ಇಂದು ನಿನ್ನದೇ…

Team Udayavani, Jul 15, 2019, 5:47 AM IST

HEART

ಬದುಕು ಎನ್ನುವುದು ಅನಿಶ್ಚಿತತೆಗಳ ಆಗರ. ಭವಿಷ್ಯವನ್ನು ಹೀಗೆ ಅಂತ ಊಹಿಸಲು ಸಾಧ್ಯವಿಲ್ಲ. ಹಾಗೆಯೇ ಭೂತ ಕಾಲವನ್ನು ಮತ್ತೆ ಬದಲಿಸಲು ಅಸಾಧ್ಯ. ಸದ್ಯ ಈಗ ಇರುವ ಸಮಯದಲ್ಲಿ ಸಂತೋಷವಾಗಿರುವುದೇ ನಮಗೆ ನಾವು ಕೊಡುವ ದೊಡ್ಡ ಬಹುಮಾನ.

ಪ್ರತಿ ಸೂರ್ಯೋದಯ ನಮಗೆ ನಗಲು, ಖುಷಿ ಖುಷಿಯಾಗಿರಲು ಅವಕಾಶ ನೀಡುತ್ತದೆ. ಆದರೆ ನಾವು ಭವಿಷ್ಯದ ನೆಪದಲ್ಲಿ, ಭಯದಲ್ಲಿ ಅದನ್ನು ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆಗಿದ್ದು ಆಗಿ ಹೋಯಿತು. ಬರಲಿರುವುದು ಇನ್ನೂ ದೂರದಲ್ಲಿದೆ. ಅವುಗಳ ಚಿಂತೆಯಲ್ಲೇ ಕಾಲ ಕಳೆದರೆ ಈಗಿನ ಸಮಯವನ್ನು ಅನುಭವಿಸಲು ಸಾಧ್ಯವಿಲ್ಲ. ನಾಳೆಯ ಚಿಂತೆಯಲ್ಲಿ ಇಂದು ಕಳೆದುಕೊಂಡವರ ಕುರಿತಾದ ಕಥೆಯೊಂದಿದೆ.

ಬಹಳ ವರ್ಷಗಳ ಹಿಂದೆ..ಒಂದೂರು. ಅಲ್ಲಿ ಕೃಷಿಯನ್ನೇ ನಂಬಿಕೊಂಡು ಬದುಕುತ್ತಿದ್ದ ಕುಟುಂಬವೊಂದಿತ್ತು. ಪಾಲಿಗೆ ಬಂದ ಚಿಕ್ಕ ಹೊಲದಲ್ಲಿ ಅವರು ಭತ್ತ ಬೆಳೆಯುತ್ತಿದ್ದರು. ಆ ಕುಟುಂಬಕ್ಕೆ ವರ್ಷಕ್ಕೆ ಬೇಕಾಗುವಷ್ಟು ಭತ್ತ ಬೆಳೆಯುತ್ತಿತ್ತು. ಆ ಹೊಲವೊಂದೇ ಅವರ ಆಹಾರದ ಮೂಲವಾಗಿತ್ತು. ಅದೊಂದು ವರ್ಷ ಹೊಲದಲ್ಲಿ ನಿರೀಕ್ಷಿಸಿದಷ್ಟು ಭತ್ತ ಬೆಳೆಯಲಿಲ್ಲ. ಕೊçಲು ಎಲ್ಲ ಮುಗಿಸಿ ಭತ್ತ ರಾಶಿಯನ್ನು ಲೆಕ್ಕ ಹಾಕಿದಾಗ ಸುಮಾರು ಒಂದು ತಿಂಗಳಿಗಾಗುವಷ್ಟು ಕೊರತೆಯಾಗುತ್ತದೆ ಎಂದು ಅಂದಾಜಿಸಲಾಯಿತು. ಮನೆಯವರೆಲ್ಲ ಒಟ್ಟಿಗೆ ಕೂತು ಏನು ಮಾಡುವುದೆಂದು ಚರ್ಚಿಸತೊಡಗಿದರು. “ಅಕ್ಕಿಯ ಕೊರತೆ ಇರುವುದರಿಂದ ಈ ತಿಂಗಳು ಎಲ್ಲರೂ ಉಪವಾಸ ಇರೋಣ’ ಎಂದ ಯಜಮಾನ. ಮಾರನೇ ದಿನದಿಂದ ಕೊರತೆ ನೀಗಲು ಮನೆಯವರ ಸರ್ಕಸ್‌ ಆರಂಭವಾಯಿತು. ಎಲ್ಲರೂ ನೀರನ್ನು ಕುಡಿದು ಹಿತ್ತಿಲಲ್ಲಿ ಸಿಗುವ ಹಣ್ಣು ತಿಂದು ಹಸಿವು ನೀಗಿಸತೊಡಗಿದರು. ಸ್ವಲ್ಪ ದಿನದಲ್ಲಿ ಹಣ್ಣುಗಳೂ ಖಾಲಿಯಾದವು. ಸ್ವಲ್ಪ ದಿನದಲ್ಲಿ ಹಸಿವಿನಿಂದ ಮನೆಯವರೆಲ್ಲ ಅಸ್ವಸ್ಥರಾದರು. ಇದು ಕಥೆಯೇ ಇರಬಹುದು. ಆದರೆ ನೀಡುವ ಸಂದೇಶ ಮಾತ್ರ ಅದ್ಬುತ. ಇಂದು ಎನ್ನುವ ಅಮೂಲ್ಯ ಸಮಯ ನಿಮ್ಮ ಕೈಯಲ್ಲಿದೆ. ಹೀಗಾಗಿ ಇದನ್ನು ಖುಷಿ ಖುಷಿಯಾಗಿ ಕಳೆಯಿರಿ.

ಗುರಿ ಇರಲಿ
ಭವಿಷ್ಯದ ಚಿಂತೆಯಿಂದ ಅನೇಕರ ಮುಖದ ನಗು ಮಾಯವಾದ ಪ್ರಸಂಗ ನಮ್ಮ ಕಣ್ಣ ಮುಂದಿದೆ. ಹಾಗಂತ ಭವಿಷ್ಯದ ಯೋಜನೆ ಇಲ್ಲದಿರುವುದು ಕೂಡಾ ಅಪಾಯಕಾರಿ. ವಿದ್ಯಾರ್ಥಿಗಳಿಗೆ, ಯುವ ಜನತೆಗೆ ಭವಿಷ್ಯದ ಚಿಂತನೆ ಅತ್ಯಗತ್ಯ. ಮುಂದೆ ಏನಾಗಬೇಕು ಎನ್ನುವ ಗುರಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗಬೇಕಾದುದು ಅವಶ್ಯ. ಗುರಿ ಇಟ್ಟುಕೊಳ್ಳುವುದು ಮತ್ತು ಮುಂದೆ ಅನಾಹುತವಾಗುತ್ತೆಂದು ಊಹಿಸಿ ಬೆಚ್ಚಿ ಬೀಳುವುದಕ್ಕೆ ವ್ಯತ್ಯಾಸವಿದೆ.

 -ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.