ಹೆಚ್ಚು ಕ್ರೆಡಿಟ್‌ ಕಾರ್ಡ್‌ ಇದ್ದರೆ ಏನು ಲಾಭ?

Team Udayavani, Jan 13, 2020, 5:35 AM IST

ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಕುರಿತು ನಮಲ್ಲಿ ಸಾಕಷ್ಟು ಗೊಂದಲ ಇರುತ್ತದೆ. ಅದರ ನಿರ್ವಹಣೆ, ಬಳಕೆ ಮತ್ತು ಆಫ‌ರ್‌ಗಳ ಕುರಿತು ತಿಳಿದುಕೊಳ್ಳುವುದು ಮುಖ್ಯ. ನಾವು 1ಕ್ಕಿಂತ ಹೆಚ್ಚು ಕಾರ್ಡ್‌ ಹೊಂದಬಹುದಾಗಿದ್ದು, ಅದರ ಪ್ರಯೋಜನವೂ
ಇದೆ.

ಕ್ರೆಡಿಟ್‌ ಕಾರ್ಡ್‌ ಅನ್ನು ವ್ಯವಸ್ಥಿತವಾಗಿ ಬಳಸಿ ಕೊಂಡರೆ ತುಂಬಾ ಉಪಕಾರಿ, ಮುಂಜಾಗ್ರತೆ ವಹಿಸದೆ ಸ್ವಲ್ಪ ನಿರ್ಲಕ್ಷ  ವಹಿಸಿದರೂ ಆರ್ಥಿಕ ಹೊರೆ ದುಬಾರಿಯಾಗುತ್ತದೆ. ಇನ್ನು ನಾವು ಒಂದಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿದರೆ ವಿವಿಧ ಸಂದರ್ಭಗಳಲ್ಲಿ ಲಾಭವೇ ಹೆಚ್ಚು. ಎಲ್ಲಾ ಕಾರ್ಡ್‌ಗಳನ್ನು ಒಂದೇ ಬಾರೀಬಳಸುವುದಕ್ಕಿಂತ ವಿವಿಧ ಸಂದರ್ಭಗಳಲ್ಲಿ ಪ್ರಯೋಜನವೇ ಹೆಚ್ಚು.

ಏನು ಲಾಭ ?
ಕ್ರೆಡಿಟ್‌ ಕಾರ್ಡ್‌ ಕಷ್ಟಕಾಲಗಳಿಗೆ ನೆರವಾಗುತ್ತದೆ. ತಿಂಗಳ ಕೊನೆಯಲ್ಲಿ ಇರುವ ಹಣವೆಲ್ಲ ಖಾಲಿ ಯಾದಾಗ ತುರ್ತು ಖರ್ಚು ಗಳನ್ನು ನಿಭಾ ಯಿಸಲು ಅನುಕೂಲ ವಾಗುತ್ತದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಕಾರ್ಡ್‌ ಬಳಸಿಕೊಂಡರೆ ಕ್ರೆಡಿಟ್‌ ಕಾರ್ಡ್‌ ನಿಮಗೆ ಪೂರಕವಾಗಲಿದೆ. ಕೆಲವು ಪೆಟ್ರೋಲ್‌ ಪಂಪ್‌ಗ್ಳಲ್ಲಿ ಆಯ್ದ ಬ್ರಾಂಡೇಂಡ್‌ ಇಂಧನಗಳಿಗೆ ಆಫ‌ರ್‌ ನೀಡಲಾ ಗುತ್ತದೆ. ನೀವು ಸಾಲವನ್ನೂ ಬೇಗ ಇದರಿಂದ ಪಡೆದುಕೊಳ್ಳಬಹುದಾಗಿದೆ.

ಹೆಚ್ಚು ಕಾರ್ಡ್‌ ಇದ್ದಷ್ಟು ಲಾಭ ಜಾಸ್ತಿ
ಕ್ರೆಡಿಟ್‌ ಕಾರ್ಡ್‌ ಹೆಚ ಇಟ್ಟುಕೊಂಡರೆ ಕಾರ್ಡ್‌ ಇದ್ದಷ್ಟು ನಿಮಗೆ ಅನುಕೂಲವೇ. ಕ್ರೆಡಿಟ್‌ ಕಾರ್ಡ್‌ ನೀಡುವ ಹಣಕಾಸಿನ ಸಂಸ್ಥೆಗಳು ಗ್ರಾಹ ಕರನ್ನು ಆಕರ್ಷಿಸಲು ನಾನಾ ಬ್ರಾÂಂಡ್‌ಗಳ ಜತೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಒಂದು ಕಾರ್ಡ್‌ ಆನ್‌ಲೈನ್‌ ಶಾಪಿಂಗ್‌ ಕುರಿತು ಆಫ‌ರ್‌ಗಳನ್ನು ನೀಡುವಂತಿದ್ದರೆ, ಮತ್ತೂಂದು ಕಾರ್ಡ್‌ ಪ್ರಯಾಣ ಸೇವೆಯನ್ನು ನೀಡುವ ಸಂಸ್ಥೆ ಅಥವಾ ಟ್ರಾವೆಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿ ರುತ್ತದೆ. ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳನ್ನು ಹೊಂದಿದ್ದರೆ ಆಫ‌ರ್‌ಗಳು ಇದ್ದ ಸಂದರ್ಭಗಳಲ್ಲಿ ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ವಾರ್ಷಿಕ ಶುಲ್ಕ ಇರುವ ಕಾರ್ಡ್‌ಗಳು
ವಾರ್ಷಿಕ ಶುಲ್ಕಕ್ಕೆ ದೊರೆಯುವ ಕಾರ್ಡ್‌ಗಳು ಉಚಿತವಾಗಿ ದೊರೆಯುವ ಕಾರ್ಡ್‌ಗಳಿಗಿಂತ ಹೆಚ್ಚು ಲಾಭವಾದುದು. ಉಚಿತವಾಗಿ ಯಾವು ದೇ ಶುಲ್ಕವನ್ನು ಹೊಂದಿರದ ಕಾರ್ಡ್‌ಗಳು ಏರ್‌ಪೋರ್ಟ್‌ ಲಾಂಜ್‌ಗಳಲ್ಲಿ ಉಚಿತ ಸೇವೆಯನ್ನು ನೀಡುವುದಿಲ್ಲ. ರೆಸ್ಟೋರೆಂಟ್‌ಗಳಲ್ಲಿ ಅಥವಾ ಇತರೇ ಯಾವುದೇ ವ್ಯಾಪಾರಿ ಮಳಿಗೆಗಳಲ್ಲಿ ಡಿಸ್ಕೌಂಟ್‌ ನೀಡುವುದಿಲ್ಲ. ಆದರೆ ವಾರ್ಷಿಕ ಶುಲ್ಕ ವಿಧಿಸಿ ಆಫ‌ರ್‌ ನೀಡುವ ಕಾರ್ಡ್‌ಗಳನ್ನು ಸರಿಯಾಗಿ ಬಳಸಿಕೊಂಡರೆ ವಾರ್ಷಿಕ ಶುಲ್ಕಕ್ಕಿಂತ ದುಪ್ಪಟ್ಟು ಲಾಭ ಪಡೆಯಬಹುದಾಗಿದೆ.

ಬಿಲ್ಲಿಂಗ್‌ ವ್ಯವಸ್ಥೆ
ಯಾವುದೇ ಕ್ರೆಡಿಟ್‌ ಕಾರ್ಡ್‌ ಆದರೂ ನಿರ್ದಿಷ್ಟ ದಿನಗಳ ಬಿಲ್ಲಿಂಗ್‌ ವ್ಯವಸ್ಥೆ ಇರುತ್ತದೆ. ಬಿಲ್ಲಿಂಗ್‌ ದಿನಾಂಕದ ಮೊದಲ ದಿನವು ನೀವು ಏನನ್ನೇ ಖರೀದಿಸಿದ್ದರೂ ಸುಮಾರು 50 ದಿನಗಳ ವರೆಗೆ ಬಡ್ಡಿ ರಹಿತವಾಗಿರುತ್ತದೆ. ಬಿಲ್ಲಿಂಗ್‌ ಅವಧಿ ಶುರು ವಾದ ಮೇಲೆ ಕಾರ್ಡ್‌ ಬಳಸಿದರೆ ಬಿಲ್‌ ಪಾವತಿ ಮಾಡಬೇಕಾಗಿರುವ ಕಡೆಯ ದಿನಾಂಕವೂ ಹತ್ತಿರ ವಾಗುತ್ತದೆ. ಬಿಲ್ಲಿಂಗ್‌ ಕೊನೆಯ ದಿನಾಂಕದಲ್ಲಿ ನೀವು ಶಾಪಿಂಗ್‌ ಮಾಡಿ ದರೆ ಬಡ್ಡಿರಹಿತ ದಿನಾಂಕಗಳು ಕಡಿತವಾಗಿ ರುತ್ತದೆ. ಒಂದಕ್ಕಿಂತ ಹೆಚ್ಚು ಕಾರ್ಡ್‌ ಇಟ್ಟುಕೊ ಳ್ಳುವುದರಿಂದ ಬಿಲ್ಲಿಂಗ್‌ ಅವಧಿಯಲ್ಲಿ ವ್ಯತ್ಯಾಸವಿರುತ್ತದೆ. ಈ ಮೂಲಕ ನಿಮ್ಮ ಖರ್ಚುಗಳನ್ನು ನಿಭಾಯಿಸಬಹುದಾಗಿದೆ.

ರಿವಾರ್ಡ್‌ಗಳು
ಗ್ರಾಹಕರು ಖರ್ಚು ಮಾಡಲುಹೆಚ್ಚು ರಿವಾರ್ಡ್‌ ಪಾಯಿಂಟ್‌ಗಳನ್ನು ನೀಡಲಾ ಗುತ್ತದೆ. ಹಾಗಂತ ಹೆಚ್ಚು ರಿವಾರ್ಡ್‌ ನಮಗೆ ಲಾಭ ಎಂದು ಕೊಳ್ಳುವಂತಿಲ್ಲ. ರಿವಾರ್ಡ್‌ ಪಾಯಿಂಟ್‌ ಪಡೆಯಲು ಖರ್ಚು ಮಾಡುವುದು ಸರಿಯಲ್ಲ. ರಿವಾರ್ಡ್‌ಗಳಿಗೆ ಸೀಮಿತ ಅವಧಿ ಹೊಂದಿರುತ್ತವೆ. ಆಯಾ ಸಮ ಯಕ್ಕೆ ಅನುಗುಣ ವಾಗಿ ರಿವಾರ್ಡ್‌ ಪಾಯಿಂಟ್‌ಗಳನ್ನು ಎನ್ಕಾ$Âಶ್‌ ಮಾಡಿಕೊಳ್ಳಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಇತ್ತೀಚಿನ ಹವಮಾನ ತೀರಾ ವಿಚಿತ್ರವೆನ್ನಬಹುದು. ಚಳಿಗಾಲವಾಗಿದ್ದರೂ ಸುಡುಬಿಸಿಲು ನೆತ್ತಿಯ ಮೇಲೆ ಮಂಜು ಹನಿಯುವ ಬದಲು ಬೆವರಲ್ಲಿಯೇ ಸ್ನಾನ ಮಾಡಿಸುವಂತಿರುತ್ತದೆ....

  • ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೈಯಲ್ಲೊಂದು ಸ್ಮಾರ್ಟ್‌ಫೋನ್‌, ಮಡಿಲಲ್ಲೊಂದು ಲ್ಯಾಪ್‌ಟಾಪ್‌ ಇರಲೇಬೇಕು. ಈಗಿನ ಕೆಲಸ ಕಾರ್ಯಗಳೆಲ್ಲವೂ ಈ ಎರಡರಲ್ಲೇ ನಿಭಾಯಿಸಲ್ಪಡುವುದರಿಂದ...

  • ಕಾರು ನಿಲ್ಲಿಸಿ ಕೆಲವು ದಿನ ಆಯ್ತು. ಆದ್ರೆ ಈಗ ಸ್ಟಾರ್ಟ್‌ ಮಾಡಲು ನೋಡ್ತಿದ್ರೆ ಜಪ್ಪಯ್ಯ ಅಂದ್ರೂ ಸ್ಟಾರ್ಟ್‌ ಆಗ್ತಿಲ್ಲ ಎನ್ನುವ ಸಮಸ್ಯೆಯನ್ನು ನೀವು ಎದುರಿಸಿರಬಹುದು....

  • ನಂಬಿಗಸ್ತ ಆಟಗಾರ ಎಂದು ಕಣ್ಮುಚ್ಚಿಕೊಂಡು ಹೇಳಬಹುದಾಗಿದ್ದ ಕ್ರಿಕೆಟಿಗರ ಪೈಕಿ ಹರ್ಭಜನ್‌ ಸಿಂಗ್‌ ಕೂಡ ಒಬ್ಬರು. ಅಪಾರ ಪ್ರತಿಭಾವಂತರು ಎಂಬುದು ಪ್ಲಸ್‌ ಪಾಯಿಂಟ್‌....

  • ನವದಂಪತಿ ಪರಸ್ಪರ ಅರಿಯಲು, ರೊಮ್ಯಾಂಟಿಕ್‌ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲು ಹನಿಮೂನ್‌ ಗೆ ತೆರಳುತ್ತಾರೆ. ಏಕಾಂತದಿಂದ ಜೋಡಿ ಹಕ್ಕಿಗಳಾಗಿ ವಿಹರಿಸುವ...

ಹೊಸ ಸೇರ್ಪಡೆ