Udayavni Special

ಕಾರು ಸ್ಟಾರ್ಟ್‌ ಆಗದಿರಲು ಕಾರಣಗಳೇನು?

Team Udayavani, Jan 17, 2020, 5:01 AM IST

an-26

ಕಾರು ನಿಲ್ಲಿಸಿ ಕೆಲವು ದಿನ ಆಯ್ತು. ಆದ್ರೆ ಈಗ ಸ್ಟಾರ್ಟ್‌ ಮಾಡಲು ನೋಡ್ತಿದ್ರೆ ಜಪ್ಪಯ್ಯ ಅಂದ್ರೂ ಸ್ಟಾರ್ಟ್‌ ಆಗ್ತಿಲ್ಲ ಎನ್ನುವ ಸಮಸ್ಯೆಯನ್ನು ನೀವು ಎದುರಿಸಿರಬಹುದು. ಕಾರು ಸ್ಟಾರ್ಟ್‌ ಆಗದಿರಲು ಹಲವು ಕಾರಣಗಳಿದ್ದು, ಅವುಗಳೇನಿರಬಹುದು ನೋಡೋಣ ಬನ್ನಿ..

ಬ್ಯಾಟರಿ ಡೆಡ್‌!
ಸಾಮಾನ್ಯವಾಗಿ ಕಾರು ಸ್ಟಾರ್ಟ್‌ ಆಗದಿರಲು ಬ್ಯಾಟರಿ ಡೆಡ್‌ ಆಗಿರುವುದು ಕಾರಣ. ಬ್ಯಾಟರಿ ಚಾರ್ಜ್‌ ಇಲ್ಲದ್ದರಿಂದ, ಹಲವಾರು ದಿನ ನಿಂತಲ್ಲೇ ನಿಲ್ಲಿಸಿರುವುದರಿಂದ ಹೀಗಾಗುತ್ತದೆ. ಹೆಚ್ಚಾಗಿ ಬ್ಯಾಟರಿ ಹಳತಾಗಿದ್ದರೆ ಇಂತಹ ಸಮಸ್ಯೆ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಜರ್ಕ್‌ ಮೂಲಕ ಸ್ಟಾರ್ಟ್‌ ಮಾಡಲು ಯತ್ನಿಸಬಹುದು. ಅಥವಾ ಒಂದು ಬ್ಯಾಟರಿ ತಂದು ಅದರ ಮೂಲಕ ಸ್ಟಾರ್ಟ್‌ ಮಾಡಲು ಯತ್ನಿಸಬಹುದು. ಇದರಲ್ಲಿ ಫ‌ಲ ಕಂಡರೆ ಅದು ಬ್ಯಾಟರಿಯದ್ದೇ ಸಮಸ್ಯೆ. ಹೊಸ ಬ್ಯಾಟರಿ ಹಾಕುವುದು ಅಥವಾ ಇರುವ ಬ್ಯಾಟರಿಯ ಡಿಸ್ಟಿಲ್‌ ವಾಟರ್‌ ಪರಿಶೀಲಿಸಿ ಚಾರ್ಜ್‌ ಮಾಡಿಸುವುದು ಉತ್ತಮ. ಕಾರು ನಿಂತಲ್ಲೇ ಇದ್ದರೂ ಕನಿಷ್ಠ ವಾರಕ್ಕೊಮ್ಮೆ ಸ್ಟಾರ್ಟ್‌ ಮಾಡಿ ಸುಮಾರು 10 ನಿಮಿಷ ಎಂಜಿನ್‌ ಬಿಸಿ ಮಾಡುವುದು ಉತ್ತಮ.

ಇಂಧನ ಫಿಲ್ಟರ್‌ ಬ್ಲಾಕ್‌
ಇಂಧನ ಫಿಲ್ಟರ್‌ನಲ್ಲಿ ಕಸ ಕಟ್ಟಿಕೊಂಡಿರುವುದು, ಫಿಲ್ಟರ್‌ ಬದಲಾವಣೆ ಮಾಡಿ ಹಲವಾರು ಸಮಯ ಆಗಿರುವುದರಿಂದಲೂ ಕಾರು ಸ್ಟಾರ್ಟ್‌ ಆಗದೇ ಇರಬಹುದು. ಹೀಗೆ ಕಸ ಕಟ್ಟಿಕೊಂಡಿರುವುದರಿಂದ ಎಂಜಿನ್‌ಗೆ ಸರಿಯಾಗಿ ಇಂಧನ ಪೂರೈಕೆಯಾಗದೇ ಸಮಸ್ಯೆಯಾಗುತ್ತದೆ. ಸಾಮಾನ್ಯವಾಗಿ ಎಲ್ಲ ಕಾರುಗಳ ಇಂಧನ ಫಿಲ್ಟರ್‌ಗಳು 50 ಸಾವಿರ ಕಿ.ಮೀ.ಗೂ ಹೆಚ್ಚು ಚೆನ್ನಾಗಿ ಬಾಳಿಕೆ ಬರುತ್ತವೆ. ಪೆಟ್ರೋಲ…, ಡೀಸೆಲ್‌ ಕಲಬೆರಕೆ ಇದ್ದ ಸಂದರ್ಭದಲ್ಲಿ ಫಿಲ್ಟರ್‌ ಬಾಳಿಕೆ ಕಡಿಮೆ ಇರುತ್ತದೆ.

ಟ್ಯಾಂಕ್‌ ಖಾಲಿ!
ಕಾರುಗಳಲ್ಲಿ ಇಂಧನ ಕನಿಷ್ಠ ಪಕ್ಷ ಕಾಲು ಭಾಗ ಆದರೂ ಇರುವಂತೆ ನೋಡಿಕೊಳ್ಳಬೇಕಾದ್ದು ಅಗತ್ಯ. ಇಲ್ಲದಿದ್ದರೆ, ಅದರಲ್ಲಿ ಇಂಧನ ಹರಿಯುವ ವ್ಯವಸ್ಥೆ, ಪೆಟ್ರೋಲ್‌ ಕಾರುಗಳಲ್ಲಾದರೆ ಫ್ಯೂಯೆಲ್‌ ಇಂಜೆಕ್ಷನ್‌ ಸಿಸ್ಟಂ ಹಾಳಾಗಲು ಕಾರಣವಾಗುತ್ತದೆ. ಟ್ಯಾಂಕಿನಲ್ಲಿ ಇಂಧನ ಕಡಿಮೆಯಾದರೆ ತೀರ ಅಪರೂಪಕ್ಕೊಮ್ಮೆ ಸಮಸ್ಯೆ ಆಗದಿದ್ದರೂ, ಇಂಧನ ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕಾದ್ದು ಅಗತ್ಯ.

ಸ್ಟಾರ್ಟರ್‌ ಸಮಸ್ಯೆ
ಕಾರಿನೊಳಗೆ ಇಂಜಿನ್‌ ಚಾಲೂ ಮಾಡಲು ಸ್ಟಾರ್ಟರ್‌ ಎಂಬ ಸಾಧನ ಇರುತ್ತದೆ. ಕಾರು ಸ್ಟಾರ್ಟ್‌ ಮಾಡುವ ವೇಳೆ ಇದು ಚಾಲೂ ಆಗದೇ ಇಂಜಿನ್‌ ಚಾಲೂ ಆಗದು. ಒಂದು ವೇಳೆ ಸ್ಟಾರ್ಟಿಂಗಲ್ಲಿ ಕೇವಲ ಶಬ್ದ ಮಾತ್ರ ಬರುತ್ತದೆ. ಇಂಜಿನ್‌ ಸ್ಟಾರ್ಟ್‌ ಆಗಲು ಕೇಳುತ್ತಿಲ್ಲ ಎಂದರೆ ಅದು ಸ್ಟಾರ್ಟರ್‌ನದ್ದೇ ಸಮಸ್ಯೆ.

ಇಗ್ನಿಶನ್‌ ಸ್ವಿಚ್‌ ಸಮಸ್ಯೆ
ಕೆಲವೊಮ್ಮೆ ಇಗ್ನಿಶನ್‌ ಸ್ವಿಚ್‌ ಕೈಕೊಟ್ಟರೂ ಕಾರು ಸ್ಟಾರ್ಟ್‌ ಆಗುವುದಿಲ್ಲ. ಲೈಟ್‌ಗಳು ಉರಿಯುತ್ತವೆ. ಹೆಡ್ಲೆ„ಟ್‌ ಆನ್‌ ಆಗುತ್ತದೆ. ಆದರೆ ಸ್ಟಾರ್ಟ್‌ ಆಗುತ್ತಿಲ್ಲ ಎಂದರೆ ಇಗ್ನಿàಶನ್‌ ಸ್ವಿಚ್‌ ಸಮಸ್ಯೆ ಇರುತ್ತದೆ. ಇದರ ಬಗ್ಗೆ ಮೆಕ್ಯಾನಿಕ್‌ ಬಳಿ ಕೂಡಲೇ ಪರಿಶೀಲಿಸುವುದು ಉತ್ತಮ.

– ಈಶ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

breadfruit

ದೀವಿ ಹಲಸು ಆದಾಯಕ್ಕೂ ಲೇಸು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಎರಡು ವಾರ ಪೂರೈಕೆ ವಲಯಕ್ಕೆ ಸತ್ವ ಪರೀಕ್ಷೆಯ ಕಾಲ

ಎರಡು ವಾರ ಪೂರೈಕೆ ವಲಯಕ್ಕೆ ಸತ್ವ ಪರೀಕ್ಷೆಯ ಕಾಲ

ಗಂಡನ ಬೈಕ್‌ ಸುತ್ತಾಟ: ಪತ್ನಿಯ ದೂರು

ಗಂಡನ ಬೈಕ್‌ ಸುತ್ತಾಟ: ಪತ್ನಿಯ ದೂರು

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?