ಕಬ್ಬು ಕೃಷಿ

ನೀರು ನಿರ್ವಹಣೆಗೆ ಹಲವು ದಾರಿ

Team Udayavani, Apr 21, 2019, 6:00 AM IST

19

ಬೇಸಗೆಯಲ್ಲಿ ಕಬ್ಬು ಬೆಳೆಯಲ್ಲಿ ನೀರು ನಿರ್ವಹಣೆ ರೈತರಿಗೆ ಒಂದು ಸವಾಲೇ ಸರಿ. ಈ ಬರ ನಿರ್ವಹಣೆ ಮಾಡುವುದು ಅಂದರೆ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಅಂತ ಅರ್ಥ. ಹೀಗೆ ಮಾಡಿದರೆ, ಇಳುವರಿ ಹೆಚ್ಚಾಗುತ್ತದೆ. ಎಷ್ಟೋ ಸಲ ನೀರಿನ ಲಭ್ಯತೆಗನುಗುಣವಾಗಿ ಎಷ್ಟು ಎಕರೆಯಲ್ಲಿ ಕಬ್ಬನ್ನು ಬೆಳೆಯಬೇಕು ಅನ್ನೋದನ್ನು ನಿರ್ಧರಿಸಬೇಕು. ಇನ್ನೊಂದು ಬಹುಮುಖ್ಯ ವಿಚಾರ ಏನೆಂದರೆ, ಮಳೆಗಾಲದಲ್ಲಿನ ನೀರಿನ ಪ್ರಮಾಣ ಗಮನಿಸಿ ಕಬ್ಬು ನಾಟಿ ಮಾಡಬಾರದು.

ನಾಟಿ ಮಾಡುವಾಗ
ಕಬ್ಬು ನಾಟಿ ಪೂರ್ವದಲ್ಲಿ ಹಾಗೂ ಕುಳೆ ಕಬ್ಬಿನಲ್ಲಿ ಎಕರೆಗೆ ಚೆನ್ನಾಗಿ ಕಳಿತ 10 ಟನ್‌ ಕೊಟ್ಟಿಗೆ ಗೊಬ್ಬರ, 2 ಟನ್‌ ಭೂಮಿ ಶಕ್ತಿ ಹಾಗೂ 1 ಟನ್‌ ಎರೆಹುಳು ಗೊಬ್ಬರ ಬಳಸಬೇಕು. ನೀರಿನ ಕೊರತೆಯಿರುವ ಪ್ರದೇಶದಲ್ಲಿ, ಪಟ್ಟಾ ಪದ್ಧತಿಯಲ್ಲಿ ಅಂದರೆ 2.55- 2.5 ಅಡಿ ಅಥವಾ 3- 6- 3 ಅಂತರದಲ್ಲಿ ಕಬ್ಬು ನಾಟಿ ಮಾಡಬೇಕು. 2 ಕಬ್ಬು ನಾಟಿ ಮಾಡುವ ಸಂದರ್ಭದಲ್ಲಿ ಸುಣ್ಣದ ತಿಳಿ ನೀರಿನಲ್ಲಿ ಕಬ್ಬಿನ ಬೀಜಗಳನ್ನು 10-15 ನಿಮಿಷ ನೆನೆಯಿಸಿ ನಂತರ ಕಬ್ಬು ನಾಟಿ ಮಾಡಬೇಕು.

ಕಟಾವಿನ ಅನಂತರ
ಕಬ್ಬು ಕಟಾವು ಮಾಡಿದ ತತ್‌ಕ್ಷಣ (ಕುಳೆ ಬೆಳೆಯಲ್ಲಿ) ಕಬ್ಬಿನ ರವದಿ ಹಾಗೂ ಸೋಗೆಗಳನ್ನು ಕಬ್ಬಿನ ಒಂದು ಸಾಲು ಬಿಟ್ಟು ಇನ್ನೊಂದು ಸಾಲುಗಳಲ್ಲಿ ಹೊದಿಕೆ (ಅಚ್ಛಾದನೆ) ಮಾಡುವುದರಿಂದ ಶೇ.30 ರಿಂದ 40 ರಷ್ಟು ನೀರು ಉಳಿತಾಯ ಮಾಡಬಹುದು. ನೀರಾವರಿ ಪದ್ಧತಿ ಇದ್ದಲ್ಲಿ ರವದಿ ಹೊದಿಕೆ (ಆಚ್ಛಾದನೆ) ಮಾಡಲಾರದ ಸಾಲುಗಳಲ್ಲಿ ಮಾತ್ರ ನೀರನ್ನು ಹಾಯಿಸುವುದರಿಂದ ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು.

ರವದಿ ನಿರ್ವಹಣೆಗಾಗಿ ಪ್ರತಿ ಎಕರೆಗೆ ಐದು ಕೆ.ಜಿ. ರವದಿ ಕಳೆಯುವ ಸೂûಾ¾ಣು ಜೀವಿಗಳಾದ ಟ್ರೈಕೋಡರ್ಮಾ ಪರತಂತ್ರ ಜೀವಿಗಳನ್ನು ಹತ್ತು ಕೆ.ಜಿ. ತಿಪ್ಪೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಬಳಸಬೇಕು. ಇದರಿಂದ ರವದಿ ಬೇಗನೆ ಕಳೆತು ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗಿ ಜಮೀನಿನಲ್ಲಿ ಸದಾಕಾಲ ತೇವಾಂಶ ಲಭಿಸುತ್ತದೆ. ಇದರಿಂದ ಕಬ್ಬು ಬೆಳೆಯೂ ಆರೋಗ್ಯಕರ ಬೆಳವಣಿಗೆಯನ್ನು ಹೊಂದುತ್ತದೆ.

ಏನೇನು ಹಾಕಬೇಕು?
ಪ್ರತಿ ಲೀಟರ್‌ ನೀರಿನಲ್ಲಿ 25 ಗ್ರಾಂ. ನಂತೆ ಪೋಟ್ಯಾಷ್‌ (ಎಮ…ಒಪಿ) ಗೊಬ್ಬರವನ್ನು ಮಿಶ್ರಣ ಮಾಡಿದ ದ್ರಾವಣವನ್ನು ಪ್ರತಿ ಎಕರೆಗೆ 150 ರಿಂದ 250 ಲೀಟರ್‌ನಂತೆೆ ಸಿಂಪರಣೆ ಮಾಡಬೇಕು. ಈ ಸಿಂಪರಣಾ ಕ್ರಮವನ್ನು ಮೇಲಿಂದ ಮೇಲೆ ಅನುಸರಿಸುವುದು ಅಪಾಯಕಾರಿ, ಕಾರಣ ಎಲೆಗಳಲ್ಲಿರುವ ಅತ್ಯಂತ ಸೂಕ್ಷ್ಮ ರಂಧ್ರಗಳು ಸಂಪೂರ್ಣ ಮುಚ್ಚುವುದರಿಂದ ಬೆಳೆಗೆ ಉಸಿರಾಟದ ತೊಂದರೆಯಾಗಿ ಬೆಳೆಯು ಒಣಗುವ ಸಂಭವವುಂಟು. ಆದ್ದರಿಂದ ಈ ದ್ರಾವಣವನ್ನು 10 ರಿಂದ 15 ದಿನಕ್ಕೊಮ್ಮೆ ಬೆಳೆಯ ಬೆಳವಣಿಗೆಯನ್ನು ಗಮನಿಸಿ ಸಿಂಪಡಿಸಬೇಕು.ನೀರಿನ ಕೊರತೆಯಲ್ಲಿ ಬೆಳೆಯುವ ಸಾಮರ್ಥ್ಯವುಳ್ಳ ಸಿಒಸಿ 671, ಸಿಒಎಸ್‌ಎನ್‌ ಕೆ 0632 ಮತ್ತು ಸಿಓ 94012 ತಳಿಗಳನ್ನು ನಾಟಿ ಮಾಡಬೇಕು.

ನೀರು ಹೀಗೆ
ಸಾಲು ಬಿಟ್ಟು ಸಾಲು ನೀರು ಹಾಯಿಸಬೇಕು. ಮೊದಲು ನೀರು ಹಾಯಿಸಿದ ಸಾಲು ಬಿಟ್ಟು, ಈ ಹಿಂದೆ ಹಾಯಿಸದೇ ಇರುವ ಸಾಲಿಗೆ ನೀರು ಹಾಯಿಸಬೇಕು. ಕಬ್ಬಿನಲ್ಲಿ ಗಣಿಕೆಯಾಗುವ ತನಕ (ಮೂರು ತಿಂಗಳು) ಸಾಲುಗಳ ಮಧ್ಯದಲ್ಲಿ ಮೇಲಿಂದ ಮೇಲೆ ಎಡೆಕುಂಟೆ ಹೊಡೆಯುವುದರಿಂದ ಮಣ್ಣಿನಲ್ಲಿರುವ ತೇವಾಂಶ ಸಂರಕ್ಷಿಸಲ್ಪಡುತ್ತದೆ. ಇದರಿಂದ ನೀರು ಹಾಯಿಸುವ ಅವಧಿಯ ಅಂತರ ಹೆಚ್ಚಿಸಿಕೊಳ್ಳಬಹುದು. ನೀರಾವರಿ ಪದ್ಧತಿಗಿಂತ ಹನಿ, ತುಂತುರು ನೀರಾವರಿ ಪದ್ಧತಿ ಅಳವಡಿಕೆಯಿಂದ ನೀರಿನ ಬಳಕೆ ಸಾಮರ್ಥ್ಯ ಹೆಚ್ಚಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು. ನಾಟಿ ಕಬ್ಬು ಬೆಳೆಯಲ್ಲಿ (5 ರಿಂದ 6 ತಿಂಗಳ ಬೆಳೆಯ ಅವಧಿ) ಸಂಪೂರ್ಣವಾಗಿ ಒಣಗಿದ ಕಬ್ಬಿನ ಕೆಳ ಭಾಗದ ಎಲೆಗಳನ್ನು ಸುಲಿದು ಸಾಲುಗಳ ಮಧ್ಯ ಹೊದಿಕೆ (ಅಚ್ಛಾದನೆ) ಮಾಡುವುದರಿಂದ ಮಣ್ಣಿನಲ್ಲಿರುವ ತೇವಾಂಶ ಕಾಪಾಡಿಕೊಳ್ಳಬಹುದು.

 ಬಸವರಾಜ ಶಿವಪ್ಪ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.