಕಾಲವು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಫ್ಯಾನ್‌ ಖರೀದಿಗೆ ಜನರು ಆಸಕ್ತಿ ವಹಿಸುತ್ತಿದ್ದಾರೆ. ಸ್ಮಾರ್ಟ್‌ ಫ್ಯಾನ್‌ಗಳ ಬೇಡಿಕೆ, ಹೊಸತನಗಳ ಬಗ್ಗೆ ಮಾಹಿತಿ ಇಲ್ಲಿದೆ.

ನಿತ್ಯ ನಾವು ಬಳಸುವ ಫೋನ್‌, ವಾಚ್‌, ಟಿವಿ, ಬಲ್ಬ್, ಸ್ಪೀಕರ್‌ ಸಹಿತ ಪ್ರತಿಯೊಂದು ವಸ್ತುಗಳೂ ಸ್ಮಾರ್ಟ್‌ ಆಗುತ್ತಿವೆ. ಇದರಿಂದ ಡಿಜಿಟಲ್‌ ಕ್ರಾಂತಿಯಾಗಿದ್ದು ಹೊಸ ಬದಲಾವಣೆಯತ್ತ ಜಗತ್ತು ತೆರೆದುಕೊಂಡಿದೆ. ಏತನ್ಮಧ್ಯೆ ಎಲ್ಲ ವಸ್ತು , ಸರಕುಗಳು ಸ್ಮಾರ್ಟ್‌ ಆಗುವ ದಿಸೆಯಲ್ಲಿರಬೇಕಾದರೆ, ಈ ಮಾರುಕಟ್ಟೆಯಲ್ಲಿ ಫ್ಯಾನ್‌ಗಳು ಕೂಡ ಸ್ಮಾರ್ಟ್‌ ಆಗಲು ಆಣಿಯಾಗಿ ನಿಂತಿವೆ.

ಬೇಸಗೆ ಕಾಲ ಆರಂಭವಾಗಿದ್ದು, ಫ್ಯಾನ್‌ ಬಳಸದೆ ಕೂರಲು ಸಾಧ್ಯವಾಗುತ್ತಿಲ್ಲ. ಸುತ್ತ ನೋಡಿದರೆ ಅದೆಷ್ಟು ಚಿಕ್ಕ ಮನೆ, ಅಂಗಡಿಗಳಲ್ಲಿ ಎಸಿ (ಹವಾ ನಿಯಂತ್ರಕ) ಅಳವಡಿಸಲಾಗಿದೆ. ಯಾಕೆಂದರೆ ಸೂರ್ಯನ ತಾಪ ಅಷ್ಟಿದೆ. ಬಿಸಿಲಿನ ಬೇಗೆಯನ್ನು ಸಹಿಸಲಾಗದವರು ಎಸಿಯ ಮೊರೆ ಹೋಗುತ್ತಿದ್ದಾರೆ. ಆದರೆ ಎಲ್ಲ ಮನೆಗಳಲ್ಲೂ ಎಸಿ ಅಳವಡಿಸಲು ಸಾಧ್ಯವಿಲ್ಲ. ಅದಕ್ಕೆ ಪರ್ಯಾಯವಾಗಿ ಸ್ಮಾರ್ಟ್‌ ಫ್ಯಾನ್‌ಗಳು ಬಂದರೆ ಯಾರಿಗೆ ತಾನೆ ಖುಷಿಯಾಗುವುದಿಲ್ಲ. ಸಾಧಾರಣ ಫ್ಯಾನ್‌ಗಳಿಗಿಂತ ಕೊಂಚ ದರ ಏರಿಕೆಯಾದರೂ ಆರಾಮಾಗಿ ಇರಬಹುದು ಎನ್ನುವ ಕಾರಣಕ್ಕಾಗಿ ಈಗ ಎಲ್ಲರ ಚಿತ್ತ ಸ್ಮಾರ್ಟ್‌ಫ್ಯಾನ್‌ ನತ್ತ ಹೋಗಿದೆ.

ಸ್ಮಾರ್ಟ್‌ ಫ್ಯಾನ್‌ಗಳ ಹವಾ
ಸಾಧಾರಣ ಫ್ಯಾನ್‌ಗಳಿಂತ ಸ್ಮಾರ್ಟ್‌ಫೋನ್‌ಗಳು ಕೊಂಚ ವಿಭಿನ್ನ. ಇತರ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ವಸ್ತುಗಳಂತೆಯೇ ಈ ಫ್ಯಾನ್‌ ಕಾರ್ಯಚರಿಸಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಖಾಸಗಿ ಕಂಪೆನಿಯೊಂದರ ಫ್ಯಾನ್‌ನನ್ನು ಆ್ಯಪ್‌ ಮೂಲಕ ನಿಯಂತ್ರಿಸಬಹುದಾಗಿದೆ. ನೋಡಲು ಸಾಮಾನ್ಯ ಫ್ಯಾನ್‌ನಂತೆಯೇ ಇದ್ದರೂ ಸುಂದರ ವಿನ್ಯಾಸ ಇದಕ್ಕಿದೆ. ಇದರೊಳಗೆ ವಾತಾವರಣದ ಶುಷ್ಕತೆ ಹಾಗೂ ಉಷ್ಣತೆಯನ್ನು ಪತ್ತೆ ಮಾಡುವ ಸೆನ್ಸರ್‌ಗಳಿವೆ. ಈ ಸೆನ್ಸರ್‌ಗಳ ಮೂಲಕವೇ, ಕೊಠಡಿಯ ಉಷ್ಣತೆಗನುಗುಣವಾಗಿ ವೇಗವನ್ನು ಹೆಚ್ಚಿಸುವ ಮತ್ತು ತಗ್ಗಿಸಿಕೊಳ್ಳುವ ಸ್ವಯಂಚಾಲಿತ ವ್ಯವಸ್ಥೆಯು ಈ ಸ್ಮಾರ್ಟ್‌ಫ್ಯಾನ್‌ನಲ್ಲಿದೆ. ಆ ಫ್ಯಾನ್‌ಗಳಿಗೆ ನಿಗದಿತ ಆ್ಯಪ್‌ನ್ನು ಗೂಗಲ್‌ ಪ್ಲೇ ಸ್ಟೋರಲ್ಲಿ ಇನ್‌ Õಸ್ಟಾಲ್‌ ಮಾಡಿಕೊಳ್ಳಬೇಕಾಗುತ್ತದೆ. ಅನಂತರ ಸೀಲಿಂಗ್‌ಗೆ ಅಳವಡಿಸಿದ ಫ್ಯಾನ್‌ನ್ನು ಅದರ ಜತೆ ರಿಜಿಸ್ಟರ್‌ ಮಾಡಿಸಿಕೊಳ್ಳಬೇಕು.

ಸಾಧಾರಣ ಫ್ಯಾನ್‌ಗಿಂತ ದುಬಾರಿ
ಸ್ಮಾರ್ಟ್‌ ಫ್ಯಾನ್‌ಗಳು ಪ್ರಸ್ತುತ ಇರುವ ಸೀಲಿಂಗ್‌ ಫ್ಯಾನ್‌ನ ಸುಧಾರಿತ ರೂಪ. ಹಾಸಿಗೆಯಿಂದ ಎದ್ದು ಸ್ವಿಚ್‌ ಹಾಕುವ ಕೆಲಸ ಇರುವುದಿಲ್ಲ. ಇದರ ಬೆಲೆ ಸೀಲಿಂಗ್‌ ಫ್ಯಾನ್‌ಗಿಂತ ದುಪ್ಪಟ್ಟಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದಂತೆ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ. ಒಟ್ಟೊಮೇಟ್‌ ಇಂಟರ್‌ ನ್ಯಾಶನಲ್‌ ಕಂಪೆನಿಯ ಸ್ಮಾರ್ಟ್‌ ಫ್ಯಾನ್‌ ಎರಡು ವೇರಿಯಂಟ್‌ ಬಿಡುಗಡೆಯಾಗಿದ್ದು, 3,999 ರೂ ಬೆಲೆಗೆ ದೊರೆಯಲಿದೆ. ಇನ್ನೂ ಸ್ಮಾರ್ಟ್‌ ರೆಡಿ ಮೊಡೆಲ್‌ ಫ್ಯಾನ್‌ ಬೆಲೆಯು 2,999 ರೂ ಬೆಲೆಗೆ ಸಿಗಲಿದೆ. ಇನ್ನುಳಿದಂತೆ ಇನ್ನಿತರ ಕಂಪೆನಿಗಳು ಸ್ಮಾರ್ಟ್‌ ಫ್ಯಾನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಅದರ ಬಳಕೆ ಹಾಗೂ ಅದಕ್ಕೆ ಅಳವಡಿಸಲಾಗಿರುವ ತಂತ್ರಜ್ಞಾನದ ಆಧಾರದಲ್ಲಿ ಬೆಲೆ ನಿಗದಿಯಾಗಲಿದೆ.

ಇದು ಹೇಗೆ ಕೆಲಸ ಮಾಡುತ್ತದೆ?
ಸ್ಮಾರ್ಟ್‌ ಸಾಧನಗಳನ್ನು ಮನೆಯ ಒಂದು ಕಡೆ ಕೂತು ಮೊಬೈಲ್‌ ಮೂಲಕವೇ ನಿಯಂತ್ರಿಸಬಹುದು. ಫ್ಯಾನ್‌ ಆಗಿರುವುದ ರಿಂದ ಮಲಗುವ ಹಾಸಿಗೆಯ ಬಳಿಯಲ್ಲೇ ಮೊಬೈಲ್‌ ಫೋನ್‌ ಇದ್ದರೆ ಅಲ್ಲಿಂದಲೇ ಫ್ಯಾನಿನ ವೇಗವನ್ನು ಹೆಚ್ಚು, ಕಡಿಮೆ ಮಾಡಬಹುದು. ಮನೆಯ ಯಾವುದೇ ಕೊಠಡಿಗಳಲ್ಲಿರುವ ಫ್ಯಾನ್‌ಗಳನ್ನೂ ಬ್ಲೂಟೂಥ್‌ ಸಂಪರ್ಕದಿಂದ ಆ್ಯಪ್‌ ಮೂಲಕ ನಿಭಾಯಿಸಬಹುದು. ಸಾಮಾನ್ಯ ಫ್ಯಾನ್‌ನಲ್ಲಿ ನಾಲ್ಕೋ, ಐದೋ ಹಂತದ ವೇಗಗಳಿರು ತ್ತವೆ. ಆದರೆ, ಆ್ಯಪ್‌ ಬಳಸಿ ಅದರ ಟಬೋì ಮೋಡ್‌ ಬಳಸಿದರೆ ಇದೇ ವೇಗವನ್ನು 1ರಿಂದ 100ರ ನಡುವೆ ವಿಂಗಡಿಸಿಕೊಳ್ಳಬಹುದು. ಸ್ಲೆ„ಡರ್‌ ಮೇಲೆ ಕೈಯಾಡಿಸಿ ದರೆ ಸಾಕಾಗುತ್ತದೆ. ಇದರಲ್ಲಿ ನಮ್ಮ ಕೋಣೆಯ ವಾತಾವರಣಕ್ಕೆ ತಕ್ಕುದಾಗಿ ಉಷ್ಣಾಂಶಗಳನ್ನು ಬದಲಾಯಿಸಿಕೊಳ್ಳುವ ಅವಕಾಶವಿದೆ.

ಉಪಯೋಗ
ಸಾಧಾರಣ ಫ್ಯಾನ್‌ಗಳಿಗಿಂತ ಸ್ಮಾರ್ಟ್‌ ಫ್ಯಾನ್‌ಗಳ ಉಪಯೋಗ ಹೆಚ್ಚಿರುತ್ತದೆ. ಅದೇನೆಂದರೆ ಮನೆಯಿಂದ ಹೊರಬೀಳುವಾಗ ಅಥವಾ ಬೀಗ ಹಾಕಿದ ಅನಂತರವೂ ಮರೆತಿದ್ದರೆ ಎಲ್ಲ ಫ್ಯಾನ್‌ಗಳನ್ನೂ ಏಕಕಾಲದಲ್ಲಿ ಆ್ಯಪ್‌ ಮೂಲಕ ಹೊರಗಿನಿಂದಲೇ ನಿಯಂತ್ರಿಸಬಹುದು. ಆದರೆ ತೀರಾ ದೂರ ಹೋದ ಬಳಿಕ ಆಫ್‌ ಮಾಡಲಾಗದು. ಇನ್ನು, ರಿಮೋಟ್‌ ಕಂಟ್ರೋಲ್‌ ಮೂಲಕವೂ ಈ ಫ್ಯಾನ್‌ನ್ನು ನಿಯಂತ್ರಿಸಬಹುದು. ಆದರೆ ಅದನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ.

-  ಪ್ರಜ್ಞಾ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಎಪ್ರಿಲ್‌ 1ರಿಂದ ಭಾರತ್‌ ಸ್ಟೇಜ್‌-6 (ಬಿಎಸ್‌-6) ಜಾರಿಯಾಗಲಿದೆ. ಬಿಎಸ್‌-6 ಎಂಬುದು ಭಾರತ್‌ ಸ್ಟೇಜ್‌ 6 ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕ ಮಟ್ಟದಲ್ಲಿ ಇದನ್ನು ಯೂರೋ...

  • ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಅತೀ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಇದು ಶೇ. 51ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರುತಿ ಸುಜುಕಿಯಲ್ಲಿ...

  • ಇ ತ್ತೀಚೆಗೆ ನವನವೀನ ಮಾದರಿಯ ಸ್ಮಾರ್ಟ್‌ ಫಿಟೆ°ಸ್‌ ಬ್ಯಾಂಡ್‌ ಹಾಗೂ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುತ್ತಿವೆ. ಇವುಗಳು ಇಂದು ನಮ್ಮ ಕೆಲಸವನ್ನು ಸುಲಭ ಮಾಡುತ್ತಿವೆ....

  • ಇಂದು ಆಕರ್ಷಕ ಬೈಕ್‌ಗಳು ಹೆಚ್ಚು ಜನ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಇಲ್ಲಿ ರಸ್ತೆಗಿಳಿಯಲು ಸಿದ್ಧವಾಗಿರುವ ಬೈಕ್‌ ಒಂದನ್ನು ಪರಿಚಯಿಸಲಾಗಿದೆ. ಬಜಾಜ್‌...

  • ಮಾರುಕಟ್ಟೆಗೆ ದಿನಕ್ಕೊಂದು ಹೊಸ ಉತ್ಪನ್ನ ಆಗಮನವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಕಾರು ಉದ್ಯಮದಲ್ಲಿ ಸರಕಾರದ ನಿರ್ದೇಶನದ ಮೇರೆಗೆ ಬಿಎಸ್‌6 ಎಂಜಿನ್‌ ಇರುವ...

ಹೊಸ ಸೇರ್ಪಡೆ