ಉಪ್ಪಿನಂಗಡಿ: ನೇತ್ರಾವತಿ-ಕುಮಾರಧಾರಾ ಸಂಗಮ

Team Udayavani, Aug 10, 2019, 12:49 PM IST

ಉಪ್ಪಿನಂಗಡಿ:ನೇತ್ರಾವತಿ- ಕುಮಾರಧಾರಾ ನದಿಗಳು ಉಕ್ಕೇರಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶ ಗಳು ಜಲಾವೃತಗೊಂಡಿವೆ. ನೇತ್ರಾವತಿ ನದಿಯು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿಕೊಂಡು ಮುಂದಕ್ಕೆ ಹೋದರೆ, ದೇವಾಲಯದ ಇನ್ನೊಂದು ಪಾರ್ಶ್ವದಿಂದ ಹರಿದು ಬರುವ ಕುಮಾರಧಾರಾ ನದಿ ನೀರು ಮಾತ್ರ ಈ ಕಡೆ ಬಂದು ನೇತ್ರಾವತಿ ನದಿ ನೀರನ್ನು ಸಂಜೆಯವರೆಗೆ ಕೂಡಿಕೊಳ್ಳಲಿಲ್ಲ.

ಸಂಜೆಯ ಅನಂತರ ನೇತ್ರಾವತಿ -ಕುಮಾರಧಾರ ನದಿಗಳ ಉಭಯ ಸಂಗಮವಾಯಿತು.

ತಗ್ಗಿದ್ದ ಉಭಯ ನದಿಗಳ ನೀರು ಗುರುವಾರ ರಾತ್ರಿಯಾಗುತ್ತಲೇ ಮತ್ತೆ ಏರಿಕೆಯಾಗತೊಡಗಿತು. ಬೆಳಗ್ಗೆ ಮತ್ತಷ್ಟು ನೀರಿನ ಪ್ರಮಾಣ ಏರಿಕೆ ಯಾಗಿದ್ದು, ನೇತ್ರಾವತಿ ನದಿ ನೀರು ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಆವರಣವನ್ನು ಪ್ರವೇಶಿಸಿತು. ನೇತ್ರಾವತಿ ನದಿ ನೀರಿನಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದು, ರಭಸದಿಂದ ಕೂಡಿತ್ತು. ಕುಮಾರಧಾರಾ ನದಿಯಲ್ಲಿ ನೀರಿನ ಪ್ರಮಾಣ ನಿನ್ನೆಗಿಂತ ಕಡಿಮೆಯಾಗಿತ್ತು. ಆದ್ದರಿಂದ ಕುಮಾರಧಾರ ನದಿಯ ನೀರಿಗೆ ಮಧ್ಯಾಹ್ನದ ತನಕ ದೇವಾಲಯದ ಮುಂಭಾಗಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ನೇತ್ರಾವತಿ ನದಿ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಹೋಗಿ ಶ್ರೀ ಮಹಾಕಾಳಿ ದೇವಾಲಯದ ಒಳಗೆ ಪ್ರವೇಶಿಸಿದ ನೀರು ಬಳಿಕವೂ ಏರಿಕೆಯಾಗಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿ ಅಲ್ಲೇ ಇರುವ ನೇತ್ರಾವತಿ ಸಮುದಾಯ ಭವನದ ಸನಿಹವನ್ನು ತಲುಪಿತ್ತು. ನೆರೆ ನೀರಿನಿಂದಾಗಿ ಶ್ರೀ ಮಹಾಕಾಳಿ ದೇವಾಲಯ, ನಾಗನ ಕಟ್ಟೆ, ದೈವದ ಕಟ್ಟೆ, ದೇವಾಲಯದ ಮುಂಭಾಗವೆಲ್ಲ ಜಲಾವೃತಗೊಂಡಿತ್ತು. ದೇವಾಲಯದ ಆವರಣದಲ್ಲಿ ಮೊಣಕಾಲಿಗಿಂತಲೂ ಜಾಸ್ತಿ ನೀರಿತ್ತು.

ಕೊನೆಗೂ ಸಂಗಮವಾಯ್ತು
ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳು ನದಿಯ ಒಳಹರಿನ ಮೂಲಕ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಸಂಗಮ ವಾಗುವುದು ಮಾಮೂಲಿಯಾದರೆ, ಮಳೆಗಾಲದಲ್ಲಿ ದೇವಾಲಯದ ಎಡಭಾಗದಿಂದ ನೇತ್ರಾವತಿ ನದಿ, ಬಲಭಾಗದಿಂದ ಕುಮಾರಧಾರಾ ನದಿ ಉಕ್ಕೇರಿ ಬಂದು ಸಹಸ್ರಲಿಂಗೇಶ್ವರ ದೇವಾಲಯದ ಪ್ರವೇಶ ದ್ವಾರದವರೆಗೆ ಬಂದರೆ ಸಂಗಮವಾಯಿತೆಂದು ಲೆಕ್ಕ. ಆದರೆ ಶುಕ್ರವಾರ ಮಧ್ಯಾಹ್ನದವರೆಗೆ ನೇತ್ರಾವತಿ ನದಿ ನೀರು ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿ ಮುಂದಕ್ಕೆ ಸಾಗಿತ್ತು. ಆದರೂ ಅದು ಕುಮಾರಧಾರಾ ನದಿಯನ್ನು ಸೇರದೆ ಅಲ್ಲಿಯೇ ತಿರುವು ಪಡೆದುಕೊಂಡು ರಸ್ತೆಯ ಮೂಲಕ ಹೋಗಿ ನಾಜೂಕು ಸೆಲೂನ್‌ ತನಕ ತಲುಪಿತ್ತು. ಇನ್ನೊಂದೆಡೆ ಕುಮಾರಧಾರಾ ನದಿಯ ನೀರು ಮತ್ತೂಂದು ದಿಕ್ಕಿನಿಂದ ದೇವಾಲಯದ ಆವರಣವನ್ನು ಪ್ರವೇಶಿಸಲೇ ಇಲ್ಲ. ಸಂಗಮವಾಗುವ ಕ್ಷಣವನ್ನು ಎದುರು ನೋಡುತ್ತಿದ್ದ ನೂರಾರು ಜನರು ನಿರಾಶರಾದರು. ಸಂಜೆಯಾದೊಡನೆ ಸಂಗಮವಾಯಿತು. ನೆರೆ ಭೀತಿಯ ಹಿನ್ನೆಲೆಯಲ್ಲಿ ಶುಕ್ರವಾರ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದೊಂದಿಗೆ ಅಗ್ನಿಶಾಮಕ ದಳದವರು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಅಡ್ಡವಾದ ಅಭಿವೃದ್ಧಿ ಕಾಮಗಾರಿ!
ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ರಭಸವಾಗಿದ್ದು ಈ ಬಾರಿ ಸಂಗಮವಾಗದಿರಲು ಒಂದು ಕಾರಣ ವಾದರೆ, ದೇವಾಲಯದ ಬಳಿ ನಡೆದ ಹಲವು ಅಭಿವೃದ್ಧಿ ಕಾಮಗಾರಿಗಳು ಇನ್ನೊಂದು ಪ್ರಮುಖ ಕಾರಣವಾಗಿವೆ. ಕುಮಾರಧಾರಾ ನದಿ ನೀರು ದೇವಸ್ಥಾನ ಪ್ರವೇಶಿಸುವ ಕಡೆಯ ಪ್ರದೇಶ ಈಗ ಮೊದಲಿನಂತಿರದೆ, ಹಲವು ಅಭಿವೃದ್ಧಿ ಕಾಮಗಾರಿ, ಕಟ್ಟಡ ನಿರ್ಮಾಣ ಮತ್ತು ತಡೆಗೋಡೆ ನಿರ್ಮಾಣವಾಗಿರುವುದರಿಂದಾಗಿ ನೀರು ಸರಾಗವಾಗಿ ಮುನ್ನುಗ್ಗಿ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಾಗಿ ಬಲ ಬದಿಯಿಂದ ಕುಮಾರಧಾರಾ ನದಿ ನೀರು ದೇವಾಲಯದ ಆವರಣದೊಳಗೆ ಬಂದಿಲ್ಲ. ಕುಮಾರಧಾರಾ ನದಿ ಬದಿಯ ಪ್ರದೇಶ ದೇವಾಲಯದ ಆವರಣದಿಂದ ಈಗ ಎತ್ತರಿಸಲ್ಪಟ್ಟಿರುವುದರಿಂದ ದೇವಾಲಯದ ಆವರಣದಲ್ಲಿದ್ದ ನೇತ್ರಾವತಿ ನದಿ ನೀರು ಕೂಡಾ ದೇವಾಲಯದ ಬಲ ಬದಿಗೆ ಹೋಗಿ ಕುಮಾರಧಾರಾ ನದಿಯನ್ನು ಸೇರಿಕೊಳ್ಳಲಾಗದೇ, ತಿರುವು ಪಡೆದು ರಸ್ತೆಯತ್ತ ಸಾಗುವಂತಾಯಿತು. ಆದರೂ ಉಭಯ ನದಿಗಳ ಸಂಗಮವಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಾವ ಮನುಷ್ಯನಿಗೆ ಕನಸು ಬೀಳುವುದಿಲ್ಲ ಹೇಳಿ. ಕೆಲವರಿಗೆ ಒಂದೊಂದು ರೀತಿಯ ಕನಸುಗಳು ಅವರನ್ನು ಎಚ್ಚರಿಸುತ್ತಿರುತ್ತವೆ. ಭವಿಷ್ಯ, ಪ್ರೀತಿ, ಜೀವನ ಮೊದಲಾದ ಸಂಗತಿಗಳ...

  • ವಿದೇಶಕ್ಕೆ ಹೋಗುವ ಮುನ್ನ ಬ್ಯಾಂಕ್‌ ಕಾರ್ಡ್‌ ಪರೀಕ್ಷಿಸಿಕೊಳ್ಳಿವಿದೇಶಕ್ಕೆ ಉದ್ಯೋಗ, ಶಿಕ್ಷಣ, ಪ್ರವಾಸಕ್ಕಾಗಿ ಹೊರಡುವ ಯೋಜನೆಯಿದೆಯೇ? ಪಾಸ್‌ಪೋರ್ಟ್‌,...

  • ಮಧ್ಯಮ ವರ್ಗದ ಜನರಿಗೆ/ಉದ್ಯೋಗಿಗಳ ಕುಟುಂಬದಲ್ಲಿ ಏನಾದರೂ ಶುಭಕಾರ್ಯ ಸಮಾರಂಭಗಳು ನಡೆಯುವುದಿದ್ದರೆ ಅದರ ಖರ್ಚುವೆಚ್ಚಗಳನ್ನು ಭರಿಸಲು ಮಧ್ಯಮ ವರ್ಗದವರು ಮೊರೆ...

  • ಯಾವುದೇ ಸಾಧಕರನ್ನು ಯಶಸ್ಸನ್ನು ಗಮನಿಸಿ ನೋಡಿ. ಪರಿಶ್ರಮ, ಏಕಾಗ್ರತೆ ಜತೆಗೆ ಅವರು ಸಮಯವನ್ನು ಸದುಪಯೋಗಿಸಿಕೊಂಡಿರುವುದು ಸಾಧನೆಗೆ ಮುಖ್ಯ ಕಾರಣವಾಗಿರುತ್ತದೆ....

  • ದಾರಿಯಲ್ಲಿ ಹೋಗುವಾಗ ಒಂದು ಮಗು ಅಮ್ಮ ಕೊಟ್ಟಿದ್ದ ಒಂದು ರೂಪಾಯಿಯನ್ನು ಎಲ್ಲೋ ಕಳೆದುಕೊಂಡುಬಿಡುತ್ತದೆ. ಅಮ್ಮನ ಭಯಕ್ಕೋ, ಅಮ್ಮ ಕೊಟ್ಟಿದ್ದು ಎಂಬ ಪ್ರೀತಿಗೋ...

ಹೊಸ ಸೇರ್ಪಡೆ