ಮೌಲ್ಯಗಳು ಬದುಕಿನ ಆಸ್ತಿ

Team Udayavani, Sep 23, 2019, 5:46 AM IST

ವ್ಯಕ್ತಿಯ ಜೀವನ, ಸಮಾಜ, ಅರ್ಥವ್ಯವಸ್ಥೆ, ರಾಜಕಾರಣಗಳೆಲ್ಲವೂ ಮೌಲ್ಯಾ ಧಾರಿತ ವಾಗಿ ರಬೇಕು. ಮೌಲ್ಯಗಳ ಅಳವಡಿಕೆಯಿಂದ ವ್ಯಕ್ತಿಯ ಗೌರವ, ಘನತೆ ವೃದ್ಧಿಸಿ, ಚಿನ್ನದಂತೆ ಪರಿಶುದ್ಧಗೊಂಡು “ಬದುಕು ಬಂಗಾರ’ವಾಗುವುದು. ಹಾಗೆ ವ್ಯಕ್ತಿತ್ವ ಸಂಪೂರ್ಣವಾಗಿ ವಿಕಾಸಗೊಳ್ಳುವುದು.

ಮೌಲ್ಯಗಳು ನಮ್ಮ ಬದುಕಿನಲ್ಲಿ ಆಸ್ತಿ ಇದ್ದಂತೆ. ಸಂಸ್ಕಾರ ಮತ್ತು ಸಂಸ್ಕೃತಿಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮಹತ್ವದ ಮೌಲ್ಯಗಳು. ಉತ್ತಮ ಜೀವನ ನಡೆಸಲು ಇವೆರಡೂ ಅತೀ ಅಗತ್ಯ.

ನ್ಯಾಯ ಮತ್ತು ಪ್ರಾಮಾಣಿಕತನಕ್ಕಿರುವ ಪ್ರಾಧಾನ್ಯ ಹಾಗೂ ವ್ಯವಹಾರದಲ್ಲಿ ಅವುಗಳ ಬಳಕೆ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತವೆ. ಮೌಲ್ಯಗಳು ಎಲ್ಲ ಜೀವಿಗಳಲ್ಲಿ ಅಂತರ್ಗತವಾಗಿದ್ದು, ಅವರ ನೈಜ ಸ್ವಭಾವವೇ ಆಗಿರುತ್ತದೆ.

ವ್ಯಕ್ತಿಯ ಜೀವನ, ಸಮಾಜ, ಅರ್ಥವ್ಯವಸ್ಥೆ, ರಾಜಕಾರಣಗಳೆಲ್ಲವೂ ಮೌಲ್ಯಾ ಧಾರಿತ ವಾಗಿ ರಬೇಕು. ಮೌಲ್ಯಗಳ ಅಳವಡಿಕೆಯಿಂದ ವ್ಯಕ್ತಿಯ ಗೌರವ, ಘನತೆ ವೃದ್ಧಿಸಿ, ಚಿನ್ನದಂತೆ ಪರಿಶುದ್ಧಗೊಂಡು “ಬದುಕು ಬಂಗಾರ’ವಾಗುವುದು. ಹಾಗೆ ವ್ಯಕ್ತಿತ್ವ ಸಂಪೂರ್ಣವಾಗಿ ವಿಕಾಸಗೊಳ್ಳುವುದು.

ಮೌಲ್ಯವರ್ಧನೆ ಎಂದರೆ, ವ್ಯಕ್ತಿಗಳಲ್ಲಿ ನೈತಿಕ ಸದ್ಗುಣಗಳಾದ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣುತಾಭಾವ ಇವೇ ಮೊದಲಾದ ಗುಣಗಳನ್ನು ಬೆಳೆಸುವುದಾಗಿದೆ.

ಜೀವನದ ಗುರಿ ನಿರ್ಧರಿಸಲು ಪೂರಕ
ಮೌಲ್ಯಗಳಲ್ಲಿ ಮಾನವೀಯ, ಸಾಮಾಜಿಕ, ಕೌಟುಂಬಿಕ, ಶೈಕ್ಷಣಿಕ, ವ್ಯಕ್ತಿಗತ, ಆರ್ಥಿಕ, ಧಾರ್ಮಿಕ, ಐತಿಹಾಸಿಕ, ಬೌದ್ಧಿಕ, ಆಧ್ಯಾತ್ಮಿಕ, ನೈತಿಕ ಇತ್ಯಾದಿ ಹಲವು ವಿಧಗಳಿವೆ. ವರ್ತನೆಯ ನೈತಿಕತೆಗೆ ಸಂಬಂಧಿಸಿದಂತೆ ಯಾವುದು ಸರಿ; ಯಾವುದು ತಪ್ಪು, ಯಾವುದಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು, ಜೀವನದ ಗುರಿ ಏನಾಗಿರಬೇಕು ಮುಂತಾದವನ್ನು ನಿರ್ಧರಿಸುವುದರಲ್ಲಿ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ಭಾಂದವ್ಯ ವೃದ್ಧಿ: ಮೌಲ್ಯಗಳು ನಮ್ಮ ಬದುಕಿಗೆ ಒಂದು ಸುಂದರ ರೂಪು ಕೊಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೌಲ್ಯಗಳು ಸಹಕಾರಿ. ಮೌಲ್ಯಗಳ ಅಳವಡಿಕೆಯಿಂದ ಕುಟುಂಬ, ಸಮಾಜದಲ್ಲಿ ಭಾಂದವ್ಯ ವೃದ್ಧಿಯಾಗುತ್ತದೆ. ಆದ್ದರಿಂದಲೇ ಮೌಲ್ಯಗಳನ್ನು ಬದುಕಿನ ಆಧಾರ ಸ್ತಂಭಗಳಿದ್ದಂತೆ ಎನ್ನುತ್ತೇವೆ. ಹಾಗೇ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಕೂಡ ಹೌದು. ಮೌಲ್ಯಗಳಿಲ್ಲದ ಜೀವನ ವ್ಯರ್ಥ. ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ-ನಿಯಮ, ಆದರ್ಶ, ಶಿಸ್ತು, ಸಂಸ್ಕಾರ, ಮಾನವೀಯ ಗುಣ, ಸದಾಚಾರ, ಉತ್ತಮ ನಡವಳಿಕೆಗಳೇ ಮೌಲ್ಯಗಳಾಗಿವೆ. ಆದರೆ ಜೀವನದಲ್ಲಿ ಈ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತೇವೆ ಎನ್ನುವುದು ಮುಖ್ಯ.

ನೆಮ್ಮದಿಯ ಮೂಲ ಸೂತ್ರ
ಐಶ್ವರ್ಯ ಸುಖವನ್ನು ನೀಡಬಹುದೇ ವಿನಾ ನೆಮ್ಮದಿಯನ್ನಲ್ಲ ಎನ್ನುವ ಮಾತಿದೆ. ಬೇಕಾದಷ್ಟು ಹಣ, ಶ್ರೀಮಂತಿಕೆ ಇದ್ದರೆ ನಮ್ಮ ಬಯಕೆಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು. ಅವುಗಳಿಂದ ನಮಗೆ ನೆಮ್ಮದಿ ಅಥವಾ ಮನಃಶಾಂತಿ ಲಭಿಸಲಾರದು. ಆದರೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡರೆ ಅವುಗಳು ನಾವು ದಿಕ್ಕುತಪ್ಪದಂತೆ ಕಾಯುತ್ತವೆ. ಇದು ನೆಮ್ಮದಿ ಲಭಿಸಲು ಪೂರಕ. ಅದಕ್ಕಾಗಿಯೇ ಹಿರಿಯರು ನೈತಿಕ ಮೌಲ್ಯಗಳೇ ಬದುಕಿನ ನೆಮ್ಮದಿಯ ಮೂಲ ಸೂತ್ರಗಳು ಎಂದಿದ್ದಾರೆ.

ಮೌಲ್ಯಗಳನ್ನು ಅಂತರ್ಗತ ಮಾಡಿ
ಉತ್ತಮ ಜ್ಞಾನ ಇದ್ದರೆ ಜೀವನ ಸಮೃದ್ಧವಾಗಬಹುದು. ಶ್ರದ್ಧೆ, ಪ್ರಾಮಾಣಿಕತೆ, ಆತ್ಮವಿಶ್ವಾಸ, ಕಠಿನ ಪರಿಶ್ರಮ ಮತ್ತು ನಿಶ್ಚಿತ ಗುರಿಯಿದ್ದಲ್ಲಿ ಮಾತ್ರವೇ ಬಾಳಿನಲ್ಲಿ ಯಶಸ್ಸು ಸಾಧಿಸಬಹುದು. ಹಾಗಾಗಿ ತೋರ್ಪಡಿಕೆಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಬದಲು ಅಂತರ್ಗತ ಮಾಡಿಕೊಳ್ಳಬೇಕು.

ದುರಭ್ಯಾಸಗಳಿಂದ ದೂರವಿರಲು ಸಹಕಾರಿ
ಪ್ರತಿಯೊಬ್ಬನ ವರ್ತನೆ, ವ್ಯಕ್ತಿತ್ವದಿಂದ ಆತನ ಜೀವನ ಮೌಲ್ಯ ನಿರ್ಧರಿ ಸಲಾಗು ತ್ತದೆ ಅಥವಾ ವ್ಯಕ್ತವಾಗುತ್ತದೆ. ನಾವು ಸಮಾಜದಲ್ಲಿ ಸುಖವಾಗಿದ್ದೇವೋ ಇಲ್ಲವೋ ಎನ್ನುವುದನ್ನು ನಿರ್ಧರಿಸುವುದು ನಮ್ಮ ವೈಯಕ್ತಿಕ ಮೌಲ್ಯ. ಅಷ್ಟೇ ಅಲ್ಲದೆ, ನಮ್ಮನ್ನು ಮತ್ತು ನಮ್ಮ ಸ್ನೇಹಿತರನ್ನೂ ಇತರರು ಅಳೆಯುವುದು, ನಮ್ಮ ವ್ಯಕ್ತಿತ್ವವನ್ನು ಸಮಾಜ ಗುರುತಿಸುವುದು ವೈಯಕ್ತಿಕ ಮೌಲ್ಯಗಳ ಆಧಾರದಿಂದಲೇ. ನಮ್ಮ ನೆಲೆ ಮತ್ತು ಒಲವುಗಳನ್ನು ತಿಳಿಯಪಡಿಸುವುದು ಈ ಮೌಲ್ಯಗಳು.

ಮೌಲ್ಯಗಳನ್ನು ನಾವು ಅಂತರ್ಗತ ಮಾಡಿಕೊಂಡಾಗ ಅದು ಶಕ್ತಿಯುತ ವಾಗುವುದು. ಅನುಭವವು ನಾವು ನಂಬಿದ ಮೌಲ್ಯಗಳನ್ನು ದೃಢಪಡಿ ಸುತ್ತ ಹೋಗುತ್ತವೆ. ನಾವು ಮೌಲ್ಯಗಳನ್ನು ಆಚರಣೆಗೆ ತರಬೇಕು. ಆಗ ಮಾತ್ರ ಜನರು ನಮ್ಮನ್ನು ಗುರುತಿಸುತ್ತಾರೆ ಮತ್ತು ಅನುಸರಿಸು ತ್ತಾರೆ. ಮೌಲ್ಯಗಳು ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಬೆಳೆಯಲು ಮತ್ತು ದುರಭ್ಯಾಸಗಳಿಂದ ದೂರವಿರಲು ಸಹಕಾರಿಯಾಗಿವೆ. ವ್ಯಕ್ತಿ ಗತ ಗುಣವಾಗಿ ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಕೊಂಡರೆ ಅದರಿಂದ ಸಾಮಾಜಿಕ ಸ್ಥಾನ-ಮಾನ ವೃದ್ಧಿಸುವುದು.

 -ಗಣೇಶ ಕುಳಮರ್ವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಾಂಪೋಸ್ಟ್‌ ತಯಾರಿ ಒಂದು ಕಲೆ. ಗುಂಡಿಯಲ್ಲಿ ಹಾಕಿದ ಗೊಬ್ಬರ, ತ್ಯಾಜ್ಯ ವಸ್ತು ಹೆಚ್ಚಿನ ಶಾಖಕ್ಕೆ ತುತ್ತಾಗಿ ಅಲ್ಲಿರುವ ಜೀವಾಣುಗಳು ಸಾಯುತ್ತವೆ. ಕೆಲವು ಬಾರಿ...

  • ದ.ಕ. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಪುತ್ತೂರು, ಸುಳ್ಯ ತಾಲೂಕಿನಲ್ಲಿ ಕೃಷಿ ಇಲ್ಲಿನ ಜನರ ಆರ್ಥಿಕ ಮೂಲ. ಸಾಂಪ್ರದಾಯಿಕ ಭತ್ತ ಕೃಷಿಯ ಜತೆಗೆ ಬದುಕಿನ ನಂಟು ಹೊಂದಿದ್ದ...

  • ಪುತ್ತೂರು: ಈ ವಾರ ಹೊಸ ಅಡಿಕೆ ಬೆಲೆಯಲ್ಲಿ 10 ರೂ. ಏರಿಕೆಯಾಗಿದೆ. ಕಳೆದ ವಾರ 205 ರೂ. ತನಕ ಖರೀದಿಯಾಗಿದ್ದ ಹೊಸ ಅಡಿಕೆ 205-2015 ರೂ. ತನಕ ಖರೀದಿಯಾಗಿದೆ. ಹಳೆಯ ಅಡಿಕೆ (ಸಿಂಗಲ್‌...

  • ದೇಹವನ್ನು ತಂಪಾಗಿರಿಸಲು ಎಳನೀರಿಗಿಂತ ಉತ್ತಮವಾದ, ಹಿತಕರವಾದ ಪೇಯ ಇನ್ನೊಂದಿಲ್ಲ. ರಸ್ತೆ ಬದಿ ಎಳನೀರನ್ನು ಮಾರುವವರನ್ನು ನೋಡಿರುತ್ತೀರಿ. ಗ್ರಾಹಕರು ಕೇಳಿದಾಗ...

  • ಮಹಾನಗರ: ಬೆಸೆಂಟ್‌ ಸಂಧ್ಯಾ ಕಾಲೇಜಿನ ಎಂಕಾಂ ವಿದ್ಯಾರ್ಥಿನಿ, ಮಣ್ಣಗುಡ್ಡೆ ನಿವಾಸಿ ಅಪೇಕ್ಷಾ ಎಸ್‌. ಕೊಟ್ಟಾರಿ ಅವರು ಅತೀ ಉದ್ದ ಎಕ್ಸ್‌ ಪ್ಲೋಶನ್‌ ಗಿಫ್ಟ್‌...

ಹೊಸ ಸೇರ್ಪಡೆ

  • ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೋಮವಾರ...

  • ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸ್‌ ಅಧಿಕಾರಿ,...

  • ಗಂಗಾವತಿ: ಪ್ರವಾಹದಿಂದಾಗಿ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ರಕ್ಷಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ...

  • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

  • ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ...