ಟೋಫೆಲ್‌ ಪರೀಕ್ಷೆ ಪಾಸಾದರೆ ಏನು ಲಾಭ ?

Team Udayavani, Feb 26, 2020, 4:23 AM IST

ವಿದೇಶದಲ್ಲಿ ಕಲಿಯುವ ಆಲೋಚನೆ ನಿಮ್ಮದೇ? ಹಾಗಿದ್ದರೆ ನೀವು ಟೋಫೆಲ್‌ (Test of English as a Foreign Language or TOEFL) ತೇರ್ಗಡೆಯಾಗಬೇಕು. ಇದು ಇಂಗ್ಲಿಷ್‌ ಭಾಷೆಯಲ್ಲಿ ನಿಮಗಿರುವ ಜ್ಞಾನವನ್ನು ಗುರುತಿಸುವ ಪರೀಕ್ಷೆ ಮತ್ತು ಮಾನದಂಡ.

ಎಡುಕೇಶನಲ್‌ ಟೆಸ್ಟಿಂಗ್‌ ಸರ್ವಿಸ್‌ ಅಥವಾ ಇಟಿಎಸ್‌ ಎಂಬ ಜಾಗತಿಕ ಸಂಸ್ಥೆ ಈ ಪರೀಕ್ಷೆ ನಡೆಸುತ್ತದೆ. ಇದಕ್ಕೆ 130 ದೇಶಗಳ 8,500ಕ್ಕೂ ಹೆಚ್ಚು ಸಂಸ್ಥೆಗಳ ಮಾನ್ಯತೆಯಿದೆ. ಅಮೆರಿಕ, ಆಸ್ಟ್ರೇಲಿಯ, ಕೆನಡಾ, ಇಂಗ್ಲೆಂಡ್‌ ಮುಂತಾದ ದೇಶಗಳ ಅನೇಕ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದೇಶೀಯರು ಪ್ರವೇಶ ಪಡೆಯಲು ಟೋಫೆಲ್‌ ಪಾಸಾಗುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಟೋಫೆಲ್‌ ಪರೀಕ್ಷಾ ಮಾದರಿ, ಪ್ರಮುಖ ಮಾಹಿತಿಗಳ ವಿವರಣೆ ಇಲ್ಲಿದೆ.

ನಾಲ್ಕು ವಿಭಾಗಗಳು
ಓದುವಿಕೆ, ಬರವಣಿಗೆ, ಆಲಿಸುವುದು ಹಾಗೂ ಸಂವಹನ ಕೌಶಲ್ಯ ಎಂಬ ನಾಲ್ಕು ವಿಭಾಗಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಭಾಷಾ ಸಾಮರ್ಥ್ಯ, ಶಬ್ದ ಗ್ರಹಿಕೆ, ಭಾಷಾ ನೈಪುಣ್ಯ, ಉಚ್ಚಾರ ಮತ್ತು ವಿಮಶಾìತ್ಮಕ ಗುಣ ಹೀಗೆ ಪ್ರತಿಯೊಂದು ವಿಭಾಗದ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಉಪಯುಕ್ತ ಅಂತರ್ಜಾಲ
ಟೋಫೆಲ್‌ನ ಗೋ ಎನಿವೇರ್‌ (www.TOEFLGoAnywhere.org) ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲೆಂದೇ ಇರುವ ಅಂತರ್ಜಾಲ ತಾಣವಾಗಿದೆ.ಮಾದರಿ ಪ್ರಶ್ನೆಗಳ ಉಚಿತ ಪರೀಕ್ಷೆಗೆ www.ets.org/toefl/ibt/prepare/sample‰questions ತಾಣಕ್ಕೆ ಹೋಗಬಹುದು.

ಸಮೀಪದಲ್ಲಿಯೇ ಪರೀಕ್ಷಾ ಕೇಂದ್ರ ಲಭ್ಯ
ನಿಮ್ಮ ಸಮೀಪದ ಟೋಫೆಲ್‌ ಪರೀಕ್ಷಾ ಕೇಂದ್ರ ಮತ್ತು ಟೋಫೆಲ್‌ ಪ್ರವೇಶದ ಬಗ್ಗೆ ಕೂಡ ಅಂತರ್ಜಾಲದಲ್ಲಿ ಮಾಹಿತಿ ಲಭ್ಯ. ಇದು ವಿದೇಶದಲ್ಲಿ ಕಲಿಯುವ ಉದ್ದೇಶದ ವಿದ್ಯಾರ್ಥಿಗಳಿಗೆ ಪರಸ್ಪರ ಸಂವಾದದ ಮೂಲಕ ನೆರವಾಗುವುದು.

ಮಾನಸಿಕ ಸಾಮರ್ಥ್ಯಕ್ಕೂ ಇದೆ ಅಂಕ
ವ್ಯಕ್ತಿಯ ತಾರ್ಕಿಕತೆ, ವೇಗವಾಗಿ ಆಲೋಚಿಸುವ ಶಕ್ತಿ, ವ್ಯತ್ಯಾಸ ಗುರುತಿಸುವ ಹಾಗೂ ಹೋಲಿಕೆ ಮಾಡುವ ಸಾಮರ್ಥ್ಯ ಅಳೆಯಲು ಮಾನದಂಡ ರೂಪಿತವಾಗಿರುತ್ತವೆ. ಈ ಪರೀಕ್ಷೆಗಳಲ್ಲಿ ಚಿತ್ರಗಳು, ರೇಖಾ ಚಿತ್ರಗಳು ಮತ್ತು ವಿನ್ಯಾಸಗಳನ್ನು ನೀಡಲಾಗಿರುತ್ತದೆ. ಇವುಗಳಲ್ಲಿ ಸರಣಿ ಪೂರ್ತಿ ಗೊಳಿಸುವುದು, ಸಾಮ್ಯತೆ ಗುರುತಿಸುವುದು, ಗುಂಪಿಗೆ ಸೇರದ್ದನ್ನು ಬೇರ್ಪಡಿಸುವುದು ಇತ್ಯಾದಿ ವಿಧಗಳ ಪ್ರಶ್ನೆಗಳಿರುತ್ತವೆ. ಅಶಾಬ್ದಿಕ ಬುದ್ಧಿಮತ್ತೆ ಪರೀಕ್ಷೆಗಳು ಸಾಮಾನ್ಯ ಜ್ಞಾನವುಳ್ಳ ಅನಕ್ಷರಸ್ಥರೂ ಕೂಡ ಈ ಪ್ರಶ್ನೆಗಳಿಗೆ ಉತ್ತರಿಸಬಹುದು.

ಸೇವಾ ಕೇಂದ್ರ
ಟೋಫೆಲ್‌ ಪರೀಕ್ಷೆ ಕುರಿತಂತೆ ಸೂಕ್ತ ಮಾರ್ಗದರ್ಶನ ಹಾಗೂ ಅವಶ್ಯ ಮಾಹಿತಿಗಳನ್ನು ನೀಡಲು ಟೋಫೆಲ್‌ ಗ್ರಾಹಕ ಸೇವಾ ಕೇಂದ್ರ ಸೋಮವಾರದಿಂದ ಶುಕ್ರವಾರದ ವರೆಗೆ (ಭಾರತೀಯ ಕಾಲಮಾನ ಬೆಳಗ್ಗೆ 9ರಿಂದ ಸಂಜೆ 5) ತೆರೆದಿರುತ್ತದೆ. ಅದಕ್ಕಾಗಿ 000-800-100- 3780 ಸಂಖ್ಯೆಗೆ ಕರೆ ಮಾಡಬಹುದು.

ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಫೇಸ್‌ಬುಕ್‌ https://www.facebook.com/toeflgoanywhereindia ವೆಬ್‌ಸೈಟ್‌ನಲ್ಲಿ 1.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಅವರೊಂದಿಗೆ ಟೋಫೆಲ್‌ ವಿದ್ಯಮಾನ, ಸಿದ್ಧತೆಯ ಮಾಹಿತಿ ಪಡೆಯಬಹುದು. ಇಂಗ್ಲಿಷ್‌ ಭಾಷಾ ಅಭ್ಯಾಸ ಕ್ರಮಗಳ ದೃಶ್ಯಾವಳಿ ವೀಕ್ಷಿಸಬಹುದು, ಇಂಗ್ಲಿಷ್‌ ಶಿಕ್ಷಕರಿಂದ ಹಾಗೂ ಈ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಂದ ಸಲಹೆ ಪಡೆಯಬಹುದು.

ಸುಶ್ಮಿತಾ ಜೈನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೀವಿ ಹಲಸು. ಎಲ್ಲ ಉಷ್ಣ ವಲಯ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಿದು. ಮಲಯ ದ್ವೀಪ ಸಮೂಹಗಳ ಮೂಲ ಆಗಿದ್ದು, ಭಾರತದ ನಾನಾ ಭಾಗದಲ್ಲಿ ಇದನ್ನು ಕಾಣಬಹುದು. ವಿವಿಧ ಖಾದ್ಯ...

  • ಹೇರಳ ಆರೋಗ್ಯವರ್ಧಕ ಗುಣಗಳಿರುವ ದಾಳಿಂಬೆಯನ್ನು ಉಪಬೆಳೆಯಾಗಿ ಕೃಷಿ ಮಾಡಬಹುದು. ಮೂಲತಃ ಇರಾನ್‌ ದೇಶಕ್ಕೆ ಸೇರಿರುವ ದಾಳಿಂಬೆಯನ್ನು ಭಾರತದಲ್ಲೂ ಹಲವಾರು ವರ್ಷಗಳಿಂದ...

  • ಕೈಕಾಲುಗಳು ಸಣ್ಣದಾಗಿ, ಹೊಟ್ಟೆ ದೊಡ್ಡದಾಗಿ, ಅದರ ಮೈಮೇಲಿನ ಕೂದಲು ನುಣುಪು ಕಳೆದುಕೊಂಡು ಒರಟಾಗಿ ಕಾಣಿಸತೊಡಗಿದರೆ, ಆ ದನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ...

  • "ಅರೇ ಇದೇನಿದು?'ಎಂದು ಯೋಚಿಸಿದ್ದೀರಾ?ತುಂಬಾ ಸರಳ. ಮನೆ ಸುತ್ತ ಮುತ್ತ ಜಾಗದಲ್ಲಿ ಗಿಡಗಳನ್ನು ಬೆಳೆಸಿದರಾಯಿತು. ಮನೆ ಚಿಕ್ಕದು, ಅಂಗಳ ಇಲ್ಲದಿದ್ದರೂ ಚಿಂತೆ ಇಲ್ಲ....

  • ಸಾಮಾನ್ಯವಾಗಿ ಎಲ್ಲರೂ ಮನೆಯ ಅಂದವನ್ನು ಹೆಚ್ಚಿಸಲು, ಸುಂದರವಾಗಿ ಕಾಣಲು ಬಯಸುತ್ತಾರೆ. ಸೋಫಾ, ಲೈಟ್ಸ್‌, ಇನ್ನಿತರ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ವಿನ್ಯಾಸಗೊಳಿಸುತ್ತೇವೆ....

ಹೊಸ ಸೇರ್ಪಡೆ