ನೇಚರ್‌ ನಗರಿ ಇಲ್ಲಿ ವಾಹನ ಓಡಾಟವೇ ಇಲ್ಲ

Team Udayavani, Feb 21, 2020, 11:40 PM IST

kala-38

ಅಮೇರಿಕದ ಮೆಕಿನ್ಯಾಕ್‌ ದ್ವೀಪ ಒಂದು ಪ್ರವಾಸಿ ತಾಣ. ಅಲ್ಲಿ ಪ್ರಾಚೀನ ಕಾಲದ ಕೋಟೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಗರ ಗಮನ ಸೆಳೆಯುವುದು ತನ್ನ ವಾಹನ ನಿರ್ಬಂಧಿತ ರಸ್ತೆಗಳಿಂದ. 1898ರಿಂದಲೇ ಇಲ್ಲಿ ವಾಹನಗಳಿಗೆ ನಿಷೇಧ ಹೇರಲಾಗಿದೆ. ಹಾಗಾದರೆ ಇಲ್ಲಿನ ನಿವಾಸಿಗಳು ಹೇಗೆ ಪ್ರಯಾಣಿಸುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅವರೆಲ್ಲರೂ ಸೈಕಲ್ಗಳನ್ನು ನೆಚ್ಚಿಕೊಂಡಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರೂ ಅಷ್ಟೇ, ಸೈಕಲ್ಗಳನ್ನೇ ಬಾಡಿಗೆಗೆ ಪಡೆದು ಚಲಾಯಿಸುತ್ತಾರೆ. ಅನೇಕ ವೇಳೆ ಕಾಲ್ನಡಿಗೆಯಲ್ಲೇ ಕ್ರಮಿಸುವುದೂ ಉಂಟು. ಮಜವೆಂದರೆ ಅಲ್ಲಿನ ಪೊಲೀಸರು ಕೂಡಾ ಸೈಕಲ್ನಲ್ಲಿ ಪ್ರಯಾಣಿಸುತ್ತಾರೆ.

ಕುದುರೆ ಗಾಡಿ
ಮೈಸೂರಿಗೆ ಭೇಟಿ ಕೊಟ್ಟವರು ಅಲ್ಲಿನ ರಸ್ತೆಗಳಲ್ಲಿ ಕುದುರೆ ಗಾಡಿಗಳಲ್ಲಿ ಪ್ರಯಾಣಿಕರು, ಪ್ರವಾಸಿಗರು ಸಂಚರಿಸುವುದನ್ನು ನೋಡಿರುತ್ತೀರಾ. ಅಲ್ಲಿ ಟ್ರಾಫಿಕ್ನಲ್ಲಿ ಹೊಗೆಯುಗುಳುವ ವಾಹನಗಳ ಮಧ್ಯೆ ಕುದುರೆ ಗಾಡಿ ಠಾಕು ಠೀಕಾಗಿ ಹೋಗುತ್ತದೆ. ಆದರೆ ಮೆಕಿನ್ಯಾಕ್ನಲ್ಲಿ ರಸ್ತೆಗಳ ಮೇಲೆ ಕುದುರೆ ಗಾಡಿಗಳು ಯಾವುದೇ ಹಾಹಾರ್ನ್ ಗ ಳ ಕಿರಿಕಿರಿಯಿಲ್ಲದೆ ರಾಜಾರೋಷವಾಗಿ ಪ್ರಯಾಣಿಸುವುದನ್ನು ಕಾಣಬಹುದು. ಸೈಕಲ್‌ ಬಿಟ್ಟರೆ ಅಲ್ಲಿನ ಪ್ರಮುಖ ಸಾರಿಗೆ ವ್ಯವಸ್ಥೆ ಎಂದರೆ ಕುದುರೆ ಗಾಡಿಗಳೇ.

ಅಮೆರಿಕ ಉಪಾಧ್ಯಕ್ಷರ ದ್ವಂದ್ವ
ಕೆಲ ವರ್ಷಗಳ ಹಿಂದೆ ಅಮೆರಿಕದ ಉಪಾಧ್ಯಕ್ಷರು ನಗರಕ್ಕೆ ಭೇಟಿ ನೀಡಿದ್ದರು. ಅಮೆರಿಕದ ರಾಜಕಾರಣಿಗಳಿಗೆ, ಮಂತ್ರಿಗಳಿಗೆ ನೀಡುವ ಭದ್ರತಾ ವ್ಯವಸ್ಥೆ ತುಂಬಾ ಕಟ್ಟುನಿಟ್ಟಾಗಿರುತ್ತದೆ. ಹೀಗಾಗಿ ಉಪಾಧ್ಯಕ್ಷರು ಸ್ಥಳೀಯ ನಿಯಮವನ್ನು ಪಾಲಿಸುವರೇ ಇಲ್ಲವೇ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ಅವರು ಸೈಕಲ್‌ ಅಥವಾ ಕುದುರೆಗಾಡಿಗಳನ್ನು ಬಳಸಲಿಲ್ಲ. ಅವರು ಎಂದಿನಂತೆ ಬುಲೆಟ್‌ ಪ್ರೂಫ್ ಕಾರಿನಲ್ಲಿಯೇ ಪ್ರಯಾಣಿಸಿದರು. ಆ ಸಮಯದಲ್ಲಿ ಎಲ್ಲೆಡೆ ವಾದ ಪ್ರತಿವಾದಗಳು ಕೇಳಿ ಬಂದಿದ್ದವು. ಅದೇನೇ ಇರಲಿ. ಈ ರಸ್ತೆಗಳಲ್ಲಿ ಇನ್ನೊಂದು ಬಾರಿ ವಾಹನ ಚಲಾಯಿಸಲು ಅನುಮತಿ ನೀಡಲಾಗಿತ್ತು. ಸೂಪರ್‌ ಮ್ಯಾನ್‌ ಸಿನಿಮಾ ಖ್ಯಾತಿಯ ಕ್ರಿಸ್ಟೋಫ‌ರ್‌ ರೀವ್‌ ಅಭಿನಯದ ಸಿನಿಮಾ ಶೂಟಿಂಗಿಗೆಂದು ಅನುಮತಿ ನೀಡಲಾಗಿತ್ತು. ಅದು ಬಿಟ್ಟರೆ ಯಾರಿಗೂ ವಾಹನ ಚಲಾಯಿಸಲು ಅನುಮತಿ ನೀಡಿಲ್ಲ.

ಚಳಿಗಾಲದಲ್ಲಿ ಹೊಸ ವಾಹನ
ಅಮೆರಿಕದಲ್ಲಿ ಚಳಿ ಎಂದರೆ ನಮ್ಮ ಊರುಗಳಂತಲ್ಲ. ಮನೆಗಳೇ ಮುಚ್ಚಿಹೋಗುವಷ್ಟು ಹಿಮಸುರಿಯುತ್ತದೆ. ಆ ವಾತಾವರಣದಲ್ಲಿ ಕುದುರೆಗಾಡಿ, ಸೈಕಲ್‌ ಯಾವುವೂ ಉಪಯೋಗಕ್ಕೆ ಬಾರದು. ಹೀಗಾಗಿ ಚಳಿಗಾಲದಲ್ಲಿ ಮಾತ್ರ ಅಲ್ಲಿನ ಆಡಳಿತ ಹೊಸದೊಂದು ವಾಹನಕ್ಕೆ ಅನುಮತಿ ನೀಡುತ್ತದೆ. ಅದರ ಹೆಸರು ಸ್ನೋ ಮೊಬಿಲ…’. ಅದು ಹಿಮದ ಮೇಲೆ ಜಾರುವ ಇಂಧನ ಆಧಾರಿತ ಪುಟ್ಟ ವಾಹನ. ಅದರಲ್ಲಿ ಒಬ್ಬರು ಆರಾಮಾಗಿ ಕುಳಿತುಕೊಳ್ಳಬಹುದು. ಅದನ್ನು ಬೈಕಿನಂತೆ ಚಲಾಯಿಸಲಾಗುತ್ತದೆ.

ಟಾಪ್ ನ್ಯೂಸ್

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.