Udayavni Special

ಬೆಳಗ್ಗೆ ದ್ವಿಚಕ್ರ ವಾಹನಕ್ಕೆ ಕಿಕ್‌ಸ್ಟಾರ್ಟ್ ಯಾಕೆ ಬೆಸ್ಟ್‌ ?


Team Udayavani, Aug 31, 2018, 2:29 PM IST

31-agust-14.jpg

ನಿಮ್ಮ ಬಳಿ ಮೋಟಾರು ಬೈಕ್‌ ಅಥವಾ ಸ್ಕೂಟರ್‌ ಇದ್ದರೆ, ಬೆಳಗ್ಗೆ ಕಿಕ್‌ಸ್ಟಾರ್ಟ್‌ ಮಾಡಿ ಎಂದು ಕೆಲವರು ಸಲಹೆ ನೀಡಿರುವುದನ್ನು ಕೇಳಿರಬಹುದು. ಬೆಳಗ್ಗೆ ಸೆಲ್ಫ್ ಸ್ಟಾರ್ಟ್‌ ಬಳಕೆ ಬದಲು ಇದೇ ಬೆಸ್ಟ್‌ ಎಂದು ಹೇಳಿರಬಹುದು. ಅದಕ್ಕೆ ಕಾರಣವಿದೆ.

ಕಿಕ್‌ಸ್ಟಾರ್ಟ್‌ನಲ್ಲಿ ಏನಾಗುತ್ತೆ?
ಕಿಕ್‌ಸ್ಟಾರ್ಟ್‌ನಲ್ಲಿ ಮೂಲತಃ ಎಂಜಿನ್‌ನ ಹೃದಯಕ್ಕೆ ಕೆಲಸ ಸಿಗುತ್ತದೆ. ಹಲವು ದಿನಗಳ ಕಾಲ ನಿಂತಿದ್ದ ದ್ವಿಚಕ್ರ ವಾಹನ ಅಥವಾ ಎಂಜಿನ್‌ 7- 8 ಗಂಟೆ ಕಾಲ ನಿಂತೇ ಇದ್ದ ಸ್ಥಿತಿಯಲ್ಲಿದ್ದಾಗ ಎಂಜಿನ್‌ ಸಾಕಷ್ಟು ತಂಪಾಗಿರುತ್ತದೆ. ಇದನ್ನು ಮತ್ತೆ ಸರಿಪಡಿಸಲು ಕಿಕ್‌ಸ್ಟಾರ್ಟ್‌ ಅನುಕೂಲಕರ. ಕಿಕ್‌ಸ್ಟಾರ್ಟ್‌ ವೇಳ ಕ್ರಾಂಕ್‌ಶಾಫ್ಟ್ ತಿರುಗಿ ಪಿಸ್ಟನ್‌ ಅನ್ನು ಪಿಸ್ಟನ್‌ ಹೆಡ್‌ ಭಾಗಕ್ಕೆ ಹೋಗುವಂತೆ ಮಾಡುತ್ತದೆ. ಇದರಿಂದಾಗಿ ಹೆಚ್ಚಿನ ಒತ್ತಡ ನಿರ್ಮಾಣವಾಗಿ ಸುಲಭವಾಗಿ ಸ್ಪಾರ್ಕ್‌ ಆಗಲು ನೆರವಾಗುತ್ತದೆ. ನಿರಂತರ ಪಿಸ್ಟನ್‌ ಚಾಲನೆಗೊಂಡು ಸುಲಭವಾಗಿ ಎಂಜಿನ್‌ ಸ್ಟಾರ್ಟ್‌ ಆಗಲು ನೆರವಾಗುತ್ತವೆ. ಕಿಕ್‌ಸ್ಟಾಟ್‌ನಿಂದಾಗಿ ವೇಗವಾಗಿ ಗಾಳಿ-ಪೆಟ್ರೋಲ್‌ ಮಿಶ್ರವಾಗಲೂ ನೆರವಾಗುತ್ತದೆ.

ಬೆಳಗ್ಗೆ ಯಾಕೆ ?
ಎಂಜಿನ್‌ ಅತ್ಯಂತ ತಂಪಾಗಿದ್ದು, ಆಯಿಲ್‌ ಎಲ್ಲವೂ ತಳದಲ್ಲಿರುತ್ತದೆ. ಈ ಸಂದರ್ಭ ಬ್ಯಾಟರಿ ಕೂಡ ತಂಪಾಗಿರುತ್ತದೆ. ಅದರ ರಾಸಾಯನಿಕಗಳು ಚಾಲನೆಯಲ್ಲಿ ಇಲ್ಲದೇ ಇರುವುದರಿಂದ ಅದರ ಶಕ್ತಿಯೂ ಅಲ್ಪ ಕುಂದಿರುತ್ತದೆ. ಈ ವೇಳೆ ಸೆಲ್ಫ್ ಸ್ಟಾರ್ಟ್‌ ಮಾಡುವುದರಿಂದ ಬ್ಯಾಟರಿ ಮೇಲೆ ಹೆಚ್ಚಿನ ಒತ್ತಡ ಹೇರುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಬೆಳಗ್ಗೆ ಕಿಕ್‌ ಸ್ಟಾರ್ಟ್‌ ಮಾಡಿ ಬಳಿಕ ಎಂಜಿನ್‌ ಬಿಸಿಯಾದ/ ಚಾಲನೆ ಬಳಿಕ ಬೇಕೆಂದಾಗ ಸೆಲ್ಫ್ ಸ್ಟಾರ್ಟ್‌ ಬಳಸುವುದು ಉತ್ತಮ.

ಆಧುನಿಕ ಬೈಕ್‌ಗಳಲ್ಲಿ ಬೇಡ?
ಆಧುನಿಕ ಬೈಕ್‌ಗಳಲ್ಲಿ ಕಿಕ್‌ಗಳೇ ಇರುವುದಿಲ್ಲ. ಇಂತಹುವುಗಳಲ್ಲಿ ಏನು ಮಾಡುವುದು ಎಂಬ ಪ್ರಶ್ನೆ ಇರಬಹುದು. ಆಧುನಿಕ ಬೈಕ್‌ಗಳಲ್ಲಿ ಎಂಜಿನ್‌ ವಿನ್ಯಾಸ ಬೇರೆ ರೀತಿ ಇರುತ್ತದೆ. ಜತೆಗೆ ಬ್ಯಾಟರಿ ‘ಸುಪ್ತಾವಸ್ಥೆಗೆ’ ಹೋಗದ ರೀತಿ ವಿನ್ಯಾಸ ಮಾಡಲಾಗಿರುತ್ತದೆ. ಈ ಕಾರಣದಿಂದ ಇಂತಹ ಬೈಕ್‌ಗಳು ಹೆಚ್ಚು ದುಬಾರಿಯೂ ಹೌದು.

 ಈಶ 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

arjkala

ಕಾರ್ಕಳ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

smith

ಪಂಜಾಬ್–ರಾಜಸ್ಥಾನ್ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸ್ಮಿತ್ ಪಡೆ

ಇಲ್ಲಿ ರಾತ್ರಿ ಚಿರತೆ ಸಂಚಾರ ! ಹಟ್ಟಿಯಲ್ಲಿದ್ದ ಕರು ಸಾವು, ಆತಂಕದಲ್ಲಿ ಗ್ರಾಮಸ್ಥರು

ರಾತ್ರಿ ವೇಳೆ ಚಿರತೆ ಸಂಚಾರ! ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು

rock-1

ಮಾನವ ನಿರ್ಮಿತ ರಾಕ್ ಗಾರ್ಡನ್: ಇದರ ಸೌಂದರ್ಯಕ್ಕೆ ಮನಸೋಲದವರಿಲ್ಲ !

riga-1

ಮನಮೋಹಕ ಪ್ರವಾಸಿ ತಾಣ: ಚಿಕ್ಕದಾದರೂ ಚೊಕ್ಕದಾದ ದೇಶ ರೀಗಾ ಲಾಟ್ಟಿಯಾ !

ಸಾಲಭಾದೆ ತಾಳಲಾರದೆ ನೊಂದ ರೈತ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಸಾಲಭಾದೆ ತಾಳಲಾರದೆ ನೊಂದ ರೈತ ತನ್ನ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

MNG-TDY-1

ಪಾಲಿಕೆ ಪಟ್ಟಿ ಅಂತಿಮ; ಮುಡಾದಲ್ಲಿ ಆಕಾಂಕ್ಷಿಗಳ ಪೈಪೋಟಿ

“ಭಾರತವು ವಿಶ್ವದ ಜ್ಞಾನದ ಕೇಂದ್ರವಾಗಬೇಕು’

“ಭಾರತವು ವಿಶ್ವದ ಜ್ಞಾನದ ಕೇಂದ್ರವಾಗಬೇಕು’

kund-tdy-1

ಚರಂಡಿ ಅವ್ಯವಸ್ಥೆ, ಸಂಚಾರ ಸಂಕಷ್ಟ; ದುರಸ್ತಿಗೆ ಆಗ್ರಹ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

arjkala

ಕಾರ್ಕಳ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.