2 ತಿಂಗಳ ರಜೆ ಹಲವು ಅವಕಾಶಗಳಿಗೆ ದಾರಿ

Team Udayavani, Apr 25, 2019, 5:55 AM IST

ಬೇಸಗೆ ರಜೆ ಬಂದರೆ ಸಾಕು ಆರಾಮವಾಗಿ ಇರಬಹುದು ಎಂಬ ಭಾವನೆ ಹಲವರಲ್ಲಿದೆ. ಆದರೆ ಈ ಅವಧಿಯನ್ನು ಸರಿಯಾಗಿ ಸದ್ಭಳಕೆ ಮಾಡಿಕೊಂಡರೆ ಭವಿಷ್ಯಕ್ಕೊಂದು ಭದ್ರ ತಳಹದಿಯನ್ನು ಹಾಕಬಹುದು. ಕಾಲೇಜು ಜೀವನದಲ್ಲಿ ವಾರ್ಷಿಕವಾಗಿ ಸಿಗುವ ಎರಡು ತಿಂಗಳ ರಜೆ ಮುಂದಿನ ತರಗತಿಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಬೇಕಾದ ಅವಧಿ ಎಂದೇ ಪರಿಗಣಿಸಿದರೆ, ಜತೆಗೆ ಶಿಕ್ಷಣಕ್ಕೆಪೂರಕವಾದ ಒಂದಷ್ಟು ವಿಷಯ ಕಲಿಕೆಗೆ ಮೀಸಲಿಟ್ಟರೆ ಭವಿಷ್ಯ ಉಜ್ವಲವಾಗುವುದು. ಹೀಗಾಗಿ ಈ ಬಾರಿ ರಜೆಯಲ್ಲಿ ಏನು ಮಾಡಬಹುದು ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಹಲವು ದಾರಿ.

ಕಾಲೇಜು ಪರೀಕ್ಷೆ ಮುಗಿದು ಎರಡು ತಿಂಗಳು ರಜಾ ಅವಧಿ ಅಂದರೆ ಕೆಲವರಿಗೆ ಸ್ನೇಹಿತರಿಲ್ಲದೆ ಬೋರಾಗಬಹುದು. ಹಲವರಿಗೆ ಅವಕಾಶ ಸದುಪಯೋಗಪಡಿಸುವ, ಸ್ವಾವಲಂಬನೆಯ ದಾರಿ ಕಂಡುಕೊಳ್ಳುವ ಕಾಲ. ಅಂತೂ ರಜೆ ಎಂದಾಕ್ಷಣ ಕಾಲಹರಣ ಮಾಡದೆ, ವೇಳಾಪಟ್ಟಿ ತಯಾರಿಸಿ ಅದರಂತೆ ಮುನ್ನಡೆದರೆ ರಜೆ ದಿನಗಳನ್ನು ಸಂಭ್ರಮಿಸಲು ಸಾಧ್ಯವಿದೆ. ಅದರಿಂದ ಲಾಭವು ಇದೆ.

ಕಾಲೇಜು ತರಗತಿಯ ಅಂತಿಮ ಹಂತದ ಪರೀಕ್ಷೆ ಮುಗಿಯಿತು ಅಂದರೆ ಸ್ವಂತ ಬದುಕು ರೂಪಿಸಿಕೊಳ್ಳುವ ಕಾಲ ಘಟ್ಟ ಸನಿಹಕ್ಕೆ ಬಂತು ಎಂದರ್ಥ. ಮುಂದೆ ಉದ್ಯೋಗ ಹುಡುಕಲು ನಾವು ಸಿದ್ಧಗೊಳ್ಳಬೇಕು. ಹೆತ್ತವರ, ಮನೆಯ ಜವಾಬ್ದಾರಿ ವಹಿಸುವ ಅನಿವಾರ್ಯತೆ ಕೂಡ. ನಾ ಲ್ಕೈದು ವರ್ಷದ ಕಲಿಕೆ ಅವಧಿಗೆ ಒಗ್ಗಿಕೊಂಡು ಮತ್ತೆ ಹೊಸ ದಾರಿ ಹುಡುಕುವುದು ಕೊಂಚ ತ್ರಾಸವೆನಿಸಿದರೂ, ಕಾಲೇಜಿನ ರಜಾ ದಿನಗಳಲ್ಲಿ ಅದಕ್ಕೂಂದು ಭೂಮಿಕೆ ಸಿ ದ್ಧಪಡಿಸುವ ಅವಕಾಶವಂತು ಕಣ್ಣ ಮುಂದಿದೆ. ಪರೀಕ್ಷೆ ಮುಗಿದರೂ, ಇನ್ನೆರೆಡು ವರ್ಷ ವ್ಯಾ ಸಂಗ ಇದೆ ಎನ್ನುವವರಿಗೆ ಒಂದಷ್ಟು ಮನೋರಂಜನೆಯ ಜತೆಗೆ ಜೀವನ ಕೌಶಲ ರೂಢಿಸಲು ಅವಕಾಶವು ಇದೆ.

ಶಾಲಾ, ಕಾಲೇಜಿಗೆ ತೆರಳುವ ಹೊತ್ತಲ್ಲಿ ಪರಾವಂಬಿಯಾಗಿದ್ದಲ್ಲಿ, ಸ್ವತಂತ್ರವಾಗಿ ಕೆಲಸ ಮಾಡಲು ಪ್ರೋತ್ಸಾಹ ನೀಡದಿದ್ದರೆ ಅವರ ಬದುಕನ್ನು ಸಲೀಸಾಗಿ ಮುನ್ನಡೆಸಲಾಗದು. ಬಟ್ಟೆ ಒಗೆಯುವುದು, ಇಸ್ತ್ರೀ ಹಾಕುವುದು ಹೀಗೆ ನಾನಾ ಸಂಗತಿಗಳಿಗೆ ತಾಯಿ ಅಥವಾ ಮನೆ ಮಂದಿಯನ್ನು ಅವಲಂಬಿಸಿ ಆರಾಮವಾಗಿ ದಿನ ದೂಡುವ ವಿದ್ಯಾರ್ಥಿಗಳು ಸಾಕಷ್ಟಿದ್ದಾರೆ. ಈ ಎರಡು ತಿಂಗಳ ರಜಾ ದಿನಗಳಲ್ಲಿ ಈ ಕೆಲಸವನ್ನು ಮನೆ ಮಂದಿ ಮಾಡದೆ, ಮಕ್ಕಳಿಂದಲೇ ಮಾಡಿಸಬೇಕು. ಇದರಿಂದ ಉದ್ಯೋಗ ಅವಧಿಯಲ್ಲಿ ಊರು ಬಿಟ್ಟು ಒಂಟಿ ಜೀವನ ನಡೆಸಬೇಕಾದ ಸಂದರ್ಭದಲ್ಲಿಯೂ ಇದರಿಂದ ಪ್ರಯೋಜನ ದೊರೆಯುತ್ತದೆ.

ಇನ್ನು ಕಲಿಕೆಗೆ, ದುಡಿಮೆಗೆ ಸಾಕಷ್ಟು ಅವಕಾಶ ಇರುವ ಸಮಯ. ರಜೆ ಅಂದಾಕ್ಷಣ ಮನೆಯಲ್ಲಿ, ನೆಂಟರ ಮನೆಯಲ್ಲಿ ಕೂರಬೇಕಿಲ್ಲ. ಪಠ್ಯೇತರ ಕಲಿಕೆ, ಒಂದಷ್ಟು ಆದಾಯ ಸಂಪಾದನೆ ವಿಫುಲ ಅವಕಾಶಗಳಿವೆ. ಭವಿಷ್ಯದಲ್ಲಿ ಸಾಧನೆ ತೋರಬೇಕು ಎಂಬ ಕ್ಷೇತ್ರದ ಬಗ್ಗೆ ಪೂರ್ವಭಾವಿ ಕಲಿಕೆ, ತಯಾರಿಗೆ ಬೇಕಾದ ಶಿಬಿರಗಳು ಇವೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ಸ್ವಂತ ಉದ್ಯಮ ನಡೆಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆಯುವಿಕೆ, ಸಂಗೀತ, ಕ್ರೀಡೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತರಬೇತಿ ಪಡೆದುಕೊಂಡು ವಿದ್ಯಾಭ್ಯಾಸದ ಬಳಿಕ ಉದ್ಯೋಗ ಗಿಟ್ಟಿಸಲು ನೆರವಾಗಬಹುದು. ಭಿತ್ತಿಪತ್ರಗಳು, ಚಿತ್ರ ಪಟಗಳು, ಹೊಸ ಶಬ್ದ ಕಲಿಯುವುದು, ಬರವಣಿಗೆ ಸುಧಾರಿಸಿಕೊಳ್ಳುವುದು. ಹೊಸ ಹಾಡು, ಶ್ಲೋಕ, ನೃತ್ಯ ಕಲಿಯುವುದು, ಡೈರಿ ಬರೆಯುವುದು, ಕೃಷಿ ಕಡೆಗೆ ಗಮನ ಕೊಡುವುದು, ಓದುವುದು -ಬರೆಯುವುದು, ಪ್ರವಾಸ, ಆಟ ಹೀಗೆ ನಾನಾ ಅವಕಾಶಗಳನ್ನು ಬಳಸಿಕೊಳ್ಳಬಹುದು. ಇವುಗಳು ನಮ್ಮ ವೈಯಕ್ತಿಕ ಬದುಕಿಗೆ ಸಹಕಾರಿ ಆಗಿರಬೇಕು.

ಜೀವನ ಕೌಶಲಗಳು
ಅದೆಷ್ಟೋ ತಾಯಂದಿರು ಮಕ್ಕಳೆಂದರೆ ಮುದ್ದು ಮಾಡುವುದು ಹೆಚ್ಚು. ವಿಭಕ್ತ ಕುಟುಂಬ ಹೆಚ್ಚಾದ ಹಾಗೆ ಆಧರಿಸುವ, ಅಕ್ಕರೆ ತೋರುವ ಪ್ರಮಾಣವು ಅಧಿಕವಾಗಿದೆ. ಕಾಲೇಜು ಮುಗಿದು ಉದ್ಯೋಗ ಪಡೆದ ಮೇಲು ಮಕ್ಕಳ ಮೇಲಿನ ಅತಿ ಪ್ರೀತಿ ಕಣ್ಮರೆಯಾಗದು. ಇದರ ಬದಲು ಎಳವೆಯಿಂದಲೇ ಅಂದರೆ ಶಾಲಾ, ಕಾಲೇಜು ರಜಾ ಅವಧಿಯಲ್ಲಿ ಸ್ವಾವಲಂಬನೆಯ ಪಾಠ ಹೇಳಿಕೊಡಲು ಮನೆ ಮಂದಿಗೂ ಒಂದು ಅವಕಾಶ. ಅದನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೂ ಸುವರ್ಣಾವಕಾಶ.

-   ಕಿರಣ್‌ ಕುಂಡಡ್ಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಎಷ್ಟೋ ಬಾರಿ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಮಾತನಾಡಿ ಪ್ರಯೋಜನವಿರುವುದಿಲ್ಲ. ಅದು ಗೊತ್ತಿದ್ದರೂ ನಾವು ಸೋಲ ಬಾರದು ಎಂಬ ಕಾರಣಕ್ಕೆ ಮಾತನ್ನು ಮುಂದುವರಿಸುತ್ತಾ...

  • ಬದುಕಿನಲ್ಲಿ ಪ್ರತಿಯೊಂದು ಘಟ್ಟಕ್ಕೂ ಒಂದೊಂದು ವಯಸ್ಸಿದೆ. ಆಯಾ ವಯಸ್ಸಿನಲ್ಲಿ ಆಯಾ ಘಟ್ಟಗಳನ್ನು ಪೂರೈಸಿದರೆ ಬದುಕು ಸುಂದರ. ಬಾಲ್ಯ, ಕಲಿಕೆ, ವಿವಾಹ, ಮಕ್ಕಳು,...

  • ಮನಸ್ಸೊಂದು ಹುಚ್ಚು ಕುದುರೆಯಂತೆ. ಲಗಾಮು ಇಲ್ಲದಿದ್ದರೆ ಎತ್ತಲತ್ತ ಓಡುತ್ತದೆ. ಅದನ್ನು ಹತೋಟಿಯಲ್ಲಿಡುವುದು ಅಗತ್ಯ. ಇಲ್ಲವಾದಲ್ಲಿ ಪರಿಣಾಮ ಬರೀ ವ್ಯಕ್ತಿಯ...

  • ಜೀವನದಲ್ಲಿ ಎಲ್ಲವನ್ನೂ ಎಷ್ಟು ಬೇಕು ಅಷ್ಟನ್ನೇ ಅನುಭವಿಸಬೇಕು. ಅದು ಅತಿಯಾದ ಖುಷಿಯೇ ಇರಲಿ ಅಥವಾ ದುಃಖವೇ ಇರಲಿ. ಖುಷಿಯನ್ನು ಅನುಭವಿಸಿ ಥಟ್ಟನೆ ಮರೆತು ಬಿಡುವ...

  • ಸಾಧನೆ ಮಾಡಹೊರಟವರಿಗೆ ಗುರಿ ಮತ್ತು ಗುರು ಇವೆರಡೂ ಅತ್ಯವಶ್ಯ. ಆಯ್ದುಕೊಂಡ ಗುರಿ ಸ್ಪಷ್ಟವಾಗಿಲ್ಲದಿದ್ದರೂ ಮಾರ್ಗದರ್ಶನ ನೀಡುವ ಗುರು ಸರಿ ಇಲ್ಲದಿದ್ದರೂ ಸಾಧನೆ...

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಮತ್ತು ರಾಜ್ಯ ಗುಪ್ತಚರ ವಿಭಾಗ ಅಡಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ನಿಗ್ರಹ ವಿಭಾಗ...

  • ಬೆಂಗಳೂರು: ನಗರದ ಸುತ್ತ-ಮುತ್ತಲ ಪ್ರದೇಶಗಳಲ್ಲಿ ಜೆಎಂಬಿ(ಜಮಾತ್‌-ಉಲ್‌-ಮುಜಾಹಿದ್ದೀನ್‌) ಉಗ್ರರ ಅಡಗುತಾಣಗಳು ಪತ್ತೆಯಾಗಿವೆ ಎಂಬ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)...

  • ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ನನ್ನನ್ನು ಬಂಧಿಸಿರುವುದು ರಾಜಕೀಯ ಪಿತೂರಿ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ದೆಹಲಿ ಹೈಕೋರ್ಟ್‌ನಲ್ಲಿ ತಮ್ಮ...

  • ಬೆಂಗಳೂರು: ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ರೂಪಿಸಿರುವ "ಸಹಾಯ ಆ್ಯಪ್‌'ನಲ್ಲಿ ದಾಖಲಾಗುವ ದೂರುಗಳನ್ನು ಕಾಲಮಿತಿಯೊಳಗೆ ಬಗೆಹರಿಸುವುದಕ್ಕೆ...

  • ಬೆಂಗಳೂರು: ವೇತನ ಪರಿಷ್ಕರಣೆಗಾಗಿ ಎಚ್‌ಎಎಲ್‌ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನ ತಾರಕ್ಕೇರಿದ್ದು, ನೌಕರರ ಸಂಘಟನೆ ಮತ್ತು ಆಡಳಿತ...