ಒತ್ತಡ ನಿವಾರಣೆಯ ಹೊಸ ವಿಧಾನ

Team Udayavani, Aug 13, 2019, 5:19 AM IST

ಕೆಲವರು ಒತ್ತಡ ನಿವಾರಿಸಿಕೊಳ್ಳಲಾಗದೇ ಅನೇಕ ಕಾಯಿಲೆಗಳಿಗೆ ತುತ್ತಾಗುವುದು ಉಂಟು. ಅದಕ್ಕಾಗಿ ಟಿಬೆಟಿಯನ್‌ ಹಾಡುವ ಬಟ್ಟಲು ಇದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇವು ಒಂದು ರೀತಿಯ ಘಂಟೆಯ ನಾದವಿದ್ದಂತೆ ಇದನ್ನು ನುಡಿಸುವಾಗ ಒಂದು ಸುಂದರವಾದ ಸ್ವರ ಮೂಡುತ್ತದೆ. ಈ ಬಟ್ಟಲುಗಳನ್ನು ಅಥವಾ ಬೌಲ್ಗಳನ್ನು ಹಿಮಾಲಯನ್‌ ಬೌಲ್ ಎಂದು ಕರೆಯುತ್ತಾರೆ. ಇದು ಒಂದು ನಿಶ್ಯಬ್ದತೆಯ ವಾತಾವರಣವನ್ನು ಹುಟ್ಟಿಸುವುದಲ್ಲದೆ ಮನಸ್ಸಿಗೆ ವಿಶ್ರಾಂತ ಸ್ಥಿತಿಯನ್ನು ಬದಗಿಸುತ್ತದೆ ಎಂದು ಅಧ್ಯಯನಗಳ ಮೂಲಕ ತಿಳಿದು ಬಂದಿದೆ. ಇದನ್ನು ಹಳೆಯ ಕಾಲದಲ್ಲಿ ಬೌದ್ಧ ಸನ್ಯಾಸಿಗಳು ಧ್ಯಾನ ಮಾಡುವಾಗ ಬಳಸುತ್ತಿದ್ದರಲ್ಲದೆ, ಸಂಗೀತ ಚಿಕಿತ್ಸಕರು, ಮಸಾಜ್‌ ಥೆರಪಿಸ್ಟ್‌, ಯೋಗ ಚಿಕಿತ್ಸಕರು ಸೇರಿದಂತೆ ವೈದ್ಯರು ಬಳಸುತ್ತಿದ್ದರು.

ಹೇಗೆ ಬಳಸುವುದು?

ಹಾಡುವ ಬಟ್ಟಲುಗಳಿಂದ ಹಿತವಾದ ಧ್ವನಿಯನ್ನು ಹೊರಹೊಮ್ಮಿಸಲು ಬೌಲ್ನ ಅಂಚಿನ ರಿಮ್‌ಗಳನ್ನು ಸ್ಪರ್ಶಿಸುವುದರಿಂದ ಶಬ್ದ ಹೊರಹೊಮ್ಮುತ್ತದೆ. ಸ್ವಲ್ಪ ಹೊತ್ತಿನ ನಂತರ ನಿಮ್ಮ ಬಲವನ್ನು ಕಡಿಮೆ ಗೊಳಿಸಬಹುದು. ಈ ಬೌಲ್ಗಳು ನಿಮಗೆ ಆನ್‌ಲೈನ್‌ಗಳಲ್ಲಿ ಲಭ್ಯವಿದ್ದು ಅಲ್ಲದೆ ಸ್ಟುಡಿಯೋಗಳಲ್ಲಿ, ಸಂಗೀತದ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ ಬೌಲ್ಗಳು ಲಭ್ಯವಿದೆ. ಆನ್‌ಲೈನ್‌ಗಳಲ್ಲಿ ಖರೀದಿಸುವವರು ಸ್ವಲ್ಪ ಜಾಗೃತರಾಗಿರಬೇಕು. ಇದನ್ನು ಬಳಸುವ ಬಗ್ಗೆ ಸರಿಯಾದ ಮಾಹಿತಿಗಳಲ್ಲಿದ್ದರೂ ಇದನ್ನು ಬಳಸುವುದರಿಂದ ಯಾವುದೇ ಹಾನಿ ಇಲ್ಲ. ಹಾಗಾಗಿ ಮನೆಯಲ್ಲಿ ಇದನ್ನು ಯಾವುದೇ ಭಯವಿಲ್ಲದೆ ಉಪಯೋಗಿಸಬಹುದಾಗಿದೆ, ಮಾರುಕಟ್ಟೆಗಳಲ್ಲಿ ಇದೇ ರೀತಿಯ ಅನೇಕ ಬೌಲ್ಗಳು ದೊರೆಯುವ ಕಾರಣ ಮಾಹಿತಿ ಪಡೆದು ತೆಗೆದುಕೊಳ್ಳುವುದಲ್ಲದೆ ಬೆಲೆಯನ್ನು ಪರಿಶೀಲಿಸುವುದು ಉತ್ತಮ.

ಹೇಗೆ ಸಹಕಾರಿ?
ಈ ಹಾಡುವ ಬಟ್ಟಲುಗಳು ಸುಮಧುರವಾದ ಕಂಪನಗಳನ್ನು ಉಂಟು ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡುವ ಮೂಲಕ ದೇಹದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ಸಹಾಯ ಮಾಡುತ್ತವೆ. ಇದು ಸಾಮಾನ್ಯವಾಗಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವುದಲ್ಲದೆ. ದೇಹದಲ್ಲಿ ಪ್ರಯೋಜನಕಾರಿ ಬದಲಾವಣೆಗಳನ್ನು ತರುತ್ತವೆ. ಇದರ ಇತಿಹಾಸವನ್ನು ತಿರುವುಹಾಕುವುದಲ್ಲದೆ ವೈಜ್ಞಾನಿಕ ಅಧ್ಯಯನಗಳು ಹೇಳುವ ಪ್ರಕಾರ ಇವು ದೇಹದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಿ ನಿಮ್ಮ ಅತಿ ಒತ್ತಡದ ಪರಿಸ್ಥಿತಿಯನ್ನೂ ಕೂಡ ಕಡಿಮೆ ಮಾಡುತ್ತದೆ. ಅದಲ್ಲದೆ ಇವುಗಳಲ್ಲಿ ನೋವು ನಿರೋಧಕ ಶಕ್ತಿಯಿದ್ದು ಸ್ವಿಸ್‌ ಜನರಲ್ ರಿಸರ್ಚ್‌ನಿಂದ ಇದಕ್ಕೆ ಫ‌ಲಿತಾಂಶ ಕೂಡ ಕಂಡು ಬಂದಿದೆ.2014 ರಲ್ಲಿ ಅಮೆರಿಕದಲ್ಲಿ ನಡೆದ ಅಧ್ಯಯನದ ಪ್ರಕಾರ 12 ನಿಮಿಷ ಹಾಡುವ ಬಟ್ಟಲುಗಳಿಂದ ಕೇಳಿದ ಶಬ್ದಗಳಿಂದ ವ್ಯಕ್ತಿಯ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಇಳಿಕೆ ಕಂಡು ಬಂದಿತ್ತು.
ಸಾಕುಪ್ರಾಣಿಗಳು, ಸಂಗೀತ, ಪ್ರಕೃತಿಯಿಂದ ಒತ್ತಡ ನಿವಾರಣೆ
ಒತ್ತಡ ನಿವಾರಣೆಗೆ ನೈಸರ್ಗಿಕ ಮಾರ್ಗಗಳನ್ನು ಕಂಡುಕೊಂಡರೆ, ಕೆಲವು ಒತ್ತಡ ನಿವಾರಕ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಒತ್ತಡ ನಿವಾರಣೆಗೆ ಸಂಶೋಧಕರು ಹೊಸ ಪರಿಹಾರವನ್ನು ಕಂಡುಹಿಡಿದ್ದಾರೆ. ಸಂಶೋಧಕರ ಪ್ರಕಾರ ಸಾಕುಪ್ರಾಣಿಗಳು, ಸಂಗೀತ ಹಾಗೂ ಪ್ರಕೃತಿಯೂ ಒತ್ತಡವನ್ನು ನಿವಾರಿಸಬಲ್ಲದು ಎಂದು ಕಂಡುಹಿಡಿದಿದ್ದಾರೆ. ಏರಾ ಓಪನ್‌ ಜರ್ನಲ್ನಲ್ಲಿ ಪ್ರಕಟಿಸಿದ ಸಂಶೋಧನೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಪರೀಕ್ಷೆಗಾಗಿ ಈ ಅಧ್ಯಯನದಲ್ಲಿ ಪಾಲ್ಗೊಂಡವರ ಲಾಲಾರಸದ ಮಾದರಿಗಳನ್ನು ಸಂಗ್ರಹಿಸಿದಾಗ ಇದು ತಿಳಿದುಬಂದಿದೆ.
  • ಪ್ರೀತಿ ಭಟ್ ಗುಣವಂತೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇಶವನ್ನು ಕಾಡುತ್ತಿರುವ ಬಹುದೊಡ್ಡ ಆರೋಗ್ಯ ಸಮಸ್ಯೆ ಅಪೌಷ್ಟಿಕತೆ. ಇತ್ತೀಚೆಗೆ ಬಿಡುಗಡೆಯಾದ ವರದಿಯ ಪ್ರಕಾರ ಭಾರತದಲ್ಲಿ 5 ವರ್ಷ ವಯೋಮಾನದೊಳಗಿನ 68 ಪ್ರತಿಶತ...

  • ನಮ್ಮ ದಿನನಿತ್ಯದ ಆಹಾರದಲ್ಲಿ ಮಸಾಲ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತೇವೆ. ಅವು ತನ್ನದೇ ಆದ ಸುವಾಸನೆಯನ್ನು ಹೊಂದಿವೆ. ಇವು ಆಹಾರವನ್ನು ರುಚಿಯಾಗಿಸುವುದು...

  • ಪಂಚೇಂದ್ರಿಯಗಳಲ್ಲಿ ಅತಿ ಸೂಕ್ಷ್ಮವಾದ ಇಂದ್ರಿಯ ಎಂದರೆ ಅದು ಕಣ್ಣು. ಇದನ್ನು ರಕ್ಷಿಸಿಕೊಳ್ಳುವುದಕ್ಕೆ ಅಷ್ಟೇ ರೀತಿಯಾಗಿ ಪ್ರಾಮುಖ್ಯತೆ ನೀಡಬೇಕಾಗುತ್ತದೆ....

  • ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಿದಂತೆಲ್ಲಾ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಲಾಗುತ್ತಿದೆ. ಇತಂಹ ವಿಶಿಷ್ಟ ವ್ಯಾಯಾಮಗಳ...

  • ಸುಂದರವಾರ ತ್ವಚೆ ಹೊಂದುವುದು ಎಲ್ಲರ ಆಸೆ. ಆದರೆ ಮಲಿನಗೊಂಡ ವಾತಾವರಣ, ಸರಿಯಾದ ಆರೈಕೆ ಮಾಡದಿರುವುದು, ಜೀವನಶೈಲಿಯಿಂದ ತ್ವಚೆ ಹೊಳಪು ಕಳೆದುಕೊಂಡಿರುತ್ತದೆ....

ಹೊಸ ಸೇರ್ಪಡೆ