ಯೋಗ ಮಾಡಲು ಯಾವ ಸಮಯ ಬೆಸ್ಟ್‌ ?

ಯೋಗ ಮಾಡಿ ಫಿಟ್‌ ಆಗಿ

Team Udayavani, Jan 14, 2020, 5:12 AM IST

ಯೋಗ ಬೆಳಗ್ಗೆಯೂ ಮಾಡಬಹುದು. ಸಂಜೆಯೂ ಮಾಡಬಹುದು. ಎರಡರ ಫ‌ಲವೂ ಬೇರೆ ಬೇರೆ.

ಯೋಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಯಾವ ಸಮಯದಲ್ಲಿ ಮಾಡಿದರೆ ಒಳ್ಳೆಯದು ಎಂಬ ಪ್ರಶ್ನೆ ಇದ್ದೇ ಇದೆ. ಬೆಳಗ್ಗೆ ಹಾಗೂ ಸಂಜೆ ಯೋಗ ಮಾಡುವುದರಿಂದ ಬೇರೆ-ಬೇರೆ ರೀತಿಯ ಅನುಕೂಲಗಳಿವೆ. ಈ ಯೋಗವನ್ನು ಮಾಡಲು ನಿರ್ದಿಷ್ಟ ಸಮಯದ ಗೊಂದಲವಿದ್ದರೆ ಇಲ್ಲಿದೆ ಪರಿಹಾರ.

ಯೋಗ ಪರಿಣಿತರು ಸೂರ್ಯ ಉದಯಿಸುವ ಸಮಯದಲ್ಲಿ ಯೋಗ ಮಾಡಿದರೆ ಒಳ್ಳೆಯದು ಎನ್ನುತ್ತಾರೆ. ಆದರೆ ಬೆಳಗ್ಗಿನ ಶಿಫ್ಟ್ ಕೆಲಸಕ್ಕೆ ಹೋಗುವವರಿಗೆ, ಬೆಳಗ್ಗೆ ಗಂಡ-ಮಕ್ಕಳನ್ನು ಆಫೀಸ್‌- ಶಾಲೆಗೆ ಕಳುಹಿಸುವ ಗೃಹಿಣಿಯರಿಗೆ ಬೆಳಗ್ಗೆಯ ಸಮಯ ಸಾಕಾಗದು. ಅಂತಹವರು ಸಂಜೆ ಯೋಗ ಅಭ್ಯಾಸ ಮಾಡಬಹುದು.

ಬೆಳಗ್ಗಿನ ಯೋಗದ ಪ್ರಯೋಜನಗಳು
 ಉಲ್ಲಾಸದಿಂದ ಪ್ರಾರಂಭಿಸಬಹುದು
ಯೋಗ ಮಾಡುವುದರಿಂದ ಶರೀರಕ್ಕೆ ಉಲ್ಲಾಸ ದೊರೆಯು ವುದು, ಯಾವುದೇ ನೋವು ಇದ್ದರೆ ಮರೆಯಾಗುವುದು, ದಿನಪೂರ್ತಿ ಲವಲವಿಕೆಯಿಂದ ಇರಬಹುದು.

 ಜೀರ್ಣಕ್ರಿಯೆಗೆ ಸಹಕಾರಿ
ಜೀರ್ಣಕ್ರಿಯೆಗೆ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ನಿಮ್ಮ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.

 ದಿನಪೂರ್ತಿ ಖುಷಿ ಖುಷಿಯಾಗಿ ಇರುವಿರಿ
ಯೋಗ ಮಾಡುವುದರಿಂದ ಪಾಸಿಟಿವ್‌ ಎನರ್ಜಿ ದೊರೆಯು ವುದು, ಆದ್ದರಿಂದ ಖುಷಿ ಖುಷಿಯಾಗಿ ದಿನ ಕಳೆಯುವಿರಿ.

ಯೋಗ ಸಂಜೆ ಮಾಡುವುದರ ಅನುಕೂಲಗಳು

 ಒತ್ತಡ ಉಪಶಮನವಾಗುತ್ತದೆ
ಆಫೀಸ್‌, ಮನೆ ಕೆಲಸ ಅಂತ ಯಾವುದೇ ಒತ್ತಡವಿಲ್ಲದೆ ಆರಾಮದಾಯಕವಾಗಿ ಯೋಗ ಮಾಡಬಹುದು.

 ಆಯಾಸ ಕಡಿಮೆಯಾಗುತ್ತದೆ
ಸಂಜೆ ಕೆಲಸ ಮಾಡಿ ಬಂದ ಸುಸ್ತು ಯೋಗ ಅಭ್ಯಾಸ ಮಾಡುವು ದರಿಂದ ಮಾಯವಾಗುವುದು.

 ಜೀರ್ಣಕ್ರಿಯೆಗೆ ಒಳ್ಳೆಯದು
ದಿನಪೂರ್ತಿ ತಿಂದಿದ್ದು ಸಂಜೆ ಯೋಗ ಮಾಡುವುದರಿಂದ ಅರಗಿಸಿಕೊಳ್ಳಬಹುದು.

 ನಿದ್ದೆ ಚೆನ್ನಾಗಿ ಬರುತ್ತದೆ
ಯೋಗ ಮಾಡುವುದರಿಂದ ಮಾನಸಿಕ ಒತ್ತಡಗಳು ದೂರವಾಗು ವುದು, ಜತೆಗೆ ನಿದ್ದೆ ಚೆನ್ನಾಗಿ ಬರುವಂತೆ ಮಾಡುವುದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹುಡುಗರಿಗೆ ಬಹಳ ಇಷ್ಟವಾಗುವ ಕೊಲ್ಹಾಪುರಿ ಚಪ್ಪಲಿಗಳ ಬಗ್ಗೆ ಬರೆದಿದ್ದಾರೆ ಸುಶ್ಮಿತಾ ಜೈನ್‌. ಅವರು ಹೇಳುವಂತೆ ಕೊಲ್ಹಾಪುರಿ ಚಪ್ಪಲಿಗಳ ಹುಟ್ಟು ನಮ್ಮ ಕರ್ನಾಟಕದಲ್ಲೇ....

  • ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಲಿಪ್‌ಸ್ಟಿಕ್‌ ನ ಪಾಲೂ ಇದೆ. ಹಲವು ಬಾರಿ ತಪ್ಪೆಸಗುವುದು ಬಣ್ಣಗಳ ಆಯ್ಕೆಯಲ್ಲಿ. ಅದಕ್ಕೆ ಇಲ್ಲಿವೆ ಕೆಲವು ಸಲಹೆಗಳು. ಸಾಮಾನ್ಯವಾಗಿ...

  • ನಮ್ಮ ಪ್ರಾಚೀನ ಆಭರಣಗಳಲ್ಲಿ ಮರದ ಬಳಕೆ ಸಾಕಷ್ಟಿತ್ತು. ಮರದ ಕಿವಿಯೋಲೆಗಳು ಆಗಲೂ ಜನಪ್ರಿಯ. ಈಗ ಇತಿಹಾಸ ಮರುಕಳಿಸುವಂತೆ ಈಗ ಮತ್ತೆ ಮರದ ಕಿವಿಯೋಲೆಗಳು ಮುನ್ನೆಲೆಗೆ...

  • 2020ರ ಹೊಸ ವರ್ಷವನ್ನು ಈಗಾಗಲೇ ಆರಂಭವಾಗಿದೆ. ಎಲ್ಲ ಕಂಪೆನಿಗಳು ಹೊಸ ಹೊಸದಾದ ಸರಕುಗಳನ್ನು ಮಾರುಕಟ್ಟೆಗೆ ತರಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಕೂಡ...

  • ದ್ವಿಚಕ್ರ ವಾಹನಗಳ ಸುಗಮ ಸವಾರಿಗೆ ನೆರವಾಗುವುದು ವೀಲ್‌ ಬೇರಿಂಗ್‌ಗಳು, ಎರಡೂ ಚಕ್ರಗಳಲ್ಲಿ ಈ ಬೇರಿಂಗ್‌ಗಳು ಇರುತ್ತವೆ. ಸುಲಲಿತ ಚಾಲನೆಗೆ ತಿರುಗುವಂತೆ ಮಾಡುವುದು,...

ಹೊಸ ಸೇರ್ಪಡೆ