ಬೇವು ಲೇಪಿತ ಯೂರಿಯಾ

Team Udayavani, Jul 21, 2019, 5:39 AM IST

ದೇಶಾದ್ಯಂತ ರೈತರು ಬೇವು ಲೇಪಿತ ಯೂರಿಯಾ ಬಳಸುವಂತೆ, ಸಬ್ಸಿಡಿಯುಕ್ತ ಯೂರಿಯಾ ಕಳ್ಳಸಾಗಾಟಕ್ಕೆ ಕಡಿವಾಣ ಹಾಕುವ ದಿಟ್ಟ ನಿರ್ಧಾರ ಕೈಗೊಂಡ ಕೀರ್ತಿ ಕೇಂದ್ರ ರಸಗೊಬ್ಬರ ಖಾತೆಯನ್ನು ಅಂದು ವಹಿಸಿಕೊಂಡಿದ್ದ ಅನಂತ ಕುಮಾರ್‌ಗೆ ಸಲ್ಲುತ್ತದೆ. 2015 ಸೆ. 1ರಿಂದ ಶೇ. 100ರಷ್ಟು ಬೇವು ಲೇಪಿತ ಯೂರಿಯಾದ ಉತ್ಪಾದನೆ ಆರಂಭವಾಗಿದೆ. 2015ರ ಡಿ. 1ರ ಅನಂತರ ಆಮದು ಯೂರಿಯಾಗೆ ಶೇ. 100ರಷ್ಟು ಬೇವು ಲೇಪನ ಮಾಡಲಾಗುತ್ತಿದೆ. 2015ರಲ್ಲಿ ಹೊಸ ಯೂರಿಯಾ ನೀತಿಯೂ ಜಾರಿಗೊಂಡಿದೆ. ಇದರ ಬಳಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಕೆಂಪು ಕೋಟೆಯ ಸ್ವಾತಂತ್ರ್ಯೋತ್ಸವ, ಪ್ಯಾರಿಸ್‌ ಶೃಂಗಸಭೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮುಂತಾದೆಡೆ ಈ ವಿಷಯ ಪ್ರಸ್ತಾವಿಸಿದ್ದರು. ಅನಂತ ಕುಮಾರ್‌ ಅವರನ್ನು ಬೇವು ಲೀಪಿತ ಯೂರಿಯಾ ಜನಕ ಎಂದೂ ಕರೆಯುತ್ತಾರೆ.

ಸಾರಜನಕವು ಸಸ್ಯಗಳು ಅತಿ ಹೆಚ್ಚು ಬೇಡುವ ಪೋಷಕಾಂಶಗಳಾಗಿವೆ. ವಾತಾವರಣದಲ್ಲಿ ಸರಿಸುಮಾರು ಶೇ. 78ರಷ್ಟು ಸಾರಜನಕವಿದ್ದು ಅದು ಸಸ್ಯಗಳಿಗೆ ದೊರಕದ ರೀತಿಯಲ್ಲಿ ಇರುವುದರಿಂದ ಬೆಳೆಗಳಿಗೆ ಇದನ್ನು ಗೊಬ್ಬರಗಳ ಮೂಲಕ ನೀಡಬೇಕಾಗುತ್ತದೆ. ವಿವಿಧ ಗೊಬ್ಬರಗಳಾದ ಯೂರಿಯಾ, ಅಮೋನಿಯಂ ಸಲ್ಫೇಟ್, ಅಮೋನಿಯಂ ನೈಟ್ರೇಟ್, ಕ್ಯಾಲ್ಸಿಯಂ ನೈಟ್ರೇಟ್ ಮುಂತಾದವುಗಳ ಮೂಲಕ ಸಾರಜನಕವನ್ನು ಬೆಳೆಗಳಿಗೆ ಒದಗಿಸಬಹುದು. ರೈತರು ಯಾವುದೇ ಗೊಬ್ಬರವನ್ನು ಬಳಸಿದರೂ ಕೂಡ ಸಸ್ಯಗಳು ಸಾರಜನಕವನ್ನು ತಮಗೆ ಬೇಕಾದ ರೂಪದಲ್ಲಿಯೇ ಹೀರಿಕೊಳ್ಳುತ್ತವೆ. ಅಂದರೆ ಭತ್ತವು ಸಾರಜನಕವನ್ನು ಅಮೋನಿಯಂ ರೂಪ ದಲ್ಲಿ ಮತ್ತು ಉಳಿದೆಲ್ಲಾ ಬೆಳೆಗಳು ನೈಟ್ರೇಟ್ ರೂಪದಲ್ಲಿ ಹೀರಿಕೊಳ್ಳುತ್ತವೆ.

35ರಿಂದ 40ರಷ್ಟು ಸಾರಜನಕ ನಷ್ಟ

ಗೊಬ್ಬರ ಮಣ್ಣಿಗೆ ಸೇರಿದ ತತ್‌ಕ್ಷಣ ಅದು ಗಾಳಿ ಮತ್ತು ತೇವಾಂಶದೊಂದಿಗೆ ಸಂಯೋಜನೆಗೊಂಡು ಸಾರಜನಕವು ವಿವಿಧ ರೀತಿಯಲ್ಲಿ ವಿಭಜನೆಗೊಂಡು ಬೆಳೆಗಳಿಗೆ ದೊರಕುತ್ತದೆ. ಗೊಬ್ಬರದಿಂದ ವಿಭಜನೆಗೊಂಡ ಸಾರಜನಕವನ್ನು ಸ್ವಲ್ಪ ಪ್ರಮಾಣದಲ್ಲಿ ಬೆಳೆಗಳು ಹೀರಿಕೊಳ್ಳುತ್ತವೆ. ವಿವಿಧ ಅಧ್ಯಯನದ ಪ್ರಕಾರ ಸುಮಾರು 35ರಿಂದ 40ರಷ್ಟು ಮಣ್ಣಿಗೆ ಸೇರಿಸಿದ ಯೂರಿಯಾ ಗೊಬ್ಬರವು ಬೆಳೆಗಳಿಗೆ ದೊರಕಿ ಇನ್ನುಳಿದ ಸಾರಜನಕವು ನಷ್ಟವಾಗಿ ಹೋಗುತ್ತದೆ. ಪ್ರಪಂಚಾದದ್ಯಂತ ಸುಮಾರು 50ರಷ್ಟು ಸಾರಜನಕವನ್ನು ಯೂರಿಯಾ ಮುಖಾಂತರವೇ ಒದಗಿಸಲಾಗುತ್ತಿದ್ದು ಇದರಿಂದ ಭಾರತವೇನೂ ಹೊರತಾಗಿಲ್ಲ. ಸಾರಜನಕದ ನಷ್ಟ ಗಮನದಲ್ಲಿಟ್ಟುಕೊಂಡು ಕೃಷಿ ವಿಜ್ಞಾನಿಗಳು ರೈತರೊಡಗೂಡಿ ವಿವಿಧ ಬೇಸಾಯ ಕ್ರಮಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳೆಂದರೆ:

1 ಗೊಬ್ಬರಗಳನ್ನು ವಿವಿಧ ಕಂತುಗಳಲ್ಲಿ ಒದಗಿಸುವುದು, ಅವುಗಳನ್ನು ಮಣ್ಣಿನ ಆಳದಲ್ಲಿ ಇರಿಸುವುದು.

2 ಕೂರಿಗೆಯಿಂದ ಬಿತ್ತನೆ ಮಾಡುವುದು.

3 ಯೂರಿಯಾ ಗೊಬ್ಬರವನ್ನು ತೇವಯುಕ್ತ ಮಣ್ಣಿನ ಜತೆ ಮಿಶ್ರಣ ಮಾಡಿ ಬಳಸುವುದು.

4 ದಪ್ಪ ಹರಳಿನ ಯೂರಿಯಾ ಬಳಕೆ ಮಾಡುವುದು.

ನಮ್ಮ ದೇಶದಲ್ಲಿ ದೇಶೀಯ ವಸ್ತುಗಳನ್ನು ಉಪಯೋಗಿಸಿ ನೈಟ್ರಿಫಿಕೇಶನ್‌ ಕಡಿಮೆಗೊಳಿಸಲು ಭಾರತೀಯ ವಿಜ್ಞಾನಿಗಳು ಸಫ‌ಲರಾಗಿದ್ದಾರೆ. ಅದೇನೆಂದರೆ ಯೂರಿಯಾ ಗೊಬ್ಬರವನ್ನು ಬೇವಿನಿಂದ ಲೇಪನ ಮಾಡುವುದು. ಇದರಿಂದ ಸಾರಜನಕವು ಹಂತ ಹಂತವಾಗಿ ಬಿಡುಗಡೆ ಹೊಂದುವುದರಿಂದ ಬೆಳೆಗಳಿಗೆ ದೀರ್ಘ‌ಕಾಲದವರೆಗೆ ಮಣ್ಣಿನಲ್ಲಿ ಸಾರಜನಕ ದೊರೆಯುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆ ಉತ್ತಮಗೊಳ್ಳುವುದಲ್ಲದೆ ಕಾಳುಗಳ ಸಂಖ್ಯೆ ಅಧಿಕಗೊಂಡು ಸದೃಢ ಕಾಳುಗಳು ದೊರೆಯುತ್ತವೆ. ಇದಲ್ಲದೆ ಬೆಳೆಗಳಿಗೆ ಹಾಕಿದ ಯೂರಿಯಾ ಗೊಬ್ಬರದ ನಷ್ಟವನ್ನು ತಡೆಯಬಹುದು. ಬೆಳೆ ನಿಧಾನವಾಗಿ ಬೆಳೆಯುವುದರಿಂದ ರೋಗ ರುಜಿನಗಳು ಕೂಡ ಕಡಿಮೆ.

2015-16ರಲ್ಲಿ ದಾವಣಗೆರೆ ಜಿಲ್ಲೆಯ ಹೊಸ ಬೆಳವನೂರು ಗ್ರಾಮದ ಆಯ್ದ ರೈತರ ಭತ್ತದ ಗದ್ದೆಗಳಲ್ಲಿ ಇದರ ಬಳಕೆಯ ಬಗ್ಗೆ ಕೃಷಿ ವಿಜ್ಞಾನಿಗಳು ಕ್ಷೇತ್ರ ಪ್ರಯೋಗ ನಡೆಸಿದ್ದು ಅವುಗಳ ಫ‌ಲಿತಾಂಶ ಇಂತಿದೆ:

1. ಪ್ರಯೋಗದಲ್ಲಿ ಒಂದು ಎಕರೆಗೆ 60 ಕೆ.ಜಿ. ಯೂರಿಯಾವನ್ನು ಎರಡು ಕಂತುಗಳಲ್ಲಿ ನೀಡಲಾಗಿತ್ತು.

2. ಸಾಮಾನ್ಯ ಯೂರಿಯಾ ಬಳಕೆಗಿಂತ ಬೇವು ಲೇಪಿತ ಯೂರಿಯಾ ಬಳಸಿ ಎಕರೆಗೆ ಸುಮಾರು ಒಂದು ಕ್ವಿಂಟಾಲ್ನಷ್ಟು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.

– ಜಯಾನಂದ ಅಮೀನ್‌, ಬನ್ನಂಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೆಲವೊಂದು ಸಲ ಸೋಲು ಅನ್ನೋದು ನಮ್ಮನ್ನು ಕುಗ್ಗಿಸಿಬಿಡುತ್ತದೆ. ಇನ್ನೂ ಕೆಲವೊಮ್ಮೆ ಸೋಲು ಪಾಠ ಕಲಿಸುತ್ತದೆ. ಕೆಲವರು ಗೆದ್ದು ಸೋಲುತ್ತಾರೆ. ಹಲವರು ಸೋತು ಗೆಲ್ಲುತ್ತಾರೆ....

  • ಯಾವುದೇ ಚಿಂತೆಯಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿರುವಾಗ ಬೇಲಿಯಿಂದ ತೂರಿ ಬಂದ ಸುಮದ ಘಮಕ್ಕೆ ನಮ್ಮ ಮನ ಅರಳುತ್ತದೆ. ತುಂಬಿದ ರಸ್ತೆಗಳಲ್ಲಿ ಆಟವಾಡುವ ಪುಟ್ಟ...

  • ಅದೊಂದು ದಿನ ತರಗತಿಯಲ್ಲಿ ಶಿಕ್ಷಕಿ, "ಉತ್ತಮ ಬದುಕಿಗೆ ಅತ್ಯಗತ್ಯವಾಗಿ ಬೇಕಾದ ಅಂಶ ಯಾವುದು? ಒಂದು ಪದದಲ್ಲಿ ಉತ್ತರಿಸಿ' ಎಂದು ಹೇಳಿದರು. ಹಣ, ಆಸ್ತಿ, ಸಂಪತ್ತು,...

  • "ಖುಷಿಯಾಗಿದ್ದಾಗ ನಾವು ಸಂಗೀತವನ್ನು ಆಸ್ವಾದಿಸುತ್ತೇವೆ. ಆದರೆ, ದುಃಖದಲ್ಲಿದ್ದಾಗ ಅದರಲ್ಲಿನ ಸಾಹಿತ್ಯ ನಮಗೆ ಅರ್ಥವಾಗುತ್ತದೆ' ಎಂಬ ಮಾತಿದೆ. ಸಂತೋಷದ ಹಾಡುಗಳೂ...

  • ಹೌದು ಎಲ್ಲರೂ ಆಧುನಿಕತೆಯೆಂದು ತಮ್ಮ ಜೀವನವನ್ನು ಬರಿದಾಗಿಸುವಂತಹ ಕ್ಲಿಷ್ಟಕರ ಪರಿಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸವೇ ಸರಿ. ಸಾಧನೆಯ ಮಾತು ಮರೀಚಿಕೆಯಾಗಿ...

ಹೊಸ ಸೇರ್ಪಡೆ