ಸಾಲ ಸಾವಿರ ಸಮಸ್ಯೆಗಳ ಆಗರ

Team Udayavani, Oct 7, 2019, 5:07 AM IST

ಯಾಕೋ ಕೈಯಲ್ಲಿ ದುಡ್ಡೇ ಉಳಿಯೋಲ್ಲ. ಸಂಬಳದ ಹಣ ಎರಡೇ ವಾರದಲ್ಲಿ ಖಾಲಿ ಆಗಿಬಿಡುತ್ತೆ. ಎಲ್ಲಿ, ಹೇಗೆ ಖಾಲಿ ಆಗುತ್ತೆ ಅಂತಾನೇ ಗೊತ್ತಾಗ್ತಾ ಇಲ್ಲ. ಇದು, ಎಲ್ಲರೂ ಹೇಳುವ ಸಾಮಾನ್ಯವಾದ ಮಾತು. ಆದರೆ, ದುಡ್ಡನ್ನು ಸರಿಯಾದ ಯೋಜನೆ ಮಾಡಿ ಖರ್ಚು ಮಾಡಿದರೆ, ಚಿಕ್ಕ ಸಂಬಳದ ನೌಕರಿ ಇದ್ದಾಗ ಕೂಡ ಒಂದಷ್ಟು ಹಣ ಉಳಿತಾಯ ಮಾಡಬಹುದು.

ಪರಿಚಯದ ಒಬ್ಬ ವ್ಯಕ್ತಿ ಅಂದುಕೊಳ್ಳಿ. ಅವನು ಆರು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿರುತ್ತಾನೆ. ಅಷ್ಟು ದಿನದವರೆಗೂ ಸಿಟಿಬಸ್‌ನಲ್ಲಿ ಓಡಾಡುತ್ತಾ ಇದ್ದವನು, ನೌಕರಿ ಸಿಕ್ಕ ಕೆಲವೇ ದಿನಗಳಲ್ಲಿ ಬೈಕ್‌ ಮಾಲಕ ಆಗುತ್ತಾನೆ. ಹೇಗಿದ್ದರೂ ಕೆಲಸ ಸಿಕ್ಕಿದೆ. ಅವನ ಬಳಿ ಸಾಕಷ್ಟು ಹಣ ಇರಬಹುದು ಎಂದುಕೊಂಡು ಮಾತು ಶುರು ಮಾಡಿ, ಸ್ವಲ್ಪ ಹಣದ ಅಗತ್ಯ ಇತ್ತು ಅಂದರೆ, ಅಯ್ಯೋ , ದುಡ್ಡು ಇಲ್ಲ ಸರ್‌. ಬೈಕ್‌ ತಗೊಂಡೆ ಅಲ್ವ? ಅದರದ್ದೇ ಹತ್ತು ವರ್ಷ ಕಂತು ಕಟ್ಟಬೇಕಿದೆ ಅನ್ನುತ್ತಾನೆ. ಅಂದರೆ, ಕೆಲಸ ಸಿಕ್ಕಿದ ತತ್‌ಕ್ಷಣ ಅವನು ಸಂಬಳದಾರ ಮತ್ತು ಸಾಲಗಾರ-ಎರಡೂ ಆದಂತೆ ಆಯಿತು.

ಆ ಮೂಲಕ ಸಾಲದ ಶೂಲದಿಂದ ತಪ್ಪಿಸಿಕೊಳ್ಳಬಹುದಿತ್ತು ಅಲ್ಲವಾ? ಉಹೂಂ, ನಮ್ಮಲ್ಲಿ ಹೆಚ್ಚಿನವರು ಹೀಗೆ ಯೋಚನೆಯನ್ನೇ ಮಾಡುವುದಿಲ್ಲ. ಕೈಗೆ ನಾಲ್ಕು ಕಾಸು ಬಂತು ಅಂದರೆ ತತ್‌ಕ್ಷಣ ಸಾಲ ಮಾಡಲು ಮುಂದಾಗುತ್ತಾರೆ. ನಾಳೆ ಏನಾಗುತ್ತೋ ಯಾರಿಗೆ ಗೊತ್ತು? ಸದ್ಯ ಸುಲಭದಲ್ಲಿ ಸಾಲ ಸಿಕ್ತಾ ಇದೆ. ಈಗ ತಗೊಂಡು, ಖುಷಿಯಾಗಿದ್ದು, ಲೈಫ್ ಅನ್ನು ಎಂಜಾಯ್‌ ಮಾಡೋಣ ಎಂದು ಉಡಾಫೆ ಮಾತಾಡುತ್ತಾರೆ. ಬೇರೆ ವಿಷಯದಲ್ಲಿ ನಾಳೆ ಏನು ಬೇಕಾದರೂ ಆಗಬಹುದು. ಆದರೆ ಸಾಲದ ವಿಷಯದಲ್ಲಿ ಮಾತ್ರ ಯಾವ ಪವಾಡವೂ, ಬದಲಾವಣೆಯೂ ನಡೆಯುವುದಿಲ್ಲ. ಪೂರ್ತಿ ತೀರಿಸುವವರೆಗೂ ಸಾಲ ಎಂಬುದು ಒಂದು ಹೊರೆಯ ರೂಪದಲ್ಲಿ, ಸಮಸ್ಯೆಯ ಹೆಸರಿನಲ್ಲಿ ನಮ್ಮ ಜತೆಗೆ ಇರುತ್ತದೆ.

ಹಾಗಾಗಿ, ಸಾಲ ಮಾಡುವ ಮುನ್ನ ಹತ್ತು ಬಾರಿ ಯೋಚಿಸಿ. ಆದಷ್ಟೂ ಸಾಲ ಮಾಡದೇ ಬದುಕಲು ಅಥವಾ ಕಡಿಮೆ ಮೊತ್ತದ ಸಾಲ ಮಾಡಿ ಬದುಕಲು ಪ್ರಯತ್ನಿಸಿ. ಅಂದಹಾಗೆ, ನೌಕರಿ ಮಾಡುವಷ್ಟು ದಿನವೂ ಪ್ರತಿ ತಿಂಗಳೂ, ಸಾವಿರ ರೂಪಾಯಿಗಳನ್ನೇ ಆದರೂ ಉಳಿತಾಯ ಮಾಡಲು ಮರೆಯಬೇಡಿ. ಚಿಕ್ಕ ಮೊತ್ತ ಕಷ್ಟ ಕಾಲದಲ್ಲಿ ನಮ್ಮ ಸಹಾಯಕ್ಕೆ ಬಂದೇಬರುತ್ತದೆ, ನೆನಪಿರಲಿ.

ಸಾಲ ಸಮಸ್ಯೆ
ಸಾಲಗಾರ ಆಗುವುದೆಂದರೆ, ಸಮಸ್ಯೆಗೆ ಸಿಕ್ಕಿಕೊಳ್ಳುವುದು ಅಂತಾನೇ ಅರ್ಥ. ಸಾಲ ಮಾಡದೆಯೇ, ಬೈಕ್‌ನ ಮಾಲಕನಾಗುವ ಅವಕಾಶ ಅವನಿಗೆ ಇತ್ತು. ಹೇಗೆ ಅಂದುಕೊಂಡಿರಾ? ಇಷ್ಟು ದಿನ ಆರಾಮವಾಗಿ ಸಿಟಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದವನು, ನೌಕರಿ ಸಿಕ್ಕಿದ ಅನಂತರ ಕೂಡ ಎರಡು ವರ್ಷಗಳ ಕಾಲ ಬಸ್‌ನಲ್ಲಿ ಪ್ರಯಾಣ ಮಾಡಬಹುದಿತ್ತು. ಅವನಿಗೆ ಒಂದು ತಿಂಗಳಿಗೆ 12,000 ಸಂಬಳ ಅಂದುಕೊಳ್ಳಿ, ಅದರಲ್ಲಿ, ತಿಂಗಳಿಗೆ 2,500 ರೂ. ಉಳಿಸಿದರೂ ವರ್ಷದ ಕೊನೆಗೆ ಆ ಮೊತ್ತ 30,000 ರೂ. ಆಗುತ್ತಿತ್ತು. ಎರಡು ವರ್ಷ ತುಂಬಿದರೆ, ಹೀಗೆ ಉಳಿಸಿದ ಮೊತ್ತವೇ 60,000 ರೂ. ಆಗುತ್ತಿತ್ತು. ಅಕಸ್ಮಾತ್‌ 3ನೇ ವರ್ಷ ಕೂಡ ಬಸ್‌ನಲ್ಲಿ ಓಡಾಡುವ ನಿರ್ಧಾರ ಮಾಡಿ ಉಳಿತಾಯ ಮಾಡಿದ್ದರೆ, ಈ ಹಣವೇ 90,000 ಆಗುತ್ತಿತ್ತು. ಅಷ್ಟೂ ಹಣವನ್ನು ಕೊಟ್ಟು, ನಯಾ ಪೈಸೆ ಸಾಲ ಮಾಡದೆ ಒಂದು ಬೈಕ್‌ ಖರೀದಿಸಬಹುದಿತ್ತು ಅಲ್ಲವಾ?

 -  ಸಾಗರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಎಪ್ರಿಲ್‌ 1ರಿಂದ ಭಾರತ್‌ ಸ್ಟೇಜ್‌-6 (ಬಿಎಸ್‌-6) ಜಾರಿಯಾಗಲಿದೆ. ಬಿಎಸ್‌-6 ಎಂಬುದು ಭಾರತ್‌ ಸ್ಟೇಜ್‌ 6 ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕ ಮಟ್ಟದಲ್ಲಿ ಇದನ್ನು ಯೂರೋ...

  • ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಅತೀ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಇದು ಶೇ. 51ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರುತಿ ಸುಜುಕಿಯಲ್ಲಿ...

  • ಇ ತ್ತೀಚೆಗೆ ನವನವೀನ ಮಾದರಿಯ ಸ್ಮಾರ್ಟ್‌ ಫಿಟೆ°ಸ್‌ ಬ್ಯಾಂಡ್‌ ಹಾಗೂ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುತ್ತಿವೆ. ಇವುಗಳು ಇಂದು ನಮ್ಮ ಕೆಲಸವನ್ನು ಸುಲಭ ಮಾಡುತ್ತಿವೆ....

  • ಇಂದು ಆಕರ್ಷಕ ಬೈಕ್‌ಗಳು ಹೆಚ್ಚು ಜನ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಇಲ್ಲಿ ರಸ್ತೆಗಿಳಿಯಲು ಸಿದ್ಧವಾಗಿರುವ ಬೈಕ್‌ ಒಂದನ್ನು ಪರಿಚಯಿಸಲಾಗಿದೆ. ಬಜಾಜ್‌...

  • ಮಾರುಕಟ್ಟೆಗೆ ದಿನಕ್ಕೊಂದು ಹೊಸ ಉತ್ಪನ್ನ ಆಗಮನವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಕಾರು ಉದ್ಯಮದಲ್ಲಿ ಸರಕಾರದ ನಿರ್ದೇಶನದ ಮೇರೆಗೆ ಬಿಎಸ್‌6 ಎಂಜಿನ್‌ ಇರುವ...

ಹೊಸ ಸೇರ್ಪಡೆ