ಸುಬ್ರಹ್ಮಣ್ಯ: ಅಭಿವೃದ್ಧಿ ಕಾಮಗಾರಿಗೆ ಕಟ್ಟಡಗಳ ತೆರವು ಆರಂಭ


Team Udayavani, Mar 5, 2019, 6:39 AM IST

sudina-1.jpg

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ನಗರದ ಬಹುಕಾಲದ ಬೇಡಿಕೆ ರಸ್ತೆಗಳ ಅಭಿವೃದ್ಧಿ ಮತ್ತು ಕುಮಾರಧಾರಾ-ಪೇಟೆ ತನಕದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಿದೆ. ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಕಟ್ಟಡಗಳ ತೆರವು ಕಾರ್ಯಗಳು ನಡೆಯುತ್ತಿವೆ. ನಗರದ ರಸ್ತೆಗಳು ಮುಂದಿನ ದಿನಗಳಲ್ಲಿ ಸ್ಮಾರ್ಟ್‌ ಆಗಲಿವೆ.

ರಾಜ್ಯದಲ್ಲಿ ಅತ್ಯಧಿಕ ಆದಾಯ ಗಳಿಸುವ ಮುಜರಾಯಿ ಇಲಾಖೆಯ ದೇಗುಲ ಕುಕ್ಕೆ ಶ್ರೀ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ರಸ್ತೆ ಕುಮಾರ ಧಾರಾ-ಕಾಶಿಕಟ್ಟೆ ನಡುವೆ ಹದಗೆಟ್ಟಿತ್ತು. ನಗರದೊಳಗಿನ ಇತರ ರಸ್ತೆಗಳೂ ತೀವ್ರವಾಗಿ ಹದಗೆಟ್ಟಿದ್ದವು. ಇದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರು, ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದರು.
 
180 ಕೋಟಿ ರೂ. ಮಾಸ್ಟರ್‌ ಪ್ಲಾನ್‌ ಕ್ಷೇತ್ರದ ಅಭಿವೃದ್ಧಿಗೆ 180 ಕೋಟಿ ರೂ. ವೆಚ್ಚದ ಮಾಸ್ಟರ್‌ ಪ್ಲಾನ್‌ ಜಾರಿಯಲ್ಲಿದೆ. ಇದರಲ್ಲಿ ಎರಡನೇ ಹಂತದ ಕಾಮಗಾರಿಯಲ್ಲಿ 8.055 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಾಣ 68.60 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಲೋಕೋಪಯೋಗಿ ಇಲಾಖೆಯಿಂದ ದೇವಸ್ಥಾನಕ್ಕೆ ಹಸ್ತಾಂತರಗೊಂಡ 2.46 ಕಿ.ಮೀ. ರಸ್ತೆ, ದೇವಸ್ಥಾನದ ಅಧೀನದಲ್ಲಿರುವ 5.014 ಕಿ.ಮೀ. ಮತ್ತು ಪಂಚಾಯತ್‌ ರಸ್ತೆಗಳ ಭಾಗವಾದ 581 ಮೀ. ಉದ್ದದ ರಸ್ತೆಗಳು ಸೇರಿವೆ.

ಲೋಕೋಪಯೋಗಿ ಇಲಾಖೆಯಿಂದ ದೇವಸ್ಥಾನಕ್ಕೆ ಹಸ್ತಾಂತರಗೊಂಡ ರಸ್ತೆಗಳಾದ ರಾಜಗೋಪುರದಿಂದ ಪೊಲೀಸ್‌ ಚೌಕಿ (ಉದ್ದ 195 ಮೀ.), ಕಾಶಿಕಟ್ಟೆಯಿಂದ ಪೊಲೀಸ್‌ ಚೌಕಿ ತನಕ (ಉದ್ದ 364 ಮೀ.), ಕುಮಾರಧಾರೆಯಿಂದ ಕಾಶಿಕಟ್ಟೆ ತನಕ (1089 ಮೀ. ಉದ್ದ), ಪೊಲೀಸ್‌ ಚೌಕಿಯಿಂದ ಪ್ರಶಾಂತ್‌ ರೆಸ್ಟೋರೆಂಟ್‌ ತನಕ (812 ಮೀ. ಉದ್ದ) ರಸ್ತೆಗಳು ಅಭಿವೃದ್ಧಿಯಾಗಲಿವೆ. ಈ ರಸ್ತೆಗಳು ತಾಂತ್ರಿಕವಾಗಿ ಜಿಎಸ್‌ಬಿ ದಪ್ಪ 200 ಮಿ.ಮೀ. ಡಿಎಲ್‌ಸಿ ದಪ್ಪ, ಕಾಂಕ್ರೀಟ್‌ ದಪ್ಪ 260 ಇರಲಿದ್ದು, ಒಟ್ಟು 2468 ಮೀ. ಉದ್ದ ಇರಲಿವೆ.

ದೇವಸ್ಥಾನಕ್ಕೆ ಹಸ್ತಾಂತರಗೊಂಡಿರುವ ರಸ್ತೆಗಳು ಅಂದಾಜು 36.10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿವೆ. ಪೊಲೀಸ್‌ ಚೌಕಿ ಕಾಶಿಕಟ್ಟೆ ನಡುವೆ 359 ಮೀ., ಅಕ್ಷರಾ ಗೆಸ್ಟ್‌ ಹೌಸ್‌ ಯಾಗಶಾಲೆ ನಡುವೆ 681 ಮೀ., ಯಾಗಶಾಲೆ ರಸ್ತೆ 124 ಮೀ., ಕಾಶಿಕಟ್ಟೆ-ಜನರಲ್‌ ಡಾರ್ಮಿಟರಿ ನಡುವೆ 124 ಮೀ., ಸ್ಕಂದ ಕೃಪಾ ಗೆಸ್ಟ್‌ ಹೌಸ್‌ ದೇವಸ್ಥಾನದ ಉತ್ತರ ಬಾಗಿಲು ವಿವಿಐಪಿ ಗೆಸ್ಟ್‌ ಹೌಸ್‌ ಎದುರು 259 ಮೀ., ರಾಜಗೋಪುರದಿಂದ ವಿವಿಐಪಿ ಗೆಸ್ಟ್‌ ಹೌಸ್‌ 265 ಮೀ., ಅರಳಿಕಟ್ಟೆಯಿಂದ ದೇವರಗದ್ದೆ ತನಕ 284 ಮೀ., ದೇವಸ್ಥಾನದ ಉತ್ತರ ಬಾಗಿಲಿನಿಂದ ಜನರಲ್‌ ಡಾರ್ಮಿಟರಿ ತನಕ 221 ಮೀ. ಉದ್ದ, ಜನರಲ್‌ ಡಾರ್ಮಿಟರಿ ಸಂಪರ್ಕ ರಸ್ತೆ 82 ಮೀ., ಇಂಜಾಡಿ ವಿವಿಐಪಿ ಕಟ್ಟಡದ ರಸ್ತೆ 2583 ಮೀ. ಉದ್ದ ಸೇರಿ 5595 ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. 

ಈ ಎಲ್ಲ ರಸ್ತೆಗಳ ಜಿಎಸ್‌ಬಿ ದಪ್ಪ 200 ಮಿ.ಮೀ. ಇರಲಿದ್ದು ಡಿಎಲ್‌ಸಿ ದಪ್ಪ 150 ಇರಲಿದೆ. ಪೊಲೀಸ್‌ ಚೌಕಿ ಕಾಶಿಕಟ್ಟೆ ರಸ್ತೆ ದಪ್ಪ 260 ಮಿ.ಮೀ. ಇರಲಿದ್ದು, ಉಳಿದ ರಸ್ತೆಗಳ ದಪ್ಪ 220 ಮಿ.ಮೀ. ಇರಲಿದೆ. ರಸ್ತೆ ನಿರ್ಮಾಣ ವೇಳೆ ಡ್ರೈನೇಜ್‌, ಪಾದಚಾರಿಗಳ ಅನುಕೂಲಕ್ಕೆ ಫ‌ುಟ್‌ಪಾತ್‌ ನಿರ್ಮಾಣವಾಗಲಿದೆ.

ಕಟ್ಟಡ ಮಾಲಕರಿಗೆ ಸೂಚನೆ ಕುಮಾರಧಾರಾ ಭಾಗದಿಂದ ಕಾಮಗಾರಿಗೆ ಚಾಲನೆ ದೊರಕಿದೆ. ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ರಸ್ತೆ ನಿರ್ಮಾಣ ವೇಳೆ ರಸ್ತೆ ಬದಿ ಇರುವ ಕಟ್ಟಡಗಳ ತೆರವು ನಡೆಸಲು ಸಂಬಂಧಿಸಿದ ಕಟ್ಟಡ ಮಾಲಕರಿಗೆ ಸೂಚನೆ ನೀಡಲಾಗಿದೆ. ಮುಖ್ಯ ಪೇಟೆಯ ಶ್ರೀನಿಕೇತನ ವಸತಿಗೃಹದ ಬಲಬದಿಯ ಸರಕು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ. 

ಅಂಗಡಿಗಳನ್ನು ಪಕ್ಕದಲ್ಲೆ ತಾತ್ಕಾಲಿಕ ಕಟ್ಟಡಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನುಳಿದ ಕಟ್ಟಡಗಳ ತೆರವು ಕಾರ್ಯ ಶೀಘ್ರ ನಡೆಯಲಿದೆ. ರಸ್ತೆ ಅಭಿವೃದ್ಧಿ ನಡೆಸಲು ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಹಾಲಾಡಿ ದಯಾನಂದ ಶೆಟ್ಟಿ ಗುತ್ತಿಗೆ ವಹಸಿಕೊಂಡಿದ್ದಾರೆ.

ಸತತ ಒತ್ತಡದಿಂದ ಯಶಸ್ಸು ಬಹುಕಾಲದ ಬೇಡಿಕೆಗೆ ಮಾಸ್ಟರ್‌ ಪ್ಲಾನ್‌ ಜಾರಿಯಲ್ಲಿದ್ದರೂ ರಸ್ತೆ ವಿಸ್ತರಣೆಗೆ ಸಂಬಂಧಿಸಿ ಸರಕಾರದ ಅನುಮೋದನೆ ಸಿಕ್ಕಿರಲಿಲ್ಲ. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು ಆಡಳಿತ ಮಂಡಳಿಗೆ ತಲೆನೋವಾಗಿತ್ತು. ರಸ್ತೆ ಅಭಿವೃದ್ಧಿ ಕುರಿತಂತೆ ಈಗಿನ ಆಡಳಿತ ಮಂಡಳಿ ಅಧ್ಯಕ್ಷರು ಸತತವಾಗಿ ಸರಕಾರದ ಮೇಲೆ ಒತ್ತಡ ತಂದು ಕಾಮಗಾರಿ ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಮಗಾರಿ ಪೂರ್ಣವಾದ ಬಳಿಕ ಕುಕ್ಕೆ ನಗರದ ರಸ್ತೆಗಳು ಸ್ಮಾರ್ಟ್‌ ಆಗಲಿವೆ.

ಟಾಪ್ ನ್ಯೂಸ್

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

dandeli news

ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

shivamogga news

ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.