ಒತ್ತಡ-ಖಿನ್ನತೆಗೆ ಒಳಗಾಗದಿರಿ, ಮನಸ್ಸು ಪ್ರಫ‌ುಲ್ಲವಾಗಿರಲಿ


Team Udayavani, Oct 10, 2018, 1:09 PM IST

10-october-9.gif

ಇಂದು 26ನೇ ವಿಶ್ವ ಮಾನಸಿಕ ಆರೋಗ್ಯ ದಿನ. 1992ರಲ್ಲಿ ಆರಂಭವಾದ ಈ ಅಭಿಯಾನ ಪ್ರತಿವರ್ಷ ನವೀನ ಘೋಷವಾಕ್ಯಗಳೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಣೆಯಾಗುತ್ತಿದೆ. ದೈಹಿಕ ಹಾಗೂ ಭೌತಿಕ ಆರೋಗ್ಯದಷ್ಟೇ ಮುಖ್ಯವಾಗಿರುವ ಮಾನಸಿಕ ಆರೋಗ್ಯವನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ((WHO) ಧ್ಯೇಯ.

“YOUNG PEOPLE AND MENTAL HEALTH IN A CHANGING WORLD”
ಈ ಬಾರಿಯ ಘೋಷವಾಕ್ಯ…

ದೈಹಿಕ ಸೌಂದರ್ಯಕ್ಕೆ ಎಲ್ಲರೂ ಹಾತೊರೆಯುತ್ತಿರುವಾಗ ಮಾನಸಿಕ ಸೌಂದರ್ಯದ ಕಲ್ಪನೆ ಮರೆವಿನ ಅಂಚಿಗೆ ಸರಿದಿದೆ. 21ನೇ ಶತಮಾನದಲ್ಲಿ ಎಲ್ಲ ರಂಗಗಳೂ ಕ್ಷಿಪ್ರ ಬೆಳವಣಿಗೆಗಳನ್ನು ಕಾಣುತ್ತಿವೆ. ಆದರೆ, ಮಾನಸಿಕ ನೆಮ್ಮದಿ ದೂರವಾಗುತ್ತಿದೆ. ಸದಾ ಒತ್ತಡದಲ್ಲಿ ಜೀವಿಸುತ್ತಿರುವ ಜನರು ಕ್ಲೇಷಗಳಿಗೆ ತುತ್ತಾಗುತ್ತಿದ್ದಾರೆ. ಮನೋರೋಗವನ್ನು ಆರಂಭದಲ್ಲೇ ಗುರುತಿಸದೆ ಅಥವಾ ನಿಯಂತ್ರಿಸದೆ ಅಪಾಯವನ್ನು ಆಹ್ವಾನಿಸುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿಯೇ ಜಾಗತಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಮೊದಲ ಬಾರಿಗೆ ಆಚರಿಸಿದ್ದು 1992ರ ಅಕ್ಟೋಬರ್‌ 10ರಂದು. ವಿಶ್ವಸಂಸ್ಥೆಯ ಅಂದಿನ ಉಪಕಾರ್ಯದರ್ಶಿ ರಿಚರ್ಡ್‌ ಹಂಟರ್‌ ಇದನ್ನು ಅಧಿಕೃತವಾಗಿ ಘೋಷಿಸಿದ್ದರು. ಆಗ ಯಾವುದೇ ಥೀಮ್‌ ಅಥವಾ ಘೋಷವಾಕ್ಯ ನೀಡಿರಲಿಲ್ಲ. ಆರಂಭದ ವರ್ಷಗಳಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡುವ ಹಾಗೂ ಉತ್ತೇಜಿಸುವ ವಿಷಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಡೆದವು. 1996ರಿಂದ ವರ್ಷಕ್ಕೊಂದು ಘೋಷವಾಕ್ಯ ರೂಪಿಸಲಾಯಿತು. ಈ ವರ್ಷದ ಘೋಷವಾಕ್ಯ’ ಬದಲಾಗುತ್ತಿರುವ ಜಗತ್ತಿನಲ್ಲಿ ಯುವ ಜನರು ಮತ್ತು ಮಾನಸಿಕ ಆರೋಗ್ಯ’. ಪ್ರಸ್ತುತ ಕಾಲಘಟ್ಟಕ್ಕೆ ಇದು ಅತ್ಯಂತ ಸೂಕ್ತವಾಗಿದೆ. ಬದಲಾಗುತ್ತಿರುವ ಸನ್ನಿವೇಶದಲ್ಲಿ ಅತ್ಯಂತ ವೇಗವಾಗಿ ಬದಲಾಗುತ್ತಿರುವ ಯುವಜನತೆ ದಾರಿ ತಪ್ಪದೆ ಮಾನಸಿಕ ಸ್ವಾಸ್ಥ್ಯದ ಕಡೆಗೂ ಗಮನ ನೀಡಲಿ ಎಂಬ ಆಶಯದ ಪ್ರತಿರೂಪದಂತಿದೆ.

ಮಾನಸಿಕ ವ್ಯಾಕುಲತೆ
ಅಧ್ಯಯನಗಳ ಪ್ರಕಾರ ಮನುಷ್ಯನಲ್ಲಿ ಖಿನ್ನತೆಗಳು ಸಾಮಾನ್ಯ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಇದರ ಪರಿಣಾಮಗಳಲ್ಲಿ ವ್ಯತ್ಯಾಸಗಳಿವೆ. ಸಾಮಾನ್ಯವಾಗಿ ಹದಿ ಹರೆಯ ಅಥವಾ ಪ್ರೌಢಾವಸ್ಥೆಯ ಹಂತದಲ್ಲಿ ಮಾನಸಿಕ ವ್ಯಾಕುಲತೆ ಹೆಚ್ಚು. ಕೆಲವೊಂದು ಕಾರಣಗಳಿಗೆ ಶಾಲೆಯನ್ನು ಬದಲಾಯಿಸಬೇಕಾಗುತ್ತದೆ. ಉನ್ನತ ವ್ಯಾಸಂಗಕ್ಕಾಗಿ ಮನೆ ಬಿಟ್ಟು ಹೋಗುವುದು ಇತ್ಯಾದಿಗಳು ಜೀವನದ ಭಾಗವಾದರೂ ಎಳೆಯ ಪ್ರಾಯದವರಲ್ಲಿ ಈ ಸಣ್ಣ ಪುಟ್ಟ ಬೆಳವಣಿಗೆಗಳು ಖಿನ್ನತೆಗೆ ತಳ್ಳುವ ಅಪಾಯವಿದೆ. ಹೊಸ ಜನ, ಹೊಸ ಪರಿಸರ, ಹೊಸ ಸ್ನೇಹಿತರಿಗೆ ಹೊಂದಿಕೊಳ್ಳಲು ಸಮಸ್ಯೆ ಆಗುವುದಿದೆ.

ಮಾನಸಿಕ ಆರೋಗ್ಯ ಹೆಚ್ಚಾಗಿ ನಾವು ವಾಸಿಸುವ ಪರಿಸರ ಅಥವಾ ಸಮಾಜವನ್ನು ಅವಲಂಬಿಸಿದೆ. ಸದಾ ಗಾಬರಿ ಹುಟ್ಟಿಸುವ ಸನ್ನಿವೇಶಗಳು, ಸತತವಾದ ಆಘಾತಗಳು, ಹಿಂಸೆಗಳ ಘಟನೆಗಳು ವ್ಯಕ್ತಿಯನ್ನು ಮತ್ತಷ್ಟು ಆಳಕ್ಕೆ ಒಯ್ಯುತ್ತವೆ. ವ್ಯಕ್ತಿ ಮಾನಸಿಕ ದೃಢತೆಯನ್ನು ಕಳೆದುಕೊಳ್ಳುತ್ತಾನೆ. ಸದಾ ಖಿನ್ನತೆ, ಒತ್ತಡದ ನೆರಳಿನಲ್ಲಿ ಜೀವಿಸುವಂತಾಗುತ್ತದೆ.

ಕಾರಣವೇನು?
ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ ಪ್ರಕಾರ ಮಾನಸಿಕ ಅಸ್ವಸ್ಥತೆಯ ಶೇ. 50ರಷ್ಟು 14ನೇ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ. ಖಿನ್ನತೆಗಳು ಬೆಳೆದು ಆತ್ಮಹತ್ಯೆಗಳ ಹಂತಕ್ಕೆ ಸಾಗುವ ವಯೋಮಾನ 15ರಿಂದ 29ರ ನಡುವಿರುತ್ತದೆ. ಮದ್ಯ-ಮಾದಕ ವಸ್ತುಗಳ ಬಳಕೆ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲಿ ಹೇರಳವಾಗಿದೆ. ಅಸುರಕ್ಷಿತ ಲೈಂಗಿಕತೆಯೂ ದೈಹಿಕ – ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ಮನಸ್ಸು ಹಿಡಿತ ತಪ್ಪುತ್ತದೆ.

ಸಮಗ್ರ ಮಾನಸಿಕ ಆರೋಗ್ಯ ಯೋಜನೆ 2013-2020
66ನೇ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಅಳವಡಿಸಿಕೊಂಡ ಸಮಗ್ರ ಮಾನಸಿಕ ಆರೋಗ್ಯ ಯೋಜನೆ ಪ್ರಸ್ತುತ ಜಾರಿಯಲ್ಲಿದೆ. ಇದು ಪ್ರಬಲವಾದ ನಾಲ್ಕು ಗುರಿಗಳನ್ನು ಹೊಂದಿದೆ.

 ಮಾನಸಿಕ ಆರೋಗ್ಯಕ್ಕೆ ಪರಿಣಾಮಕಾರಿ ನಾಯಕತ್ವ ಮತ್ತು ಆಡಳಿತವನ್ನು ಬಲಪಡಿಸುವುದು.
 ಸಮುದಾಯ ಆಧಾರಿತ ವ್ಯವಸ್ಥೆಯಲ್ಲಿ ಸಮಗ್ರ ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಕಾಳಜಿ ಸೇವೆ.
 ಮಾನಸಿಕ ಆರೋಗ್ಯದ ಪ್ರಚಾರ ಮತ್ತು ರೋಗ ತಡೆಗಟ್ಟುವ ತಂತ್ರಗಳ ಅನುಷ್ಠಾನ.
 ಮಾಹಿತಿ ವ್ಯವಸ್ಥೆಗಳು, ಸಾಕ್ಷ್ಯ ಮತ್ತು ಮಾನಸಿಕ ಆರೋಗ್ಯದ ಸಂಶೋಧನೆಗೆ ಬಲ.

ತುರ್ತು ಸ್ಥಿತಿಯಲ್ಲಿ ಮಾನಸಿಕ ಆರೋಗ್ಯ
ಆಪತ್ತುಗಳು ಎದುರಾದ ಸಂದರ್ಭ ಮಾನಸಿಕ ಆರೋಗ್ಯಗಳು ಹದಗೆಡುವ ಸಾಧ್ಯತೆಗಳು ಜಾಸ್ತಿ. ನಿರಾಶ್ರಿತರು, ವಿಪತ್ತುಗಳಿಂದ ಬದುಕುಳಿದವರು, ಭಯೋತ್ಪಾದನೆ, ಯುದ್ಧ ಮೊದಲಾದ ಸನ್ನವೇಶಗಳಲ್ಲಿ ಬದುಕುಳಿದರ ಜನರಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಆಗಬೇಕಾಗಿದೆ. ಆರ್ಥಿಕ ಪರಿಹಾರಕ್ಕಿಂತಲೂ ಜೀವನೋತ್ಸಾಹ ತುಂಬುವ ಕೆಲಸ ಮೊದಲು ನಡೆಯಬೇಕು.

ತಾಯಿ -ಮಗುವಿನ ಆರೋಗ್ಯ
ವಿಶ್ವದಾದ್ಯಂತ ಶೇ. 10ರಷ್ಟು ಗರ್ಭಿಣಿಯರು ಮತ್ತು ಶೇ. 13ರಷ್ಟು ಮಹಿಳೆಯರು ಮಾನಸಿಕ ಅಸ್ವಾಸ್ಥ್ಯ ಅನುಭವಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು ಹೇಳಿವೆ. ಇವುಗಳಿಗೆ ಮುಖ್ಯ ಕಾರಣ ಖಿನ್ನತೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಖಿನ್ನತೆ ಗರ್ಭಾವಸ್ಥೆಯಲ್ಲಿ ಶೇ. 15.6 ಹಾಗೂ ಮಗುವಿನ ಜನನದ ಬಳಿಕ ಶೇ. 19.8 ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ. ಹೆರಿಗೆಯ ಸಂದರ್ಭ ಅನುಭವಿಸುವ ತೀವ್ರವಾದ ನೋವು ಮಹಿಳೆ, ಮಗುವನ್ನು ಸಾವಿನ ಸನಿಹಕ್ಕೆ ದೂಡುತ್ತದೆ. ಭಾರತದಲ್ಲಿ ಕುಟುಂಬ ಪದ್ಧತಿ ಉತ್ತಮವಾಗಿರುವ ಕಾರಣ ಮಾನಸಿಕ ಆರೋಗ್ಯದ ಸಮಸ್ಯೆ ಕಡಿಮೆ ಎನ್ನಲು ಅಡ್ಡಿಯಿಲ್ಲ.

ಒಂದು ದಿನದ ಕಾಯಕವಲ್ಲ
ವಿಶ್ವ ಮಾನಸಿಕ ಆರೋಗ್ಯ ದಿನ ಕೇವಲ ಒಂದು ದಿನದ ಕೆಲಸವಾಗಿ ಉಳಿದಿಲ್ಲ. ಇದೊಂದು ದೀರ್ಘಾವಧಿಯ ಜಾಗೃತಿ ಕಾರ್ಯಕ್ರಮ. ಕೆಲವು ರಾಷ್ಟ್ರಗಳಲ್ಲಿ ಕೆಲವು ತಿಂಗಳುಗಳ ಕಾಲ ಜನರಲ್ಲಿ ಅರಿವು ಮೂಡಿಸುವ ಕೆಲಸಗಳು ನಡೆಯುತ್ತವೆ. ವಿಶ್ವಸಂಸ್ಥೆಯ ಅಂಗವಾದ ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ಮುತವರ್ಜಿ ವಹಿಸುತ್ತಿದೆ. ಆಚರಣೆ, ಉಪಕ್ರಮಗಳ ಕುರಿತು ವಿವಿಧ ರಾಷ್ಟ್ರಗಳಿಂದ ವರದಿಗಳನ್ನು ತರಿಸಿಕೊಳ್ಳುತ್ತದೆ. ಮುಂಬರುವ ವರ್ಷ ಹೇಗೆ ವಿಭಿನ್ನವಾಗಿ ಆಚರಿಸಬಹುದು ಎಂದು ಚರ್ಚೆಗಳು ನಡೆಯುತ್ತವೆ.

ಪರಿಹಾರ ಹೇಗೆ?
ಮಾನಸಿಕ ಅಸ್ವಸ್ಥತೆಯ ಅಪಾಯವನ್ನು ಮನಗಂಡ ವಿಶ್ವ ಆರೋಗ್ಯ ಸಂಸ್ಥೆ ಜಾಗೃತಿ ಮೂಡಿಸಲು ತೀರ್ಮಾನಿಸಿತು. ಮಾನಸಿಕ ಆರೋಗ್ಯ ಹಾಳುಗೆಡುವ ಸಂದರ್ಭವನ್ನು ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ದಿನಾಚರಣೆ ಪ್ರಯೋಜನಕಾರಿಯಾಗಿದೆ. ಶಾಲೆಗಳಲ್ಲಿ ಒತ್ತಡಗಳನ್ನು ಕಡಿಮೆ ಮಾಡಬೇಕು. ಮಕ್ಕಳ ಆಶಯಕ್ಕೆ ವಿರುದ್ಧವಾಗಿ ನಡೆಯಬಾರದು. ಶಿಕ್ಷಣಕ್ಕಾಗಿ ಮಕ್ಕಳನ್ನು ದೂರದ ಊರು, ಹಾಸ್ಟೆಲ್‌ ಗಳಿಗೆ ಕಳುಹಿಸುವಾಗ ಅವರ ಅಭಿಪ್ರಾಯವನ್ನೂ ಕೇಳುವ ಪ್ರಯತ್ನ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅಪ್ಪ-ಅಮ್ಮನ ಪ್ರೀತಿಯಿಲ್ಲದೆ ಮಕ್ಕಳು ಏಕಾಂಗಿತನ ಅನುಭವಿಸುತ್ತಾರೆ. ಇದು ಮುಂದೆ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಖಿನ್ನತೆ ಮತ್ತು ಕಪ್ಪು ನಾಯಿ
ಮಾನಸಿಕ ಖಿನ್ನತೆಗೆ ಒಳಪಟ್ಟ ಸಂದರ್ಭ ಮನಸ್ಸು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ. 2005-2015ರ ಅವಧಿಯ ಅಂಕಿ ಅಂಶಗಳ ಪ್ರಕಾರ ವಿಶ್ವದ ಒಟ್ಟು ಜನಸಂಖ್ಯೆಯ ಶೇ. 18ಕ್ಕಿಂತಲೂ ಹೆಚ್ಚಿನ ಜನ ಖಿನ್ನತೆಯೊಂದಿಗೆ ಜೀವಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಜಗತ್ತಿನ 250 ದಶಲಕ್ಷಕ್ಕೂ ಅಧಿಕ ಜನರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಖಿನ್ನತೆ ಸಾಮಾನ್ಯ ಮಾನಸಿಕ ಅಸ್ವಸ್ಥತೆ. ನಿರಂತರ ದುಃಖದಿಂದ ಕೂಡಿದ್ದು, ಸಾಮಾನ್ಯವಾಗಿ ಆನಂದಿಸುವ ಚಟುವಟಿಕೆಯಲ್ಲಿ ಆಸಕ್ತಿ ಕಳೆದುಹೋಗುತ್ತದೆ. ದೈನಂದಿನ ಕೆಲಸಗಳಲ್ಲೂ ನಿರಾಸಕ್ತಿ ಖಿನ್ನತೆಯ ಸುಳಿವು. ಹಸಿವೂ ಕಡಿಮೆಯಾಗುತ್ತದೆ. ನಿದ್ದೆ, ವಿಶ್ರಾಂತಿಯಲ್ಲೂ ವ್ಯತ್ಯಾಸಗಳು ಗೋಚರಿಸುತ್ತವೆ. ಏಕಾಗ್ರತೆ ನಷ್ಟವಾಗುತ್ತದೆ. ಚಡಪಡಿಕೆ, ನಿಷ್ಪ್ರಯೋಜಕ ಭಾವನೆ, ಹತಾಶೆ, ಸ್ವಯಂ ಹಾನಿ ಅಥವಾ ಆತ್ಮಹತ್ಯೆಯಂತಹ ಯೋಚನೆಗಳು ಬರುತ್ತವೆ. 2017ರ ವಿಶ್ವ ಆರೋಗ್ಯ ದಿನಾಚರಣೆ ಖಿನ್ನತೆಯನ್ನು ನಿವಾರಿಸಲು ಪಣ ತೊಟ್ಟಿತ್ತು. ಇದಕ್ಕಾಗಿ ಅಭಿಯಾನವೊಂದನ್ನು ರೂಪಿಸಿದ ವಿಶ್ವ ಆರೋಗ್ಯ ಸಂಸ್ಥೆ ಖಿನ್ನತೆಗೆ ಒಳಗಾಗಿರುವವರನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಪರಿಹಾರ ಒದಗಿಸಿ, ರೋಗದಿಂದ ಮುಕ್ತರಾಗಿಸುವ ಕಾಯಕ ಆರಂಭಿಸಿತು. ಬರಹಗಾರ ಮ್ಯಾಥ್ಯೂ ಜಾನ್‌ಸ್ಟೋನ್‌ ಅವರು ಖಿನ್ನತೆಯನ್ನು ಕಪ್ಪು ನಾಯಿಗೆ ಹೋಲಿಸಿದ್ದಾರೆ. ಇಂಗ್ಲೆಂಡಿನ ಅಂದಿನ ಪ್ರಧಾನಿ ಸರ್‌ ವಿನ್‌ಸ್ಟನ್‌ ಚರ್ಚಿಲ್‌ ಮಾನವನ ಮನಸ್ಸಿನ ಮೇಲೆ ನಿರಂತರವಾಗಿ ತೂಗುತ್ತಿರುವ ಖಿನ್ನತೆಯ ವಿದ್ಯಮಾನವನ್ನು ಕಪ್ಪುನಾಯಿ ಎಂದು ಉಲ್ಲೇಖಿಸಿದ್ದರು.

 ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.