ಟೆಲಿಸ್ಕೋಪಿಕ್‌ ಶಾಕ್‌ ಅಬ್ಸಾರ್ಬರ್ ನಿರ್ವಹಣೆ ಹೇಗೆ?

Team Udayavani, Nov 15, 2019, 4:51 AM IST

ಬೈಕ್‌ಗಳಲ್ಲಿ, ಸ್ಕೂಟರ್‌ಗಳಲ್ಲಿ ಈಗ ಮುಂಭಾಗ ಟೆಲಿಸ್ಕೋಪಿಕ್‌ ಶಾಕ್‌ ಅಬ್ಸಾರ್ಬರ್‌ಗಳು ಸಾಮಾನ್ಯ. ಉತ್ತಮ ಕಾರ್ಯಕ್ಷಮತೆ ಇರುವ ಇವುಗಳನ್ನೇ ಹೆಚ್ಚು ಬಳಸಲಾಗುತ್ತದೆ. ಕೆಲವು ದುಬಾರಿ ದರದ ಬೈಕ್‌ಗಳಲ್ಲಿ ಅಪ್‌ ಸೈಡ್‌ ಡೌನ್‌ (ತಲೆ ತಿರುಗಿಸಿದ ರೀತಿಯ) ಶಾಕ್‌ ಅಬ್ಸಾರ್ಬರ್‌ಗಳಿದ್ದು, ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸವಿದ್ದರೂ, ತಂತ್ರಜ್ಞಾನದ ಮಾದರಿ ಒಂದೇ.

ಶಾಕ್‌ ಅಬ್ಸಾರ್ಬರ್‌ಗಳ ಕೆಲಸವೇನು?
ರಸ್ತೆಯ ಉಬ್ಬು ತಗ್ಗುಗಳ ಗರಿಷ್ಠ ಆಘಾತವನ್ನು ತಡೆಯುವುದು ಶಾಕ್‌ ಅಬಾÕರ್ಬರ್‌ಗಳ ಕೆಲಸ. ದ್ವಿಚಕ್ರವಾಹನದಲ್ಲಿ ಶಾಕ್‌ ಅಬ್ಸಾರ್ಬರ್‌ಗಳ ಕೆಲಸವೆಂದರೆ ಆಘಾತ ತಡೆಯುವುದು, ಪರಿಣಾಮಕಾರಿ ಬ್ರೇಕಿಂಗ್‌, ಬ್ಯಾಲೆಂನ್ಸಿಂಗ್‌ ಮೂಲಕ ಸರಿಯಾದ ರೀತಿ ವಾಹನ ನಿಯಂತ್ರಣಕ್ಕೆ ಸಹಕರಿಸುವುದು. ಶಾಕ್ಸ್‌ಗಳು ಸರಿಯಾಗಿ ಇಲ್ಲದಿದ್ದರೆ ದ್ವಿಚಕ್ರ ವಾಹನ ನಿಯಂತ್ರಣಕ್ಕೆ ಬಾರದಿರುವುದು, ಬ್ರೇಕಿಂಗ್‌ ಪರಿಣಾಮಕಾರಿಯಾಗದೇ ಇರುವುದು ಅಥವಾ ತಿರುವಿನಲ್ಲಿ ಒಂದು ಬದಿಗೆ ಎಳೆದಂತಾಗುವುದನ್ನು ಗುರುತಿಸಬಹುದಾಗಿದೆ. ಇದಕ್ಕಾಗಿ ಶಾಕ್ಸ್‌ಗಳ ಪರಿಣಮಕಾರಿ ನಿರ್ವಹಣೆ ಅಗತ್ಯವಾಗಿದೆ.

ಆಯಿಲ್‌ ಸೋರಿಕೆ
ಶಾಕ್ಸ್‌ ಒಳಗಡೆ ಇರುವ ಆಯಿಲ್‌ ಸೋರಿಕೆಯಾದರೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಶಾಕ್ಸ್‌ನ ಮೇಲ್ಭಾಗದಲ್ಲಿರುವ ಟ್ಯೂಬ್‌ನಲ್ಲಿ ಈ ಸೋರಿಕೆ ಗೋಚರಿಸುತ್ತದೆ. ಆಯಿಲ್‌ ಸೋರಿಕೆ ಎರಡು ಕಾರಣದಿಂದ ಆಗಬಹುದು. ಒಂದು ಫೋರ್ಕ್‌ ರಾರ್ಡ್‌ನಲ್ಲಿ ಸಮಸ್ಯೆ, ಇನ್ನೊಂದು ಸಾಮಾನ್ಯವಾಗಿ ಆಗುವ ಆಯಿಲ್‌ ಸೀಲ್‌ಗೆ ಹಾನಿಯಾಗಿ ಆಯಿಲ್‌ ಹೊರಗೆ ಬರುತ್ತಿರುತ್ತದೆ. ಸಾಮಾನ್ಯವಾಗಿ ಆಯಿಲ್‌ ಸೀಲ್‌ ನಾಲ್ಕರಿಂದ ಐದು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ರಸ್ತೆ ಅತಿ ಕೆಟ್ಟದಾಗಿದ್ದರೆ ಇದರ ಅವಧಿ ಕಡಿಮೆಯಿರಬಹುದು. ಈ ಸಂದರ್ಭ ಟ್ಯೂಬ್‌, ರಾಡ್‌, ಸ್ಪ್ರಿಂಗ್‌ಗಳನ್ನು ತೆಗೆದು ಹೊಸ ಆಯಿಲ್‌, ಸೀಲ್‌ ಹಾಕಬೇಕಾಗುತ್ತದೆ.

ಸ್ಪ್ರಿಂಗ್‌ ಮತ್ತು ವಾಶರ್‌
ಶಾಕ್ಸ್‌ ಟ್ಯೂಬ್‌ನ ಒಳಗಿರುವ ಸ್ಪ್ರಿಂಗ್‌ ದುರ್ಬಲವಾಗಿದ್ದರೆ. ಆಯಿಲ್‌ತುಂಬ ಹಳತಾಗಿದ್ದರೆ ಆಘಾತ ತಡೆದುಕೊಳ್ಳುವುದಿಲ್ಲ. ಟ್ಯೂಬ್‌-ಕೊಳವೆ ಸಂಧಿಸುವ ಜಾಗದಲ್ಲಿರುವ ರಬ್ಬರ್‌ ವಾಶರ್‌ ಹರಿದು ಆಯಿಲ್‌ ಸೀಲ್‌ಗೆ ನೀರು ಹೋಗಿದ್ದರೂ ದುರಸ್ತಿಯೇ ಪರಿಹಾರ.

ಪರಿಹಾರ
ಅಪಘಾಗಳಾಗಿದ್ದಲ್ಲಿ ಶಾಕ್ಸ್‌ ಬದಲಾಯಿಸಿ. ಆಯಿಲ್‌ ಸೋರಿಕೆ, ಸ್ಪ್ರಿಂಗ್‌ ಸಮಸ್ಯೆ ಇದ್ದಲ್ಲಿ ಆಯಿಲ್‌ ಸೀಲ್‌ ಬೇರೆ ಹಾಕಿಸಿ, ಸ್ಪ್ರಿಂಗ್‌ ಪರೀಕ್ಷಿಸಿ. ಇಲ್ಲದಿದ್ದರೆ ದ್ವಿಚಕ್ರ ವಾಹನದ ಸ್ಟೀರಿಂಗ್‌ ನಿಯಂತ್ರಣ ವ್ಯವಸ್ಥೆಯ ಬೇರಿಂಗ್‌ಗಳ ಮೇಲೆ ಪರಿಣಾಮ ಆಗಿ ಸವಾರಿ ಕಷ್ಟವಾಗುತ್ತದೆ. ಶಾಕ್ಸ್‌ ಆಯಿಲ್‌ ಆಗಿ ಕಂಪೆನಿ ಸೂಚಿಸಿದ “ಫೋರ್ಕ್‌ ಆಯಿಲ್‌’ ಬಳಸಬೇಕು. ಎಂಜಿನ್‌ ಆಯಿಲ್‌ ಬಳಸಿದರೆ ಡ್ಯಾಂಪಿಂಗ್‌ (ಆಘಾತ ತಡೆ) ಆಗದು. ಆಯಿಲ್‌ ತೆಳುವಾಗಿದ್ದರೆ ಬೇಗನೆ ಮತ್ತೆ ಶಾಕ್ಸ್‌ ಸಮಸ್ಯೆ ಕಾಣಿಸುತ್ತದೆ.

ಟೆಲಿಸ್ಕೋಪಿಕ್‌ ವ್ಯವಸ್ಥೆ
ಒಂದು ಉದ್ದವಾದ ಸ್ಪ್ರಿಂಗ್‌, ಕೊಳವೆ ಒಳಗೆ ಆಯಿಲ್‌ ಮತ್ತು ಫೋರ್ಕ್‌ ರಾಡ್‌ ಮೂಲಕ ಒತ್ತಡವನ್ನು ನಿರ್ವಹಿಸುವ ವ್ಯವಸ್ಥೆ ಟೆಲಿಸ್ಕೋಪಿಕ್‌ ಶಾಕ್‌ ಅಬ್ಸಾರ್ಬರ್‌ನಲ್ಲಿದೆ. ಆಧುನಿಕ ವಿಧಾನದ ಈ ಶಾಕ್ಸ್‌ ಅಬಾÕರ್ಬರ್‌ಗಳು ಹೆಚ್ಚು ಒತ್ತಡವನ್ನು ನಿರ್ವಹಿಸಬಲ್ಲವು ಮತ್ತು ಕಡಿಮೆ ನಿರ್ವಹಣೆಯನ್ನು ಬಯಸುತ್ತವೆ. ಆದರೂ ಕೆಲವೊಮ್ಮೆ ಇವುಗಳಲ್ಲಿನ ತೊಂದರೆಯಿಂದ ಚಾಲನೆಗೆ ಸಮಸ್ಯೆಯಾಗಬಲ್ಲದು.

ಅಪಘಾತ
ಅಪಘಾತ ಸಂದರ್ಭದಲ್ಲಿ ಶಾಕ್ಸ್‌ಗೆ ಪೆಟ್ಟಾಗಿ ಕೂದಲೆಳೆಯಷ್ಟು ಬಗ್ಗಿದರೂ, ಬೈಕ್‌ ಒಂದು ಬದಿಗೆ ಎಳೆದಂತೆ ಭಾಸವಾಗುತ್ತದೆ. ಒತ್ತಡಕ್ಕೆ ಆಯಿಲ್‌ ಹೊರಗೆ ಬರಬಹುದು. ಶಾಕ್ಸ್‌ ಟ್ಯೂಬ್‌ಗಳು ಬೆಂಡ್‌ ಆದಾಗ ರಿಪೇರಿ ಮಾಡಬಹುದಾದರೂ, ಹೊಸ ಟ್ಯೂಬ್‌/ ಶಾಕ್ಸ್‌ ಕೊಳವೆಯನ್ನು ಖರೀದಿಸಿ ಅಳವಡಿಸುವುದು ಉತ್ತಮ.

-  ಈಶ


ಈ ವಿಭಾಗದಿಂದ ಇನ್ನಷ್ಟು

  • ಈಗಾಗಲೇ ಚಳಿಗಾಲ ಆರಂಭಗೊಂಡಿದ್ದು, ಅದಕ್ಕೆ ತಕ್ಕಂತೆಯೇ ಬಟ್ಟೆಗಳ ಪ್ಯಾಶನ್‌ ಕೂಡ ಬದಲಾಗುತ್ತಿದೆ. ಕೊರೆವ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಲು ಯಾವ ರೀತಿಯ ಬಟ್ಟೆ...

  • ವಾಹನಗಳ ವ್ಯಾಪಕ ಬಳಕೆ ಬಳಿಕ ಪಿಕಪ್‌ ಕಡಿಮೆಯಾಗಿದೆ, ಆಗಾಗ್ಗೆ ನಿಲ್ಲುತ್ತದೆ, ಮೈಲೇಜ್‌ ಕಡಿಮೆ, ಹೆಚ್ಚು ಹೊಗೆ ಕಾರುವ ಸಮಸ್ಯೆಗಳು ನಿಮ್ಮ ಅನುಭವಕ್ಕೆ ಬರಬಹುದು....

  • ಕಾಲುಂಗುರ ಧರಿಸುವ ಪರಿಕಲ್ಪನೆ ಭಾರತೀಯ ಮೂಲದಿಂದ ಹುಟ್ಟಿಕೊಂಡಿದ್ದು, ಮದುವೆಯಾದ ಹೆಣ್ಣು ಕಾಲುಂಗುರವನ್ನು ಧರಿಸುವುದು ಪದ್ಧತಿ. ಸಾಮಾನ್ಯವಾಗಿ ಬೆಳ್ಳಿಯ...

  • ನಮ್ಮಲ್ಲಿ ಶೇರುಗಳನ್ನು ಕೊಂಡ ಮಾತ್ರಕ್ಕೆ ತಮ್ಮ ಕೆಲಸ ಮುಗಿಯಿತೆಂದು ಸುಮ್ಮನೆ ಕುಳಿತುಕೊಂಡುಬಿಡುವವರ ಸಂಖ್ಯೆ ಹೆಚ್ಚು. ಆದರ ಬೆಳವಣಿಗೆಯ ಬಗೆಗೆ ಹೆಚ್ಚು...

  • ಅವಧಿ, ನಿಗದಿತ ಠೇವಣಿ (ಟರ್ಮ್ ಡೆಪಾಸಿಟ್‌)ಯಿಂದ ಕಾಲಕಾಲಕ್ಕೆ ಉದಾಹರಣೆಗೆ-ತಿಂಗಳು, ಮೂರು ತಿಂಗಳು, ವಾರ್ಷಿಕ ಬಡ್ಡಿ ಬರುತ್ತಿದ್ದರೆ ಈ ಠೇವಣಿಯನ್ನು ಫಿಕ್ಸೆಡ್‌...

ಹೊಸ ಸೇರ್ಪಡೆ