ಫೋಟೋ ಕ್ಲಿಕ್ಕಿಸಲು ಡಿಎಸ್‌ಎಲ್‌ಆರ್‌ ಕೆಮರಾವೇ ಬೇಕು


Team Udayavani, Jul 19, 2019, 5:00 AM IST

t-25

ಹೊಸ ಊರಿಗೆ ಪ್ರವಾಸ ಬೆಳೆಸಿದಾಗ, ಸಮುದ್ರ, ಪ್ರಕೃತಿಯ ವೀಕ್ಷಣೆಗೆ ಹೋದಾಗ ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿಯುವುದೆಂದರೆ ಎಲ್ಲರಿಗೂ ಇಷ್ಟ. ಇದಕ್ಕಾಗಿ ಡಿಎಸ್‌ಎಲ್‌ಆರ್‌ ಕೆಮರಾ ಬಳಕೆ ಸಮಾನ್ಯವಾಗಿತ್ತು. ಇಂದು ಮೊಬೈಲ್‌ನಲ್ಲೇ ಸ್ಪಷ್ಟ ಚಿತ್ರಗಳನ್ನು ತೆಗೆಯಬಹುದಾದ ಕಾರಣ ಅನೇಕರು ಮೊಬೈಲ್‌ ಅನ್ನೇ ಬಳಸುತ್ತಿದ್ದಾರೆ. ಈ ನಡುವೆಯೂ ಡಿಎಸ್‌ಎಲ್‌ಆರ್‌ ಕೆಮರಾದ ಮೇಲಿನ ಒಲವು ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.

ಫೋಟೋ ಕ್ಲಿಕ್ಕಿಸಿಕೊಳ್ಳೋದು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.. ಅದರಲ್ಲಿಯೂ ದೊಡ್ಡ ಕೆಮರಾಗಳಲ್ಲಿ ಫೋಟೋ ಕ್ಲಿಕ್ಕಿಸಿದರೆ ಅಂದವಾಗಿ ಬರುತ್ತದೆ. ಅಲ್ಲದೆ, ಹೆಚ್ಚಿನ ರೆಸೆಲ್ಯೂಷನ್‌ನಿಂದ ಕೂಡಿರಲು ಸಾಧ್ಯ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಮಂಗಳೂರು ನಗರದಲ್ಲಿಯೂ ಡಿಎಸ್‌ಎಲ್‌ಆರ್‌ ಕೆಮರಾ ಟ್ರೆಂಡ್‌ ಹೆಚ್ಚುತ್ತಿದೆ.

ಇತ್ತೀಚೆಗೆ ಹಲವು ಕಂಪೆನಿಗಳ ಹೆಚ್ಚಿನ ಮೆಗಾಪಿಕ್ಸೆಲ್‌ಗ‌ಳಲ್ಲಿರುವ ಮೊಬೈಲ್‌ಗ‌ಳು ಬಂದಿವೆ. ಹೀಗಿದ್ದರೂ ಕೆಮರಾ ಮುಖೇನ ಫೋಟೊ ತೆಗೆಯುವುದು ಅನೇಕರಿಗೆ ಆಸಕ್ತಿ. ಏಕೆಂದರೆ, ಮೊಬೈಲ್‌ಗ‌ಳಲ್ಲಿ ತೆಗೆಯುವ ಫೋಟೊಗಳಿಗಿಂತ ಹೆಚ್ಚು ಸ್ಪಷ್ಟತೆ ಡಿಎಸ್‌ಎಲ್‌ಆರ್‌ ಕೆಮರಾದಲ್ಲಿ ಇರುತ್ತದೆ. ಇದೇ ಕಾರಣಕ್ಕೆ ಕಡಿಮೆ ಬೆಲೆಯ ಡಿಎಸ್‌ಎಲ್‌ಆರ್‌ ಕೆಮರಾಗಳಿಂದ ಲಕ್ಷಾಂತರ ರೂ. ಬೆಲೆಯ ಕೆಮರಾಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಕೆಮರಾ ಉತ್ಪಾದನಾ ಸಂಸ್ಥೆಗಳಲ್ಲಿ ಕೆನಾನ್‌ ಕಂಪೆನಿ ಮುಖ್ಯವಾದುವು. ಈ ಕಂಪೆನಿಯ ಡಿಎಸ್‌ಎಲ್‌ಆರ್‌ ಕೆಮರಾಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೆನಾನ್‌ ಇಒಎಸ್‌ 3000ಡಿ ಕೆಮರಾ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ ಅಂದಾಜು 20,000 ರೂ. ಬೆಲೆಗೆ ಸಿಗುತ್ತದೆ. ಈ ಕೆಮರಾದಲ್ಲಿ ಸೆಲ್ಫ್ ಟೈಮರ್‌, 35 ಎಕ್ಸ್‌ ಆಪ್ಟಿಕಲ್‌ ಜೂಮ್‌, 18 ಮೆಗಾಪಿಕ್ಸೆಲ್‌, ಎಚ್‌ಡಿ ವೀಡಿಯೋ ರೆಕಾರ್ಡ್‌, ವೈಫೈ ಸೇರಿದಂತೆ ವಿವಿಧ ವೈಶಿಷ್ಟತೆ ಇದೆ.

ಇದೇ ಕಂಪೆನಿಯ ಕೆನಾನ್‌ ಇಒಎಸ್‌ 1100ಡಿ ಡಿಎಸ್‌ಎಲ್‌ಆರ್‌ ಕೆಮರಾ ಸುಮಾರು 32,000 ರೂ. ಗೆ ಲಭ್ಯವಿದೆ ಸಿಎಮ್‌ಒಎಸ್‌ ಇಮೇಜ್‌ ಸೆನ್ಸಾರ್‌, 18-55 ಎಂ.ಎಂ. ಫೋಕಲ್‌ ಲೆಂಗ್‌¤, ಎಚ್‌ಡಿ ರೆಕಾರ್ಡಿಂಗ್‌, 2.7 ಟಿಎಫ್‌ಟಿ ಕಲರ್‌ ಎಲ್‌ಸಿಡಿ ಸ್ಕ್ರೀನ್‌, 12.2 ಮೆಗಾ ಪಿಕ್ಸೆಲ್‌ ಕೆಮರಾ, ಯುಎಸ್‌ಬಿ, ಎಚ್‌ಡಿಎಂಐ ಹೊಂದಿದೆ. ಇನ್ನು, ಕೆನಾನ್‌ 600ಡಿ ಕೂಡ ಅನೇಕ ಮಂದಿ ಖರೀದಿ ಮಾಡಲು ಇಷ್ಟಪಡುತ್ತಾರೆ. ಸುಮಾರು 34,000 ರೂ.ಗೆ ಈ ಕೆಮರಾ ಮಾರುಕಟ್ಟೆಯಲ್ಲಿ ಲಭ್ಯವಿದ್ದು, 18 ಮೆಗಾ ಪಿಕ್ಸೆಲ್‌ ಕೆಮರಾ, ಫುಲ್‌ ಎಚ್‌ಡಿ ರೆಕಾರ್ಡಿಂಗ್‌, ಸಿಎಂಒಎಸ್‌ ಇಮೇಜ್‌ ಸೆನ್ಸಾರ್‌, 1/4000-30 ಸೆಕೆಂಡ್‌ ಫೋಕಲ್‌ ಲೆಂಗ್‌¤ ಹೊಂದಿದೆ.

ಕೆಮೆರಾ ಮತ್ತೂಂದು ಕಂಪೆನಿಯಾದ ನಿಕಾನ್‌ ಸಂಸ್ಥೆಯ ಡಿಎಸ್‌ಎಲ್‌ಆರ್‌ ಕೆಮರಾಗಳು ಕೂಡ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ದೊರಕುತ್ತವೆ. ನಿಕಾನ್‌ ಡಿ3500 ಡಿಎಸ್‌ಎಲ್‌ಆರ್‌ ಕೆಮರಾ 23,999 ರೂ. ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಿಎಂಒಎಸ್‌ ಸೆನ್ಸಾರ್‌, 24.2 ಮೆಗಾಪಿಕ್ಸೆಲ್‌, 1080 ರೆಸ್ಯೂಲೇಶನ್‌ನ ವೀಡಿಯೋ ವ್ಯವಸ್ಥೆ ಇದೆ. ಇದೇ ಕಂಪೆನಿಯ ಡಿ 5100 ಡಿಎಸ್‌ಎಲ್‌ಆರ್‌ ಕೆಮರಾ ಸುಮಾರು 34,000 ರೂ.ಗೆ ದೊರೆಯುತ್ತದೆ. 16.2 ಮೆಗಾ ಪಿಕ್ಸೆಲ್‌ ವ್ಯವಸ್ಥೆ ಹೊಂದಿದೆ.

ಅದೇ ರೀತಿ ಸೋನಿ ಸಂಸ್ಥೆಯ ಐಎಲ್‌ಸಿಇ 5100 ಎಲ್‌ ಮಿರರ್‌ಲೆಸ್‌ ಕೆಮರಾ ಹೊಂದಿದ್ದು, 34,000 ರೂ.ಗೆ ಲಭ್ಯ. 24.3 ಮೆಗಾಪಿಕ್ಸೆಲ್‌ ವೈಶಿಷ್ಟತೆ ಹೊಂದಿದ್ದು, ವೈಫೈ, ಸಿಎಂಒಎಸ್‌ ಸೆನ್ಸಾರ್‌, ಫುಲ್‌ ಎಚ್‌.ಡಿ ಕೆಮರಾ ಹೊಂದಿದೆ. ಪ್ಯಾನಸೋನಿಕ್‌ 4ಕೆ ಜಿ ಕೆಮರಾ 38,000 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಎಂಒಎಸ್‌ ಸೆನ್ಸಾರ್‌, 16 ಮೆಗಾ ಪಿಕ್ಸೆಲ್‌ ವೈಶಿಷ್ಟತೆಯನ್ನು ಹೊಂದಿದೆ.

ಕೆಮರಾ ಖರೀದಿಗೂ ಮುನ್ನ
ಕೆಮರಾ ಖರೀದಿ ಮಾಡುವ ಬದಲು ಕೆಲವೊಂದು ವಿಷಯಗಳನ್ನು ಗಮನಹರಿಸಬೇಕು. ಡಿಎಸ್‌ಎಲ್‌ಆರ್‌ ಕೆಮರಾ ಖರೀದಿ ಮಾಡುವಾಗ ಮೆಗಾಪಿಕ್ಸೆಲ್‌ ಮುಖ್ಯವಲ್ಲ. ಏಕೆಂದರೆ, ಡಿಎಸ್‌ಎಲ್‌ಆರ್‌ ಕೆಮರಾ ಅಂದ ಮೇಲೆ ಹೆಚ್ಚಿನ ಮೆಗಾಪಿಕ್ಸೆಲ್‌ ಇರುತ್ತದೆ. ಕೆಮರಾ ಖರೀದಿ ವೇಳೆ ಬೇಕಿರುವ ಲೆನ್ಸ್‌ ಯಾವುದು ಎಂಬುವುದನ್ನು ತಿಳಿಯಬೇಕು. ಏಕೆಂದರೆ ಆಯಾ ಕಂಪೆನಿ ಕೆಮರಾ ಲೆನ್ಸ್‌ ಅದಕ್ಕೆ ಮಾತ್ರ ಉಪಯೋಗಿಸಲು ಸಾಧ್ಯ. ಸೆನ್ಸರ್‌ ಕ್ಲೀನಿಂಗ್‌ ವ್ಯವಸ್ಥೆ, ಕೆಮರಾ ಬ್ಯಾಟರಿ ಬ್ಯಾಕ್‌ಅಪ್‌ ಬಗ್ಗೆ ಕೂಡ ಗಮನಹರಿಸಬೇಕು.

ಆನ್‌ಲೈನ್‌ ಖರೀದಿ ಹೆಚ್ಚು
ಇತ್ತೀಚಿನ ದಿನಗಳಲ್ಲಿ ಡಿಎಸ್‌ಎಲ್‌ಆರ್‌ ಖರೀದಿ ಮಾಡಲು ಆನ್‌ಲೈನ್‌ನಲ್ಲಿ ಹೆಚ್ಚಿನ ಬೇಡಿಕೆ ಇದೆ. ಫ್ಲಿಪ್‌ಕಾರ್ಟ್‌, ಅಮೇಜಾನ್‌ ಸೇರಿದಂತೆ ವಿವಿಧ ಆನ್‌ಲೈನ್‌ ಖರೀದಿ ತಾಣಗಳಲ್ಲಿ ಶೋರೂಂಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಇನ್ನು, ವಿವಿಧ ಆಯ್ಕೆಗಳು ಜತೆಗೆ ವಿವಿಧ ಕಂಪೆನಿ ಕೆಮರಾಗಳು ಒಂದೇ ಸೂರಿನಲ್ಲಿ ಸಿಗುತ್ತವೆ. ಅಲ್ಲದೆ, ಇಎಂಐ ಕೂಡ ಲಭ್ಯವಿರುವುದರಿಂದ ಆನ್‌ಲೈನ್‌ ಖರೀದಿಗೆ ಹೆಚ್ಚಿನ ಮಂದಿ ಇಷ್ಟಪಡುತ್ತಾರೆ.

-  ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.